Leseplan-informasjon

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 11 av 20

"ಧಾರ್ಮಿಕ ನಾಯಕರ ಕಪಟತನದಿಂದ ದೂರವಿರಿ ಎಂದು ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಅವರು ದೇವರ ಪ್ರೀತಿಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರನ್ನು ಲಕ್ಷಿಸುವುದಿಲ್ಲ. ಅವರಿಗೆ ಬಹಳಷ್ಟು ಜ್ಞಾನವಿದೆ ಆದರೆ ಅದನ್ನು ಹೊಗಳಿಸಿಕೊಳ್ಳುವುದಕ್ಕಾಗಿ ಮಾತ್ರವೇ ಉಪಯೋಗಿಸುತ್ತಾರೆ. ಈ ರೀತಿಯ ಎರಡು ಮುಖಗಳ ಜೀವನಶೈಲಿಯನ್ನು ಯೇಸು ಸಹಿಸುವುದಿಲ್ಲ, ದೇವರು ಎಲ್ಲವನ್ನೂ ನೋಡುತ್ತಾನೆ ಎಂದೂ ಮನುಷ್ಯರನ್ನು ಹೊಣೆಗಾರರನ್ನಾಗಿ ಮಾಡುತ್ತಾನೆ ಎಂದೂ ಆತನು ಕಲಿಸಿದನು. ಇದು ಎಚ್ಚರಿಕೆಯೂ ಪ್ರೋತ್ಸಾಹವೂ ಎರಡೂ ಕೂಡ ಆಗಿದೆ. ಇದು ಎಚ್ಚರಿಕೆಯ ಮಾತಾಗಿದೆ ಏಕೆಂದರೆ ದುರಾಶೆಯೂ ಚಾಡಿಮಾತು ರಹಸ್ಯವಾಗಿ ಇರುವುದಿಲ್ಲ. ಕಪಟಿಗಳ ಮುಖವಾಡ ಕಳಚಿಬೀಳುತ್ತದೆ. ಸತ್ಯವು ಹೊರ ಬರುತ್ತದೆ, ಒಂದು ದಿನ ತಪ್ಪುಗಳನ್ನು ತಿದ್ದಿ ಸರಿಪಡಿಸಲಾಗುತ್ತದೆ. ಆದರೆ ಇದು ಒಂದು ಪ್ರೋತ್ಸಾಹದ ಮಾತು ಕೂಡ ಆಗಿದೆ ಏಕೆಂದರೆ ದೇವರು ಮನುಷ್ಯರು ಮಾಡುವ ಕೆಟ್ಟದ್ದನ್ನು ಮಾತ್ರವಲ್ಲ ಅವರು ಮಾಡುವ ಒಳ್ಳೆಯದನ್ನು ಸಹ ನೋಡುತ್ತಾನೆ. ಆತನು ಮನುಷ್ಯರ ಅಗತ್ಯತೆಗಳನ್ನು ನೋಡುವವನೂ ತನ್ನ ಸೃಷ್ಟಿಯನ್ನು ಅಪಾರವಾಗಿ ಪೋಷಿಸುವವನೂ ಆಗಿದ್ದಾನೆ. ಯೇಸುವಿನ ಶಿಷ್ಯರು ದೇವರ ರಾಜ್ಯಕ್ಕೆ ಆದ್ಯತೆಯನ್ನು ಕೊಟ್ಟು ಅದನ್ನು ಹಿಂಬಾಲಿಸುವಾಗ, ಅವರು ನಿತ್ಯವಾಗಿರುವ ಸಂಪತ್ತನ್ನೂ ಭೂಮಿಯ ಮೇಲಿನ ಜೀವನಕ್ಕೆ ಬೇಕಾದ್ದದ್ದೆಲ್ಲವನ್ನೂ ಹೊಂದಿಕೊಳ್ಳುವರು ಎಂಬ ಭರವಸೆಯನ್ನು ಯೇಸು ಕೊಟ್ಟನು. ಅದರರ್ಥವು ಜೀವನವು ಸುಲಭವಾಗಿರುತ್ತದೆ ಎಂದು ಖಂಡಿತವಾಗಿಯೂ ಅಲ್ಲ. ವಾಸ್ತವದಲ್ಲಿ, ತನ್ನ ಹಿಂಬಾಲಕರು ಖಂಡಿತವಾಗಿಯೂ ಹಿಂಸೆಯನ್ನು ಅನುಭವಿಸುವರು ಎಂದು ಯೇಸು ತಿಳಿಸಿದನು. ಆದರೆ ಹಿಂಸೆಯನ್ನು ಎದುರುಗೊಳ್ಳುವವರು ದೇವರನ್ನು ಎದುರುಗೊಳ್ಳುತ್ತಾರೆ, ಆತನ ಹೆಸರನ್ನು ಸನ್ಮಾನಿಸಲು ಪ್ರಾಣವನ್ನೇ ಕೊಡುವವರನ್ನು ದೇವದೂತರ ಮುಂದೆ ಸನ್ಮಾನಿಸಲಾಗುವುದು ಎಂದು ಆತನು ವಾಗ್ದಾನ ಮಾಡಿದನು. ಆದ್ದರಿಂದ ದೇವರ ಒದಗಿಸುವಿಕೆಯಲ್ಲಿ ನಂಬಿಕೆಯಿಡುವಂತೆ ಯೇಸು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು ಮತ್ತು ಕಪಟತನದಲ್ಲಿರುವ ಅಪಾಯಗಳ ಕುರಿತು ಎಚ್ಚರಿಕೆಯನ್ನು ಕೊಟ್ಟನು. ಎಲ್ಲರೂ ತನ್ನ ಮಾತುಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಯೇಸು ಬಯಸಿದನು, ಆದರೆ ಅನೇಕರು ಆತನ ಮಾತುಗಳನ್ನು ತಿರಸ್ಕರಿಸಿದರು. ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ: •ಇವತ್ತು ಯೇಸುವಿನ ಮಾತುಗಳನ್ನು ಓದಿದ ಮೇಲೆ, ಕಪಟತನವನ್ನು ನೀವು ಹೇಗೆ ವಿವರಿಸುವಿರಿ? ಯೇಸು ಕಪಟತನವನ್ನು ಹುಳಿ ಹಿಟ್ಟಿಗೆ ಹೋಲಿಸಿದ್ದಾನೆ (12:1). ಕಪಟತನವುಹುಳಿ ಹಿಟ್ಟಿನಂತೆ ಆಗುವುದು ಹೇಗೆ? •ದುರಾಶೆ ಎಂಬುದು ಯಾವಾಗಲೂ ಕೇವಲ ಹೆಚ್ಚು ಹಣಕ್ಕಾಗಿಯೂ ಆಸ್ತಿಪಾಸ್ತಿಗಳಿಗಾಗಿಯೂ ಇರುವ ಸ್ವಾರ್ಥತೆಯಿಂದ ಕೂಡಿದ ಬಯಕೆ ಮಾತ್ರವಲ್ಲ. ಯೇಸು ತನ್ನ ಹಿಂಬಾಲಕರಿಗೆ ಸಕಲ ವಿಧವಾದ ದುರಾಶೆಯಿಂದ ತಮ್ಮ ಜೀವನವನ್ನು ಕಾಪಾಡಿಕೊಳ್ಳಿರಿ ಎಂದು ಕರೆಗೊಟ್ಟನು. ವಿವಿಧ ರೀತಿಯ ದುರಾಶೆಗಳು ಯಾವುವು? ಉದಾಹರಣೆಗೆ, ಗಮನ ಸೆಳೆತ, ಮೆಚ್ಚುಗೆ ಅಥವಾ ಮನರಂಜನೆಗಾಗಿರುವ ದುರಾಶೆ ಎಂಬುದರ ಅರ್ಥವೇನು ಎಂಬುದನ್ನು ಯೋಚಿಸಿ ನೋಡಿರಿ. •ಲೂಕ 12:29-34 ಅನ್ನು ಅವಲೋಕನ ಮಾಡಿರಿ. ಅದರಲ್ಲಿ ನೀವು ಏನನ್ನು ಗಮನಿಸಿದ್ದೀರಿ? ನೀವು ಯಾವುದರ ಬಗ್ಗೆ ಯೋಚಿಸಲು ಮತ್ತು ಯಾವುದರಲ್ಲಿ ತೊಡಗಿಕೊಳ್ಳಲು ಹೆಚ್ಚು ಸಮಯವನ್ನೂ ಶಕ್ತಿಯನ್ನೂ ವೆಚ್ಚ ಮಾಡುವಿರಿ? ಯೇಸುವಿನ ಮಾತುಗಳು ಇವತ್ತು ನಿಮ್ಮನ್ನು ಹೇಗೆ ಎಚ್ಚರಿಸುತ್ತವೆ ಅಥವಾ ಪ್ರೋತ್ಸಾಹಿಸುತ್ತವೆ? •ಕೋಳಿಯ ರೆಕ್ಕೆಗಳು ಕೋಳಿ ಮರಿಗಳನ್ನು ಪರಭಕ್ಷಕ ಪಕ್ಷಿಗಳಿಂದ ಕಾಪಾಡುವಂತೆಯೇ ಯೇಸುವಿನ ಬೋಧನೆಯು ತನ್ನ ಜನರನ್ನು ಕಾಪಾಡುವುದು (13:34 ನೋಡಿರಿ). ಆದರೆ ಇನ್ನೂ ಅನೇಕ ಜನರು ಆತನ ರಕ್ಷಣೆಯನ್ನು ಹೊಂದಿಕೊಳ್ಳಲು ಬಯಸುತ್ತಿಲ್ಲ. ನೀವು ನಿಮ್ಮ ಜೀವನದಲ್ಲಿ ಎಚ್ಚರಿಕೆಯ ಮಾತನ್ನು ಕೇಳದಿದ್ದರಿಂದ ಉಂಟಾದ ಪರಿಣಾಮಗಳನ್ನು ಅನುಭವಿಸಿದಂಥ ಒಂದು ಸಂಗತಿಯ ಕುರಿತು ಯೋಚಿಸಿ ನೋಡಿರಿ. ನೀವು ನಿಮ್ಮ ಜೀವನದಲ್ಲಿ ಅಂತಹ ಒಂದು ಭಾಗಕ್ಕೆ ತಿರಿಗಿ ಬರಲು ಆಗುವುದಾದರೆ, ನೀವೇ ಏನನ್ನು ಹೇಳಲು ಬಯಸುತ್ತೀರಿ? •ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ದುರಾಶೆಯಿಂದಲೂ ಕಪಟತನದಿಂದಲೂ ನಿಮ್ಮನ್ನು ಕಾಪಾಡಿದ ಆತನ ರಕ್ಷಣೆಗಾಗಿ ಆತನಿಗೆ ಕೃತಜ್ಞತೆಯನ್ನು ಸಲ್ಲಿಸಿರಿ, ಆ ರಕ್ಷಣೆಯನ್ನು ಹೊಂದಿಕೊಳ್ಳುವುದರಲ್ಲಿ ನೀವು ಎಲ್ಲಿ ಒದ್ದಾಡುತ್ತಿದ್ದೀರಿ ಎಂಬುದನ್ನು ಆತನಿಗೆ ತಿಳಿಸಿರಿ ಮತ್ತು ಇವತ್ತು ಆತನನ್ನು ಹಿಂಬಾಲಿಸಲು ನಿಮಗೆ ಏನು ಬೇಕೋ ಅದನ್ನು ಆತನ ಬಳಿ ಕೇಳಿಕೊಳ್ಳಿರಿ."
Dag 10Dag 12

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ...

More

YouVersion bruker informasjonskapsler for å tilpasse opplevelsen din. Ved å bruke nettstedet vårt godtar du vår bruk av informasjonskapsler, som beskrevet i vår Personvernerklæring