BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 20 av 20

"ಯೇಸು ಮತ್ತು ಆತನ ಶಿಷ್ಯರೆಲ್ಲರೂ ಒಟ್ಟಿಗೆ ಕುಳಿತು ಊಟಮಾಡುತ್ತಿರುವ ಇನ್ನೊಂದು ಭೋಜನದೊಂದಿಗೆ ಲೂಕನ ಸುವಾರ್ತೆಯು ಮುಕ್ತಾಯವಾಗುತ್ತದೆ.ಆತನ ಪುನರುತ್ಥಾನಗೊಂಡ ದೇಹವನ್ನು ನೋಡಿ ಅವರೆಲ್ಲರು ವಿಸ್ಮಿತರಾದರು. ಅವರು ಆತನು ಇನ್ನೂ ಮನುಷ್ಯನೇ ಆಗಿರುವುದನ್ನು, ಆದರೆ ಅದಕ್ಕಿಂತ ಹೆಚ್ಚಿನವನಾಗಿರುವದನ್ನು ಕಂಡರು. ಆತನು ಮರಣದ ಮೂಲಕ ಹಾದುಹೋದನು, ಆದರೆ ಆತನು ನಡೆದಾಡುವ ಮಾತನಾಡುವ ನೂತನ ಸೃಷ್ಟಿಯಾಗಿ ಹೊರಬಂದನು. ಆಗ ಯೇಸು ತನ್ನನ್ನು ಬದುಕಿಸಿದ ಅದೇ ದೈವಿಕ ಶಕ್ತಿಯನ್ನು ಅವರಿಗೂ ಸಹ ಕೊಡುವೆನು ಎಂದು ಅವರಿಗೆ ಹೇಳಿದನು, ಆದರಿಂದಾಗಿ ಅವರು ಹೊರಟು ಹೋಗಿ ದೇವರ ರಾಜ್ಯದ ಸುವಾರ್ತೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ಇದಾದ ನಂತರ, ಯೇಸು ಪರಲೋಕಕ್ಕೆ ಒಯ್ಯಲ್ಪಟ್ಟನು ಎಂದು ಲೂಕನು ಹೇಳುತ್ತಾನೆ, ಅಲ್ಲಿ ದೇವರ ಸಿಂಹಾಸನವಿದೆ ಎಂದು ಯೆಹೂದ್ಯರು ನಂಬಿದ್ದರು. ಆತನ ಶಿಷ್ಯರು ಯೆರೂಸಲೇಮಿನಲ್ಲಿ ಇದ್ದುಕೊಂಡು, ದೇವರನ್ನೂ ಯೇಸುವನ್ನೂ ಆರಾಧಿಸುತ್ತಾ, ಈ ಹೊಸ ಶಕ್ತಿಗಾಗಿ ಕಾಯುತ್ತಿದ್ದರು. ಲೂಕನು ತನ್ನ ಮುಂದಿನ ಗ್ರಂಥವಾದ ಅಪೋಸ್ತಲರ ಕೃತ್ಯಗಳಲ್ಲಿ ಈ ಕಥೆಯನ್ನು ಮುಂದುವರಿಸುತ್ತಾನೆ. ಯೇಸುವಿನ ಶಿಷ್ಯರು ಈ ಶಕ್ತಿಯನ್ನು ಹೇಗೆ ಹೊಂದಿಕೊಂಡರು, ಈ ಶುಭವಾರ್ತೆಯನ್ನು ಲೋಕಕ್ಕೆಲ್ಲಾ ಹೇಗೆ ಸಾರಿದರು ಎಂಬ ಮಹಾ ಕಥೆಯ ಬಗ್ಗೆ ಲೂಕನು ವಿವರಿಸುವನು.

ಪ್ರತಿಕ್ರಿಯಿಸಿರಿ:

•ಯೇಸುವಿನ ಸ್ವರ್ಗಾರೋಹಣ ದಿನದಂದು ಅಲ್ಲಿ ನೀವು ಇರುವುದಾಗಿ ಊಹಿಸಿ ನೋಡಿರಿ. ನಿಮಗೆ ಏನು ಅನಿಸುತ್ತಿತ್ತು? ನೀವು ಏನನ್ನು ಹೇಳುತ್ತಿದ್ದೀರಿ ಮತ್ತು ಏನನ್ನು ಮಾಡುತ್ತಿದ್ದೀರಿ?

•ಯೇಸು ನಿಜವಾದ ರಾಜನೆಂದೂ ಆತನ ರಾಜ್ಯವು ಶುಭವಾರ್ತೆಯಾಗಿದೆ ಎಂದೂ ನೀವು ನಂಬುತ್ತೀರಾ? ನೀವು ಇದನ್ನು ಯಾರೊಂದಿಗೆ ಹಂಚಿಕೊಳ್ಳಲು ಬಯಸುವಿರಿ? ಈ ವಾಚನಾ ಯೋಜನೆಯನ್ನು ಓದುವುದರಲ್ಲಿ ನಿಮ್ಮೊಂದಿಗೆ ಸೇರಲು ಒಬ್ಬರನ್ನು ಅಥವಾ ಇಬ್ಬರನ್ನು ಆಹ್ವಾನಿಸುವುದರ ಕುರಿತು ಯೋಚಿಸಿರಿ. ನೀವು ಎರಡನೇ ಸಾರಿ ಓದುವಾಗ ಇನ್ನಷ್ಟು ಅರ್ಥಮಾಡಿಕೊಳ್ಳುವಿರಿ ಮತ್ತು ಅನುಭವವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

ನಾವು ನಿಮ್ಮ ಅನುಭವವನ್ನು ಕೇಳಲು ಬಯಸುತ್ತೇವೆ.

•ಈ ವಾಚನಾ ಯೋಜನೆಯನ್ನು ನೀವು ಬೇರೆಯವರಿಗೆ ಶಿಫಾರಸು ಮಾಡುವಿರಾ? ಕಳೆದ 20 ದಿನಗಳಲ್ಲಿನ ನಿಮ್ಮ ಅನುಭವದ ಒಂದು ಮುಖ್ಯ ಅಂಶ ಯಾವುದು? ಸಾಮಾಜಿಕ ಮಾಧ್ಯಮದಲ್ಲಿ #BibleProjectUpsideDownKingdom ಎಂಬ ಹ್ಯಾಸ್‌ಟ್ಯಾಗ್‌ ಬಳಸಿ ನಮಗೆ ತಿಳಿಸಿ.

ತಲೆಕೆಳಗೆ ಮಾಡುವ ರಾಜ್ಯದ ಕುರಿತಾದ ಎರಡನೇ ಭಾಗವನ್ನು ಓದಲು ಪ್ರಾರಂಭಿಸಿರಿ.

•ತಲೆಕೆಳಗೆ ಮಾಡುವ ರಾಜ್ಯದ ಕುರಿತಾದ ಬೈಬಲ್ ಪ್ರಾಜೆಕ್ಟಿನ ಎರಡನೆಯ ಭಾಗದಲ್ಲಿ ಸೇರಿ ಬನ್ನಿರಿ, ಅಲ್ಲಿ ನಾವು ಅಪೋಸ್ತಲರ ಕೃತ್ಯಗಳ ಪುಸ್ತಕದ ಕುರಿತು ಅಧ್ಯಯನ ಮಾಡಲಿದ್ದೇವೆ. ನಿಮ್ಮೊಂದಿಗೆ ಸೇರಿ ಬರಲು ನಿಮ್ಮ ಸಹೋದ್ಯೋಗಿಯನ್ನು, ನೆರೆಹೊರೆಯವರನ್ನು, ಸ್ನೇಹಿತರನ್ನು ಅಥವಾ ಕುಟುಂಬದವರನ್ನು ಆಹ್ವಾನಿಸಿ.

Dag 19

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More