Leseplan-informasjon

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 10 av 20

"ಯೇಸು ಯೆರೂಸಲೇಮಿಗೆ ಹೊರಡಲು ಸಿದ್ಧನಾದಾಗ, ಹೋಗುವ ದಾರಿಯಲ್ಲಿ ಎಲ್ಲೆಲ್ಲಿ ನಿಲ್ಲಿಸಬೇಕೆಂದು ಆತನು ಯೋಜಿಸಿದ್ದನೋ ಆಯಾ ಆಯಾ ನಗರವನ್ನು ಸಿದ್ಧಪಡಿಸಲು ತನ್ನ ಶಿಷ್ಯರ ಗುಂಪನ್ನು ಮುಂದಾಗಿ ಕಳುಹಿಸಿದನು. ಅವರು ಭಾರವಾದ ವಸ್ತುಗಳನ್ನು ಹೊರದೆ ಪ್ರಯಾಣ ಮಾಡಬೇಕಾಗಿತ್ತು, ಆ ಪ್ರಯಾಣಕ್ಕೆ ಯಾವುದೇ ಸಾಮಾನು ಅಥವಾ ಹಣದ ಚೀಲಗಳು ಅಗತ್ಯವಿರಲಿಲ್ಲ, ಮತ್ತು ಅವರು ಗುಣಪಡಿಸುವ ಶಕ್ತಿಯಿಂದ ಮತ್ತು ದೇವರ ರಾಜ್ಯದ ಸಂದೇಶದಿಂದ ಸಿದ್ಧರಾಗಿ ಹೋಗುತ್ತಾರೆ. ಯೇಸುವಿನ ಶಿಷ್ಯರು ಈ ಲೋಕದಲ್ಲಿನ ದೇವರ ಸೇವೆಯ ಕಾರ್ಯದಲ್ಲಿ ಸಕ್ರಿಯರಾದ ಪಾಲುಗಾರರಾಗಿದ್ದಾರೆ ಎಂಬುದನ್ನು ಇದು ನಮಗೆ ಮತ್ತೆ ತೋರಿಸುತ್ತದೆ. ಯೇಸು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿ ಕೊಡುತ್ತಾನೆ, ಅದನ್ನು ನಂಬುವವರು ಕೇವಲ ಅದನ್ನು ಸ್ವೀಕರಿಸುವವರು ಮಾತ್ರವಾಗಿರುವುದಿಲ್ಲ ಅದನ್ನು ಇತರರಿಗೆ ತಿಳಿಸಿ ಕೊಡುವುದರಲ್ಲಿ ಅವರು ಆತನೊಂದಿಗೆ ಸೇರುವವರಾಗಿರುತ್ತಾರೆ. ಇದು ದೇವರ ರಾಜ್ಯದ ರೀತಿಯಾಗಿದೆ. ಅದು ಈ ಲೋಕದಿಂದ ಅಧಿಕಾರವನ್ನೂ ಸಂಪತ್ತನ್ನೂ ಗಳಿಸಿಕೊಂಡು ಕೂಡಿಸಿಟ್ಟುಕೊಳ್ಳುವುದಲ್ಲ; ಬದಲಾಗಿ ಲೋಕವನ್ನು ಆಶೀರ್ವದಿಸುವುದಕ್ಕಾಗಿ ಪರಲೋಕದ ಒದಗಿಸುವಿಕೆಯನ್ನು ಹೊಂದಿಕೊಳ್ಳುವುದಾಗಿದೆ. ಆದ್ದರಿಂದ ಈ ಮುಂದಿನ ವಿಭಾಗದಲ್ಲಿ, ದೇವರ ಒದಗಿಸುವಿಕೆಯಲ್ಲಿ ನಂಬಿಕೆಯಿಡುವುದರ ಕುರಿತು ಯೇಸು ಮಾಡಿದ ಅನೇಕ ಬೋಧನೆಗಳನ್ನು ಲೂಕನು ಬರೆದಿದ್ದಾನೆ. ಪ್ರಾರ್ಥನೆ, ಸಂಪನ್ಮೂಲಗಳ ನಿರ್ವಹಣೆ ಮತ್ತು ತೀವ್ರತರದ ಉದಾರಭಾವದ ಬಗ್ಗೆ ಯೇಸು ಬೋಧಿಸಿದ್ದಾರೆ. ಆತನ ಬೋಧನೆಗಳಿಗೆ ಪ್ರತಿಸ್ಪಂದನೆಯಾಗಿ, ಬಡವರೂ ಪೀಡಿತರೂ ಅದನ್ನು ಆಚರಿಸಿ ಕೊಂಡಾಡಿದರು. ಆದರೆ ಯೇಸು ತಮ್ಮ ದುರಾಸೆಯ ಜೀವನ ರೀತಿಯನ್ನು ತಿದ್ದಿ ಸರಿಪಡಿಸುವುದನ್ನು ಕೇಳಿಸಿಕೊಂಡಾಗ ಧಾರ್ಮಿಕ ನಾಯಕರು ಕೋಪಗೊಂಡು ಆತನ ವಿರುದ್ಧ ಒಳಸಂಚು ಮಾಡಲು ಪ್ರಾರಂಭಿಸಿದರು. ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ: •ಯೇಸು ಹೇಳಿದ ಸಾಮ್ಯದಲ್ಲಿರುವ, ಲೂಟಿ ಮಾಡಲ್ಪಟ್ಟ ವ್ಯಕ್ತಿಯು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದನು, ಆದ್ದರಿಂದ ಆ ಸಾಮ್ಯವನ್ನು ಕೇಳುತ್ತಿದ್ದವರು ಅವನು ಇಸ್ರಾಯೇಲಿನ ರಾಜಧಾನಿಯಿಂದ ಬಂದವನಾಗಿದ್ದರಿಂದ ಯೆಹೂದ್ಯನಾಗಿರಬಹುದು ಎಂದು ಭಾವಿಸಿದ್ದರು. ಯೆಹೂದ್ಯರ ಧಾರ್ಮಿಕ ನಾಯಕರು ಆ ಮನುಷ್ಯನಿಗೆ ಸಹಾಯ ಮಾಡುತ್ತಾರೆಂದು ನೀವು ನಿರೀಕ್ಷಿಸಿರಬಹುದು, ಆದರೆ ಅವರು ಅವನನ್ನು ಗಮನಿಸದೆ ಹೋದರು. ಗಾಯಗೊಂಡಿದ್ದ ಆ ಯೆಹೂದ್ಯನಿಗೆ ಸಹಾಯ ಮಾಡಿದವನು ಸಮಾರ್ಯದ ವ್ಯಕ್ತಿಯಾಗಿದ್ದನು. (10:25-31) •ಯೆಹೂದ್ಯರು ಸಮಾರ್ಯದವರನ್ನು ಕೀಳಾಗಿ ಕಾಣುತ್ತಿದ್ದರೆಂದು ತಿಳಿದಿದ್ದರೂ ಸಹ ಯೇಸು ಈ ವಿವರಣೆಯನ್ನು ಕಥೆಯಲ್ಲಿ ಸೇರಿಸಿ ಹೇಳುತ್ತಿರುವುದು ಏಕೆ ಎಂದು ನೀವು ಭಾವಿಸುತ್ತೀರಿ? “ನಿನ್ನ ನೆರೆಯವನನ್ನು ಪ್ರೀತಿಸು” ಎಂಬುದರ ಕುರಿತು ನಿಮಗಿರುವ ತಿಳುವಳಿಕೆಯನ್ನು ಇದು ಯಾವ ರೀತಿ ಇನ್ನೂ ಹೆಚ್ಚುಮಾಡುತ್ತದೆ? •ನೀವು ಅಗತ್ಯತೆಯಲ್ಲಿರುವಾಗ ನಿಮ್ಮನ್ನು ತಿರಸ್ಕರಿಸಿದ್ದಂಥ ವ್ಯಕ್ತಿ ಯಾರಾದರೂ ಇದ್ದಾರಾ? ನೀವು ಹಂಚಿಕೊಳ್ಳಬಹುದಾದಂಥ ಯಾವುದನ್ನು ನೀವು ಹೊಂದಿಕೊಂಡಿದ್ದೀರಿ? ನಿಮ್ಮ ನೆರೆಹೊರೆಯವರಿಗೆ ಸಹಾಯವನ್ನು ಮಾಡಲೂ ಕರುಣೆ ತೋರಿಸಲೂ ಈ ವಾರ ನೀವು ಎಂತಹ ಪ್ರಾಯೋಗಿಕ ಹೆಜ್ಜೆಯನ್ನು ಇಡುತ್ತೀರಿ? ದೇವರ ರಾಜ್ಯವೆಂದರೆ ಪರಲೋಕದ ಉದಾರವಾದ ಒದಗಿಸುವಿಕೆಯನ್ನು ಪಡೆದುಕೊಂಡು ಅದನ್ನು ನೀವು ಇತರರಿಗೆ ಉದಾರವಾಗಿ ಒದಗಿಸಿ ಕೊಡುವುದು ಆಗಿದೆ. ಆದ್ದರಿಂದ ಯೇಸುವಿನ ಹಿಂಬಾಲಕರು ಗೊಂದಲವನ್ನು ತೆಗೆದುಹಾಕಿ (10:42) ದೇವರು ಒಳ್ಳೆಯ ರೀತಿಯಲ್ಲಿ ಒದಗಿಸುವಾತನು, ತನ್ನ ಮಕ್ಕಳಿಗೆ ಹೇಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬೇಕೆಂದು ತಿಳಿದಿರುವಾತನು ಎಂಬುದನ್ನು ನಂಬಲು ಕರೆಯಲ್ಪಟ್ಟಿದ್ದಾರೆ (11:1-13). ದೇವರ ಒಳ್ಳೆಯ ದಾನವು ಪವಿತ್ರಾತ್ಮನಾಗಿದ್ದಾನೆ (11:13), ಅದುವೇ ಹಂಚಿಕೊಳ್ಳಬಹುದಾದ ದಾನ ಎಂದು ಯೇಸು ವಿವರಿಸಿರುವುದ್ದನ್ನು ಗಮನಿಸಿರಿ (11:5-6). •ನೀವು ಎಂದಾದರೂ ದೇವರ ಬಳಿ ಒಂದು ನಿರ್ದಿಷ್ಟವಾದ ವಿಷಯವನ್ನು ಬೇಡಿಕೊಂಡಾಗ ಅದಕ್ಕೆ ಬದಲಾಗಿ ಬೇರೆ ಯಾವುದನ್ನಾದರೂ ಹೊಂದಿಕೊಂಡಿದ್ದೀರಾ? ದೇವರು ಕೊಟ್ಟ ಉತ್ತರವು ನಿಮ್ಮ ಜೀವನದಲ್ಲಿ ಹೇಗೆ ಪವಿತ್ರಾತ್ಮನ ಸಹಾಯ, ಸಾಂತ್ವನ ಮತ್ತು ಬೋಧನೆಯನ್ನು ಬರಮಾಡಿತು? ನಿಮ್ಮ ಸುತ್ತಮುತ್ತಲಿರುವ ಬೇರೆಯವರಿಗೆ ಅನಿರೀಕ್ಷಿತವಾದ ರೀತಿಯಲ್ಲಿ ಅವರಿಗೆ ಬೇಕಾದುದ್ದನ್ನು ಒದಗಿಸಲು ದೇವರ ಒದಗಿಸುವಿಕೆಯು ನಿಮಗೆ ಹೇಗೆ ಸಹಾಯ ಮಾಡಿತು? • ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ನಿಮ್ಮನ್ನು ಅತ್ಯಾಶ್ಚರ್ಯಪಡಿಸಿದ ವಿಷಯದ ಕುರಿತು ದೇವರೊಂದಿಗೆ ಮಾತನಾಡಿರಿ. ನಿಮ್ಮ ನಿರಾಶೆಗಳ ಕುರಿತು ಪ್ರಾಮಾಣಿಕವಾಗಿ ಮಾತನಾಡಿರಿ. ಈ ವಾರದಲ್ಲಿ ದೇವರ ಕರುಣೆಯನ್ನು ಹಂಚಿಕೊಳ್ಳಲು ನಿಮಗೆ ಬೇಕಾದದ್ದನ್ನು ನೀವು ಆತನ ಬಳಿಯಲ್ಲಿ ಬೇಡಿಕೊಳ್ಳಿರಿ."
Dag 9Dag 11

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ...

More

YouVersion bruker informasjonskapsler for å tilpasse opplevelsen din. Ved å bruke nettstedet vårt godtar du vår bruk av informasjonskapsler, som beskrevet i vår Personvernerklæring