ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುಮಾದರಿ

ಕಣ್ಣಿಗೆ ಕಾಣದ ಲೋಕ
ಸತ್ಯವೇದ ಕಥೆ – ಯೇಸು ಕ್ರಿಸ್ತನು ಪರಲೋಕಕ್ಕೆ ಆರೋಹಣನಾದನು "ಅಪೊ 1:1-11"
ನಮ್ಮ ಸುತ್ತಲೂ ಕಣ್ಣಿಗೆ ಕಾಣದಂಥ ಒಂದು ಲೋಕವಿದೆ, ಅದನ್ನು ನೋಡಲು ನಮ್ಮಿಂದ ಆಗುವದಿಲ್ಲವಾದರೂ ಅದು ಸತ್ಯವಾಗಿದೆ. ಗಾಳಿಯನ್ನು ನೋಡಲು ನಮ್ಮಿಂದ ಆಗುವದಿಲ್ಲ ಆದರೆ ಗಾಳಿ ಬೀಸುವಾಗ ಮರದ ಎಲೆಗಳು ಅಲ್ಲಾಡುವದನ್ನು ನಾವು ನೋಡುತ್ತೇವೆ, ಅದರಂತೆಯೇ ಆತ್ಮೀಕ ಲೋಕವು ಇರುತ್ತದೆ. ಹಳೆಯ ಒಡಂಬಡಿಕೆಯ ಪ್ರವಾದಿಗಳಲ್ಲಿ ಒಬ್ಬನಾದ ಎಲೀಷನು, ಕಣ್ಣಿಗೆ ಕಾಣದವುಗಳನ್ನು ನೋಡುವದರ ಬಗ್ಗೆ ನಮಗೆ ಉತ್ತಮ ಉದಾಹರಣೆಯನ್ನು ತೋರಿಸಿದ್ದಾನೆ. ಅರಾಮ್ಯರು ಮತ್ತು ಇಸ್ರಾಯೇಲ್ಯರ ನಡುವೆ ದೊಡ್ಡ ಯುದ್ಧ ಪ್ರಾರಂಭವಾಗುವದಕ್ಕಿತ್ತು. (2 ಅರಸು 6:8-23) ಒಂದುದಿನ ರಾತ್ರಿ, ವೈರಿ ಪಡೆಯ ಸಿಪಾಯಿಗಳು ಪಟ್ಟಣಕ್ಕೆ ಮುತ್ತಿಗೆ ಹಾಕಿದರು ಮತ್ತು ಎಲೀಷನ ಸೇವಕನು ಅವರನ್ನು ನೋಡಿ ಬಹಳವಾಗಿ ಹೆದರಿಕೊಂಡನು. ಆದರೆ ಪ್ರವಾದಿಯು ತನ್ನ ಸೇವಕನಿಗೆ ಹೆದರಬೇಡ ಯಾಕಂದರೆ ವೈರಿಗಳ ಜೊತೆಯಲ್ಲಿರುವವರಿಗಿಂತ ನಮ್ಮ ಜೊತೆಯಲ್ಲಿ ಹೆಚ್ಚಿನವರಿದ್ದಾರೆ ಎಂದು ಹೇಳಿದನು. ನಂತರ ಎಲೀಷನು ತನ್ನ ಸೇವಕನ ಕಣ್ಣುಗಳು ತೆರೆಯಲ್ಪಡಲಿ ಎಂದು ಪ್ರಾರ್ಥನೆ ಮಾಡಿದನು, ಆಗ ಅವನಿಗೆ ಬೆಟ್ಟದ ಸುತ್ತಲೂ ಕುದುರೆಗಳು ಹಾಗೂ ಬೆಂಕಿಯ ರಥಗಳು ನಿಂತಿರುವದು ಕಾಣಿಸಿದವು! ದೇವರು ತನ್ನ ಪ್ರವಾದಿಯನ್ನು ಕಾಪಾಡಲು ದೊಡ್ಡ ಪ್ರಮಾಣದಲ್ಲಿ ಕಣ್ಣಿಗೆ ಕಾಣದ ಸೈನ್ಯವನ್ನು ಇರಿಸಿದ್ದನು.
ನಮ್ಮ ಸುತ್ತಲು ಆತ್ಮಿಕ ಯುದ್ಧ ನಡೆಯುತ್ತಿದೆ, ಆದರೆ ಅದನ್ನು ನೋಡಲು ನಮ್ಮಿಂದ ಆಗುತ್ತಿಲ್ಲ. ಸೈತಾನನು ಜೀವಿಸುತ್ತಿದ್ದಾನೆ ಮತ್ತು ನಾವು ಆತ್ಮೀಕ ರಾಜ್ಯದ ವಾಸ್ತವವನ್ನು ಕಡೆಗಣಿಸುವಂತೆ ಮಾಡಲು ಸರ್ವಪ್ರಯತ್ನಗಳನ್ನು ನಡೆಸುತ್ತಿದ್ದಾನೆ ಎಂಬದನ್ನು ಸತ್ಯವೇದವು ಸ್ಪಷ್ಟಪಡಿಸುತ್ತದೆ. ಅಪೊಸ್ತಲರ ಕೃತ್ಯಗಳ ಇಂದಿನ ನಮ್ಮ ಸತ್ಯವೇದದ ಕಥೆಯಲ್ಲಿ, ಯೇಸು ಕ್ರಿಸ್ತನು ಪರಲೋಕಕ್ಕೆ ಆರೋಹಣವಾದನು. ದಯವಿಟ್ಟು ನನ್ನ ಮಾತುಗಳನ್ನು ನಂಬಿರಿ ಪರಲೋಕ ಮತ್ತು ಭೂಲೋಕ ಇದೆ. ಸತ್ಯವಾದ ಈ ಚಾರಿತ್ರಿಕ ಘಟನೆಯಲ್ಲಿ, ಯೇಸು ಕ್ರಿಸ್ತನು ಆರೋಹಣವಾದ ನಂತರ, ಇಬ್ಬರು ದೇವದೂತರು ಶಿಷ್ಯರಿಗೆ ಕಾಣಿಸಿಕೊಂಡರು! ದೇವದೂತರು ನಮಗೆ ಸಹಾಯ ಮಾಡುವದು ಅಥವಾ ಸೈತಾನನು ನಮ್ಮ ಮೇಲೆ ಆಕ್ರಮಣ ಮಾಡುವದನ್ನು ಊಹಿಸಿಕೊಳ್ಳಲು ನಮಗೆ ಕಷ್ಟವಾಗುತ್ತದೆ, ಆದರೆ ಈ ಕಾರ್ಯಗಳು ನಮ್ಮ ಕಣ್ಣಿಗೆ ಕಾಣುವ ಕಾರ್ಯಗಳಿಗಿಂತ ಸತ್ಯವಾಗಿವೆ.
ದೇವರು ಕೊಡುವ ಸರ್ವಾಯುಧಗಳ ಅಧ್ಯಯನಕ್ಕೆ ಹಾರೋಣ ಮತ್ತು ಕಣ್ಣಿಗೆ ಕಾಣದಿರುವ ಈ ಲೋಕದ ಬಗ್ಗೆ ಕಲಿತುಕೊಳ್ಳೋಣ. ನಮಗ ಇಷ್ಟವಾಗಲಿ ಇಷ್ಟವಾಗದಿರಲಿ ನಾವು ಯುದ್ಧದಲ್ಲಿದ್ದೇವೆ. ಆದ್ದರಂದ ವೈರಿಗೆ ವಿರುದ್ಧವಾಗಿ ಹೋರಾಡುವಾಗ ದೇವರು ಕೊಡುವ ಸರ್ವಾಯುಧಗಳನ್ನು ಧರಿಸಿಕೊಳ್ಳೋಣ!
“ನಾನು ಕಣ್ಣಿಗೆ ಕಾಣದಿರುವ ಲೋಕವನ್ನು ನಂಬುವ ತೀರ್ಮಾನ ತೆಗೆದುಕೊಳ್ಳುತ್ತೇನೆ ಮತ್ತು ದೇವರು ಕೊಡುವ ಸರ್ವಾಯುಧಗಳನ್ನು ಸಂಪೂರ್ಣವಾಗಿ ಧರಿಸಿಕೊಳ್ಳುತ್ತೇನೆ.”
ಪ್ರಶ್ನೆಗಳು :
1.ಕಣ್ಣಿಗೆ ಕಾಣದ ಒಳ್ಳೆದರ ಮತ್ತು ಕೆಟ್ಟದರ ಲೋಕವಿದೆ ಎಂಬದಕ್ಕೆ ನೀವು ನೋಡಿರುವ ಪುರಾವೆಗಳು ಯಾವುವು?
2.ಇತರರು ತಪ್ಪುಗಳನ್ನು ಮಾಡಿರುವದು ಮತ್ತು ದೇವರ ಸರ್ವಾಯುಧಗಳಿಂದ ರಕ್ಷಣೆ ದೊರೆಯದಿರುವದನ್ನು ನೀವು ನೋಡಿದ್ದೀರೋ?
3.ನಮ್ಮ ಸುತ್ತಲು ನಡೆಯುತ್ತಿರುವ ಆತ್ಮೀಕ ಹೋರಾಟವು ಹೇಗಿದೆ ಎಂದು ನಿಮಗೆ ಅನ್ನಿಸತ್ತದೆ?
4.ಯೇಸು ಕ್ರಿಸ್ತನು ಹೋಗುತ್ತಿರುವ ಹಾಗೆಯೇ ಹಿಂದಿರುಗಿ ಬರುವನು ಎಂಬ ವಾಗ್ದಾನವನ್ನು ಕೊಟ್ಟವರು ಯಾರು?
5.ಅಪೊ 1:8 ವಾಕ್ಯದ ಬಿಟ್ಟ ಸ್ಥಳವನ್ನು ತುಂಬಿಸಿರಿ: __________________________________________________
ನನಗೆ ಸಾಕ್ಷಿಗಳಾಗಿರಬೇಕು. ಇದು ಇಂದು ನಮಗೆ ಯಾವ ಅರ್ಥವನ್ನು ಕೊಡುತ್ತದೆ?
ಈ ಯೋಜನೆಯ ಬಗ್ಗೆ

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Equip & Grow ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.childrenareimportant.com/kannada/armor/
ವೈಶಿಷ್ಟ್ಯದ ಯೋಜನೆಗಳು

Sharing Your Faith in the Workplace

Awakening Faith: Hope From the Global Church

Protocols, Postures and Power of Thanksgiving

Rebuilt Faith

Legacy Lessons W/Vance K. Jackson

24 Days to Reflect on God's Heart for Redemption

Game Changers: Devotions for Families Who Play Different (Age 8-12)

30 Powerful Prayers for Your Child Every Day This School Year

God's Book: An Honest Look at the Bible's Toughest Topics
