ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುಮಾದರಿ

ಕತ್ತಲೆಯ ವಿರುದ್ಧ ಹೋರಾಡುವದು
ಸತ್ಯವೇದ ಕಥೆ – ಸೆರೆಮನೆಯಲ್ಲಿ ಪೌಲ ಮತ್ತು ಸೀಲನು "ಅಪೊ 16:16-31"
ನಾವು ಮಾನವರಿಗೆ ವಿರುದ್ಧವಾಗಿ ಹೋರಾಡುವದಿಲ್ಲ ಬದಲಾಗಿ ದುರಾತ್ಮನು ಹಾಗೂ ಅವನ ಕತ್ತಲೆಯ ರಾಜತ್ವಗಳ ವಿರುದ್ಧ ಹೋರಾಡುವವರಾಗಿದ್ದೇವೆ. ಸೈತಾನನಿಗೆ ಜನರಲ್ಲಿ ತಪ್ಪು ತಿಳುವಳಿಕೆಯನ್ನು ಉಂಟು ಮಾಡುವದೆಂದರೆ ಬಹಳ ಇಷ್ಟ ಮತ್ತು ಜನರು ಒಬ್ಬರನ್ನೊಬ್ಬರು ನೋಯಿಸುವವರಾಗುವಂತೆ ಅವನು ಮಾಡುತ್ತಾನೆ, ನಮ್ಮ ಹೋರಾಟವು ಯಾವಾಗಲೂ ಅವನಿಗೆ ವಿರುದ್ಧವಾದದ್ದು ಎಂಬದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆಯೇ ನಾವು ಒಬ್ಬರಿಗೆ ವಿರುದ್ಧವಾಗಿ ಒಬ್ಬರು ಹೋರಾಡಬಾರದು ಎಂಬದನ್ನೂ ಮರೆಯಬಾರದು ಯಾಕಂದರೆ ಹಾಗೆ ಮಾಡುವದರಿಂದ ಸುಲಭವಾಗಿ ವೈರಿಯ ಬಲೆಯೊಳಗೆ ನಾವು ಸಿಕ್ಕಿಕೊಳ್ಳುತ್ತೇವೆ. ನಾವು ತಪ್ಪುಗಳನ್ನು ಮಾಡುತ್ತೇವಾದರೂ, ದೇವರು ಎಲ್ಲರನ್ನು ಪ್ರೀತಿಸುತ್ತಾನೆ. ನಾವು ನಮ್ಮ ಸ್ವಂತ ಜೀವಿತಗಳಲ್ಲಿ ತಪ್ಪುಗಳನ್ನು ಮಾಡುವಾಗಲೂ ದೇವರು ನಮಗೆ ಕರುಣೆ ತೋರುವದರಿಂದ ನಾವು ಆತನಿಗೆ ಕೃತಜ್ಞತೆಯುಳ್ಳವರಾಗಿರಬೇಕು ಮತ್ತು ಯಾವಾಗಲೂ ಇತರರಿಗೆ ಕರುಣೆಯನ್ನು ತೋರಿಸಬೇಕು. ಕೆಲವೊಮ್ಮೆ ವೈರಿಯು ನಮ್ಮ ಮಾತುಗಳು ಅಥವಾ ಕ್ರಿಯೆಗಳನ್ನು ತಿರುಚುತ್ತಾನೆ, ಆಗ ನಾವು ಇತರರ ಮೇಲೆ ಕೋಪಿಸಿಕೊಳ್ಳುತ್ತೇವೆ. ಆದರೂ, ದೇವರು ಎಲ್ಲರನ್ನೂ ಪ್ರೀತಿಸುವದರಿಂದ ನಾವೂ ಎಲ್ಲರನ್ನೂ ಪ್ರೀತಿಸಬೇಕು.
ಅಪೊಸ್ತಲರ ಕೃತ್ಯಗಳ ಇಂದಿನ ಸತ್ಯವೇದದ ಕಥೆಯಲ್ಲಿ, ಪೌಲ ಮತ್ತು ಸೀಲನನ್ನು ಸೆರೆಮನೆಗೆ ಹಾಕಲಾಗಿದೆ. ಅವರು ಯಾವುದೇ ತಪ್ಪುಗಳನ್ನು ಮಾಡದಿದ್ದರೂ, ಸೆರಮನೆಯ ಯಜಮಾನನು ಅವರೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದನು. ದೇವರು ಅವರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ತೋರಿಸಿದಾಗ, ಅವರು ಸೆರಮನೆಯ ಯಜಮಾನನ ಮೇಲೆ ಸೇಡು ತೀರಿಸಕೊಳ್ಳಲಿಲ್ಲ ಬದಲಾಗಿ ಕರಣೆ ತೋರಿಸಿದರು ಮತ್ತು ಅವನನ್ನು ಹಾಗೂ ಅವನ ಇಡೀ ಕುಟುಂಬದವರನ್ನು ಕರ್ತನ ಕಡೆಗೆ ನಡೆಸಿದರು! ಪೌಲ ಮತ್ತು ಸೀಲನು ತಮ್ಮ ಕಾಲುಗಳಿಗೆ ಕೋಳವನ್ನು ಹಾಕಿಸಿದ ಸೆರೆಮನೆಯ ಯಜಮಾನನಿಗೆ ಕೇಡು ಬಯಸಿರಬಹುದಾಗಿತ್ತು, ಆದರೆ ಅವರು ತಮ್ಮ ಹೋರಾಟವು ಜನರಿಗೆ ವಿರುದ್ಧವಲ್ಲ ಬದಲಾಗಿ ದುರಾತ್ಮನಿಗೆ ವಿರುದ್ಧ ಎಂದು ಮನವರಿಕೆ ಮಾಡಿಕೊಂಡರು.
ಆತ್ಮೀಕ ಅಂಧಕಾರಕದ ವಿರುದ್ಧ ಹೋರಾಡಲು ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳುವಾಗ, ನಮ್ಮ ಹೋರಾಟ ಜೊತೆಯಲ್ಲಿರುವ ಮಾನವರ ವಿರುದ್ಧವಲ್ಲ ಎಂಬದನ್ನು ನಾವು ನೆನಪು ಮಾಡಿಕೊಳ್ಳಬೇಕು!
“ನಾನು ವೈರಿಗೆ ವಿರುದ್ಧವಾಗಿ ಹೋರಾಡುತ್ತೇನೆಯೇ ಹೊರತು ನನ್ನ ಸುತ್ತಮುತ್ತಲಿನಲ್ಲಿರುವ ಜನರ ವಿರುದ್ಧವಲ್ಲ ಎಂಬ ಆಯ್ಕೆ ಮಾಡಿಕೊಂಡಿದ್ದೇನೆ.”
ಪ್ರಶ್ನೆಗಳು:
1. ಈ ಮಾತುಗಳ ಅರ್ಥ ಏನು? “ರಾಜತ್ವಗಳು, ಅಧಿಕಾರಗಳು, ಅಂಧಕಾರದ ಲೋಕಾಧಿಪತಿಗಳು ಮತ್ತು ಆಕಾಶ ಮಂಡಲದಲ್ಲಿರುವ ದುರಾತ್ಮ ಸೇನೆಗಳು.” ಎಫೆಸ 6:12
2. ನಾವು ಅಂಧಕಾರದ ಲೋಕಾಧಿಪತಿಗಳಿಗೆ ವಿರುದ್ಧವಾಗಿ ಹೋರಾಡದೆ ಮನುಷ್ಯರಿಗೆ ವಿರುದ್ಧವಾಗಿ ಹೋರಾಡುವದರಿಂದ ಆಗುವ ಪರಿಣಾಮಗಳ ಕೆಲವು ಉದಾಹರಣೆಗಳು ಯಾವುವು?
3. ನಾವು ದೇವರು ದಯಪಾಲಿಸಿರುವ ಸರ್ವಾಯುಧಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ದೇವರು ಯಾಕೆ ಬಯಸುತ್ತಾನೆ?
4. ಪೌಲ ಮತ್ತು ಸೀಲನನ್ನು ಸೆರೆಮನೆಗೆ ಹಾಕುವ ಮೊದಲು ಅವರಿಗೆ ಉಂಟಾದ ವೇದನೆಗಳು ಯಾವುವು?
5. “ನಾನು ರಕ್ಷಣೆ ಹೊಂದಲು ಏನು ಮಾಡಬೇಕು” ಎಂಬದಾಗಿ ಸೆರೆಮನೆಯ ಯಜಮಾನನು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಏನು?
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Equip & Grow ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.childrenareimportant.com/kannada/armor/
ವೈಶಿಷ್ಟ್ಯದ ಯೋಜನೆಗಳು

My Little Heart

Notice When You've Stopped Noticing God

Live Well | God's Plan for Your Wellbeing

God in 60 Seconds - Friendship

Engaging in God’s Heart for the Nations: 30-Day Devotional

Heaven (Part 3)

Hero Worship

Peace Over Panic: A 5-Day Devotional for Anxious Hearts

God in 60 Seconds - Money
