ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುಮಾದರಿ

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

10 ನ 9 ದಿನ

ದೇವರ ವಾಕ್ಯವೆಂಬ ಕತ್ತಿ

ಸತ್ಯವೇದ ಕಥೆ - ಪೇತ್ರನು ಜನಸಮೂಹದವರನ್ನುದ್ದೇಶಿಸಿ ಮಾತನಾಡಿದನು "ಅಪೊ 2:12-17, 22-30, 34-41"

ಪವಿತ್ರಾತ್ಮನು ಕೊಡುವ ಕತ್ತಿ, ರಕ್ಷಣೆಗಾಗಿ ಉಪಯೋಗಿಸುವ ಸಾಧನವಲ್ಲ ಬದಲಾಗಿ ಸರ್ವಾಯುಧಗಳಲ್ಲಿರುವ ಮೊದಲನೆಯ ಆಯುಧವಾಗಿದೆ. “ಪವಿತ್ರಾತ್ಮನು ಕೊಡುವ ಕತ್ತಿ” ಸತ್ಯವೇದವಾಗಿದೆ, ಅಥವಾ ದೇವರ ವಾಕ್ಯವಾಗಿದೆ. ನೀವು ನಿಮ್ಮ ಕತ್ತಿಯನ್ನು ಯುದ್ಧದಲ್ಲಿ ಉಪಯೋಗಿಸಬೇಕೆಂದರೆ, ಸತ್ಯವೇದವನ್ನು ನೀವು ತಿಳಿದಿರಬೇಕು.

ಇದರ ಅರ್ಥ ನೀವು ನಿಮ್ಮ ಸತ್ಯವೇದವನ್ನು ಮತ್ತೆಮತ್ತೆ ಓದುವದು ಮತ್ತು ವಾಕ್ಯಗಳನ್ನು ಕಂಠಪಾಠ ಮಾಡುವದು. ಅಪೊಸ್ತಲರ ಕೃತ್ಯಗಳಿಂದ ತೆಗೆದುಕೊಳ್ಳಲಾಗಿರುವ ಇಂದಿನ ಸತ್ಯಕಥೆಯಲ್ಲಿ ಪೇತ್ರನು ಜನಸಮೂಹದವರೊಂದಿಗೆ ಮಾತನಾಡುವಾಗ ದೇವರ ವಾಕ್ಯಗಳನ್ನು ಉಪಯೋಗಿಸಿದ್ದಾನೆ. ಅಲ್ಲಿ ಕೆಲವರು ದೇವರಲ್ಲಿ ನಂಬಿಕೆಯಿಲ್ಲದವರಿದ್ದರು, ಅವರು ಅವನನ್ನು ಗೇಲಿ ಮಾಡುತ್ತಿದ್ದರು. ಗೇಲಿ ಮಾಡುವವರೊಂದಿಗೆ ಮಾತನಾಡಲು ಪೇತ್ರನು ಎದ್ದು ನಿಂತುಕೊಂಡನು; ಅವನು ಹಾಗೇ ಸುಮ್ಮನೆ ಅವರಿಗೆ ಬೋಧನೆ ಮಾಡಲಿಲ್ಲ, ಬದಲಾಗಿ ಯುದ್ಧದಲ್ಲಿ ಹೋರಾಡಲು ವಾಕ್ಯಗಳನ್ನು ಉಪಯೋಗಿಸಿದನು. ನಾವು ವಾಕ್ಯಗಳನ್ನು ಕಂಠಪಾಠ ಮಾಡಿರುವಾಗ, ಅವಶ್ಯವಿರುವ ಸಮಯದಲ್ಲಿ ಅವುಗಳನ್ನು ಉಪಯೋಗಿಸಬಹುದು. ಆ ದಿನ ಪೇತ್ರನು ದೇವರ ವಾಕ್ಯಗಳ ಮೂಲಕ ಬೋಧನೆ ಮಾಡಿದ್ದರ ನಿಮಿತ್ತ ಮೂರು ಸಾವಿರ ಜನರು ರಕ್ಷಣೆ ಹೊಂದಿದರು ಮತ್ತು ಸಭೆಗ ಸೇರಿದರು! ಎಂಥಾ ಆಶೀರ್ವಾದ! ಪೇತ್ರನು ತನ್ನ ಕತ್ತಿಯನ್ನು ಕೌಶಲ್ಯದಿಂದ ಉಪಯೋಗಿಸಿದನು ಯಾಕಂದರ ಆ ಪರಸ್ಥಿತಿಗೆ ಅನುಗುಣವಾದ ವಚನಭಾಗವನ್ನು ಅವನು ಕಂಠಪಾಠ ಮಾಡಿದ್ದನು. ಅವರು ಕೌಶಲ್ಯದಿಂದ ವೈರಿಯೊಂದಿಗೆ ಹೋರಾಡಿದನು ಮತ್ತು 3000 ಜನರನ್ನು ಕರ್ತನಿಗಾಗಿ ಗೆದ್ದನು.

ನೀವು ದೇವರ ವಾಕ್ಯಗಳು ಎಷ್ಟು ಹೆಚ್ಚಾಗಿ ಗೊತ್ತಿರುತ್ತದೆಯೋ ಅಷ್ಟು ಹೆಚ್ಚಾಗಿ ನೀವು ನಿಮ್ಮ ಕತ್ತಿಯನ್ನು ಉಪಯೋಗಿಸುವಿರಿ. ನಾವು ದೇವರ ವಾಕ್ಯಗಳನ್ನು ಓದಿ ಕಂಠಪಾಠ ಮಾಡಿರುವಾಗ, ಅವಶ್ಯವಿರುವ ಸಮಯದಲ್ಲಿ ದೇವರು ಅದನ್ನು ನಮ್ಮ ನೆನಪಿಗೆ ಬರಮಾಡುವನು. ನೀವು ನಿಮ್ಮ ಕತ್ತಿಯ ವಿಷಯದಲ್ಲಿ ಹೇಗಿದ್ದೀರಿ?

“ನಾನು ದೇವರ ವಾಕ್ಯವನ್ನು ಕಲಿತುಕೊಳ್ಳಲು ಮತ್ತು ನನ್ನ ಅನುದಿನದ ಜೀವಿತದಲ್ಲಿ ಉಪಯೋಗಿಸಿಕೊಳ್ಳುವ ಆಯ್ಕೆ ಮಾಡಿಕೊಂಡಿದ್ದೇನೆ.”

ಪ್ರಶ್ನೆಗಳು:

1.ನೀವು ವೈರಿಯ ವಿರುದ್ಧವಾಗಿ ಯಾವಾಗ ರಕ್ಷಣಾತ್ಮಕವಾಗಿರುವಿರಿ?

2.ನಿಜವಾದ ಜೀವಿತದಲ್ಲಿ ನಿಮ್ಮ ಕತ್ತಿಯನ್ನು ನೀವು ಉಪಯೋಗಿಸಿಕೊಂಡ ಮಾದರಿಯನ್ನು ತಿಳಿಸಿರಿ?

3.ಪವಿತ್ರಾತ್ಮನು ಕೊಡುವ ಕತ್ತಿ ಹೇಗೆ ದುರುಪಯೋಗವಾಗುತ್ತದೆ?

4.ಪಂಚಾಶತ್ತಮ ದಿನದಂದು ಪೇತ್ರನು ಯೆರೂಸಲೇಮಿನ ಹೇಳಿದ ವಿಷಯಗಳನ್ನು ಕೇಳಿ ಎಷ್ಟು ಜನರು ಕ್ರೈಸ್ತರಾದರು?

5.ನಾವು ಯೇಸು ಕ್ರಿಸ್ತನನ್ನು ಹಿಂಬಾಲಿಸುವವರಾಗಿದ್ದೇವೆ ಎಂಬದನ್ನು ತೋರಿಸಲು ಈ ಹೊಸ ಕ್ರೈಸ್ತರು ಏನು ಮಾಡಿದರು?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Equip & Grow ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.childrenareimportant.com/kannada/armor/