ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುಮಾದರಿ

ನಂಬಿಕೆಯೆಂಬ ಗುರಾಣಿ
ಸತ್ಯವೇದ ಕಥೆ – ಪೌಲ ಮತ್ತು ಹಡಗು ಒಡೆದುಹೋದದ್ದು "ಅಪೊ 27:21-37, 28:1"
ಇಂದು ನಾವು ನಂಬಿಕೆಯೆಂಬ ಗುರಾಣಿಯ ಬಗ್ಗೆ ಕಲಿತುಕೊಳ್ಳುವವರಾಗಿದ್ದೇವೆ, ಇದು ರಕ್ಷಣೆಯನ್ನು ಒದಗಿಸುವ ದೊಡ್ಡ ಆಯುದ್ಧವಾಗಿದೆ ಯಾಕಂದರೆ ನಾವು ಇದನ್ನು ಸುತ್ತಲೂ ಉಪಯೋಗಿಸಬಹುದು ಮತ್ತು ನಮ್ಮನ್ನು ನಿರ್ದಿಷ್ಟವಾದ ಆಕ್ರಮಣಗಳಿಂದ ರಕ್ಷಿಸಿಕೊಳ್ಳಬಹುದು. ಇದರಿಂದ ನಾವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವೆವು ಎಂದು ಸತ್ಯವೇದವು ಹೇಳುತ್ತದೆ. “ಒಂದುವೇಳೆ” ಬಾಣಗಳು ಬಂದರೆ ಎಂಬದಾಗಿ ಅಲ್ಲ ಬದಲಾಗಿ “ಅವುಗಳು” ಎದುರಾಗುವಾಗ ನಾವು ಅವುಗಳನ್ನು ಎದುರಿಸಲು ಶಕ್ತರಾಗಿರುವೆವು ಎಂದು ಹೇಳುತ್ತದೆ. ಸತ್ಯವೇನೆಂದರೆ ವೈರಿಯು ನಮ್ಮ ಮೇಲೆ ಎಡಬಿಡದೆ ಆಕ್ರಮಣ ಮಾಡುತ್ತಿದ್ದಾನೆ. ನಿಮ್ಮ ವೈರಿಯು ಅಗ್ನಿ ಬಾಣಗಳನ್ನು ನಿಮ್ಮ ಮೇಲೆ ಎಸೆಯುವ ಮೂಲಕ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಮತ್ತು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸಲು ಬಯಸುತ್ತಾನೆ. ಆತನು ನಿಮಗಾಗಿಯೇ ತನ್ನ ಯೋಜನೆಗಳನ್ನು ರೂಪಿಸಿಕೊಂಡಿದ್ದಾನೆ. ಅವನು ನಿಮ್ಮ ಅಭ್ಯಾಸಗಳನ್ನು ತಿಳಿದುಕೊಂಡಿದ್ದಾನೆ, ನಿಮ್ಮ ಹೆದರಿಕೆಗಳು ಮತ್ತು ಬಲಹೀನತೆಗಳನ್ನು ಬಲ್ಲವನಾಗಿದ್ದಾನೆ, ಹಾಗೂ ಆ ವಿಷಯಗಳ ಮೇಲೆ ತನ್ನ ಬಾಣಗಳನ್ನು ಗುರಿಯಿಟ್ಟು ಎಸೆಯುತ್ತಾನೆ.
ಆತನ ಆತ್ಮೀಕ ರಾಜ್ಯವನ್ನು ನೋಡಲು ನಮ್ಮಿಂದ ಆಗುವದಲ್ಲವಾದರೂ, ದೇವರನ್ನು ಮತ್ತು ಆತನ ವಾಕ್ಯಗಳನ್ನು ನಂಬುವದೇ ನಂಬಿಕೆಯಾಗಿದೆ. ದೇವರನ್ನು ನೋಡಲು ನಮ್ಮಿಂದ ಆಗುವದಿಲ್ಲವಾದರೂ ದೇವರು ಇದ್ದಾನೆ ಎಂಬದು ನಮಗ ಗೊತ್ತಿದೆ, ಅದುವೇ ನಮ್ಮ ಹೃದಯದಲ್ಲಿರುವ ನಂಬಿಕೆಯಾಗಿದೆ. ನಮ್ಮಲ್ಲಿ ನಂಬಕೆಯಿದ್ದರೆ, ವೈರಿಯು ಎಸಯುವ ಬಾಣಗಳನ್ನೆಲ್ಲಾ ನಾವು ಸೋಲಿಸಬಹುದು.
ಅಪೊಸ್ತಲರ ಕೃತ್ಯಗಳ ಇಂದಿನ ಸತ್ಯವೇದದ ಕಥೆಯಲ್ಲಿ, ಪೌಲನು ಸಮುದ್ರದಲ್ಲಿ ಘೋರವಾದ ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದನು, ಆಗ ದೇವರು ಅವನಿಗೆ ಬಿರುಗಾಳಿಯ ನಿಮಿತ್ತ ಹಡಗಿನಲ್ಲಿರುವವರೊಳಗೆ ಒಬ್ಬನೂ ಸಾಯುವದಿಲ್ಲ ಎಂದು ಹೇಳಿದನು. ದೇವರು ನೋಡಲು ಅವನಿಂದ ಆಗಲಿಲ್ಲ ಆದರೂ ದೇವರೇ ನನ್ನ ಸಂಗಡ ಮಾತನಾಡಿದ್ದಾನೆ ಎಂಬದಾಗಿ ಪೌಲನು ನಂಬಿದನು. ನಂತರ, ದೇವರು ತನಗೆ ಹೇಳಿದ್ದನ್ನು ಪೌಲನು ಎಲ್ಲರಿಗೂ ಹೇಳಿದನು. ಇದಲ್ಲದೆ ಬಲಗೊಳ್ಳಲು ಅವರೆಲ್ಲರಿಗೂ ಊಟ ಮಾಡಿರಿ ಎಂದು ಹೇಳಿದನು. ಪೌಲನು ದೇವರ ಮಾತುಗಳನ್ನು ನಂಬಿದ್ದು ಮಾತ್ರವಲ್ಲ ಬದಲಾಗಿ, ಇತರರೊಂದಿಗೆ ಅವನು ದೇವರ ಸಂದೇಶವನ್ನು ಹಂಚಿಕೊಂಡನು ಹಾಗೂ ಅವರೆಲ್ಲರೂ ಅದರಂತೆ ನಡೆದುಕೊಂಡರು! ಒಂದುವೇಳೆ ಹಡಗು ಒಡೆತದಿಂದ ಯಾರಾದರೂ ಮೃತಪಟ್ಟಿದ್ದರೆ ಅವನು ಬಹಳವಾಗಿ ನೊಂದುಕೊಂಡಿರುತ್ತಿದ್ದನು. ಕೆಲವೊಮ್ಮೆ ನಾವು ಮನುಷ್ಯರ ಮಾತುಗಳನ್ನು ಕೇಳದೆ ದೇವರ ಮಾತುಗಳನ್ನು ಕೇಳುವವರಾಗಿರಬೇಕು.
ನಿಮ್ಮ ಕಣ್ಣಿಗೆ ಕಾಣದಿದ್ದರೂ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಲು ನೀವು ಸಿದ್ಧರಾಗಿರುವಿರೋ? ಹೀಗೆ ನೀವು ವೈರಿಯ ವಿರುದ್ಧ ಗೆಲ್ಲಬಹುದು ಮತ್ತು ಅವನ ಅಗ್ನಿಬಾಣಗಳನ್ನು ಆರಿಸಬಹುದು!
“ನಾನು ದೇವರಲ್ಲಿ ನಂಬಿಕೆಯಿಟ್ಟು, ಆತನಲ್ಲಿ ಭರವಸೆಯುಳ್ಳವನಾಗಿರುವ ಆಯ್ಕೆ ಮಾಡಿಕೊಂಡಿದ್ದೇನೆ.”
ಪ್ರಶ್ನೆಗಳು:
1.ನಿಜವಾದ ಜೀವನದಲ್ಲಿ “ದುರಾತ್ಮನು ಎಸೆಯುವ ಅಗ್ನಿಬಾಣಗಳು” ಯಾವುವು?
2.ಸಹಜವಾದ ಜೀವಿತದಲ್ಲಿ ನಿಮ್ಮ ನಂಬಿಕೆಯೆಂಬ ಗುರಾಣಿಯ ಮೂಲಕ ನೀವು ಯಾವ ರೀತಿ ಕೆಡುಕನ ಅಗ್ನಿಬಾಣಗಳನ್ನು ಆರಿಸುವಿರಿ ಎಂಬದಕ್ಕೆ ನಿರ್ದಿಷ್ಟವಾದ ಉದಾಹರಣೆಯನ್ನು ಕೊಡಿರಿ?
3.ನೀವು ಮನೆಯಿಂದ ಹೊರಗೆ ಹೋಗುವಾಗ ನಂಬಿಕೆಯನ್ನು ಬಿಟ್ಟುಹೋಗದಿರುವದನ್ನು ದೃಢಪಡಿಸಿಕೊಳ್ಳಲು ಏನು ಮಾಡುವಿರಿ?
4.ಇಂದಿನ ಸತ್ಯವೇದದ ಕಥೆಯ ಪ್ರಕಾರ ಪೌಲನು ಹಡಗಿನಲ್ಲಿ ಎಲ್ಲಿಗೆ ಹೋಗುತ್ತಿದ್ದನು? ಆ ಹಡಗಿನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು?
5.ಹಡಗು ನಾಶವಾಗುತ್ತದೆ ಆದರೆ ಬಿರುಗಾಳಿಯ ನಿಮಿತ್ತ ಯಾರೂ ಸಾಯುವದಿಲ್ಲ ಎಂಬದನ್ನು ಪೌಲನು ಹೇಗೆ ತಿಳಿದುಕೊಂಡನು?
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Equip & Grow ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.childrenareimportant.com/kannada/armor/
ವೈಶಿಷ್ಟ್ಯದ ಯೋಜನೆಗಳು

My Little Heart

Notice When You've Stopped Noticing God

Live Well | God's Plan for Your Wellbeing

God in 60 Seconds - Friendship

Engaging in God’s Heart for the Nations: 30-Day Devotional

Heaven (Part 3)

Hero Worship

Peace Over Panic: A 5-Day Devotional for Anxious Hearts

God in 60 Seconds - Money
