ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳುಮಾದರಿ

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

10 ನ 8 ದಿನ

ರಕ್ಷಣೆಯೆಂಬ ಶಿರಸ್ತ್ರಾಣ

ಸತ್ಯವೇದ ಕಥೆ – ಸೌಲನ ಮಾನಸಾಂತರ "ಅಪೊ 9:1-19"

ನಾವು ನಮ್ಮ ಶಿರಸ್ತ್ರಾಣಗಳನ್ನು ಧರಿಸಿಕೊಳ್ಳಬೇಕಾದದ್ದು ಪ್ರಾಮುಖ್ಯವಾಗಿದೆ ಯಾಕಂದರೆ ಒಂದುವೇಳೆ ನಮ್ಮ ತಲೆಗೆ ಏಟು ತಗುಲಿದರೆ ಅದರಿಂದ ಗಂಭೀರವಾದ ಪರಿಣಾಮಗಳು ಎದುರಾಗುವವು. ನಾವು ಶಿರಸ್ತ್ರಾಣವನ್ನು ಹಾಕಿಕೊಂಡಿದ್ದೇವೆ ಎಂಬದನ್ನು ದೃಢಪಡಿಸಿಕೊಳ್ಳುವದು ಹೇಗೆ? ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮುಗಿಸಿದ ಕೆಲಸದ ಮೇಲೆಯೇ ನಮ್ಮ ರಕ್ಷಣೆಯು ಆಧಾರವಾಗಿದೆ ಎಂದು ಸತ್ಯವೇದವು ಸ್ಪಷ್ಟವಾಗಿ ಹೇಳುತ್ತದೆ. ಆತನು ನಮ್ಮ ಪಾಪಗಳಿಗಾಗಿ ಮೃತಪಟ್ಟಾಗ, ಕ್ರಯವನ್ನು ಪಾವತಿಸಿ ನಮ್ಮ ರಕ್ಷಣೆಯನ್ನು ಕೊಂಡುಕೊಂಡನು! ನಾವು ಒಳ್ಳೆಯ ಕಾರ್ಯಗಳ ಮೂಲಕ ಪರಲೋಕದ ಬಾಧ್ಯಸ್ಥಿಕೆಯನ್ನು ಖರೀದಿಸಲಾರೆವು, ಬದಲಾಗಿ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರುವದರಿಂದಲೇ ರಕ್ಷಣೆ ಹೊಂದಿದ್ದೇವೆ. ರಕ್ಷಣೆಯ ಶಿರಸ್ತ್ರಾಣವನ್ನು ಧರಸಕೊಳ್ಳಲು ನಾವು ಪ್ರತಿದಿನ ನಮ್ಮ ಮನೆಯಲ್ಲಿ ಜ್ಞಾಪಕಾರ್ಥಕ ಪ್ರಾರ್ಥನೆಯನ್ನು ನಡೆಸುವ ಅವಶ್ಯಕತೆಯಿಲ್ಲ. ನಾವು ನಮ್ಮ ರಕ್ಷಣೆಗಾಗಿ ಕರ್ತನಾದ ಯೇಸು ಕ್ರಿಸ್ತನಲ್ಲಿ ಭರವಸೆಯನ್ನಿಟ್ಟಿರುವದಾದರೆ, ನಮ್ಮ ಶಿರಸ್ತ್ರಾಣವನ್ನು ಧರಸಿಕೊಂಡವರಾಗಿದ್ದೇವೆ!

ಅಪೊಸ್ತಲರ ಕೃತ್ಯಗಳಲ್ಲಿರುವ ಇಂದಿನ ಸತ್ಯವೇದದ ಕಥೆಯಲ್ಲಿ ದೇವರು ಅದ್ಭುತ ರೀತಿಯಲ್ಲಿ ಸೌಲನಿಗೆ ಕಾಣಿಸಿಕೊಂಡನು. ನಂತರದಲ್ಲಿ ಪೌಲನಾದ, ಸೌಲನು ಕ್ರೈಸ್ತರನ್ನು ಗೇಲಿ ಮಾಡುತ್ತಿದ್ದನು ಮತ್ತು ಹಿಂಸೆಪಡಿಸುತ್ತಿದ್ದನು. ಒಂದುದಿನ ದಮಸ್ಕದ ದಾರಿಯಲ್ಲಿ, ಯೇಸು ಕ್ರಿಸ್ತನು ಸೌಲನಿಗೆಪರಲೋಕದ ಬೆಳಕಿನ ಮೂಲಕ ಕಾಣಿಸಿಕೊಂಡನು ಮತ್ತು ಸೌಲನು ಕುರುಡನಾಗಿ ನೆಲಕ್ಕೆ ಬಿದ್ದನು. ಮೂರು ದಿನಗಳನಂತರ ದೇವರು ಅವನನ್ನು ಗುಣಪಡಿಸಲು ಮತ್ತು ಕ್ರಿಸ್ತನ ಕಡೆಗೆ ನಡೆಸಲು ಒಬ್ಬ ಕ್ರೈಸ್ತನನ್ನು ಅವನ ಬಳಿಗೆ ಕಳುಹಿಸಿದನು. ಆ ವಾರದಲ್ಲಿಯೇ ಸೌಲನು ಯೇಸು ಕ್ರಿಸ್ತನನ್ನು ನಂಬಿದನು ಮತ್ತು ರಕ್ಷಣೆ ಹೊಂದಿದನು!ಒಂದುವೇಳೆ ನೀವು ಪ್ರಾರ್ಥಿಸುತ್ತಾ ನಿಮ್ಮ ರಕ್ಷಣೆಗಾಗಿ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವದಾದರೆ, ಪೌಲನ ಹಾಗೆ ಇಂದೇ ರಕ್ಷಣೆಯ ಶಿರಸ್ತ್ರಾಣವನ್ನು ಹಾಕಿಕೊಳ್ಳಬಹುದು.

ನನ್ನೊಂದಿಗೆ ಪ್ರಾರ್ಥನೆ ಮಾಡಿರಿ, “ಪ್ರೀತಿಯ ಯೇಸುವೇ, ನಾನು ಪಾಪಿಯಾಗಿದ್ದೇನೆ, ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ನನ್ನ ಪಾಪಗಳಿಗಾಗಿ ನೀನು ಶಿಲುಬೆಯ ಮೇಲೆ ಪ್ರಾಣ ಕೊಟ್ಟಿರುವೆ ಮತ್ತು ನೀನು ಸತ್ಯವಂತನು ಎಂದು ನಾನು ನಂಬುತ್ತೇನೆ. ಇಂದೇ ನನ್ನ ಹೃದಯದಲ್ಲಿ ನಾನು ನಿನ್ನನ್ನು ನನ್ನ ಸ್ವಂತ ರಕ್ಷಕನನ್ನಾಗಿ ಅಂಗೀಕರಿಸಿಕೊಳ್ಳುತ್ತೇನೆ. ನನ್ನನ್ನು ಅಂಗೀಕರಿಸಿಕೊಂಡದ್ದಕ್ಕಾಗಿ, ಪ್ರೀತಿಸಿದ್ದಕ್ಕಾಗಿ ಮತ್ತು ಪರಲೋಕದಲ್ಲಿ ನಿನ್ನೊಂದಿಗೆ ನಿತ್ಯಜೀವವನ್ನು ಕೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.!”

“ನನ್ನ ರಕ್ಷಣೆಗಾಗಿ ನಾನು ಕರ್ತನಾದ ಯೇಸು ಕ್ರಿಸ್ತನಲ್ಲಿ ಭರವಸೆಯನ್ನಿಡುವ ಆಯ್ಕೆ ಮಾಡಿಕೊಂಡಿದ್ದೇನೆ.”

ಪ್ರಶ್ನೆಗಳು:

1.ನಿಮ್ಮ ರಕ್ಷಣೆಯ ದೃಢತೆ ನಿಮಗಿದೆಯೇ?

2.ನಾನು ನನ್ನ ರಕ್ಷಣೆಯನ್ನು ಕಳೆದುಕೊಳ್ಳಬಹುದು ಎಂದು ನಿಮಗೆ ಅನ್ನಿಸುತ್ತದೆಯೇ?

3.ಸೌಲನು ಕುದುರೆಯ ಮೇಲೆ ದಮಸ್ಕದ ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ ಏನಾಯಿತು?

4.ದೇವರು ದಮಸ್ಕದ ಅನನೀಯನಿಗೆ ಏನೆಂದು ಹೇಳಿದನು?

5.ಆನನೀಯನು ದೇವರಿಗೆ ಏನೆಂದು ಹೇಳಿದನು? ನಾವು ದೇವರ ಹತ್ತಿರ ದೂರಗಳನ್ನು ಹೇಳುವಾಗ ಏನಾಗುತ್ತದೆ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Equip & Grow ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: https://www.childrenareimportant.com/kannada/armor/