ಮಕ್ಕಳಿಗಾಗಿ ಬೈಬಲ್ಮಾದರಿ

ಮಕ್ಕಳಿಗಾಗಿ ಬೈಬಲ್

8 ನ 7 ದಿನ

ಯೇಸು ಕ್ರಿಸ್ತನು ಈ ಭೂಮಿಯ ಮೇಲಿರುವಾಗ ತನ್ನ ಶಿಷ್ಯರಿಗೆ ಪರಲೋಕದ ಕುರಿತು ತಿಳಿಸಿದನು. ಪರಲೋಕವನ್ನು “ತನ್ನ ತಂದೆಯ ಮನೆ” ಎಂದು ಕರೆದನು. ಮತ್ತು ಅಲ್ಲಿ ಅನೇಕ ಗುಡಾರಗಳು ಇವೆ ಎಂದು ಹೇಳಿದನು. ಮೂಲ ಭಾಷೆಯಲ್ಲಿ ಗುಡಾರ ಎಂಬದಕ್ಕೆ ಭವ್ಯವಾದ ಕಟ್ಟಡ ಎಂದಾಗಿದೆ. ಭೂಲೋಕದಲ್ಲಿರುವ ಯಾವ ಪಟ್ಟಣಕ್ಕಿಂತಲೂ ಸುಂದರವಾದದ್ದೂ ಭವ್ಯವಾದದ್ದೂ ಪರಲೋಕವಾಗಿದೆ.

ಯೇಸು ಕ್ರಿಸ್ತನು ಹೇಳಿದ್ದೇನಂದರೆ, “ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರುಗಿ ಬಂದು ನಿಮ್ಮನ್ನು ಕರೆದುಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು.” ಯೇಸು ಕ್ರಿಸ್ತನು ಸತ್ತು ಜೀವಿತನಾಗಿ ಎದ್ದ ಮೇಲೆ ಪರಲೋಕಕ್ಕೆ ಏರಿಹೋಗಿದ್ದಾನೆ. ಆತನ ಶಿಷ್ಯರ ಕಣ್ಣು ಮುಂದೆಯೇ ಆತನು ಮೇಲಕ್ಕೆ ಒಯ್ಯಲ್ಪಟ್ಟನು ಮತ್ತು ಮೋಡವು ಆತನನ್ನು ಮುಚ್ಚಿಕೊಂಡಿದ್ದರಿಂದ ಅವರ ಕಣ್ಣಿಗೆ ಮರೆಯಾದನು.

ಅಂದಿನಿಂದ ವಿಶ್ವಾಸಿಗಳು ಆತನ ಎರಡನೆಯ ಬರೋಣಕ್ಕಾಗಿ ಕಾದುಕೊಂಡಿರುವರು. ನಾವು ನೆನಸದ ಗಳಿಗೆಯಲ್ಲಿ ಆತನು ಪಕ್ಕನೆ ಬಂದು ನಮ್ಮನ್ನು ತನ್ನ ಬಳಿಗೆ ಸೇರಿಸಿಕೊಳ್ಳುವನು. ಆತನು ಬರುವ ಮುಂಚೆ ಸತ್ತು ಹೋಗಿರುವ ವಿಶ್ವಾಸಿಗಳಿಗೆ ಏನಾಗುವದು? ವಿಶ್ವಾಸಿಗಳು ಸತ್ತಕೂಡಲೇ ನೇರವಾಗಿ ಕ್ರಿಸ್ತನ ಬಳಿಗೆ ಹೋಗುವರು. ಕ್ರಿಸ್ತನನ್ನು ನಂಬಿದ ನಾವು ಈ ಶರೀರವನ್ನು ಬಿಟ್ಟು ಹೋದರೆ ಕ್ರಿಸ್ತನ ಬಳಿಗೆ ಸೇರುವೆವು.

ಪ್ರಕಟನೆ-ಬೈಬಲಿನ ಕಡೆಯ ಪುಸ್ತಕವು ಪರಲೋಕವು ಅದ್ಭುತವಾದ ಸ್ಥಳವಾಗಿದೆ ಎಂದು ತಿಳಿಸುತ್ತದೆ. ಆಶ್ಚರ್ಯಕರವಾದ ಮತ್ತು ವಿಶಿಷ್ಠವಾದ ಮತ್ತೊಂದು ವಿಷಯವೇನಂದರೆ ಅದು ದೇವರ ಮನೆಯಾಗಿದೆ. ದೇವರು ಸರ್ವವ್ಯಾಪ್ತಿ ಅಂದರೆ ಎಲ್ಲ ಕಡೆಗಳಲ್ಲಿ ಇರುವನಾದರೂ ಪರಲೋಕದಲ್ಲಿ ಆತನ ಸಿಂಹಾಸನವಿದೆ.

ಪರಲೋಕದಲ್ಲಿ ದೇವದೂತರು ಮತ್ತು ಪರಲೋಕದ ಇತರ ಜೀವಿಗಳು ದೇವರನ್ನು ಆರಾಧಿಸುತ್ತಾರೆ. ಹಾಗೆಯೇ ದೇವಭಕ್ತರಾಗಿ ಸತ್ತು ಪರಲೋಕಕ್ಕೆ ಹೋದವರೆಲ್ಲರೂ ಕೂಡ ಆತನನ್ನು ಆರಾಧಿಸುತ್ತಾರೆ. ದೇವರನ್ನು ಆರಾಧಿಸಲು ಅವರು ವಿಶೇಷ ಗೀತೆಗಳನ್ನು ಹಾಡುವರು. ಆ ಗೀತೆಯ ಕೆಲವು ಪದಗಳು ಹೀಗಿವೆ. “ನೀನು...ಯೋಗ್ಯನೇ; ನೀನು ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ; ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ; ಅವರು ಭೂಮಿಯ ಮೇಲೆ ಆಳುವರು.” (ಪ್ರಕಟನೆ 5:9)

ಬೈಬಲಿನ ಕೊನೆಯ ಪುಟಗಳು ಪರಲೋಕವನ್ನು “ಹೊಸ ಯೆರೂಸಲೇಮು” ಎಂದು ಕರೆಯುತ್ತವೆ. ಅದು ಬಹು ವಿಸ್ತಾರವಾಗಿದ್ದು ಪಟ್ಟಣದ ಸುತ್ತಲು ಎತ್ತರವಾದ ಗೋಡೆಗಳನ್ನು ಹೊಂದಿರುತ್ತದೆ. ಈ ಗೋಡೆಯು ಫಳ ಫಳ ಹೊಳೆಯುವ ಮುತ್ತು, ರತ್ನಗಳಿಂದ ಕಟ್ಟಲ್ಪಟ್ಟದ್ದಾಗಿರುತ್ತದೆ. ವಜ್ರ, ವೈಡೂರ್ಯಗಳು ಇದರ ಅಸ್ತಿವಾರವು ಆಗಿರುತ್ತವೆ. ಪಟ್ಟಣದ ಹೆಬ್ಬಾಗಿಲುಗಳು ಕೂಡ ಥಳ ಥಳಿಸುವ ವಜ್ರಗಳಿಂದ ಮಾಡಲ್ಪಟ್ಟಿರುತ್ತವೆ.

ಆ ಅದ್ಭುತವಾದ ಹೆಬ್ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ. ಬನ್ನಿರಿ, ಅದರ ಒಳಗಡೆ ಹೋಗಿ ಪಟ್ಟಣವು ಹೇಗಿದೆಂದು ನೋಡೋಣ! ಅಬ್ಬಾ! ಪರಲೋಕದ ಒಳಗಿನ ಭಾಗವು ಇನ್ನೂ ಸುಂದರವಾಗಿದೆ. ಈ ಪಟ್ಟಣವು ಅಪ್ಪಟವಾದ, ಸ್ವಚ್ಛವಾದ ಬಂಗಾರದಿಂದ ಮಾಡಲ್ಪಟ್ಟಿರುತ್ತದೆ. ಆ ಬಂಗಾರವು ಎಷ್ಟು ಶುದ್ಧವಾಗಿರುವದೆಂದರೆ ಗಾಜಿನಂತೆ ಸ್ಪಷ್ಟವಾಗಿರುವದು. ಪಟ್ಟಣದ ಬೀದಿಗಳು ಅಂದರೆ ರಸ್ತೆಗಳು ಕೂಡ ಬಂಗಾರದಿಂದಲೇ ಮಾಡಲ್ಪಟ್ಟಿರುತ್ತದೆ.

ಆ ಪಟ್ಟಣದಲ್ಲಿರುವ ದೇವರ ಸಿಂಹಾಸನದಿಂದ ಜೀವಜಲದ ನದಿಯು ಹರಿಯುತ್ತದೆ. ಅದರ ನೀರು ಎಷ್ಟು ತಿಳಿಯಾಗಿರುವದೆಂದರೆ ಪ್ರಕಾಶÀದಿಂದ ಹೊಳೆಯುವ ಗಾಜಿನಂತೆ ಇರುತ್ತದೆ. ಆ ನದಿಯ ಎರಡೂ ಬದಿಗಳಲ್ಲಿ ಜೀವವೃಕ್ಷ (ಜೀವವನ್ನು ಕೊಡುವ ಮರ) ಇರುತ್ತದೆ. ಈ ಮರವು ಮೊದಲು ಏದೇನ್ ತೋಟದಲ್ಲಿತ್ತು. ಈ ಮರವು ಬಹು ವಿಶೇಷವಾದದ್ದು. ಹೇಗೆಂದರೆ ವರ್ಷದ ಹನ್ನೆರಡು ತಿಂಗಳು ಹನ್ನೆರಡು ತರದ ಹಣ್ಣುಗಳನ್ನು ಬಿಡುತ್ತದೆ. ಒಂದೊಂದು ತಿಂಗಳು ಒಂದೊಂದು ತರÀದ ಹಣ್ಣನ್ನು ಬಿಡುತ್ತದೆ. ಅದರ ಎಲೆಗಳು ಜನಾಂಗದವರನ್ನು ವಾಸಿಮಾಡುವ ಗುಣವನ್ನು ಪಡೆದಿರುತ್ತವೆ.

ಪರಲೋಕಕ್ಕೆ ಬೆಳಕು ಕೊಡಲು ಸೂರ್ಯನ ಅಥವಾ ಚಂದ್ರನ ಅವಶ್ಯಕತೆ ಇರುವದಿಲ್ಲ. ದೇವರ ಮಹಿಮೆಯು ಅದಕ್ಕೆ ಅದ್ಭುತವಾದ ಪ್ರಕಾಶ ಅಥವಾ ಬೆಳಕನ್ನು ಕೊಡುವದು. ಅಲ್ಲಿ ರಾತ್ರಿಯಂತೂ ಇರವದೇ ಇಲ್ಲ.

ಪರಲೋಕದಲ್ಲಿ ಪ್ರಾಣಿಗಳು ಇರುವವು ಆದರೆ ಅವುಗಳ ವರ್ತನೆಯು ಬದಲಾಗಿರುತ್ತದೆ. ಅವು ಸಾಧುವಾಗಿ, ಸ್ನೇಹಪರವಾಗಿ ಇರುವವು. ತೋಳ ಮತ್ತು ಕುರಿಮರಿಗಳು ಒಟ್ಟಿಗೆ ಮೇಯುವವು. ಸಿಂಹ ರಾಜನು ಎತ್ತಿನಂತೆ ಹುಲ್ಲು ತಿನ್ನುವನು. “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ” ಎಂಬದಾಗಿ ದೇವರು ಹೇಳುತ್ತಾನೆ.

ಪರಲೋಕದಲ್ಲಿ ನಮ್ಮ ದೃಷ್ಟಿಯನ್ನು ಸುತ್ತಲು ಹಾಯಿಸುವಾಗ ಅಲ್ಲಿ ಹಲವಾರು ವಿಷಯಗಳು ಕಂಡು ಬರುವದಿಲ್ಲ. ಕೋಪದ ಸ್ವರವು ಅಲ್ಲಿ ಕೇಳಿಸುವದಿಲ್ಲ. ಅಲ್ಲಿ ಯಾರು ಜಗಳವಾಡುವದಿಲ್ಲ. ಅಥವಾ ‘ಇದು ನನ್ನದು’ ಎಂದು ಹೇಳುವದಿಲ್ಲ. ಅಲ್ಲಿ ಕಳ್ಳರು ಇಲ್ಲದಿರುವದರಿಂದ ಕದಾ ಹಾಕುವದರ ಅವಶ್ಯಕತೆಯಿರುವದಿಲ್ಲ.

ಅಲ್ಲಿ ಸುಳ್ಳು ಹೇಳುವವರು, ಕೊಲೆಗಾರರು, ಮಾಟ-ಮಾಂತ್ರಮಾಡುವವರು, ಅಥವಾ ಬೇರೆ ಕೆಟ್ಟ ಕೆಲಸಗಳನ್ನು ಮಾಡುವವರು ಇರುವದಿಲ್ಲ. ಪರಲೋಕದಲ್ಲಿ ಯಾವ ತರÀದ ಪಾಪವೂ ಇರುವದಿಲ್ಲ.

ಪರಲೋಕದಲ್ಲಿ ದೇವರ ಬಳಿಯಲ್ಲಿ ಯಾರೂ ಕಣ್ಣೀರು ಸುರಿಸುವದಿಲ್ಲ. ಈ ಲೋಕದಲ್ಲಿರುವಾಗ ಕೆಲವು ಸಾರಿ ದೇವ ಭಕ್ತರು ಕಷ್ಟಗಳನ್ನು ಎದುರಿಸುವದುಂಟು. ಆಗ ಅವರು ಕಣ್ಣೀರು ಸುರಿಸುವರು. ಪರಲೋಕದಲ್ಲಿ ದೇವರು ಅವರ ಕಣ್ಣೀರನ್ನು ಒರಸಿ ಬಿಡುವನು.

ಹಾಗೆಯೇ ಪರಲೋಕದಲ್ಲಿ ಮರಣ ಕೂಡ ಇರುವದಿಲ್ಲ. ದೇವ ಜನರು ಅಂದರೆ ದೇವರ ಮಕ್ಕಳು ದೇವರೊಂದಿಗೆ ಸದಾಕಾಲಕ್ಕೂ ಜೀವಿಸುವರು. ಅಲ್ಲಿ ದುಃಖವಿರುವದಿಲ್ಲ, ಗೋಳಾಟವಿರುವದಿಲ್ಲ ಮತ್ತು ನೋವು ಕೂಡ ಇರುವದಿಲ್ಲ. ರೋಗವಿರುವದಿಲ್ಲ, ಒಬ್ಬರನ್ನೊಬ್ಬರು ಬಿಟ್ಟು ಅಗಲಿ ಹೋಗುವದಿಲ್ಲ, ಸಮಾಧಿ ಮಾಡುವದಿಲ್ಲ. ಪರಲೋಕದಲ್ಲಿ ದೇವರ ಮಕ್ಕಳು ಆತನೊಂದಿಗೆ ಸದಾಕಾಲಕ್ಕೂ ಸಂತೋಷದಿಂದ ಇರುವರು.

ಸಂತೋಷಕರವಾದ ವಿಷಯವೇನಂದರೆ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಟ್ಟು ಆತನನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದ ಹುಡುಗ-ಹುಡುಗಿಯರಿಗಾಗಿ (ದೊಡ್ಡವರಿಗಾಗಿ ಕೂಡ) ಪರಲೋಕವು ಸಿದ್ಧಮಾಡಲ್ಪಟ್ಟಿರುತ್ತದೆ. ಪರಲೋಕದಲ್ಲಿ ಯಜ್ಞದ ಕುರಿಯಾದಾತನ ಜೀವಬಾಧ್ಯರ ಪಟ್ಟಿ ಎಂಬ ಪುಸ್ತಕವು ಇರುತ್ತದೆ. ಈ ಪುಸ್ತಕದಲ್ಲಿ ಜನರ ಹೆಸರುಗಳಿರುತ್ತವೆ. ಯಾರಾರು ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಟ್ಟು ಆತನನ್ನು ತಮ್ಮ ರಕ್ಷಕನನ್ನಾಗಿ ಸ್ವೀಕರಿಸಿರುವರೋ ಅವರ ಹೆಸರು ಆ ಪುಸ್ತಕದಲ್ಲಿ ಬರೆಯಲ್ಪಟ್ಟಿರುತ್ತದೆ. ನಿನ್ನ ಹೆಸರು ಆ ಪುಸ್ತಕದಲ್ಲಿ ಬರೆಯಲ್ಪಟ್ಟಿರುವದೇ?

ಬೈಬಲಿನ ಕಡೆಯ ಮಾತುಗಳು ಪರಲೋಕಕ್ಕೆ ಸೇರುವದಕ್ಕೆ ನೀಡುವ ಕರೆ ಅಥವಾ ಆಹ್ವಾನವಾಗಿದೆ. “ಆತ್ಮÀನೂ ಮದಲಗತ್ತಿಯೂ- ಬಾ ಅನ್ನುತ್ತಾರೆ. ಕೇಳುವವನು ಬಾ ಅನ್ನಲಿ ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”

ಮುಕ್ತಾಯ

ಈ ಯೋಜನೆಯ ಬಗ್ಗೆ

ಮಕ್ಕಳಿಗಾಗಿ ಬೈಬಲ್

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಫಾರ್ ಚಿಲ್ಡ್ರನ್, Inc. ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleforchildren.org/languages/kannada/stories.php