ಮಕ್ಕಳಿಗಾಗಿ ಬೈಬಲ್ಮಾದರಿ

ಮಕ್ಕಳಿಗಾಗಿ ಬೈಬಲ್

8 ನ 3 ದಿನ

ನೋಹನು ದೇವರನ್ನು ಆರಾಧಿಸುವವನು ಆಗಿದ್ದನು. ಆ ಸಮಯದಲ್ಲಿದ್ದ ಬೇರೆ ಜನರೆಲ್ಲರೂ ದೇವರನ್ನು ದ್ವೇಷಿಸುವವರೂ ಆತನಿಗೆ ಆವಿಧೇಯರಾಗಿ ನಡೆದವರೂ ಆಗಿದ್ದರು. ಒಂದು ದಿನ ದೇವರು ನೋಹನಿಗೆ ಗಾಬರಿಯಾಗುವಂಥ ವಿಷಯವನ್ನು ತಿಳಿಸಿದನು. “ನನ್ನ ಮುಂದೆ ಭೂಮಿಯ ಮೇಲಿರುವದೆಲ್ಲವೂ ಕೆಟ್ಟು ಹೋಗಿರುವದರಿಂದ ಅದೆನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡುವೆನು, ನಿನ್ನನ್ನೂ ನಿನ್ನ ಕುಟುಂಬವನ್ನೂ ಮಾತ್ರ ಉಳಿಸುವೆನು” ಎಂದು ದೇವರು ಅವನಿಗೆ ಹೇಳಿದನು.

ದೇವರು ನೋಹನಿಗೆ ತಾನು ಭೂಮಿಯ ಮೇಲೆ ಕಳುಹಿಸಲಿರುವ ಜಲಪ್ರಳಯದ ಕುರಿತು ಹೇಳಿದನು. ದೇವರು ಅವನಿಗೆ “ನೀನು ಕಟ್ಟಿಗೆಯಿಂದ ಒಂದು ದೊಡ್ಡ ನಾವೆ (ಹಡಗು) ಯನ್ನು ಮಾಡಬೇಕು. ಅದು ನಿನಗೂ ನಿನ್ನ ಕುಟುಂಬಕ್ಕೂ ಹಾಗು ಅನೇಕ ಪ್ರಾಣಿಗಳಿಗೂ ಸಾಕಾಗುವಷ್ಟು ದೊಡ್ಡದಿರಬೇಕು,” ಎಂದು ಅಪ್ಪಣೆಯನ್ನು ಕೊಟ್ಟನು. ನಾವೆಯನ್ನು ಮಾಡುವದಕ್ಕೆ ಬೇರೆ ಎಲ್ಲಾ ವಿವರಗಳನ್ನು ತಿಳಿಸಿಕೊಟ್ಟನು. ದೇವರ ಮಾತಿಗೆ ವಿಧೇಯನಾಗಿ ನೋಹನು ನಾವೆಯನ್ನು ಸಿದ್ಧಮಾಡತೊಡಗಿದನು.

ನೋಹನು ನಾವೆಯನ್ನು ಮಾಡುವದನ್ನು ನೋಡಿ ಜನರು ಅವನಿಗೆ ಹಾಸ್ಯ ಮಾಡಿರಬಹುದು. ಆದರೆ ನೋಹನು ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಅವನು ಜನರಿಗೆ ದೇವರ ಕುರಿತು ತಿಳಿಸಿದನು. ಆದರೆ ಯಾರೂ ಅವನ ಮಾತಿಗೆ ಕಿವಿಗೊಡಲಿಲ್ಲ.

ನೋಹನು ನಂಬಿಕೆಯ ವೀರನಾಗಿದ್ದನು. ದೇವರ ಮೇಲೆ ಅಪಾರ ನಂಬಿಕೆಯಿಟ್ಟಿದ್ದನು. ಅವನ ದಿನಗಳಲ್ಲಿ ಮಳೆ ಬೀಳುತ್ತಿರಲಿಲ್ಲ. ದೇವರು ನಾಲ್ವತ್ತು ದಿನಗಳವರೆಗೆ ಸತತವಾಗಿ ಮಳೆ ಕಳುಹಿಸುವೆನೆಂದು ಹೇಳಿದ ಮಾತನ್ನು ನೋಹನು ನಂಬಿದನು. ಕಡೆಗೆ ನಾವೆಯು ಸಿದ್ಧವಾಯಿತು. ನೋಹನು, ಅವನ ಮಕ್ಕಳು ಅದರಲ್ಲಿ ಆಹಾರ ಧಾನ್ಯಗಳನ್ನು ತುಂಬಿಸಿದರು.

ಜನರು ನೋಡುತ್ತಿದ್ದ ಹಾಗೆಯೇ ಅನೇಕ ಪ್ರಾಣಿಗಳು, ಪಕ್ಷಿಗಳು ನಾವೆಯ ಬಳಿಗೆ ಬಂದವು. ಕೆಲವು ಜಾತಿಗಳಲ್ಲಿ ಏಳು ಜೋಡಿಗಳು ಮತ್ತು ಉಳಿದವುಗಳೆಲ್ಲ ಒಂದೊಂದು ಜೋಡಿಯಾಗಿ ಬಂದವು. ದೊಡ್ಡ, ಚಿಕ್ಕ ಪಕ್ಷಿಗಳು, ದೊಡ್ಡ ಸಣ್ಣ ಪ್ರಾಣಿಗಳು ನಾವೆಯ ಬಳಿಗೆ ಬಂದವು.

ಬಂದ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಹನು ನಾವೆಯಲ್ಲಿ ಸೇರಿಸುತ್ತಿರುವಾಗ ಜನರು ತಮ್ಮ ಬಾಯಿಗೆ ಬಂದ ಹಾಗೆ ನೋಹನನ್ನು ಬೈದಿರ ಬಹುದು. ಅವರು ದೇವರ ವಿರೋಧವಾಗಿ ಪಾಪಮಾಡುವದನ್ನು ನಿಲ್ಲಿಸಲಿಲ್ಲ. ತಾವು ನಾವೆಯ ಬಳಿಗೆ ಬರಲಿಲ್ಲ.

ಪ್ರಾಣಿ- ಪಕ್ಷಿಗಳೆಲ್ಲವೂ ನಾವೆಯೊಳಗೆ ಸೇರಿದವು. ದೇವರು ನೋಹನಿಗೆ, “ನೀನು ನಿನ್ನ ಕುಟುಂಬದೊಂದಿಗೆ ನಾವೆಯೊಳಗೆ ಸೇರಿಕೋ” ಎಂದು ಹೇಳಿದನು. ನೋಹನು ತನ್ನ ಹೆಂಡತಿ, ಮೂರು ಗಂಡು ಮಕ್ಕಳು ಮತ್ತು ಮೂವರು ಸೊಸೆಯರೊಂದಿಗೆ ನಾವೆಯೊಳಗೆ ಸೇರಿಕೊಂಡನು. ದೇವರು ನಾವೆಯ ಬಾಗಿಲನ್ನು ಮುಚ್ಚಿದನು!

ಏಳು ದಿನಗಳನಂತರ ಭೂಮಿಯ ಮೇಲೆ ಮಳೆಯು ಜೋರಾಗಿ ಸುರಿಯ ತೊಡಗಿತು. ಸತತವಾಗಿ ನಾಲ್ವತ್ತು ಹಗಲು ಮತ್ತು ನಾಲ್ವತ್ತು ರಾತ್ರಿ ಮಳೆ ಸುರಿಯಿತು.

ಭೂಮಿಯ ಮೇಲೆ ಎಲ್ಲಾ ಕಡೆಗಳಲ್ಲಿ ಮಳೆಯ ಸುರಿಯುತ್ತಿದ್ದದರಿಂದ ಎಲ್ಲಾ ಹಳ್ಳಿಗಳು, ಪಟ್ಟಣಗಳು ನೀರಿನಲ್ಲಿ ಮುಚ್ಚಿ ಮುಳುಗಿ ಹೋದವು. ಮಳೆಯು ನಿಂತು ಹೋದ ಮೇಲೆ ನೋಡಿದರೆ ಎಲ್ಲೆಲ್ಲೂ ನೀರೇ ನೀರು! ಅತೀ ಎತ್ತರವಾದ ಪರ್ವತಗಳು ಕೂಡ ನೀರಿನಲ್ಲಿ ಮುಚ್ಚಿ ಹೋಗಿದ್ದವು. ಉಸಿರಾಡುವ ಪ್ರತಿಯೊಂದು ಜೀವಿಯು ಸತ್ತು ಹೋಗಿತ್ತು.

ನೀರು ಹೆಚ್ಚಿದಂತೆ ನಾವೆಯು ನೀರಿನ ಮೇಲೆ ತೇಲಾಡಿತ್ತು. ನಾವೆಯೊಳಗೆ ಕತ್ತಲಿದ್ದರ ಬಹುದು. ನೀರಿನ ಮೇಲೆ ತೇಲಾಡುತ್ತಿದ್ದರಿಂದ ಅದು ಅಲ್ಲಾಡತ್ತಿದ್ದಿರ ಬಹುದು, ಆದರೂ ನೋಹನಿಗೆ ಮತ್ತು ಅವನೊಂದಿಗಿದ್ದವರಿಗೆಲ್ಲಾ ನಾವೆಯು ಪ್ರಳಯದಿಂದ ರಕ್ಷಣೆನೀಡಿತು.

ಐದು ತಿಂಗಳ ವರೆಗೆ ಪ್ರಳಯದ ನೀರು ಭೂಮಿಯ ಮೇಲೆ ತುಂಬಿತು. ನಂತರ ದೇವರು ಗಾಳಿ ಬೀಸುವಂತೆ ಮಾಡಿದ್ದರಿಂದ ನೀರು ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಲ್ಲಿ ನಾವೆಯು ಅರಾರಾಟ್ ಬೆಟ್ಟಗಳಲ್ಲಿ ನಿಂತಿತು. ಮತ್ತೆ ನಾಲ್ವತ್ತು ದಿನಗಳವರೆಗೆ ನೋಹನು ನಾವೆಯಲ್ಲಿಯೇ ಉಳಿದನು.

ನೋಹನು ನಾವೆಯ ಕಿಟಕಿಯನ್ನು ತೆರೆದು ಒಂದು ಕಾಗೆಯನ್ನು ಮತ್ತು ಒಂದು ಪರಿವಾಳವನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲೆ ನೀರು ಇನ್ನೂ ಇದ್ದದರಿಂದ ಪಾರಿವಾಳವು ತಿರುಗಿ ನಾವೆಗೆ ಬಂತು.

ಒಂದು ವಾರದ ನಂತರ ನೋಹನು ತಿರುಗಿ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಸಂಜೆಯ ಸಮಯಕ್ಕೆ ಆ ಪಾರಿವಾಳವು ತನ್ನ ಬಾಯಿಯಲ್ಲಿ ಎಣ್ಣೇ ಮರದ ಹೊಸ ಚಿಗುರು ಹಿಡಿದುಕೊಂಡು ಬಂದಿತು. ಮತ್ತೆ ಒಂದು ವಾರದನಂತರ ನೋಹನು ಪಾರಿವಾಳವನ್ನು ಹೊರಕ್ಕೆ ಬಿಡಲು ಅದು ಹಿಂದಕ್ಕೆ ಬರಲಿಲ್ಲ. ಭೂಮಿಯು ಒಣಗಿದೆ ಎಂದು ನೋಹನು ತಿಳಿದುಕೊಂಡನು.

ದೇವರು ನೋಹನಿಗೆ ನಾವೆಯನ್ನು ಬಿಟ್ಟು ಹೊರಗೆ ಬರಲು ಹೇಳಿದನು. ನೋಹನು ತನ್ನ ಕುಟುಂಬದೊಂದಿಗೆ ಮತ್ತು ನಾವೆಯಲ್ಲಿದ್ದ ಸಮಸ್ತ ಜೀವಿಗಳೊಂದಿಗೆ ಹೊರಗೆ ಬಂದನು.

ನೋಹನು ದೇವರಿಗೆ ಅದೆಷ್ಟು ಕೃತಜ್ಞತೆಯುಳ್ಳವನಾಗಿದ್ದನು! ದೇವರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಭಯಂಕರವಾದ ಜಲಪ್ರಳಯದಿಂದ ಕಾಪಾಡಿ ರಕ್ಷಿಸಿದಕ್ಕಾಗಿ ಅವನು ಒಂದು ಯಜ್ಞವೇದಿಯನ್ನು ಕಟ್ಟಿ ಕೆಲವು ಪ್ರಾಣಿ ಪಕ್ಷಿಗಳನ್ನು ಯಜ್ಞವಾಗಿ ಅರ್ಪಿಸುವದರ ಮೂಲಕ ದೇವರಿಗೆ ಸ್ತೋತ್ರ ಹೇಳಿದನು.

ದೇವರು ನೋಹನಿಗೆ ಅದ್ಭುತವಾದ ವಾಗ್ದಾನವನ್ನು ಮಾಡಿದನು. ಮನುಷ್ಯನ ಪಾಪಕ್ಕಾಗಿ ಆತನು ಇನ್ನೆಂದೂ ಜಲಪ್ರಳಯದ ಮೂಲಕ ಭೂಮಿಯ ಮೇಲಿರುವದನ್ನೆಲ್ಲಾ ನಾಶಮಾಡುವದಿಲ್ಲವೆಂದು ನೋಹನಿಗೆ ಹೇಳಿದನು. ಆ ವಾಗ್ದಾನಕ್ಕೆ ಗುರುತಾಗಿ ದೇವರು ಮುಗಿಲು ಬಿಲ್ಲನ್ನು ಕೊಟ್ಟನು. ಅದು ಮೋಡಗಳಲ್ಲಿ ಕಾಣಿಸುವಾಗ ದೇವರ ವಾಗ್ದಾನವನ್ನು ನಮ್ಮ ನೆನಪಿಗೆ ತರುವದು.

ಪ್ರಳಯದ ನಂತರ ನೋಹನು ಮತ್ತು ಅವನ ಕುಟುಂಬದವರು ಒಂದು ಹೊಸ ಆರಂಭವನ್ನು ಕಂಡರು. ಕಾಲ ಕ್ರಮೇಣವಾಗಿ ಅವನ ಸಂತತಿಯವರು ಮತ್ತೊಂದು ಸಾರಿ ಭೂಮಿಯ ಮೇಲೆ ತುಂಬಿಕೊಂಡರು. ಈಗಿರುವ ಎಲ್ಲಾ ಜನರು ನೋಹನ ಸಂತಾನದಿಂದ ಹುಟ್ಟಿ ಬಂದವರಾಗಿರುವರು.

ಮುಕ್ತಾಯ

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಮಕ್ಕಳಿಗಾಗಿ ಬೈಬಲ್

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಫಾರ್ ಚಿಲ್ಡ್ರನ್, Inc. ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleforchildren.org/languages/kannada/stories.php