ಮಕ್ಕಳಿಗಾಗಿ ಬೈಬಲ್ಮಾದರಿ

ಯೇಸು ಅನೇಕ ಅದ್ಬುತಕಾರ್ಯಗಳನ್ನು ಮಾಡಿದನು. ಈ ಅದ್ಬುತಕಾರ್ಯಗಳಿಂದ ಯೇಸು ಕ್ರಿಸ್ತನು ನೀಜವಾದ ದೇವರ ಮಗನು ಎಂದು ಹೇಳಲು ಚಿನ್ಹೆಯಾಗಿದ್ದವು. ಮೊದಲನೆಯ ಅದ್ಬುತವು ಒಂದು ಮಧುವೆಯ ಕಾರ್ಯದಲ್ಲಿ ನಡೆಯಿತು. ಅಲ್ಲಿ ಒಂದು ಸಮಸ್ಯೆ ಎದುರಾಯಿತು ಅದೇನೆ0ದರೆ ಎಲ್ಲರಿಗೂ ದ್ರಾಕ್ಷಾರಸ ಸಾಲದೇ ಹೋಯಿತು.
ಯೇಸುವಿನ ತಾಯಿಯಾದ ಮರಿಯಳು ಸಮಸ್ಯೆಯನ್ನು ಯೇಸುವಿಗೆ ವಿವರಿಸಲಾಗಿ, ಅಲ್ಲಿದ್ದ ಸೇವಕರಿಗೆ ಆತನು ಏನು ಹೇಳುತ್ತಾನೋ ಹಾಗೆ ಮಾಡಿರಿ ಎಂದಳು.
"ಈ ಮಡಿಕೆಗಳನ್ನು (ಬಾನೆ) ನೀರಿನಿಂದ ತುಂಬಿರಿ, ಎಂದು ಯೇಸು ಹೇಳಿದಾಗ ನೀರಾ?" ಎಂದು ಅಲ್ಲಿದ್ದವರು ಕೇಳಿರಬಹುದು. ಹೌದು, ಯೇಸು ನೀರನ್ನು ತುಂಬಿಸಲು ಹೇಳಿದನು.
ಆಗ ಅಲ್ಲಿದ್ದ ಒಬ್ಬ ಸೇವಕನಿಗೆ ಒಂದು ದೊಡ್ಡ ಮಡಿಯಲ್ಲಿ ತೆಗೆದುಕೊಂಡು ಔತನದ ಪಾರೂತತ್ಯನಿಗೆ ರುಚಿ ನೋಡಲು ಹೇಳಿದನು ನೀರು ದ್ರಾಕ್ಷಾರಸವಾಗಿ ಮಾರ್ಪಟ್ಟಿತ್ತು. ಒಳ್ಳೆಯ ದ್ರಾಕ್ಷಾರಸವಾಗಿತ್ತು.
ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದನು, ಅಲ್ಲಿದ್ದ ಸೇವಕರು ಇದನ್ನು ನೋಡಿ ಆಶ್ಚರ್ಯಪಟ್ಟರು. ಅ0ತಹ ಅದ್ಬುತ ಕಾರ್ಯವನ್ನು ಮಾಡಲು ದೇವರಿ0ದ ಮಾತ್ರ ಸಾದ್ಯ.
ಯೇಸು ಇನ್ನೂ ಬೇರೆ ಅದ್ಬುತ ಕಾರ್ಯಗಳನ್ನು ಮಾಡಿದನು. ಒಂದು ಸಂಜೆ ಯೇಸು ಮತ್ತು ಆತನ ಶಿಷ್ಯರು ಪೇತ್ರನ ಮನೆಗೆ ಹೋದರು, ಪೇತ್ರನ ಅಜ್ಜಿಯೂ ಜ್ವರದಿಂದ ಬಳಲುತ್ತಿದ್ದಳು.
ಯೇಸು ಆಕೆಯ ಕೈಯನ್ನು ಮುಟ್ಟಲು ಅವಳು ಜ್ವರದಿಂದ ತಕ್ಷಣದಲ್ಲಿಯೆ ವಾಸಿಯಾದಳು. ಅವಳು ಎದ್ದು ಬಂದು ಯೇಸು ಮತ್ತು ಆತನ ಶಿಷ್ಯರಿಗೆ ಉಪಚಾರ ಮಾಡಿದಳು.
ಒಂದು ಸಂಜೆ ಪಟ್ಟಣದ ಎಲ್ಲಾ ಜನರು ತಾನು ತಂಗಿದ್ದ ಒಂದು ಮನೆಯ ಬಾಗಿಲಿನ ಮುಂದೆ ನೆರೆದಿದ್ದರು. ಅಲ್ಲಿ ಕುರುಡರು, ಕುಂಟರು, ಕಿವುಡರು ಮೂಕರು, ಅμÉ್ಟ ಅಲ್ಲದೆ ದೆವ್ವ ಹಿಡಿದವರು ಸಹ ಯೇಸುವನ್ನು ನೋಡಲು ಬಂದಿದ್ದರು. ಆತನು ಅವರೆಲ್ಲರಿಗೂ ಸಹಾಯ ಮಾಡಿರಬಹುದಾ?
ದೇವರ ಮಗನಾದ ಯೇಸು ಅವರೆಲ್ಲರಿಗೂ ಸಹಾಯಮಾಡಬಹುದು. ಯೇಸು ಎಲ್ಲರಿಗೂ ಸಹಾಯ ಮಾಡಿದನು, ಬಂದಂತ ಎಲ್ಲರೂ ತಮ್ಮ ತೊಂದರೆನಳಿಂದ ಗುಣವಾದರು, ಯೇಸುವನ್ನು ನೋಡಲು ತೆವಳಿಕೊಂಡು ನಡೆಯಲಾಗದೆ ಬಂದಂತವರು, ಈಗ ನಡೆದು ಓಡಾಡುವಂತಾದರು.
ಇನ್ನೂ ಕೇಲವರು ಅಂದರೆ ಕುಷ್ಟ ರೋಗ ಹಿಡಿದವರು ಸಹ ಬಂದರು.
ಅವರು ಪರಿಪೂರ್ಣವಾಗಿ ಕುಷ್ಟ ರೋಗದಿಂದ ಗುಣವಾದರು.
ದೆವ್ವ ಹಿಡಿದಿದ್ದ ಗಂಡಸರು ಹೆಂಗಸರು ಯೇಸುವಿನ ಮುಂದೆ ನಿಂತರು, ಆತನು ದೆವ್ವಗಳಿಗೆ ಅವರನ್ನು ಬಿಟ್ಟು ಹೋಗಲು ಆಜ್ಞಾಪಿಸಿದನು. ದೆವ್ವಗಳು ಯೇಸುವಿಗೆ ವಿಧೇಯವಾಗಿ ನಡಗುತ್ತಿದ್ದವು, ಸಂತೋಷ ಕಳೆದುಕೊಂಡ ಜನರು ಸಂತೋಷ ಹಾಗೂ ಸಮಾಧಾನ ಹೊಂದಿದರು.
ಜನರ ಗುಂಪಿನ ಹಿಂದೆ ನಾಲ್ಕು ಜನರು ತಮ್ಮ ಸ್ನೇಹಿತನ್ನು ಯೇಸುವಿನ ಬಳಿಗೆ ತರಲು ಪ್ರಯತ್ನಿಸಿದರು. ಆದರೂ ಆಗಲಿಲ್ಲ ಆಗ ಅವರು ಏನು ಮಾಡಿದರೂ ಗೋತ್ತೆ?
ಅನಾರೋಗ್ಯದಿಂದಿದ್ದ ವ್ಯಕ್ತಿಯನ್ನು ಆ ನಾಲ್ಕು ಜನ ಸ್ನೇಹಿತರು ಮನೆಯ ಮೇಲಿನ ಚಾವಣಿಯನ್ನು ತೆಗೆದು ವ್ಯಕ್ತಿಯನ್ನು ಕೆಳಕ್ಕೆ ಬಿಟ್ಟರು ಈಗ ಅವನು ಯೇಸುವಿಗೆ ಹತ್ತಿರವಾದನು.
ಯೇಸು ಆ ನಾಲ್ಕು ಜನರ ನಂಬಿಕೆಯನ್ನು ಮೆಚ್ಚಿದನು. ಆಗ ಯೇಸು ಆ ಅನಾರೋಗ್ಯದ ವ್ಯಕ್ತಿಗೆ "ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಎದ್ದು ನಡೆ" ಎಂದು ಹೇಳಲು, ಆ ವ್ಯಕ್ತಿಯು ಗಟ್ಟಿಯಾಗಿ ಎದ್ದು ನಿಂತನು. ಯೇಸು ಅವನನ್ನು ಗುಣಪಡಿಸಿದನು.
ಅದಾದನಂತರ ಯೇಸು ಶಿಷ್ಯರೊಂದಿಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದನು. ಆಗ ಎತ್ತರವಾದ ದೊಡ್ಡ ಭಯಂಕರವಾದ ಸಮುದ್ರದ ಅಲೆಗಳು ಅಪ್ಪಳಿಸಿದವು. ಯೇಸು ಗಾಡ ನಿದ್ರೇಯಲ್ಲಿದ್ದನು ಭಯದಿಂದ ಕೂಡಿದ ಶಿಷ್ಯರು ಯೇಸುವಿಗೆ "ಕರ್ತನೆ, ನಮ್ಮನ್ನು ರಕ್ಷಿಸು ಇಲ್ಲವಾದರೆ ಸಾಯುತ್ತೇವೆ" ಎಂದು ಕೂಗಿಕೊಂಡರು.
"ಶಾಂತವಾಗು" ಎಂದು ಯೇಸು ಸಮುದ್ರದ ಅಲೆಗಳಿಗೆ ಆಜ್ಞಾಪಿಸಿದನು, "ಈ ಮನುಷ್ಯನು ಯಾರು?" ಗಾಳಿಯೂ ಮತ್ತು ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮ ತಮ್ಮಲ್ಲಿಯೆ ಮಾತಾಡಿಕೊಂಡರು. ಅವರು ಯೇಸು ದೇವರ ಮಗನೆಂದು ತಿಳಿದುಕೊಂಡರು ಏಕೆಂದರೆ ಆತನು ಅನೇಕ ಅದ್ಬುತ ಕಾರ್ಯಗಳ ಮೂಲಕ ತನ್ನ ಮಹಿಮೆಯನ್ನು ತೋರಿಸಿದನು, ಶಿಷ್ಯರಿಗೆ ಇದು ಅರ್ಥವಾಗಲಿಲ್ಲ ಆದರೆ ಯೇಸು ಇನ್ನೂ ಅನೇಕ ದೊಡ್ಡ ಅದ್ಬುತಗಳನ್ನು ಜನರ ಮಧ್ಯದಲ್ಲಿ ತೊರ್ಪಡಿಸಿದನು.
ಮುಕ್ತಾಯ
ಈ ಯೋಜನೆಯ ಬಗ್ಗೆ

ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ಹುಡುಕಿ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಫಾರ್ ಚಿಲ್ಡ್ರನ್, Inc. ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleforchildren.org/languages/kannada/stories.php