ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 4 ದಿನ

ದೇವರು ಅಬ್ರಹಾಮನೊಂದಿಗೆ ಅವನ ಸ್ನೇಹಿತನಂತೆ ಮಾತಾಡಿದನು. ಅಬ್ರಹಾಮನು ತನ್ನ ಸೋದರಳಿಯ ಲೋಟನಿಗೆ ತನಗಾಗಿ ಭೂಮಿಯನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಕೊಟ್ಟಾಗ, ದೇವರು ಸ್ವತಃ ಅವನೊಂದಿಗೆ ಆತನ ಪ್ರಸನ್ನತೆಯ ಭರವಸೆಯನ್ನು ಕೊಟ್ಟನು ಮತ್ತು ಅವನ ಸಂತಾನದವರನ್ನು ಅಧಿಕವಾಗಿ ಮಾಡುವ ಭರವಸೆಯನ್ನು ಬಲಪಡಿಸಿದನು. ಅಬ್ರಹಾಮನು ಕಾನಾನಿನ ಬತ್ತಿದ ಭೂಮಿಯಲ್ಲಿ ನೆಲೆಸಿದಾಗ, ಸೊದೋಮ ಮತ್ತು ಗೊಮೋರಾ ಪಟ್ಟಣಗಳು ಇದ್ದ ಯೋರ್ದಾನಿನ ಫಲವತ್ತಾದ ಭೂಮಿಯನ್ನು ಲೋಟನು ಆರಿಸಿಕೊಂಡನು. ದೇವರು ಅಬ್ರಹಾಮನಿಗೆ ಅವನ ಕುಟುಂಬದ ಕಡೆಗೆ ಅವನ ಉದಾರತೆ ಮತ್ತು ನಿಸ್ವಾರ್ಥತೆಗಾಗಿ ಪ್ರತಿಫಲವನ್ನು ಕೊಟ್ಟನು ಮತ್ತು ಅವನನ್ನು ಅಳತೆ ಮೀರಿ ಆಶೀರ್ವದಿಸಿದನು. ಕೆಲವು ವರ್ಷಗಳ ನಂತರ ಮೂರು ದೇವದೂತರು ಸಂಧಿಸಿದಾಗ ಅವನಿಗೆ ವಾಗ್ದಾನ ಮಾಡಿದ ಮಗ ಎಂದಿಗಿಂತಲೂ ಹತ್ತಿರವಾಗಿದ್ದಾನೆ ಎಂದು ಹೇಳಿದರು ಮತ್ತು ದೀರ್ಘ ಕಾಲದ ಕಾದಿರುವಿಕೆ ಬಹುತೇಕ ಮುಗಿದಿದೆ ಎಂದು ಪ್ರೋತ್ಸಾಹಿಸಿದರು. ದುಷ್ಟ ಪಟ್ಟಣವಾದ ಸೊದೋಮ್‌ಗಾಗಿ ತನ್ನ ಯೋಜನೆಗಳನ್ನು ಅಬ್ರಹಾಮನಿಗೆ ಹೇಳಬೇಕೆ ಎಂದು ದೇವರು ತನ್ನೊಂದಿಗೆ ಚರ್ಚಿಸುತ್ತಾನೆ. ಆತನು ಅವನಿಗೆ ಆ ಸಂಗತಿಯನ್ನು ಹೇಳಲು ಆರಿಸಿಕೊಂಡನು, ಹೀಗೆ ಆ ದೇಶವನ್ನು ಮತ್ತು ಅದರ ಜನರನ್ನು ರಕ್ಷಿಸುವ ಸಲುವಾಗಿ ಅಬ್ರಹಾಮನು ಸಂಭಾಷಣೆಯನ್ನು ಪ್ರಾರಂಭಿಸಿದನು. ದೇವರು ಅಬ್ರಹಾಮನ ನಿಯಮಗಳಿಗೆ ಸಮ್ಮತಿಸುತ್ತಾನೆ ಆದರೆ ದುರದೃಷ್ಟವಶಾತ್ ಸೊದೋಮ್ ಮತ್ತು ಗೊಮೋರಗಳು ಉಳಿಯದೆ ಸಂಪೂರ್ಣವಾಗಿ ನಾಶವಾಗುತ್ತವೆ.

ಅಬ್ರಹಾಮನ ಜೀವನದ ಪ್ರಧಾನ ವಿಷಯವು ದೇವರೊಂದಿಗೆ ನಡೆಯುತ್ತಿರುವ ಅನ್ಯೋನ್ಯತೆ ಮತ್ತು ಸ್ನೇಹವಾಗಿತ್ತು. ಇದು ದೀರ್ಘಾವಧಿಯ ಕಾದಿರುವಿಕೆ ಮತ್ತು ನಂಬಿಕೆಯ ವಾತಾವರಣದಲ್ಲಿ ಬೆಳೆಸಲಾಯಿತು. ತನ್ನ ಮೂಲ ಕುಟುಂಬವನ್ನು ತೊರೆದು ತನಗೆ ಗೊತ್ತಿಲ್ಲದ ದೇವರನ್ನು ಅನುಸರಿಸಿ ನಂಬಿಕೆಯಿಂದ ಹೊರಬರುವುದು ಸುಲಭವಲ್ಲ. ಆದರೂ, ತನ್ನನ್ನು ಕರೆದ ದೇವರು ತಾನು ವಾಗ್ದಾನ ಮಾಡಿದ್ದೆಲ್ಲವನ್ನು ನೆರವೇರಿಸಬಲ್ಲನೆಂಬ ಭರವಸೆಯಿಂದ ಅವನು ಹಾಗೆ ಮಾಡಿದನು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು?
ನೀವು ದೀರ್ಘಾಕಾಲ ಕಾದಿರುವಿಕೆಯಲ್ಲಿ ನಿಮ್ಮನ್ನು ಕಂಡುಕೊಂಡಿದ್ದೀರಾ?
ಈ ಕಾದಿರುವುದರಿಂದ ನೀವು ಕಲಿತ ಕೆಲವು ಪಾಠಗಳು ಯಾವುವು?
ನಿಮ್ಮ ನಂಬಿಕೆ ಬೆಳೆದಿದೆಯೇ ಅಥವಾ ಕಾದಿರುವಲ್ಲಿ ಕುಂಠಿತವಾಗಿದೆಯೇ?

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/