ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 3 ದಿನ

ನೋಹನು ದೇವರೊಂದಿಗೆ ವಾಡಿಕೆಯಾಗಿ ಅನ್ಯೋನ್ಯತೆಯಲ್ಲಿ ನಡೆದ ವ್ಯಕ್ತಿ (ಎ.ಎಂ.ಪಿ ಆವೃತ್ತಿ). ದುಷ್ಟತನವು ಮೇಲುಗೈ ಸಾಧಿಸಿದ ಮತ್ತು ದುಷ್ಟತನವು ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ (ಇಂದಿನಂತೆಯೇ) ಅವನು ನೀತಿವಂತನು ಮತ್ತು ನಿರ್ದೋಷಿಯಾಗಿದ್ದನು. ಅಪೋಕ್ಯಾಲಿಪ್ಸ್ ಅನುಪಾತದ ಪ್ರವಾಹದ ನಂತರ ಭೂಮಿಯನ್ನು ಪ್ರತ್ಯೇಕಿಸಲು, ರಕ್ಷಿಸಲು ಮತ್ತು ಮರುಜನಸಂಖ್ಯೆಯನ್ನು ಉಂಟುಮಾಡಲು ದೇವರು ಅವನನ್ನು ಎಷ್ಟೋ ಜನರಲ್ಲಿ ಒಬ್ಬನನ್ನಾಗಿ ಆರಿಸಿಕೊಂಡನು. ಇದು ಸಾಮಾನ್ಯ ಕರೆಯಲ್ಲ- ಇದು ಸಂಪೂರ್ಣವಾಗಿ ಅಸಂಬದ್ಧವಾಗಿತ್ತು. ದೇವರ ಕಲ್ಪನೆಯಿಲ್ಲದ ಜನರ ಪೂರ್ಣ ದೃಷ್ಟಿಯಲ್ಲಿ ಪಟ್ಟಣದ ಮಧ್ಯದಲ್ಲಿ ಒಂದು ದೊಡ್ಡ ನಾವೆಯನ್ನು ನಿರ್ಮಿಸುವುದನ್ನು ಕಲ್ಪಿಸಿಕೊಳ್ಳಿ. ಅವನು ಖಂಡಿತವಾಗಿಯೂ ಸುತ್ತಮುತ್ತಲಿನವರಿಂದ ಅವಹೇಳನ ಮತ್ತು ಅಪಹಾಸ್ಯಕ್ಕೆ ಒಳಗಾಗಿದ್ದನು, ಆದರೂ ಅವನು ತನ್ನೊಂದಿಗೆ ಮಾತನಾಡಿದ ದೇವರಿಗೆ ನಂಬಿಗಸ್ತನಾಗಿದ್ದನು. ಅವನು ಕೊನೆಯ ಅಕ್ಷರದ ಪ್ರತಿಯೊಂದು ಸೂಚನೆಗೂ ವಿಧೇಯನಾದನು ಮತ್ತು ಅವನು ತನ್ನ ಹೆಂಡತಿ ಮತ್ತು ಕುಮಾರರ ಕುಟುಂಬಗಳೊಂದಿಗೆ ಪ್ರತಿ ಜೀವಿಗಳ ಎರಡು ಜೋಡಿಗಳೊಂದಿಗೆ ರಕ್ಷಿಸಲ್ಪಟ್ಟನು. ಎಂತಹ ಸಾಹಸ! ಒಬ್ಬ ವ್ಯಕ್ತಿ ಮತ್ತು ಅವನ ಕುಟುಂಬವು ಎಂತಹ ಧೈರ್ಯದ ಕೆಲಸವನ್ನು ತೆಗೆದುಕೊಳ್ಳುತ್ತದೆ! ಆದರೂ ಅವರು ಅದನ್ನು ಮಾಡಿದರು ಮತ್ತು ಅದಕ್ಕೆ ಬದಲಾಗಿ ದೇವರು ತಿರಿಗಿ ಭೂಮಿಯನ್ನು ಪ್ರವಾಹದಿಂದ ನಾಶಮಾಡುವುದಿಲ್ಲ ಎಂದು ನೋಹನಿಗೆ ವಾಗ್ದಾನ ಮಾಡಿದನು.

ನೋಹನಂತೆ ನಮ್ಮಲ್ಲಿ ಪ್ರತಿಯೊಬ್ಬರೂ ಈ ಭೂಮಿಯ ಮೇಲೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ದೇವರಿಂದ ಉಂಟುಮಾಡಲ್ಪಟ್ಟಿದ್ದೇವೆ ಮತ್ತು ಕರೆಯಲ್ಪಟ್ಟಿದ್ದೇವೆ. ನಾವು ಆತನ ಆವರ್ತನಕ್ಕೆ ಹೊಂದಿಕೆಯಾಗಿದ್ದೇವೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಇದರಿಂದಾಗಿ ನಾವು ಕರೆಯನ್ನು ಕೇಳಬಹುದು ಮತ್ತು ನೋಹನು ಮಾಡಿದಂತೆ ಸಂಪೂರ್ಣ ವಿಧೇಯತೆಯಿಂದ ಪ್ರತಿಕ್ರಿಯಿಸಬಹುದು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ಇತ್ತೀಚಿನ ದಿನಗಳಲ್ಲಿ ದೇವರು ನಿಮ್ಮೊಂದಿಗೆ ಏನು ಮಾತನಾಡಿದ್ದಾನೆ?
ನೀವು ಆತನ ಬೋಧನೆಗೆ ವಿಧೇಯರಾಗಿದ್ದೀರಾ?
ನೀವು ದೇವರೊಂದಿಗೆ ರೂಢಿಯಾಗಿ ಸಹವಾಸದಲ್ಲಿ ನಡೆಯಲು ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡುತ್ತೀರಾ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/