ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 6 ದಿನ

ಮೋಶೆ ಮತ್ತು ದೇವರ ನಡುವಿನ ಸಂಬಂಧವು ಸಿನಾಯಿ ಬೆಟ್ಟದಲ್ಲಿ ಪ್ರಾರಂಭವಾಯಿತು, ಅಲ್ಲಿ ಮೋಶೆ ತನ್ನ ಕುರಿಗಳನ್ನು ಕಾಯುತ್ತಿದ್ದನು. ಉರಿಯುವ ಬೆಂಕಿಯ ಪೊದೆಯಲ್ಲಿ ಪ್ರಾರಂಭವಾದದ್ದು ಮುಂದಿನ ನಲವತ್ತು ವರ್ಷಗಳವರೆಗೆ ಮುಂದುವರೆದು ನಿಕಟವಾಗಿ ಬೆಳೆಯಿತು. ದೇವರು ಮೋಶೆಯೊಂದಿಗೆ ಸ್ನೇಹಿತನಂತೆ ಮಾತಾಡಿದನು ಎಂದು ಸತ್ಯವೇದವು ಹೇಳುತ್ತದೆ. ಅವರು ಮಾಡಿದ ಮೊದಲ ಸಂಭಾಷಣೆಯು ಮೋಶೆಯು ಭಯಭೀತನಾಗಿದ್ದನೆಂದು ಗುರುತಿಸಲ್ಪಟ್ಟಿದೆ, ಆದರೆ ಆತನು ಯಾರು ಮತ್ತು ಆತನು ಏನು ಮಾಡುತ್ತಾನೆ ಎಂಬುದನ್ನು ದೇವರು ಸ್ಥಾಪಿಸಿದನು. ಮೋಶೆಯ ಪ್ರಶ್ನೆಗಳಿಗೆ ದೇವರು ನೇರವಾಗಿ ಉತ್ತರಿಸುವುದಿಲ್ಲ ಆದರೆ ಆತನ ಆಲೋಚನೆಗಳನ್ನು ಅವನ ಮೇಲೆ ಮತ್ತು ಆತನ ಮಾರ್ಗಗಳನ್ನು ಅವನ ಮೇಲೆ ಹೊಂದಿಸುವ ರೀತಿಯಲ್ಲಿ ಸ್ಪಷ್ಟವಾಗಿ ಪ್ರತಿಕ್ರಿಯಿಸುತ್ತಾನೆ ಎಂಬುದು ಕುತೂಹಲಕಾರಿಯಾಗಿದೆ.

ಮುಂಬರುವ ವರ್ಷಗಳಲ್ಲಿ ಮೋಶೆಯನ್ನು ದೇವರಿಂದ ನಿಕಟ ಸಂಪರ್ಕಕ್ಕೆ ಕರೆಯಲಾಯಿತು, ಆದರೆ ಮೋಶೆಯು ದೇವರ ಪರಿಶುದ್ಧತೆ ಮತ್ತು ಮಹಿಮೆಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಮೋಶೆಯು ದೇವರೊಂದಿಗೆ ಹೆಚ್ಚು ಸಮಯವನ್ನು ಕಳೆದನು, ಅವನ ರೂಪವೇ ಬದಲಾಯಿತು ಮತ್ತು ಅವನ ಮುಖದ ಕಾಂತಿಯನ್ನು ಮರೆಮಾಡಲು ಅವನು ಮುಸುಕನ್ನು ಧರಿಸಬೇಕಾಯಿತು. ಅವನು ವಾಗ್ದಾನ ಮಾಡಿದ ಭೂಮಿಯನ್ನು ಪ್ರವೇಶಿಸಲು ಸಾಧ್ಯವಾಗದಿದ್ದರೂ, ಅವನು ದೇವರ ಮಾತಿಗೆ ವಿರುದ್ಧ ತಿರುಗಿ ಬಿದ್ದ ಅವನ ಒಂದು ಕ್ರಿಯೆಯ ನಿಮಿತ್ತ, ಅವನು ಸತ್ತನು ಮತ್ತು ದೇವರಿಂದಲೇ ಸಮಾಧಿ ಮಾಡಲಾಯಿತು! ಎಂತಹ ಗೌರವ! ಅವರ ನಿಕಟತೆಗೆ ಎಂತಹ ಸಾಕ್ಷಿ!

ನನ್ನನ್ನೇ ನಾನು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ದೇವರಿಗೆ ಯಾವ ಪ್ರಶ್ನೆಗಳನ್ನು ಕೇಳಬೇಕು?
ನಾನು ದೇವರೊಂದಿಗೆ ಸಮಯವನ್ನು ಕಳೆಯಲು ಪ್ರಯತ್ನಿಸುತ್ತಿದ್ದೇನೆಯೇ?
ದೇವರೊಂದಿಗಿನ ನನ್ನ ಸಮಯಗಳು ನನ್ನನ್ನು ಬಿಟ್ಟುಹೋಗಿವೆಯೇ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/