ಯೇಸುವಿನೊಂದಿಗೆ ಮುಖಾಮುಖಿಮಾದರಿ

ವಿಮೋಚನೆಯ ನಂತರ ಯೆಹೋಶುವನು ಮೋಶೆಯ ಇಸ್ರಾಯೇಲಿನ ನಾಯಕತ್ವದಾದ್ಯಂತ ನಿಕಟವಾಗಿ ಹಿಂಬಾಲಿಸಿದನು. ಅವನು ಗುಡಾರದ ಹೊರಗೆ ಮತ್ತು ದೇವರ ಬೆಟ್ಟದ ಕೆಳಗೆ ಯಾವಾಗಲೂ ಅವನಿಗಾಗಿ ಕಾಯುತ್ತಿದ್ದನು. ಕಾಯುವ ಮತ್ತು ನೋಡುವ ಈ ಅವಧಿಗಳು ಅವರೆಲ್ಲರನ್ನು ಮುನ್ನಡೆಸಿದ ದೇವರ ಕಡೆಗೆ ಅವನಲ್ಲಿ ಆಳವಾದ ಗೌರವವು ಬೆಳೆಯಿತು. ಮೋಶೆಯ ಮರಣದ ನಂತರ ದೇವರು ಯೆಹೋಶುವನೊಂದಿಗೆ ಮಾತ್ರ ಮಾತನಾಡಿ ಬಲಶಾಲಿ ಮತ್ತು ಧೈರ್ಯಶಾಲಿಯಾಗಿರಲು ಪ್ರೋತ್ಸಾಹಿಸಿದನು ಏಕೆಂದರೆ ಆತನು ಮೋಶೆಯೊಂದಿಗೆ ಇದ್ದಂತೆ ಅವನೊಂದಿಗೂ ಇದ್ದನು. ಅವರನ್ನು ವಾಗ್ದಾನದ ದೇಶಕ್ಕೆ ಕರೆದೊಯ್ಯುವ ಮತ್ತು ಪುನರ್ವಸತಿ ಮಾಡುವ ದೊಡ್ಡ ಕಾರ್ಯವನ್ನು ಹೊಂದಿರುವ ಹಲವಾರು ಜನರ ಹೊಸ ನಾಯಕನಿಗೆ ಎಂತಹ ಭರವಸೆಯಾಗಿದೆ! ಯೆಹೋಶುವನು ದೇವರಿಗೆ ವಿಧೇಯನಾಗಲು ಎಂದಿಗೂ ಹಿಂಜರಿಯಲಿಲ್ಲ ಮತ್ತು ಈ ವಿಧೇಯತೆಯು ಅವನನ್ನು ಜನಸಮೂಹದಿಂದ (ಜೆಫುನ್ನೆಯ ಮಗನಾದ ಕಾಲೇಬನ ಜೊತೆಗೆ) ಪ್ರತ್ಯೇಕಿಸಿತು.
ದೇವರು ಯೆಹೋಶುವನಿಗೆ ಪದೇ ಪದೇ ಕೊಡುವ ಒಂದು ಹೆಚ್ಚುವರಿ ಸೂಚನೆಯೆಂದರೆ, ಧರ್ಮಶಾಸ್ತ್ರದ ಪುಸ್ತಕವು ಅವನನ್ನು ಬಿಟ್ಟುಹೋಗಬಾರದು. ಆ ಆಜ್ಞೆಯು ಭಾರವಾಗಿರುತ್ತದೆ ಏಕೆಂದರೆ ದೇವರು ಮೋಶೆಗೆ ಅನೇಕ ಆಜ್ಞೆಗಳನ್ನು ಕೊಟ್ಟನು (ದಶಾಜ್ಞೆಗಳನ್ನು ಹೊರತುಪಡಿಸಿ). ಈ ಆಜ್ಞೆಗಳು, ದೇವರೊಂದಿಗಿನ ಸಂಬಂಧದ ಮೂಲಕ ಒಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಲು ಸುಲಭವಾಗುತ್ತದೆ. ನಾವು ಯಾರನ್ನಾದರೂ ಪ್ರೀತಿಸಿದಾಗ ನಾವು ಅವರಿಗೆ ಇಷ್ಟವಾದದ್ದನ್ನು ಮಾಡುತ್ತೇವೆ ಮತ್ತು ಅದು ಕೆಲಸವಾಗಿರುವದಿಲ್ಲ. ದೇವರೊಂದಿಗೆ ನಮ್ಮ ನಡಿಗೆಯಲ್ಲಿ ಇದು ಭಿನ್ನವಾಗಿಲ್ಲ. ನಮ್ಮಲ್ಲಿರುವ ಎಲ್ಲದರಿಂದ ನಾವು ಆತನನ್ನು ಪ್ರೀತಿಸಿದಾಗ, ಆತನ ಮಾತಿಗೆ ವಿಧೇಯರಾಗುವುದು ಮತ್ತು ಆತನ ಆಜ್ಞೆಗಳನ್ನು ಅನುಸರಿಸುವುದು ಹೊರೆಯಾಗುವುದಿಲ್ಲ.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ದೇವರನ್ನು ಆಳವಾಗಿ ಪ್ರೀತಿಸುತ್ತೇನೆಯೇ?
ನಾನು ಆತನ ಬರೆಯಲ್ಪಟ್ಟ ವಾಕ್ಯದ ಪ್ರಕಾರ ಬದುಕುತ್ತೇನೆಯೇ?
ನನ್ನ ಜೀವನದಲ್ಲಿ ಭಯವು ಪ್ರಬಲವಾಗಿರುವ ಭಾಗವಿದೆಯೇ? ದೇವರು ನನ್ನೊಂದಿಗಿರುವದರಿಂದ "ಬಲಶಾಲಿ ಮತ್ತು ಧೈರ್ಯಶಾಲಿ" ಎಂದು ನಾನು ನೆನಪಿಸಿಕೊಳ್ಳಬೇಕೇ?
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/
ವೈಶಿಷ್ಟ್ಯದ ಯೋಜನೆಗಳು

The Faith Series

A Believer in the Music Industry... Is That Possible?
To the Word

Journey Through Genesis 12-50

Faith Through Fire

Seven Seeds for Flourishing

Created as an Introvert

The Path: What if the Way of Jesus Is Different Than You Thought?

Conversations
