ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 17 ದಿನ

ರೋಮಾ ಶತಾಧಿಪತಿಯು ಮಾನವ ಮಾನದಂಡಗಳಿಂದ ಅಪಾರ ಅಧಿಕಾರವನ್ನು ಹೊಂದಿದ್ದನು. ಅವನ ಬಳಿ ಸೇವಕರು ಮತ್ತು ಸೈನಿಕರ ಗುಂಪು ಇತ್ತು. ಈ ಶತಾಧಿಪತಿಯು ನಿಸ್ಸಂಶಯವಾಗಿ ಆರಿಸಿಕೊಂಡವರಲ್ಲಿ ಒಬ್ಬನಾಗಿದ್ದನು, ಏಕೆಂದರೆ ಅವನು ತನ್ನ ಸೇವಕರಲ್ಲಿ ಒಬ್ಬನ ಅಗತ್ಯಗಳಿಗಾಗಿ ಕನಿಕರವನ್ನು ತೋರಿಸಿದನು. ಅವನು ಯೇಸುವನ್ನು ಸಂಪರ್ಕಿಸಿದ್ದು ಒಬ್ಬ ಕುಟುಂಬದ ಸದಸ್ಯರಿಗಾಗಿ ಅಲ್ಲ ಆದರೆ ಒಬ್ಬ ಆಳಿಗಾಗಿ. ಇದಲ್ಲದೆ, ಪ್ರಾಕೃತಿಕ ಮತ್ತು ಅಲೌಕಿಕ ಕ್ಷೇತ್ರದ ಮೇಲೆ ಯೇಸು ಹೊಂದಿರುವ ಶಕ್ತಿ ಮತ್ತು ಅಧಿಕಾರವನ್ನು ಅವನು ಅರ್ಥಮಾಡಿಕೊಂಡಂತೆ ತೋರುತ್ತಿತ್ತು, ಆತನು ಆಡುವ ಮಾತು ತನ್ನ ಸೇವಕನನ್ನು ಗುಣಪಡಿಸುತ್ತದೆ ಎಂದು ನಂಬುವ ಮೂಲಕ "ಒಂದು ಮಾತನ್ನು ಆಡಲು" ಅವನು ಬೇಡಿಕೊಳ್ಳುತ್ತಾನೆ. ಅವನ ನಂಬಿಕೆಯನ್ನು ಯೇಸು ಸ್ವತಃ ಮೆಚ್ಚಿಕೊಂಡಿದ್ದಾನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವನು ಯೆಹೂದ್ಯನಲ್ಲ. ಯೇಸುವನ್ನು ನಂಬಿದ ಮತ್ತು ಆತನ ಮಾತನ್ನು ಸ್ವೀಕರಿಸಿದ ಮೊದಲ ಅನ್ಯಜನರಲ್ಲಿ ಅವನು ಒಬ್ಬನಾಗಿರಬಹುದು.

ಯೇಸುವಿನ ಹೆಸರು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ನಾವು ಆಗಾಗ್ಗೆ ಮರೆತುಬಿಡುತ್ತೇವೆ. ಕಾಣುವ ಮತ್ತು ಕಾಣದ ಕ್ಷೇತ್ರಗಳ ಮೇಲೆ ಆತನು ಹೊಂದಿರುವ ಅಧಿಕಾರವನ್ನು ನಾವು ಮರೆತುಬಿಡುತ್ತೇವೆ. ಆತನು ಎಷ್ಟು ಶಕ್ತಿಶಾಲಿ ಮತ್ತು ಪರಾಕ್ರಮಿ ಎಂಬ ತಿಳುವಳಿಕೆಯಿಲ್ಲದೆ ಭಯಭೀತರಾಗಿ ಜೀವಿಸುತ್ತೇವೆ. ನಾವು ರಾಜಾಧಿರಾಜನು ಮತ್ತು ಕರ್ತಾಧಿಕರ್ತನಿಗೆ ಮಹಿಮೆ ಕೊಡುವುದಕ್ಕಿಂತ ಹೆಚ್ಚಾಗಿ ನಾವು ಸೈತಾನನಿಗೆ ಮಹಿಮೆಯನ್ನು ಕೊಡುತ್ತೇವೆ. ಇದನ್ನು ಬದಲಾಯಿಸಲು ಇದೇ ಸಮಯವಾಗಿರಬಹುದು!

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನಗಾಗಿ ದೇವರ ಯೋಜನೆಗಳ ಮೇಲೆ ಕೇಂದ್ರೀಕರಿಸುವ ಬದಲು ನನ್ನ ಜೀವನದಲ್ಲಿ ಶತ್ರುಗಳ ಭಾಗಿತ್ವದ ಮೇಲೆ ನಾನು ನಿರ್ಧರಿಸುತ್ತಿದ್ದೇನೆಯೇ?
ಕಾಣುವ ಮತ್ತು ಕಾಣದ ಲೋಕದ ಎಲ್ಲದರ ಮೇಲೆ ಯೇಸುವಿಗಿರುವ ಅಧಿಕಾರದ ಬಗ್ಗೆ ತಿಳಿಯುವ ಮೂಲಕ ನಾನು ಹೇಗೆ ಹೆಚ್ಚು ದೃಢವಿಶ್ವಾಸದಿಂದ ಬದುಕಬಲ್ಲೆ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/