ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 18 ದಿನ

ಯೇಸು ಒಬ್ಬ ಶಾಸ್ತ್ರಿಯನ್ನು ಭೇಟಿಯಾದನು, ಅವನು ಧರ್ಮಶಾಸ್ತ್ರವನ್ನು ಕಲಿಸುವ "ಧಾರ್ಮಿಕ" ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು ಮತ್ತು ಅದೇ ರೀತಿ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದನು. ಈ ಶಾಸ್ತ್ರೀಯು ಯೇಸುವನ್ನು ಹಿಂಬಾಲಿಸುವ ಕಲ್ಪನೆಯಲ್ಲಿ ರೋಮಾಂಚನಗೊಂಡಂತೆ ತೋರುತ್ತಿದ್ದನು ಆದರೆ ಹಿಂಬಾಲಿಸುವ ಕ್ರಯವನ್ನು ತಿಳಿದಿರಲಿಲ್ಲ. ಜೀವನವು ಯಾವ ರೀತಿ ಇರುತ್ತದೆ ಎಂದು ನೋಡಲು ಯೇಸು ಅವನಿಗೆ ಸಹಾಯ ಮಾಡುತ್ತಾನೆ – ಅವನು ಯಾವಾಗಲೂ ತಲೆಯಿಡಲು ಸ್ಥಳವನ್ನು ಹೊಂದಿರುವುದಿಲ್ಲ. ಶಿಷ್ಯತ್ವವು ಬೆಲೆಯುಳ್ಳದ್ದಾಗಿದೆ ಮತ್ತು ನಾವು ಇರುವುದನ್ನು ಮತ್ತು ಹೊಂದಿರುವ ಎಲ್ಲವನ್ನೂ ದೇವರ ಮುಂದೆ ಇಡಲು ಸಿದ್ಧರಾಗಿರುವ ಅಗತ್ಯವನ್ನು ಕೋರುತ್ತದೆ. ಯೇಸು ಎಂದಿಗೂ ಯಾರಿಂದಲೂ ಶರಣಾಗಬೇಕೆಂದು ಕೇಳಲಿಲ್ಲ, ಆದರೆ ಆತನು ತನ್ನ ಶಿಷ್ಯರು ಹಿಂಬಾಲಿಸುವಾಗ ಅವರು ಏನನ್ನು ಎದುರುಗೊಳ್ಳುವರು ಎಂಬುದನ್ನು ಕುರಿತು ಆತನು ಅವರ ಮುಂದೆ ಇಟ್ಟನು. ಶರಣಾಗತಿಯು ಹಂತ ಹಂತವಾಗಿ ನಮ್ಮ ನಿಯಂತ್ರಣದ ಅಗತ್ಯವನ್ನು ಬಿಟ್ಟುಬಿಡುವುದು ಮತ್ತು ನಾವು ಎಂದಿಗಿಂತಲೂ ಉತ್ತಮವಾಗಿ ನಮ್ಮನ್ನು ನೋಡಿಕೊಳ್ಳುವ ದೇವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುವುದಾಗಿದೆ.

ತ್ಯಾಗ ಮತ್ತು ನಿಸ್ವಾರ್ಥತೆಯ ಜೀವನಕ್ಕಾಗಿ ಸೌಕರ್ಯ, ಐಷಾರಾಮಿ ಮತ್ತು ಸಾಕಷ್ಟು ನಮ್ಮ ಅಗತ್ಯವನ್ನು ತ್ಯಜಿಸಲು ನಮ್ಮ ಸಿದ್ಧತೆಯು ಕಾಣುವ ಲೋಕದಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಸುಖವನ್ನು ತ್ಯಜಿಸಲು ನಾನು ಎಷ್ಟು ಸಿದ್ಧನಾಗಿದ್ದೇನೆ?
ನನ್ನ ಜೀವನದ ಯಾವ ಕ್ಷೇತ್ರಗಳಲ್ಲಿ ನಾನು ಇನ್ನೂ ದೇವರಿಗೆ ಶರಣಾಗಬೇಕಾಗಿದೆ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/