ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 22 ದಿನ

ಒಬ್ಬ ಮನುಷ್ಯನು ಯೇಸುವಿನ ಗಮನವನ್ನು ಹೊರಗೆ ಕಾಯುತ್ತಿದ್ದ ತನ್ನ ತಾಯಿ ಮತ್ತು ಸಹೋದರರ ಕಡೆಗೆ ಸೆಳೆಯುತ್ತಾನೆ. ಯೇಸು ತನ್ನ ಸುತ್ತಲಿರುವವರಿಗೆ ದೇವರ ರಾಜ್ಯದ ಬಗ್ಗೆ ಸ್ವಲ್ಪ ಹೆಚ್ಚು ಕಲಿಸಲು ಆ ಸರಳ ಕ್ಷಣವನ್ನು ಬಳಸುತ್ತಾನೆ. ಪರಲೋಕದಲ್ಲಿ ತಂದೆಯ ಚಿತ್ತವನ್ನು ನೆರವೇರಿಸುವವರೇ (ಆತನ ಶಿಷ್ಯರು) ಆತನ ತಾಯಿ ಮತ್ತು ಸಹೋದರರು ಎಂದು ಆತನು ಆ ಮನುಷ್ಯನಿಗೆ ಹೇಳಿದನು. ಯೇಸು ಹೇಳುತ್ತಿದ್ದ ವಿಷಯವೇನೆಂದರೆ, ಒಮ್ಮೆ ನಾವು ಆತನಲ್ಲಿ ನಂಬಿಕೆಯನ್ನಿಟ್ಟು ಆತನನ್ನು ಹಿಂಬಾಲಿಸಿದರೆ, ನಾವು ದೇವರ ಕುಟುಂಬಕ್ಕೆ ದತ್ತು ತೆಗೆದುಕೊಳ್ಳಲ್ಪಡುತ್ತೇವೆ. (ಪೌಲನು ಹೇಳಿದಂತೆ) ನಾವು ಈಗ ಕ್ರಿಸ್ತನೊಂದಿಗೆ ಸಹ ಉತ್ತರಾಧಿಕಾರಿಗಳಾಗಿದ್ದೇವೆ. ನಾವು ಈಗ ದೇವರ ಪುತ್ರರು ಮತ್ತು ಪುತ್ರಿಯರಾಗಿದ್ದೇವೆ, ಅವರು ಆತನ ಮುಂದೆ ಧೈರ್ಯದಿಂದ ಬರಬಹುದು. ಆತನು ಪ್ರತಿಯೊಬ್ಬ ವಿಶ್ವಾಸಿಯನ್ನು ಪುತ್ರತ್ವದ ಸ್ಥಾನಕ್ಕೆ ಏರಿಸಿದನು, ಅದರೊಂದಿಗೆ ಹೆಚ್ಚಿನ ಪ್ರಯೋಜನಗಳನ್ನು ಮತ್ತು ದೊಡ್ಡ ಜವಾಬ್ದಾರಿಯನ್ನು ಸಹ ತರುತ್ತದೆ! ಪ್ರಯೋಜನಗಳು ಉಚಿತ ಪ್ರವೇಶ ಮತ್ತು ಕ್ರಿಸ್ತ ಯೇಸುವಿನಲ್ಲಿ ನಮಗಿರುವ ಅನೇಕ ಆಶೀರ್ವಾದಗಳಲ್ಲಿ ಕೆಲವನ್ನು ಹೆಸರಿಸುವದಾದರೆ ನಿತ್ಯವಾದ ಸ್ವಾಸ್ತ್ಯವನ್ನು ಒಳಗೊಂಡಿದೆ. ನಮ್ಮಲ್ಲಿರುವ ಕೆಲವು ಜವಾಬ್ದಾರಿಗಳು ದುಃಖವು ನಮ್ಮಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ ಮತ್ತು ಪ್ರತಿದಿನ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಮತ್ತು ನೂತನಗೊಳ್ಳುವುದು, ಹೀಗೆ ನಾವು ಆತನಿಗೆ ಮಹಿಮೆಯನ್ನು ತರುತ್ತೇವೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ದೇವರ ಕುಟುಂಬದ ಭಾಗವಾಗಿರುವುದರಿಂದ ನಾನು ಯಾವ ಪ್ರಯೋಜನಗಳನ್ನು ಕಂಡುಕೊಳ್ಳುತ್ತೇನೆ?
ದೇವರ ಮಗುವಾಗಿ ನಾನು ಯಾವ ಜವಾಬ್ದಾರಿಗಳನ್ನು ತಪ್ಪಿಸಿದ್ದೇನೆ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/