ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 16 ದಿನ

ಯೆಹೂದ್ಯರ ಕಾನೂನಿನ ಪ್ರಕಾರ ಕುಷ್ಠರೋಗಿಗಳನ್ನು ವಿಧ್ಯುಕ್ತವಾಗಿ ಅಶುದ್ಧರೆಂದು ಪರಿಗಣಿಸಲಾಗಿತ್ತು. ಅವರು ಸಾಮಾಜದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು, ಅವರಿಗೆ ಪಟ್ಟಣದ ಮಿತಿಯ ಹೊರಗೆ ವಸತಿ ಕೊಡಲಾಯಿತು. ಅವರು ಸಾಮಾನ್ಯ ಜನರ ಸುತ್ತಲೂ ಇದ್ದಾಗ ಅವರು ತಮ್ಮ ಉಪಸ್ಥಿತಿಯನ್ನು ಎಚ್ಚರಿಸಲು "ಅಶುದ್ಧ, ಅಶುದ್ಧ" ಎಂದು ಕೂಗಬೇಕಾಗಿತ್ತು. ಎಂತಹ ದುಃಖಕರ ಜೀವಿತ! ಆದರೂ ಯೇಸು ಭೂಮಿಗೆ ಬಂದು ಜನರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದಾಗ, ಆತನು ಅವರನ್ನು ಅಂಗೀಕರಿಸಿದ್ದು ಮಾತ್ರವಲ್ಲದೆ, ಆತನು ನಿಜವಾಗಿಯೂ ಅವರನ್ನು ಮುಟ್ಟಿದನು ಮತ್ತು ಗುಣಪಡಿಸಿದನು. ನೀವು ಓದಿದ್ದು ಸರಿ- ಆತನು ಅವರನ್ನು ಮುಟ್ಟಿದನು. ಅವರು ತೆರೆದ, ಒಸರುವ ಹುಣ್ಣುಗಳನ್ನು ಹೊಂದಿರಬಹುದು ಎಂದು ಆತನು ಚಿಂತಿಸಲಿಲ್ಲ. ಅವರಿಂದ ಸಾಂಕ್ರಾಮಿಕವಾಗಬಹುದು ಎಂದು ಆತನು ಚಿಂತಿಸಲಿಲ್ಲ. ಆತನು ದಯೆ ಮತ್ತು ನಿಜವಾದ ಪ್ರೀತಿಯಿಂದ ಅವರನ್ನು ಮುಟ್ಟಿದನು. ಈ ಕುಷ್ಠರೋಗಿಯನ್ನು ಗುಣಪಡಿಸಲು ‘ಮನಸ್ಸಿದೆಯಾ’ ಎಂದು ಕೇಳಿದ ಈ ಕುಷ್ಠರೋಗಿಯ ಹಿಂಜರಿಕೆಗೆ ‘ತನಗೆ ಮನಸ್ಸುಂಟು’ ಎಂದು ಉತ್ತರಿಸುವ ರೀತಿ ಸುಂದರವಾಗಿದೆ!

ನಮ್ಮ ಅಶುದ್ಧತೆ, ಅದು ಹೇಗಿರಬಹುದು, ಅದು ಯೇಸುವನ್ನು ದೂರವಿಡುವುದಿಲ್ಲ. ನೀವು ಇರುವ ಸ್ಥಳದಲ್ಲಿಯೇ ನಿಮ್ಮನ್ನು ಭೇಟಿ ಮಾಡಲು ಮತ್ತು ನಿಮ್ಮ ಸ್ರವಿಸುವ, ಮುರಿದ ಮತ್ತು ಗಬ್ಬು ನಾರುವ ಗಾಯಗಳನ್ನು ಸ್ಪರ್ಶಿಸಲು ಆತನು ಹೆಚ್ಚಾಗಿ ಸಿದ್ಧವಾಗಿದ್ದಾನೆ ಮತ್ತು ನಿಮ್ಮನ್ನು ತಿರಿಗಿ ಪೂರ್ಣತೆಗೆ ಪುನರ್ ಸ್ಥಾಪಿಸುವನು. ನೀವು ಆತನಿಗಾಗಿ ತೆರೆದವರಾಗಿರಲು ಸಾಕಷ್ಟು ದುರ್ಬಲರಾಗಿದ್ದೀರೋ ಎಂಬದನ್ನು ಇದು ಅವಲಂಬಿಸಿರುತ್ತದೆ?

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ನಿಮ್ಮಲ್ಲಿ ಯಾವುದಾದರೂ ಭಾಗವು ಅಶುದ್ಧವೆಂದು ನಿಮಗೆ ತಿಳಿದಿದೆಯೇ?
ನೀವು ಯೇಸುವನ್ನು ಕೂಗಿ ನಿಮ್ಮ ನೋವಿಗೆ ಆತನನ್ನು ಆಹ್ವಾನಿಸುವಿರಾ?
ನಿಮ್ಮ ಜೀವನದ ಅಸ್ಪೃಶ್ಯ ಭಾಗಗಳನ್ನು ಸ್ಪರ್ಶಿಸಲು ನೀವು ಆತನನ್ನು ಅನುಮತಿಸುವಿರಾ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/