ಯೇಸುವಿನೊಂದಿಗೆ ಮುಖಾಮುಖಿಮಾದರಿ

ಯೇಸುವಿನೊಂದಿಗೆ ಮುಖಾಮುಖಿ

40 ನ 19 ದಿನ

ನಿಮ್ಮನ್ನು ದೇವರ ಸನ್ನಿಧಿಗೆ ನಡೆಸುವ ಸ್ನೇಹಿತರನ್ನೇ ನೀವು ಹಿಡಿದಿಟ್ಟುಕೊಳ್ಳಬೇಕಾದ ಸ್ನೇಹಿತರಾಗಿದ್ದಾರೆ. ಈ ಜನರು ಪಾರ್ಶ್ವವಾಯು ಪೀಡಿತ ವ್ಯಕ್ತಿಯನ್ನು ಯೇಸುವಿನ ಬಳಿಗೆ ಕರತಂದರು. ಯೇಸು ಅವನಿಗೆ "ಮಗನೇ, ಧೈರ್ಯದಿಂದಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ" ಎಂದು ಹೇಳಿದನು. ವಾಸ್ತವದಲ್ಲಿ ಆತನು ದೇವರಂತೆ ಏನು ಮಾಡಬಹುದೋ ಅದನ್ನು ಮಾತ್ರ ಮಾಡುತ್ತಿರುವಾಗ ಆತನು ಧರ್ಮನಿಂದೆ ಮಾಡುತ್ತಿದ್ದಾನೆ ಎಂದು ಯೋಚಿಸಲು ಇದು ಶಾಸ್ತ್ರಿಗಳನ್ನು ಪ್ರಚೋದಿಸಿತು. ಯೇಸು ಅವರ ಆಲೋಚನೆಗಳನ್ನು ಹೇಗೆ ಪ್ರತಿಬಂಧಿಸುತ್ತಾನೆ ಮತ್ತು ಅದನ್ನು ಅವರಿಗೆ ಹೇಗೆ ಉಚ್ಚರಿಸುತ್ತಾನೆ ಎಂಬುದು ತಮಾಷೆಯಾಗಿದೆ.

ನಾವು ಎಷ್ಟು ಸಾರಿ ಸರಿಯಾದ ವಿಷಯವನ್ನು ಹೇಳಿದ್ದೇವೆ ಆದರೆ ನಮ್ಮ ಆಲೋಚನೆಗಳು ಕಹಿ, ತೀರ್ಪು ಮತ್ತು ಅಸೂಯೆಯಿಂದ ಅತಿರೇಕವಾಗಿ ನಡೆಯಲು ಅವಕಾಶ ಮಾಡಿಕೊಟ್ಟಿವೆ. ನಮ್ಮ ಆಲೋಚನೆಗಳಿಗೆ ಸಹ ದೇವರಿಗೆ ಜವಾಬ್ದಾರರಾಗಿರಲು ಇದು ಉತ್ತಮ ಜ್ಞಾಪನೆಯಾಗಿದೆ ಏಕೆಂದರೆ ನಮ್ಮೊಳಗೆ ಏನಿದೆ ಎಂಬುದು ಅಂತಿಮವಾಗಿ ಹೊರಹೊಮ್ಮುತ್ತದೆ. ಅವರು ನಮ್ಮ ಸುತ್ತಲೂ ವಿನಾಶವನ್ನು ಉಂಟುಮಾಡಬಹುದು ಅಥವಾ ಶಾಂತಿಯನ್ನು ತರಬಹುದು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ಪ್ರಾರ್ಥನೆಯಲ್ಲಿ ಇತರರನ್ನು ದೇವರ ಸಿಂಹಾಸನಕ್ಕೆ ಕರೆತರುವ ಸ್ನೇಹಿನಾಗಿದ್ದೇನೆ?
ದೇವರು ನನ್ನಲ್ಲಿ ಬದಲಾಯಿಸಲು ಪ್ರಯತ್ನಿಸಬಹುದಾದ ಪುನರಾವರ್ತಿತ ಆಲೋಚನೆ/ಆಲೋಚನೆಗಳಿವೆಯೇ?

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/