ಯೇಸುವಿನೊಂದಿಗೆ ಮುಖಾಮುಖಿಮಾದರಿ

ಸತ್ಯವೇದವು ಕೆಲವು ವಿಶ್ವ ದರ್ಜೆಯ ಸಂಭಾಷಣೆಗಳನ್ನು ದಾಖಲಿಸುತ್ತದೆ ಅವುಗಳಲ್ಲಿ ಒಂದು ಅರಣ್ಯದಲ್ಲಿ ಸೈತಾನ ಮತ್ತು ಯೇಸುವಿನ ನಡುವಿನ ಸಂಭಾಷಣೆಯಾಗಿದೆ. ಯೇಸು ನಲವತ್ತು ದಿನ ಉಪವಾಸ ಮಾಡಿದನು ನಂತರ ಪವಿತ್ರಾತ್ಮನಿಂದ ಅರಣ್ಯಕ್ಕೆ ನಡೆಸಲ್ಪಡುತ್ತಾನೆ. ಈ ಕಡಿಮೆ ಆದರ್ಶ ಪರಿಸ್ಥಿತಿಯಲ್ಲಿ ಸೈತಾನನು ಕಾಣಿಸಿಕೊಳ್ಳುವನು ಮತ್ತು ದೇವರ ಮಗನನ್ನು ನಿಂದಿಸಲು ಪ್ರಾರಂಭಿಸುತ್ತಾನೆ. ಅವನು ಮೊದಲು ಆತನ ದೈಹಿಕ ಹಸಿವನ್ನು ಗುರುತಿಸಿ, ಕಲ್ಲುಗಳನ್ನು ರೊಟ್ಟಿಯಾಗಿ ಪರಿವರ್ತಿಸುವ ಅಗ್ಗದ ಮಾಂತ್ರಿಕ ತಂತ್ರವನ್ನು ಮಾಡಲು ಯೇಸುವನ್ನು ಕೇಳುತ್ತಾನೆ. ನಂತರ ಅವನು ತನ್ನನ್ನು ಎತ್ತರದ ಕಟ್ಟಡದಿಂದ ಜಿಗಿದು ತನನ್ನು ಬದುಕಿಸಿಕೊಳ್ಳುವ ಅದ್ಭುತವಾದ ಸಾಧನೆಯನ್ನು ಮಾಡಲು ಯೇಸುವಿಗೆ ಸವಾಲು ಹಾಕುತ್ತಾನೆ. ಸೈತಾನನು ಅಂತಿಮವಾಗಿ ಯೇಸು ಅವನಿಗೆ ಅಡ್ಡಬಿದ್ದು ಆರಾಧಿಸಿದರೆ ಪ್ರಪಂಚದ ದೇಶಗಳನ್ನು ಆಳುವ ಅವಕಾಶವನ್ನು ಕೊಡುತ್ತೇನೆಂದು ಹೇಳಿದನು. ಯೇಸು ತನ್ನ ಮಾತುಗಳನ್ನು ಅಥವಾ "ಶರೀರವಾಗಿ ಮಾರ್ಪಟ್ಟ ವಾಕ್ಯ" ಬಳಸದೆ, ಶತ್ರುವನ್ನು ಹಿಂದಕ್ಕೆ ತಳ್ಳಲು ದೇವರ "ಲಿಖಿತ ವಾಕ್ಯ"ವನ್ನು ಬಳಸಿದನು.
ದೇವರು ನಮ್ಮನ್ನು ಎಂದಿಗೂ ಶೋಧಿಸುವುದಿಲ್ಲ ಆದರೆ ಆತನು ನಮ್ಮನ್ನು ಪರೀಕ್ಷಿಸಲು ಅನುಮತಿಸುತ್ತಾನೆ ಇದರಿಂದ ನಮ್ಮ ನಂಬಿಕೆಯ ನೈಜತೆ ಪ್ರಕಟವಾಗುತ್ತದೆ ಮತ್ತು ನಮ್ಮ ನಂಬಿಕೆಗಳು ಆತನ ವಾಕ್ಯದ ತಳಹದಿಯ ಮೇಲೆ ಆಧಾರಿತವಾಗಿರುತ್ತವೆ. ನಾವು ಆತನ ವಾಕ್ಯವನ್ನು ತಿಳಿಯದಿದ್ದರೆ ಶತ್ರುವನ್ನು ಹೇಗೆ ಎದುರಿಸುತ್ತೇವೆ? ನಾವು ಅವನ ಸುಳ್ಳು ಮತ್ತು ವಂಚನೆಗಳನ್ನು ಹೇಗೆ ಬೇರುಸಹಿತ ತೆಗೆಯುತ್ತೇವೆ? ದೇವರ ವಾಕ್ಯವು ನಮ್ಮ ಹೃದಯದಲ್ಲಿ ಆಳವಾಗಿ ಹುದುಗಿಲ್ಲದಿದ್ದರೆ ನಾವು ದುಷ್ಟರಿಂದ ಮುಳುಗಬಹುದು ಮತ್ತು ನಾವು ಯಾರ ಪರವಾಗಿರುತ್ತೇವೆ ಎಂಬುದನ್ನು ಮರೆತುಬಿಡಬಹುದು. ಯೇಸು ಪಾಪ ಮತ್ತು ಮರಣವನ್ನು ಜಯಿಸಿ ಅಂತಿಮ ಜಯವನ್ನು ಗಳಿಸಿದರಿಂದ ನಮ್ಮನ್ನು ಜಯಶಾಲಿಗಳು ಎಂದು ಕರೆಯಲಾಗುತ್ತದೆ. ಯೇಸುವಿನಲ್ಲಿ ನಾವು ಜಯಿಗಳಿಗಿಂತ ಹೆಚ್ಚಾಗಿದ್ದೇವೆ. ಶತ್ರುಗಳ ಕುತಂತ್ರ ಮತ್ತು ಒಳಸಂಚಿನ ಮೇಲೆ ನಾವು ಜಯಶಾಲಿಯಾಗುತ್ತೇವೆ!
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಶತ್ರು ನನ್ನೊಂದಿಗೆ ಆಟವಾಡುತ್ತಿದ್ದಾನೆಯೇ?
ನಾನು ಸೋಲಿಸಲ್ಪಟ್ಟ ಮನಸ್ಥಿತಿಯನ್ನು ಹೊಂದಿದ್ದೇನೆಯೇ ಅಥವಾ ಜಯಶಾಲಿಯ ಮನಸ್ಥಿತಿಯನ್ನು ಹೊಂದಿದ್ದೇನೆಯೇ?
ನಾನು ಯಾವ ವಾಕ್ಯವನ್ನು ಕೇಂದ್ರೀಕರಿಸಿ ಅವನನ್ನು ನಿಶ್ಯಸ್ತ್ರಗೊಳಿಸಲು ಬಳಸಬೇಕು?
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಜಿಯಾನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://www.instagram.com/wearezion.in/
ವೈಶಿಷ್ಟ್ಯದ ಯೋಜನೆಗಳು

The Intentional Husband: 7 Days to Transform Your Marriage From the Inside Out

Blindsided

Journey Through Leviticus Part 2 & Numbers Part 1

Healthy Friendships

Hope Now: 27 Days to Peace, Healing, and Justice

Wisdom for Work From Philippians

Create: 3 Days of Faith Through Art

The Revelation of Jesus

A Heart After God: Living From the Inside Out
