ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು预览

ಜಯಶಾಲಿಗಳಾಗಿ ನಿಲ್ಲಿರಿ
ಸತ್ಯವೇದ ಕಥೆ – ಸ್ತೆಫೆನನ ಮರಣ "ಅಪೊ 6:8-15, 7:51-60"
ನಾವು ದೇವರು ದಯಪಾಲಿಸುವ ಸರ್ವಾಯುಧಗಳು ಮತ್ತು ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು ಓದುವಾಗ, ನಾವು ನಮ್ಮ ಜೀವಿತಗಳಿಗೆ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು ಎಂಬದನ್ನು ಮನವರಿಕೆ ಮಾಡಿಕೊಳ್ಳುವದು ಪ್ರಾಮುಖ್ಯವಾಗಿದೆ. ನೀವು ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಲು ಪ್ರಾರ್ಥನೆ ಮಾಡಲು ಆಗುವದಿಲ್ಲ. ನೀವು ನಿಮ್ಮ ಬಾಯಿಂದ ಸತ್ಯವನ್ನು ಹೇಳುತ್ತಾ, ದೇವರ ಕುರಿತಾದ ಸತ್ಯವನ್ನು ಹೃದಯದಿಂದ ನಂಬುವಾಗ, ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡ ಹಾಗಾಗುವದು. ಹಾಗೆಯೇ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳುವ ಸಲುವಾಗಿಯೂ ಪ್ರಾರ್ಥನೆ ಮಾಡಿದರೆ ಆಗುವದಿಲ್ಲ. ಮಾನವರು ಹೇಳುವದನ್ನು ನಂಬದೆ ದೇವರು ಹೇಳುವದನ್ನು ನಂಬುತ್ತಾ ನೀವು ನಂಬಿಕೆಯಿಂದ ಜೀವಿಸುವಾಗ, ನಂಬಿಕೆಯೆಂಬ ಗುರಾಣಿಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡಿರುವಿರಿ ಮತ್ತು ವೈರಿಯ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಲು ಅದನ್ನು ಉಪಯೋಗಿಸಿಕೊಳ್ಳುತ್ತಿರುವಿರಿ. ಜಯಶಾಲಿಗಳಾಗಿ ನಿಲ್ಲಬೇಕೆಂದರೂ ಇದೇ ತತ್ವ ಅನ್ವಯವಾಗುತ್ತದೆ. ಜಯಶಾಲಿಗಳಾಗಿ ನಿಲ್ಲಲು ನೀವು ನಿರ್ದಿಷ್ಟವಾದ ಪದಗಳನ್ನು ಪ್ರಾರ್ಥನೆಯಲ್ಲು ಉಪಯೋಗಿಸಲು ಆಗುವದಿಲ್ಲ. ನೀವು ದೇವರಲ್ಲಿ ನಂಬಿಕೆಯುಳ್ಳವರಾಗಿ, ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುವಾಗ, ಜಯಶಾಲಿಗಳಾಗಿ ನಿಲ್ಲಲು ಸಾಧ್ಯವಾಗುತ್ತದೆ.
ಅಪೊಸ್ತಲರ ಕೃತ್ಯಗಳಿಂದ ತೆಗೆದುಕೊಳ್ಳಲಾಗಿರುವ ಇಂದಿನ ಸತ್ಯವೇದದ ಕಥೆಯಲ್ಲಿ ಸ್ತೆಫೆನನು ಇದಕ್ಕೆ ದೊಡ್ಡ ಉದಾಹರಣೆಯಾಗಿದ್ದಾನೆ. ಅವನು ನೀತಿವಂತನು ಮತ್ತು ಜ್ಞಾನವಂತನಾಗಿದ್ದನು, ಅವನು ಎಡಬಿಡದೆ ಸರ್ವಾಯುಧಗಳನ್ನು ಧರಿಸಿಕೊಂಡಿದ್ದನು. ಧಾರ್ಮೀಕ ಹಿಂಸೆಗಳು ಅವನಿಗೆ ವಿರುದ್ಧವಾಗಿ ಕಾಣಿಸಿಕೊಂಡಾಗ, ಮರಣವು ನಿಶ್ಚಯವಾದಾಗಲೂ, ತಾನು ನಂಬಿದ್ದ ವಿಷಯವನ್ನು ಬಲವಾಗಿ ಹಿಡಿದುಕೊಂಡನು.
ಸ್ತೆಫೆನನು ಯೇಸು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಿದ್ದನು ಆದ್ದರಿಂದ ಧಾರ್ಮಿಕ ನಾಯಕರು ಅವನ ಮೇಲೆ ಕೋಪಗೊಂಡು ಅವನಿಗೆ ವಿರುದ್ಧವಾಗಿ ಜನರನ್ನು ಕೆರಳಿಸಿದರು ಮತ್ತು ಅಂತಿಮವಾಗಿ ಕಲ್ಲೆಸೆದು ಅವನನ್ನು ಕೊಂದು ಬಿಟ್ಟರು. ಸತ್ಯವೇದದ ಈ ಕಥೆಯಾದ್ಯಂತ, ಸ್ತೆಫನನು ತಾನು ನಂಬಿದ್ದ ವಿಷಯವನ್ನು ಬಲವಾಗಿ ಹಿಡಿದುಕೊಂಡಿದ್ದನು ಮತ್ತು ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ತನ್ನ ಅಭಿಪ್ರಾಯವನ್ನು ಅವನು ಬದಲಾಯಿಸಿಕೊಳ್ಳಲಿಲ್ಲ.
ನೀವು ದೇವರಲ್ಲಿ ನಂಬಿಕೆಯುಳ್ಳವರಾಗಿ ಅದರ ನಿಮಿತ್ತ ಹಿಂಸೆಗಳನ್ನು ಎದುರಿಸಲು ಸಿದ್ಧರಾಗಿದ್ದರೆ, ಜಯಶಾಲಿಗಳಾಗಿ ನಿಲ್ಲುವಿರಿ ಮತ್ತು ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳುವದರಿಂದ ದೃಢವಾಗಿರುವಿರಿ.
“ನಾನು ದೃಢವಾಗಿ ನಿಲ್ಲುವ ಆಯ್ಕೆ ಮಾಡಿಕೊಂಡಿದ್ದೇನೆ.”
ಪ್ರಶ್ನೆಗಳು:
1. ಮಾನವನ ಜೀವಿತದಲ್ಲಿರುವ ಏಳು ಬೀಳುಗಳು ಯಾವುವು?
2. ನಾವು ಸೈತಾನನಿಗೆ ವಿರುದ್ಧವಾಗಿ ಯಾವಾಗ ದೃಢವಾಗಿ ನಿಲ್ಲಬೇಕು?
3. ದೃಢವಾಗಿ ನಿಲ್ಲಲು ನಾವು ಮಾಡಬೇಕಾಗಿರುವ ಪ್ರಾಮುಖ್ಯವಾದ ಕಾರ್ಯ ಯಾವುದು?
4. ಸುಳ್ಳು ಆರೋಪಗಳನ್ನು ಮಾಡಿದಾಗ ಯಾರ ಮುಖ ದೇವದೂತನ ಮುಖದ ಹಾಗೆ ಇತ್ತು?
5. ಅವನು ಸಾಯುವ ಮೊದಲು ಏನು ಹೇಳಿದನು?
读经计划介绍

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More