ದೇವರ ರಕ್ಷಾಕವಚ - ಅಪೊಸ್ತಲರ ಕಾಯಿದೆಗಳು预览

ಎಡಬಿಡದೆ ಪ್ರರ್ಥನೆ ಮಾಡುವದು
ಸತ್ಯವೇದ ಕಥೆ – ಪೇತ್ರನು ಸೆರೆಮನೆಯಿಂದ ಬಿಡುಗಡೆಯಾದನು "ಅಪೊ 12:1-19"
ಪ್ರಾರ್ಥನೆಯು ಎರಡನೆಯ ಆಯುಧವಾಗಿದ್ದು ವೈರಿಗೆ ವಿರುದ್ಧವಾಗಿ ನಮ್ಮನ್ನು ರಕ್ಷಿಸಿಕೊಳ್ಳಲು ಇದನ್ನು ನಾವು ಉಪಯೋಗಿಸಬಹುದಾಗಿದೆ. ಇದನ್ನು ನಾವು ರಕ್ಷಣೆಯಾಗಿಯೂ ಉಪಯೋಗಿಸಿಕೊಳ್ಳಬಹುದು. ಪ್ರಾರ್ಥನೆಯ ಮೂಲಕ ನಾವು ಯುದ್ಧಗಳನ್ನು ಗೆಲ್ಲಬಹುದು, ಹೇಗೆ ಮುಂದುವರೆಯಬೇಕು ಎಂಬ ವಿಷಯದಲ್ಲಿ ದೇವರಿಂದ ಜ್ಞಾನವನ್ನು ಪಡೆಯಬಹುದು, ನಮಗಾಗಿ ಯುದ್ಧಮಾಡಲು ಪರಲೋಕದಿಂದ ದೇವದೂತರನ್ನು ಕರೆಸಬಹುದು ಮತ್ತು ನಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆ ಎಂಬದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು.
ಇಂದಿನ ಸತ್ಯವೇದದ ಕಥೆಯಲ್ಲಿ, ಪೇತ್ರನು ಸೆರೆಮನೆಯಲ್ಲಿರುವಾಗ ಇಡೀ ಸಭೆ ಅವನಿಗಾಗಿ ಪ್ರಾರ್ಥನೆ ಮಾಡುವದನ್ನು ನಾವು ನೋಡುತ್ತೇವೆ. ಅವರು ಪ್ರಾರ್ಥನೆ ಮಾಡುತ್ತಿರುವಾಗ, ದೇವರು ಪೇತ್ರನನ್ನು ಸೆರೆಮನೆಯಿಂದ ಬಿಡುಗಡೆ ಮಾಡಲು ದೇವದೂತನನ್ನು ಕಳುಹಿಸಿದನು. ದೇವದೂತನು ಅವನನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಬಂದು ಬಿಟ್ಟನು ಮತ್ತು ಪೇತ್ರನು ಕ್ರಿಸ್ತನಲ್ಲಿರುವ ಸಹೋದರ ಸಹೋದರಿಯರು ಪ್ರಾರ್ಥನೆ ಮಾಡುತ್ತಿದ್ದ ಸ್ಥಳಕ್ಕೆ ಹೋದನು. ಅವನು ಬಾಗಿಲು ಬಡಿಯುವಾಗ ಅವರು ಬಾಗಲನ್ನೂ ತೆರೆಯಲಿಲ್ಲ ಯಾಕಂದರೆ ಪೇತ್ರನು ಬಂದಿದ್ದಾನೆಂದು ನಂಬಲು ಅವರಿಂದ ಆಗಲಿಲ್ಲ. ಅವರು ಅವನ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು, ಆದರೆ ಅವನಿಗೆ ಬಿಡುಗಡೆಯಾದದ್ದನ್ನು ಕಂಡು ಆಶ್ಚರ್ಯಪಟ್ಟರು. ಅನೇಕ ಸಲ ನಾನು ಮತ್ತು ನೀವು ಪ್ರಾರ್ಥನೆ ಮಾಡುತ್ತೇವೆ, ಆದರೆ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸಿ ನಮ್ಮ ಸಹಾಯಕ್ಕೆ ಬರುವಾಗ ಆಶ್ಚರ್ಯಪಡುತ್ತೇವೆ. ನಾವು ಪ್ರಾರ್ಥನೆ ಮಾಡಬೇಕೆಂದು ಆತನುಹೇಳಿದ್ದಾನೆ ಮತ್ತು ನಮಗೆ ಸಹಾಯ ಮಾಡುವದಾಗಿ ವಾಗ್ದಾನ ಮಾಡಿದ್ದಾನೆ. ಒಂದುವೇಳೆ ಇದನ್ನು ನೀವು ಪ್ರತಿದಿನ ಉಪಯೋಗಿಸಬೇಕೆಂದು ಬಯಸುವದಾದರೆ, ಸರ್ವಾಯುಧಗಳಲ್ಲಿರುವ ಇದನ್ನು ಪ್ರತಿದಿನ ತಪ್ಪದೆ ಮಾಡಬೇಕು.
ಪ್ರಾರ್ಥನೆ ಪರಿಸ್ಥಿತಿಗಳನ್ನು ಬದಲಾಯಿಸುತ್ತದೆ! ನಿಮ್ಮ ಹೋರಾಟದಲ್ಲಿ ಸತತವಾಗಿ ಪ್ರಾರ್ಥನೆ ಮಾಡಿರಿ ಯಾಕಂದರೆ ಹಿಂದೆಂದಿಗಿಂತಲೂ ಈಗ ನಮಗೆ ಇದರ ಅವಶ್ಯಕತೆ ಹೆಚ್ಚಾಗಿದೆ.
“ನಾನು ಆತ್ಮೀಕ ಹೋರಾಟದಲ್ಲಿದ್ದೇನೆಂದು ತಿಳಿದು ಯಾವಾಗಲೂ ಪ್ರಾರ್ಥನೆ ಮಾಡುವ ಆಯ್ಕೆ ಮಾಡಿಕೊಂಡಿದ್ದೇನೆ.”
ಪ್ರಶ್ನೆಗಳು:
1.“ದೇವರು ದಯಪಾಲಿಸುವ ಸರ್ವಾಯುಧಗಳಲ್ಲಿ” ಪ್ರಾರ್ಥನೆಯನ್ನು ಯಾಕೆ ಸೇರಿಸಲಾಗಿದೆ?
2.ವೈರಿಯನ್ನು ಎದುರಿಸಲು ಮಾಡುವ ಪ್ರಾರ್ಥನೆ ಮತ್ತು ವೈರಿಗೆ ವಿರುದ್ಧವಾಗಿ ಹೋರಾಡಲು ರಕ್ಷಣಾತ್ಮಕವಾಗಿ ಮಾಡುವ ಪ್ರಾರ್ಥನೆಯ ಉದಾಹರಣೆಗಳು ಯಾವುವು?
3.ಒಂದುವೇಳೆ ದೇವರು ಎಲ್ಲವುಗಳನ್ನು ನಿಯಂತ್ರಿಸುವವನಾದರೆ, ಏನಾಗುತ್ತದೆ ಎಂಬದು ಆತನಿಗೆ ಮೊದಲೇ ತಿಳಿದಿರುವಾಗ ನನ್ನನ್ನು ಬೇಡಿಕೊಳ್ಳಿರಿ ಎಂದು ಆತನು ಯಾಕೆ ಹೇಳಿದ್ದಾನೆ?
4.ಎದುರಿಸಲು ನಾವು ಉಪಯೋಗಿಸಬಹುದಾದ ಎರಡು ಆಯುಧಗಳು ಯಾವುವು?
5.ಪೇತ್ರನು ಮರಿಯಳ ಮನೆಯ ಬಾಗಿಲನ್ನು ಬಡಿದಾಗ ಬಾಗಿಲ ಬಳಿಗೆ ಬಂದವರು ಯಾರು?
ಅಪೊಸ್ತಲರ ಕೃತ್ಯಗಳಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತಾ, ಈ ಪಾರಾಯಣ ಯೋಜನೆಯನ್ನು ಇಕ್ವಿಪ್ ಅಂಡ್ ಗ್ರೋ ಪಠ್ಯ ಕ್ರಮದಿಂದ ತೆಗೆದುಕೊಳ್ಳಲಾಗಿದೆ. ಮನೆಯಲ್ಲಿ ಈ ಯೋಜನೆಯನ್ನು ಆನಂದಿಸಿರಿ, ನಂತರ ವಿದ್ಯಾರ್ಥಿ ಪುಸ್ತಕಗಳು, ಆಟಗಳು, ಕರಕುಶಲಗಳು, ಹಾಡುಗಳು, ಅಲಂಕಾರಗಳು ಮತ್ತು ಹೆಚ್ಚಿನ ವಿಷಯಗಳೊಂದಿಗೆ ಸಭೆಯಲ್ಲಿ ಪೂರ್ಣ ಪಠ್ಯ ಕ್ರಮವನ್ನು ಮಾಡಿರಿ.
https://www.childrenareimportant.com/kannada/armor/
读经计划介绍

ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳುವದು ಪ್ರತಿದಿನ ಮುಂಜಾನೆ ಮಾಡುವ ಪ್ರಾರ್ಥನೆಯ ಸಂಪ್ರದಾಯವಲ್ಲ ಬದಲಾಗಿ ಚಿಕ್ಕವರಾಗಿರುವಾಗಲೇ ನಾವು ಪ್ರಾರಂಭಿಸಬೇಕಾಗಿರುವ ಜೀವನದ ಮಾರ್ಗವಾಗಿದೆ. ಕ್ರಿಸ್ಟಿ ಕ್ರಾಸ್ ರವರು ಬರೆದಿರುವ ಪಾರಾಯಣದ ಈ ಯೋಜನೆಯು ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿರುವ ವೀರರ ಕಡೆಗೆ ಗಮನ ಕೊಡುತ್ತದೆ.
More