ರೆಬೆಕ್ಕಳೆಡೆಗೆ ದೈನ್ಯ ದೃಷ್ಟಿಯಿರಲಿ预览

ವಿವಿಧ ಜನರು, ವಿವಿಧ ಅಗತ್ಯತೆ, ಹುದುವಾದ ಪರಿಹಾರ
ತಪ್ಪಿಹೋದ ಮಗ ಇವನ ಅಣ್ಣನ ಕುರಿತು ತಿಳಿಯುವುದು ಒಂದು ಸಮಂಜಸ ವಿಷಯವೇ. ಆತನು ನಂಬಿಗಸ್ತ, ಪರಿಶ್ರಮ ಜೀವಿ, ಪ್ರಾಮಾಣಿಕ, ಶಾಂತ ಸ್ವಭಾವದವನು, ಆದರೂ ತನ್ನೆಲ್ಲಾ ಆಸ್ತಿಯನ್ನು ಪೋಲು ಮಾಡಿ ಹಿಂದಿರುಗಿರುವ ಅವಿಧೇಯ ಮಗನಿಗಾಗಿ ಅವನ ತಂದೆಯು ಅತಿ ಸಡಗರ ತೋರುತ್ತಿರುವದನ್ನು ಅರಿತು ಕೋಪದಿಂದ ಪ್ರತಿಕ್ರಿಯಿಸುತ್ತಾನೆ. ಎಲ್ಲಾ ಕುಟುಂಬಗಳಲ್ಲಿ ಸಹಜವಾಗಿ, ಒಡಹುಟ್ಟಿದ ಮಕ್ಕಳಲ್ಲಿ ಯಾವ ಮಗು ಜೋರಾಗಿ ಅರಚಿಕೊಳ್ಳುತ್ತದೋ, ಆ ಮಗುವಿನ ಕಡೆಗೆ ಎಲ್ಲರ ಗಮನ ಹೆಚ್ಚಾಗಿರುತ್ತದೆ, ಇತರೆ ಮಕ್ಕಳ ಕಡೆಗೆ ಗಮನ ಅಲ್ಪಸ್ವಲ್ಪವೇ. ಅಂತೆಯೇ ಹಿರೀಮಗನು ತನಗಿರುವ ಮೌಲ್ಯವೇನೆಂಬುದನ್ನು ದೃಢೀಕರಿಸಿಕೊಳ್ಳಲು ಹವಣಿಸುತ್ತಿದ್ದಾನೆ.
(ಶಿಲುಬೆಯ ಘಟನೆಯಿಂದಾಗಿ) ಕಂಗೆಟ್ಟಿದ್ದ ಪೇತ್ರ ಮತ್ತು ಇತರೆ ಕೆಲ ಶಿಷ್ಯರು ಮೀನು ಹಿಡಿಯುವ ತಮ್ಮ ಹಳೆಯ ಕಾಯಕಕ್ಕೆ ಹಿಂತಿರುಗಿದಾಗ, ಅದೇ ವೇಳೆಯಲ್ಲಿ ದಡದಲ್ಲಿ ನಿಂತಿದ್ದ ಯೇಸುವಿನಿಂದ ದೊರೆತ ಕ್ಷಮಾಪಣೆ, ಆದರಣೆಯ ಮಾತುಗಳು, ಸುಟ್ಟಿದ್ದ ಮೀನುಗಳು, ರೊಟ್ಟಿ, ಮತ್ತು ಯಾವ ಖಂಡನೆ ಆಕ್ಷೇಪಣೆಗಳಿಲ್ಲದ ಔದಾರ್ಯ, ಅವರ ಹೃದಯದಲ್ಲಿ ಎಂತಹ ಅಹ್ಲಾದವನ್ನುಂಟು ಮಾಡಿದ್ದಿರಬಹುದು. ಈ ವಿಧದ ಪ್ರೀತಿಯನ್ನು ಈ ಯೌವನಸ್ಥನು ಬಯಸಿದ, ಆದರೆ ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ನಮ್ಮ ಬಾಹ್ಯ ಭಾವಗಳು ಅಮೂರ್ತ ಭಾವನೆಗಳಾಗಿವೆ. ನೊಂದ ತನ್ನ ಶಿಷ್ಯರನ್ನು ಸಂಧಿಸಿ ತನ್ನ ಶಿಷ್ಯ ಮಂಡಳಿಯೊಳಗೆ ಪುನಃಸೇರಿಸಿಕೊಳ್ಳುವಂತೆ ಸಮಯ ತೆಗೆದುಕೊಂಡು ಅವರೆಡೆಗೆ ಧಾವಿಸಿದ ಯೇಸುವು ನಿಜವಾದ ತಂದೆಯೂ ಮಿತ್ರನೂ ಅಲ್ಲವೇ. ಇನ್ನೊಂದು ವಿಧದಲ್ಲಿ ಈ ಹಿರಿ ಮಗನೂ ತಪ್ಪಿ ಹೋದವನೇ. ಕುಟುಂಬ ಸದಸ್ಯರ ನಡುವೆ ಏರ್ಪಡುವ ಅಂತರದ ನಿಮಿತ್ತ ಒಬ್ಬರಿಂದ ಒಬ್ಬರಿಗೆ ತಲುಪಬೇಕಾದ ಹಿತಗಳು ತಕ್ಕವರಿಗೆ ತಲುಪದೆ ಸೋರಿಕೆಯಾಗುತ್ತವೆ, ಇಂತಹ ಯೋಗ್ಯ ಗ್ರಹಿಕೆಯನ್ನು ಅದರ ಆಳವನ್ನು ಕೇವಲ ಕೆಲವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಅವುಗಳನ್ನು ಆತ್ಮದಲ್ಲಿ ಗ್ರಹಿಸಬೇಕಾಗಿದೆ, ಪರಸ್ಪರ ಸಂಬಂಧವನ್ನು ಬೆಳೆಯಿಸಬೇಕಾಗಿದೆ ಅದು ತನ್ನಷ್ಟಕ್ಕೆ ಕೈಗೂಡುವದಿಲ್ಲ. ತಂದೆಯು ತನ್ನ ತೋಳುಗಳಲ್ಲಿ ತನ್ನ ಹಿರೀಮಗನನ್ನು ಆಲಂಗಿಸಿಕೊಂಡಾಗ ತಂದೆಯ ಶ್ರೇಷ್ಠ ಆಶ್ವಾಸನೆ ಅವನಿಗೆ ಅರಿವಾಯಿತು, ಹೊಸದಾಗಿ ಹುಟ್ಟಿದ ಅನುಭವದೊಂದಿಗೆ ತಂದೆಯೊಡನೆ ಹೊಸ ಬಾಂಧವ್ಯದೊಳಗೆ ಬೆಸದು ಹಿರೀಮಗನು ಕೊನೆಗೂ ತನ್ನ ತಂದೆಯ ಪ್ರೀತಿ ಏನೆಂದು ಅರಿತುಕೊಂಡ. ನೀನು ಪ್ರೀತಿಸಲ್ಪಟ್ಟಾಗ ಮತ್ತು ಅದು ಅರಿವಿಗೆ ಗೋಚರವಾದಾಗ ವಯಕ್ತಿಕ ಜೀವಿತದಲ್ಲಿ ರೂಪಾಂತರವಾಗುತ್ತದೆ.
ಪರಿಚರ್ಯ ಮಾಡುವದರಲ್ಲಿ ಮಾರ್ಥಳು ವಿಶಿಷ್ಟಳು. ಸ್ತ್ರೀ ಪ್ರಧಾನವಾದ ಆಕೆಯು ಕುಟುಂಬದೊಳಗೆ ಈಕೆ ಪ್ರಮುಖಳು, ಆಕೆಯ ಮನೆಯು ಯೇಸು ಮತ್ತು ಅವನ ಶಿಷ್ಯರಿಗೆ ಆಗಾಗ್ಗೆ ವಿಶ್ರಾಂತಿ ನೆಲೆಯಾಗಿತ್ತು, ಆಕೆಗೆ ಎಂದೂ ಅದು ಭಾರವೆನಿಸಲಿಲ್ಲ. ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಜವಾಬ್ದಾರಿ, ಸತ್ಕಾರ್ಯಗಳನ್ನು ಲವಲವಿಕೆಯಿಂದಲೇ ನಿರ್ವಹಿಸುತ್ತಿದ್ದಳು. ಆದರೆ ಒಂದು ದಿನ ಆಕೆ ತನ್ನ ಸ್ವಭಾವಕ್ಕೆ ಮೀರಿ ಉದ್ರೇಕಗೊಂಡಳು. ಕಾರಣ ಒಂದು ದಿನ ಆಕೆಯ ತಂಗಿ ಮರಿಯಳು ಯೇಸುವಿನ ಪಾದದ ಬಳಿ ಸುಮ್ಮನೆ (ಮಾರ್ಥಳ ಪ್ರಕಾರ) ಕುಳಿತಿರುವದನ್ನು ಕಂಡು ಕುಪಿತಳಾಗಿ ಮಾತಾಡುತ್ತಾಳೆ, - “ಸ್ವಾಮಿ, ನನಗೆ ಕೆಲಸಕ್ಕೆ ನೆರವು ಬೇಕಿತ್ತು. ಬೇಥಾನ್ಯದಿಂದ ನಿನ್ನೊಡೆನೆ ಬಂದವರನ್ನು ಗಮನಿಸು! ಅವರ ಕೆರದ ದೂಳು ಕೊಠಡಿಯೊಳಗೆಲ್ಲಾ ಹರಡಿದೆ, ಆ ಪುಟ್ಟ ಏಲನ್ ಆ ಉತ್ತಮ ಪರದೆಯಲ್ಲಿ ತನ್ನ ಕೈಗಳನ್ನು ಒರಸಿದ, ನೋಡು. ಸ್ವಾಮಿ, ಇದು ಅತಿಯಾಯಿತು, ನನಗೆ ಸಹಾಯ ಮಾಡಲು ಮರಿಯಳಿಗೆ ತಿಳಿಸು, ನನ್ನ ಬಗ್ಗೆ ಕಾಳಜಿ ಇಲ್ಲವೇ”? ಕಣ್ಣಂಚಿನಲ್ಲಿದ್ದ ಕಣ್ಣೀರನ್ನು ಮಾರ್ಥಳು ಒರಸಿಕೊಳ್ಳುವಾಗ, ಅವಳ ಅಸಹಾಯಕತೆಯ ಅಳಲನ್ನು ಯೇಸು ಕೂಡಲೇ ಗಮನಿಸುತ್ತಾನೆ, ಸೌಮ್ಯನಾದ ಕುರುಬನಾಗಿಹ ಇವನು, ಕಳೆದು ಹೋದ ಕುರಿಯಂತೆ ಅರಚಿಕೊಳ್ಳುತ್ತಿರುವ ಈಕೆಯನ್ನು ಪರಿಗಣಿಸುತ್ತಾನೆ. ತನ್ನ ಆದ್ಯತೆಯನ್ನು ತುಸು ಪಕ್ಕಕ್ಕಿರಿಸಿ, ಕೆಲವು ವಿಶೇಷ ನುಡಿಗಳನ್ನು ಅಂದರೆ, ದೈಹಿಕ ಪರಿಶ್ರಮವು ಲಾಭವೇ, ಆದರೆ ಆತ್ಮೀಕ ಸಾಧನೆಯ ಫಲ ನಿತ್ಯತ್ವ ಎಂಬ ಶ್ರೇಷ್ಠ ತತ್ವಗಳನ್ನು ಬೋಧಿಸುತ್ತಾನೆ. ಮಾರ್ಥಳು ಬಯಸಿದ್ದು, ಆಕೆಯ ಉದ್ದೇಶ ಸತ್ಕಾರಗಳೆಲ್ಲಾ ಅಲ್ಲಿದ್ದ ಜನರಿಗಾಗಿ ಅಲ್ಲ, ಬಹು ವಿಶೇಷವಾಗಿ ಸ್ವಾಮಿಗಾಗಿ ಮಾತ್ರವೇ, ತಾನೆಂತಹ ಪ್ರೀತಿಯ ಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ ಎಂಬುದನ್ನು ಯೇಸು ಆ ಸಂದರ್ಭದಲ್ಲಿ ಗಮನಿಸಲಿ, ತನ್ನನ್ನೂ ಗಮನಿಸಲಿ ಎಂಬುದೇ ಆಗಿತ್ತು. ಆದರೆ ಆಕೆಯು ಗಣ್ಯಳು ಮತ್ತು ಪ್ರಶಂಸೆಗೆ ಪಾತ್ರಳು ಎಂಬುದು ಸ್ವಾಮಿಯ ಪ್ರತಿಕ್ರಿಯೆಯಾಗಿತ್ತು. ಆಕೆ ಕ್ಷಣಕಾಲ ಸಿಡುಕಿದ್ದು ಹೇಗಿತ್ತೆಂದರೆ ಒಬ್ಬ ಅತಿಕ್ರಿಯಾಶೀಲ ಸಾಧಕನ ಪ್ರತಿಕ್ರಿಯೆಯಂತಿತ್ತು ಉದಾಹರಣೆಗೆ, ಜೀವಿತದ ನಿಗೂಡ ರಹಸ್ಯಗಳ ಕುರಿತು ಗಾಢವಾಗಿ ಚಿಂತನೆ ಮಾಡುತ್ತಾ, ಕೈಯಲ್ಲಿ ಲೇಖನಿ ಹಿಡಿದು, ಮರದ ನೆರಳಿನಲ್ಲಿ ಕುಳಿತ ಕವಿಯೊಬ್ಬನನ್ನು, ಮತ್ತೊಬ್ಬನು ಕಂಡು (ಕವಿಯನ್ನು) ಕೆಲಸವಿಲ್ಲದ ಕನಸುಗಾರನು ಎಂದು ಹಂಗಿಸಿದಂತೆ. ಕವಿಯು ಸಹ ವಿಭಿನ್ನವಾಗಿ ಸಾಧಕನೇ, ಮಾರ್ಥಳು ಸಹ ವಿಭಿನ್ನತೆಯನ್ನು ಪ್ರಸಂಶಿಸುವಂತೆ ಯೇಸು ಆಕೆಗೆ ನೆರವಾದ. ಕಾಳಜಿ ತೋರುವ ನೈಜ್ಯ ವ್ಯಕ್ತಿ, ತಮ್ಮೆಡೆ ಕಾಳಜಿಯ ಕ್ಷಣಗಳು, ದೈವಿಕ ಆಲೋಚನೆಗಳು ಇವೆಲ್ಲವೂ ರೂಪಾಂತರವನ್ನು ಸ್ಥಾಪಿಸುತ್ತವೆ. ಈ ಹಂತಕ್ಕೆ ಮಾರ್ಥಳು ಹೊಸದಾಗಿ ಹುಟ್ಟಿದವಳಾದಳು.
ಸೂಕ್ತ ಕಾರ್ಯನಿರ್ವಹಣೆಗೆಂದು ಅನೇಕ ಅಂಗಾಗಗಳಿಂದ ಶರೀರವು ರೂಪುಗೊಂಡಿದೆ. ವೈವಿಧ್ಯಮಯ ಜನ, ಭಾಷೆ ಮತ್ತು ಸಂಸ್ಕೃತಿಗಳಿಂದ ಈ ಜಗತ್ತು ಭಾವೈಕ್ಯತೆ ಕಂಡುಕೊಂಡಿದೆ, ಹಾಗೆಯೇ ಸಮತೋಲನ ಜೀವನಕ್ಕಾಗಿ ನಮ್ಮ ಮಾರ್ಥ, ಯೋಬ, ಮರಿಯಳು ಮತ್ತು ಪೇತ್ರ ನಂತವರು ನಮಗೆ ಅವಶ್ಯ. ಕೊಳೆತ ಮೊಟ್ಟೆಮೊಟ್ಟೆ ಮತ್ತು ಹೈಡ್ರೊಕ್ಲೋರಿಕ್ ಆಸಿಡ್ ನ ದುರ್ಗಂಧವಿಲ್ಲದಿದ್ದಿದ್ದರೆ ಗುಲಾಬಿ ಮತ್ತು ಮಲ್ಲಿಗೆಯ ಕಂಪು ಅರಿವಿಗೆ ಬರುತ್ತಿತ್ತೋ? ಕಂಬಳಿ ಹುಳಗಳು ಇಲ್ಲದೆ ಚಿಟ್ಟೆಗಳನ್ನು ನಿರೀಕ್ಷಿಸಲು ಸಾಧ್ಯವೇ? ಸಣ್ಣ ಇರುವೆಯನ್ನು ಗಮನಿಸುವಾಗ ಆನೆಯ ಗಾತ್ರ ಬೆರುಗನ್ನುಂಟುಮಾಡುತ್ತದೆ, ಎರೆಹುಳು ಕಾಣುವಾಗ ಆನಕೊಂಡ ಗಾಬರಿ ಬೀಳಿಸುತ್ತದೆ. ಧರ್ಮಶಾಸ್ತ್ರದಿಂದ ಪಾಪದ ಅರಿವುಂಟಾಗುತ್ತದೆ. ಶಿಲುಬೆಯಲ್ಲಿ ಯೇಸುವಿನ ಕ್ರೂರ ಮರಣ ಕಾಣದೆ ಬರಿದಾದ ಸಮಾಧಿ ಮತ್ತು ಮಹಿಮೆಯ ಪುನರುತ್ಥಾನವನ್ನು ಕಾಣಲು ಸಾಧ್ಯವೇ? ಎಲ್ಲವೂ ಇರಬೇಕಾದ ಸ್ಥಿತಿಯಲ್ಲಿ ನೆಲೆಕಂಡಿದೆ, ನಮ್ಮ ಅಭಿಪ್ರಾಯಕನುಸಾರ ಯಾವುದನ್ನೂ ತಿರಸ್ಕರಿಸಲು ಸಾಧ್ಯವಿಲ್ಲ.
ಆದಕಾರಣ ರೆಬೆಕ್ಕಳ ಮೇಲೆ ದೈನ್ಯ ದೃಷ್ಟಿಯಿರಲಿ, ಜೊತೆಗೆ ನಿಮ್ಮ ನೆರೆಯವನು, ದಾರಿಹೋಕ, ಸಿಟ್ಟೆಬ್ಬಿಸುವ ಸಹೋದ್ಯೋಗಿ, ನಿಮ್ಮ ಪತಿರಾಯ, ನಿಮ್ಮ ಮಡದಿ, ನಿಮ್ಮ ಮಕ್ಕಳ ಮೇಲೆ ಸಹ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ, ಕನಿಕರದಿಂದ ನಮಗೆ ದಯೆ ತೋರುತ್ತಾನೆ.
读经计划介绍

ಬಿದ್ದುಹೋದ ದೇವಜನರು ಸಹಾಯಹಸ್ತವನ್ನು ನಿರೀಕ್ಷಿಸುವಾಗ, ನಮ್ಮ ರಕ್ಷಕನು ಕೂಡಲೆ ಸ್ಪಂದಿಸಿ, ಅವರನ್ನು ತಿರಿಗಿ ಎಬ್ಬಿಸಿ ನಿಲ್ಲಿಸುವನು. ಉತ್ತೇಜನದ ಒಂದು ನುಡಿ, ಸ್ಪಂದನೆಯ ಕ್ಷಣ, ಪ್ರೀತಿ ಕನಿಕರ ತೋರುವ ಹೃದಯ ಇವು ಗುಣಪಡಿಸುವ ಮುಲಾಮಿನೊಳಗಿನ ಪ್ರಮುಖ ಅಂಶಗಳಾಗಿವೆ. ನಂಬಿಗಸ್ತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆಯೇ ಹೊರತು ತೀರ್ಪು ಮಾಡಲು ಅಲ್ಲ. ನಾವು ಕರುಣೆಯನ್ನು ಹೊಂದಿದವರಾದ ಕಾರಣ, ನಾವೂ ಕರುಣೆಯುಳ್ಳವರಾಗಿರೋಣ.
More