ರೆಬೆಕ್ಕಳೆಡೆಗೆ ದೈನ್ಯ ದೃಷ್ಟಿಯಿರಲಿ预览

ಹೆಸರುಗಳು, ಕೌಶಲ್ಯ ಮತ್ತು ಸ್ವಭಾವ
ವರುಷಗಳಿಂದ ತಾಯಂದಿರ ಕುರಿತು ಸಾಕಷ್ಟು ಸಂದೇಶಗಳನ್ನು ಪ್ರಸಂಗಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಜ್ಞಾನೋಕ್ತಿ 31:10-31 ರ ವಾಕ್ಯ ಭಾಗವನ್ನು ಆದರಿಸಿ ದೇವರಲ್ಲಿ ಭಕ್ತಿಯುಳ್ಳ ಸ್ತ್ರೀಯು ಎಷ್ಟೊಂದು ಗುಣವತಿಯಾಗಿದ್ದು ಪ್ರಶಂಸೆಗೆ ಪಾತ್ರಳು ಎಂಬುದನ್ನು ‘ಮದರ್ಸ್ ಡೇ’ ದಿವಸ ಸಾರೋಣವಾಗುತ್ತದೆ. ಈ ವಾಕ್ಯ ಭಾಗದಲ್ಲಿ ಆಕೆಯು ತನ್ನ ಮನೆಯವರಿಗೆಲ್ಲಾ ಆಹಾರವನ್ನು ಸಿದ್ಧಪಡಿಸುವ ಬಾಣಸಿಗಳು, ಚತುರಳಾದ ವರ್ತಕಿ, ಸದಾ ಚಟುವಟಿಕೆ ನಿರತಳು, ವಿವಿಧ ಬಗೆಯ ಉಡುಗೆಗಳನ್ನು ಹೊಲಿಯುವ ವಸ್ತ್ರವಿನ್ಯಾಸಕಿ, ಪರೋಪಕಾರಿ ಹೀಗೆ ಹಲವಾರು ವಿಧದಲ್ಲಿ ಗುರುತಿಸಲ್ಪಟ್ಟರೂ, ದೇವರ ಭಯವುಳ್ಳವಳು ಎಂಬ ಸಾಕ್ಷಿ ಹೊಂದಿದವಳಾಗಿದ್ದಾಳೆ. ರೆಬೆಕ್ಕಳು, ಮೇಲಿನ ಸಕಲ ಗುಣಾತಿಶಯಗಳನ್ನು ಹೊಂದಿದವಳು ಮತ್ತು ಇಸಾಕನಿಗೆ ಆದರ್ಶಪ್ರಾಯ ಹೆಂಡತಿಯೂ ಆಗಿದ್ದಳು ಎಂಬುದು ನನಗೆ ನಿಶ್ಚಯ. ಆದರೂ ಆಕೆಯ ಕುರಿತು ತಂತ್ರಗಾರಿಕೆ ನಡೆಸುವ ಸ್ತ್ರೀ ಎಂದೂ, ನೈತಿಕತೆಯಿಲ್ಲದ ತಾಯಿ ಎಂದೂ, ರಹಸ್ಯವಾಗಿ ಮಾತನಾಡಿದ್ದನ್ನು ಕದ್ದಾಲಿಸಿ ಬೇರೊಂದು ತಂತ್ರ ರೂಪಿಸುವವಳೆಂದೂ, ತನ್ನ ಮಗನಿಗೆ ಸುಳ್ಳಾಡುವದನ್ನು ಮತ್ತು ವಂಚಿಸುವ ಬುದ್ದಿಯನ್ನು ಕಲಿಸಿದವಳೆಂದೂ ಆಗಾಗ್ಗೆ ಬಿಂಬಿಸಲಾಗುತ್ತದೆ. ಈ ಎಲ್ಲಾ ಅಪವಾದಗಳು ಸರಿಯೆನಿಸಿದರೂ, ಆಕೆಯು ಹೀಗೆ ನಡಕೊಳ್ಳುವಂತೆ ಪ್ರೇರಿಸಿದ್ದಾದರೂ ಏನು? ದೇವರು ಆಕೆಯ ಕೃತ್ಯ ಮತ್ತು ಉದ್ದೇಶವನ್ನು ಮನ್ನಿಸುತ್ತಾನೋ ಅಥವಾ ಆಕೆಯು ತನ್ನ ತಪ್ಪಿಗಾಗಿ ದಂಡ ತೆರಬೇಕೋ? ನಾವು ಆಕೆಯನ್ನು ದೈನ್ಯ ದೃಷ್ಟಿಯಿಂದ ಕಾಣೋಣವೇ?
ತನ್ನ ಅರವತ್ತರ ಪ್ರಾಯದಲ್ಲಿ ರೆಬೆಕ್ಕಳು ಕೊನೆಗೂ ತಾಯಿಯಾಗಲಿಕ್ಕಿದ್ದಾಳೆ (ಆದಿಕಾಂಡ 25:27) ಎಂಬುದನ್ನು ಅರಿತ ಇಸಾಕನು ಉತ್ಸಾಹ ಭರಿತನಾದ. ಜನಿಸುತ್ತಿರುವ ಹಂತದಲ್ಲೇ ಅವಳಿ ಮಕ್ಕಳಲ್ಲಿ ಕಿರಿಯವನ ಹೆಸರು ಮೋಸಗಾರ ಅಥವಾ ಹಿಮ್ಮಡಿಯನ್ನು ಹಿಡಿದವನು (‘ಹಿಂಬಾಲಿಸು' ಅಥವಾ 'ಹಿಂಬದಿಯಲ್ಲಿರು' ಎನ್ನುವ ಅರ್ಥ ಸಹ ಇದೆ) ಎಂದು ಘೋಷಿಸಲಾಯಿತು. ಆದರೆ ಮೋಸಗಾರ ಎನ್ನುವ ಹೆಸರೇ ಅವನಿಗೆ ನಿಂತು ಬಿಟ್ಟಿತು, ಮತ್ತು ಭವಿಷ್ಯತ್ತಿನ ಹಾಗು ಹೋಗುಗಳ ಮೇಲೆ ಇದು ಪ್ರಭಾವ ಬೀರಿದ್ದು ಸಣ್ಣ ಪ್ರಮಾಣದಲ್ಲಂತೂ ಅಲ್ಲ. ಹೀಗೆ (ಮೋಸಗಾರನೆಂದು) ಕರೆಯಲ್ಪಡುವಾಗೆಲ್ಲಾ, ಅವನ ಬಾಲ್ಯಾವಸ್ಥೆಯಲ್ಲಿ ಅವನು ಅನುಭವಿಸಿದ ಮನೋವೇದನೆಯನ್ನು ನೀವು ಊಹಿಸಲು ಸಾಧ್ಯವೇ?
ಆದಿಕಾಂಡ 25:22 ರ ಪ್ರಕಾರ ಯಾಕೋಬನು ತನ್ನ ಚೇಷ್ಟೆಯನ್ನು ತನ್ನ ತಾಯಿಯ ಗರ್ಭದಲ್ಲಿ ಇರುವಾಗಲೇ ಆರಂಭಿಸಿದ, ತನ್ನ ಅವಳಿ ಸೋದರನೊಂದಿಗೆ ಆ ಮಟ್ಟಕ್ಕೆ ಹೋರಾಡುವಾಗ ರೆಬೆಕ್ಕಳಿಗೆ ಎಷ್ಟೋ ವೇದನೆ ಉಂಟಾಯಿತು. ಆಗ ಕರ್ತನು ಆಕೆಗೆ, ಗರ್ಭದೊಳಗೆ ಹೋರಾಡಿಕೊಳ್ಳುತ್ತಾ ಇರುವಂಥದ್ದು ಕೇವಲ ಎರಡು ಕೂಸುಗಳಲ್ಲ, ಬದಲಾಗಿ ಭವಿಷ್ಯದಲ್ಲಿ ಎದ್ದೇಳಲಿರುವ ಎರಡು ಮಹಾ ದೇಶಗಳು, ಅವುಗಳಲ್ಲಿ ಒಂದು ಇನ್ನೊಂದಕ್ಕಿಂತ ಬಲಿಷ್ಠವಾಗಿರುವದು ಎಂದು ತಿಳಿಯಪಡಿಸಿದನು. ಏಸಾವನು, ಮೈತುಂಬಾ ರೋಮವುಳ್ಳವನಾಗಿ ಮೊದಲಾಗಿ ಹುಟ್ಟಿದನು, ಏಸಾವನನ್ನು ಹಿಂಬಾಲಿಸಿಕೊಂಡು ಅವನ ಹಿಮ್ಮಡಿಯನ್ನು ಹಿಡುಕೊಂಡವನಾಗಿ ಯಾಕೋಬನು ಹುಟ್ಟಿದನು. ಏಸಾವನು ತನ್ನ ತಂದೆ ತಾಯಿಯ ಮೊತ್ತ ಕೂದಲನ್ನೆಲ್ಲಾ ತಾನೇ ಪಡಕೊಂಡು ಬಂದವನಂತೆ ಕಂಡನು, ಆದರೆ ಯಾಕೋಬನು ನುಣ್ಣಗಿನ ಮೈಯವನು. ಎಲ್ಲಾ ಮಕ್ಕಳಂತೆ ಇವನು ಹೆತ್ತವರ ಹೆಗಲ ಮೇಲೆ ಆತುಕೊಂಡು ನಿಶ್ಚಿಂತನಾಗಿದ್ದ. ಏಸಾವನಾದರೋ, ತನಗಿದ್ದ ಹಕ್ಕನ್ನೆಲ್ಲಾ ತಾನೇ ಇಟ್ಟುಕೊಳ್ಳಬೇಕೆಂದು ನಿರ್ಧರಿಸಿದ್ದ. ಅವನು ಬೆಳೆದು ದೊಡ್ಡವನಾದಾಗ ತೋಳಮಾನವನಂತೆ ಕ್ರೌರ್ಯ ಪ್ರವೃತ್ತಿಯನ್ನು ತೋರ ತೊಡಗಿದ, ಈ ವೈಪರಿತ್ಯ ಸ್ವಭಾವ ಅವನನ್ನು ಬೇಟೆಗಾರನನ್ನಾಗಿಸಿರಲಿಕ್ಕೂ ಸಾಕು, ಸದಾ ಜನರಿಂದ ದೂರವಿದ್ದು, ವಿಸ್ತಾರವಾದ ನೆಗೇವ್ ನಲ್ಲಿ ಅರಣ್ಯ ವಾಸಿಯಾಗಿದ್ದ, ಅಲ್ಲೊಂದು ಬಾವಿಯಿತ್ತು, ಅದರ ಹೆಸರು - ಲಹೈರೋಯಿ, ಅಂದರೆ ನನ್ನನ್ನು ನೋಡುವಾತನ ಬಾವಿ ಎಂದು, ಎಂತಹ ಸೊಗಸು.
ಏಸಾವನು, ಯಾವಾಗಲೂ ಊಟದ ಮೇಜಿಗೆ ತಾಜಾ ಭೋಜನವನ್ನು ವ್ಯವಸ್ಥೆಗೊಳಿಸುತ್ತಿದ್ದ, ಬೇಟೆಗಾರನಾಗಿದ್ದ ತನ್ನ ಮಗನು ತರುತ್ತಿದ್ದ ಬೇಟೆ ಮಾಂಸದ ರುಚಿಯನ್ನು ಇಸಾಕನು ಬಯಸುತ್ತಿದ್ದ. ತನ್ನ ವೃದ್ಧ ತಂದೆಗೆ ಇವನು ಪ್ರಿಯನಾದ ಮಗನಾಗಿದ್ದ. ಅಣ್ಣನು ದಿನವೆಲ್ಲಾ ಅರಣ್ಯ ಪ್ರದೇಶದಲ್ಲಿ ಅಲೆದಾಡುತ್ತಾ ಬೇಟೆಗೆಂದು ಮನೆಯಿಂದ ಹೊರ ಇರುವಾಗ, ಯಾಕೋಬನು ತನ್ನ ತಾಯಿಯೊಂದಿಗಿದ್ದು ಭವಿಷ್ಯತ್ತಿಗೆ ಬೇಕಾದ ಮೌಲ್ಯಾಧಾರಿತ ಬೋಧನೆಗಳನ್ನು ಕಲಿತುಕೊಂಡನು, ಇದು ನಂತರದ ದಿನಗಳಲ್ಲಿ ಇವನನ್ನು ಯೋಗ್ಯನನ್ನಾಗಿ ದೃಢ ನಿಲ್ಲಿಸಿತು. ಇಬ್ಬರೂ ಸಹೋದರರು ತಮ್ಮದೇ ವಿಧದಲ್ಲಿ ನಿಪುಣರಾಗಿದ್ದರು, ಏಸಾವನು ತನ್ನ ಶಕ್ತಿಯನ್ನು ಬಳಸಿದರೆ, ಯಾಕೋಬನು ತನ್ನ ಯುಕ್ತಿಯನ್ನು ಬಳಸಬಲ್ಲವನಾಗಿದ್ದ, ದೀರ್ಘಾವಧಿಯಲ್ಲಿ, ಬುದ್ಧಿವಂತಿಕೆಯು ಶರೀರದ ಬಲದ ಮೇಲೆ ಮೇಲುಗೈ ಸಾಧಿಸುತ್ತದೆ. ಸದ್ಗುಣವೂ ಜೀವನದ ಅನುಭವವೂ ನಮ್ಮ ಜೀವಿತವನ್ನು ರೂಪಿಸುತ್ತದೆ.
读经计划介绍

ಬಿದ್ದುಹೋದ ದೇವಜನರು ಸಹಾಯಹಸ್ತವನ್ನು ನಿರೀಕ್ಷಿಸುವಾಗ, ನಮ್ಮ ರಕ್ಷಕನು ಕೂಡಲೆ ಸ್ಪಂದಿಸಿ, ಅವರನ್ನು ತಿರಿಗಿ ಎಬ್ಬಿಸಿ ನಿಲ್ಲಿಸುವನು. ಉತ್ತೇಜನದ ಒಂದು ನುಡಿ, ಸ್ಪಂದನೆಯ ಕ್ಷಣ, ಪ್ರೀತಿ ಕನಿಕರ ತೋರುವ ಹೃದಯ ಇವು ಗುಣಪಡಿಸುವ ಮುಲಾಮಿನೊಳಗಿನ ಪ್ರಮುಖ ಅಂಶಗಳಾಗಿವೆ. ನಂಬಿಗಸ್ತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆಯೇ ಹೊರತು ತೀರ್ಪು ಮಾಡಲು ಅಲ್ಲ. ನಾವು ಕರುಣೆಯನ್ನು ಹೊಂದಿದವರಾದ ಕಾರಣ, ನಾವೂ ಕರುಣೆಯುಳ್ಳವರಾಗಿರೋಣ.
More