BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ预览

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

20天中的第12天

ರೋಮ ಸಾಮ್ರಾಜ್ಯದಾದ್ಯಂತಪೌಲನ ಪ್ರಚಾರ ಪ್ರಯಾಣದ ಬಗ್ಗೆ ಲೂಕನು ಹೇಳಲು ಮುಂದುವರೆಸುತ್ತಾನೆ. ಅವನು ಪ್ರಯಾಣಿಸುತ್ತಿದ್ದಂತೆ, ಯೇಸುವಿನ ರಾಜ್ಯದ ಬಗ್ಗೆ ಒಳ್ಳೆಯ ಸುದ್ದಿಯನ್ನು ಧೈರ್ಯದಿಂದ ಹಂಚಿಕೊಳ್ಳುತ್ತಾನೆ ಮತ್ತು ಅನೇಕರು ಪೌಲನ ಸಂದೇಶವನ್ನು ತಮ್ಮ ರೋಮ ಜೀವನ ವಿಧಾನಕ್ಕೆ ಬೆದರಿಕೆಯೆಂದು ನೋಡುತ್ತಾರೆ. ಆದರೆ ಅಂತಿಮವಾಗಿ ಪೌಲನ ಸಂದೇಶವನ್ನು ಒಂದು ಸಂಪೂರ್ಣ ಹೊಸ ಜೀವನ ವಿಧಾನಕ್ಕೆ ಕಾರಣವಾಗುವ ಒಳ್ಳೆಯ ಸುದ್ದಿ ಎಂದು ಗುರುತಿಸುವ ಇತರರು ಇದ್ದಾರೆ. ಉದಾಹರಣೆಗೆ, ಫಿಲಿಪ್ಪಿಯ ಒಬ್ಬ ಸೆರೆಮನೆ ಅಧಿಕಾರಿಯ ಬಗ್ಗೆ ಲೂಕನು ಹೇಳುತ್ತಾನೆ. ಪೌಲ ಮತ್ತು ಸಿಲನು ಅವರ ತಪ್ಪಾದ ಜೈಲುವಾಸದ ಕಥೆಯನ್ನು ನಾವು ಅನುಸರಿಸುತ್ತಿದ್ದಂತ, ಅವರನ್ನು ಭೇಟಿಯಾಗುತ್ತೇವೆ.

ನಗರಾದ್ಯಂತ ಗೊಂದಲಕ್ಕೆ ಕಾರಣವಾದ ಆರೋಪದ ನಂತರ, ಪೌಲ ಮತ್ತು ಅವನ ಸಹೋದ್ಯೋಗಿ ಸಿಲ ಅವರನ್ನು ಅನ್ಯಾಯವಾಗಿ ಹೊಡೆದು ಎಸೆಯಲಾಗುತ್ತದೆ. ಸೆರೆಮನೆಯಲ್ಲಿ ಎಚ್ಚರವಾಗಿ ಮೈಗೆತ್ತಿಗೊಳಗಾಗಿ ರಕ್ತಸಿಕ್ತವಾಗಿ ಮಲಗಿರಬೇಕಾದರೆ, ಅವರು ದೇವರನ್ನು ಪ್ರಾರ್ಥಿಸಿ ಹಾಡಲು ಪ್ರಾರಂಭಿಸುತ್ತಾರೆ. ಕೈದಿಗಳು ತಮ್ಮ ಆರಾಧನಾ ಹಾಡುಗಳನ್ನು ಕೇಳುತ್ತಿರುವಾಗ, ಕೈದಿಗಳ ಸರಪಳಿಗಳು ಒಡೆದು ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುವಷ್ಟು ಹಿಂಸಾತ್ಮಕವಾಗಿ ಸೆರೆಮನೆಯ ಅಡಿಪಾಯವನ್ನು ಒಂದು ದೊಡ್ಡ ಭೂಕಂಪ ಅಲುಗಾಡಿಸುತ್ತದೆ. ಸೆರೆಮನೆ ಅಧಿಕಾರಿ ಇದನ್ನು ನೋಡಿ ಕೈದಿಗಳು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅವನನ್ನು ಗಲ್ಲಿಗೇರಿಸಲಾಗುವುದು ಎಂದು ತಿಳಿಯುತ್ತದೆ, ಆದ್ದರಿಂದ ಜೀವನದ ಹತಾಶೆಯಿಂದ ಅವನು ತನ್ನ ಕತ್ತಿಯನ್ನು ತನ್ನ ವಿರುದ್ಧವೇ ಸೆಳೆಯುತ್ತಾನೆ. ಆದರೆ ಪೌಲನು ಅವನ ಜೀವವನ್ನು ಉಳಿಸುವ ಸರಿಯಾದ ಸಮಯಕ್ಕೆ ಅವನನ್ನು ತಡೆಯುತ್ತಾನೆ. ಈ ಸಮಯದಲ್ಲಿ,ವರಟಾದ ಸೆರೆಮನೆ ಅಧಿಕಾರಿಯು ಕುಗ್ಗಿ ಪೌಲ ಮತ್ತು ಸಿಲನ ಮುಂದೆ ಬೀಳುತ್ತಾನೆ. ತನ್ನ ಜೀವವನ್ನೂ ಶಾಶ್ವತವಾಗಿ ಉಳಿಸಬೇಕಾಗಿದೆ ಎಂದು ಅವನು ಗುರುತಿಸುತ್ತಾನೆ, ಮತ್ತು ಅವನು ಅದರ ದಾರಿ ತಿಳಿಯಲು ಬಯಸುತ್ತಾನೆ. ಪೌಲ ಮತ್ತು ಸಿಲನು ಅವನೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ, ಮತ್ತು ಆ ದಿನವೇ ಸೆರೆಮನೆ ಅಧಿಕಾರಿ ಮತ್ತು ಅವನ ಇಡೀ ಕುಟುಂಬವು ಯೇಸುವನ್ನು ಹಿಂಬಾಲಿಸಲು ಪ್ರಾರಂಭಿಸುತ್ತದೆ.

ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :

• ಸೆರೆಮನೆಯ ಬಾಗಿಲುಗಳು ತೆರೆಯಲಾಯಿತು.ಪೌಲ ಮತ್ತು ಸಿಲನು ತಪ್ಪಿಸಿಕೊಂಡು ಅದರ ಪರಿಣಾಮಗಳನ್ನು ಸೆರೆಮನೆ ಅಧಿಕಾರಿಯ ಮೇಲೆ ಬೀಳಿಸಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಅವರನ್ನು ಅಲ್ಲಿಗೆ ಎಸೆದ ಅದೇ ವ್ಯಕ್ತಿಯನ್ನು ಉಳಿಸಲು ಅವರು ತಮ್ಮ ಸೆರೆ ಕೊಠಡಿಯಲ್ಲೇ ಉಳಿದರು. ಅವರ ನಡತೆ ಮತ್ತು ಯೇಸುವಿನ ರಾಜ್ಯದ ಬಗ್ಗೆ ಬೋಧಿಸುವ ಅವರ ಧ್ಯೇಯದ ನಿಜವಾದ ಉದ್ದೇಶದ ಬಗ್ಗೆ ಅದು ನಿಮಗೆ ಏನು ಹೇಳುತ್ತದೆ?

• ಸೆರೆಮನೆ ಅಧಿಕಾರಿಯ ಪ್ರತಿ ಪೌಲ ಮತ್ತು ಸಿಲನ ಕೃಪಾಮಯ ಪ್ರತಿಕ್ರಿಯೆಯು ಅವರ ಜೀವನವನ್ನು ಆಮೂಲಾಗ್ರವಾಗಿ ಹೇಗೆ
ಬದಲಾಯಿಸಿತು ಎಂಬುದರ ಕುರಿತು ಪ್ರತಿಫಲಿಸಿ (16: 28-34 ನೋಡಿ). ಇಂದು ನಿಮ್ಮ ಕೃಪಾಮಯ ಪ್ರತಿಕ್ರಿಯೆ ಅಗತ್ಯ ಯಾರಿಗಿದೆ?

• ನೀವು ಜೀವನದ ಹತಾಶರಾಗಿದ್ದೀರಾ? ನಿಮಗೆ ಹಾನಿ ಉಂಟುಮಾಡಬೇಡಿ; ಯೇಸು ನಿಮಗಾಗಿ ಇಲ್ಲಿದ್ದಾರೆ. ಅವರು ನಿಮ್ಮನ್ನು ಪ್ರೀತಿಸುತ್ತಾರೆ. ಇಂದು ಅವರನ್ನು ನಂಬಿರಿ. ನೀವು ಹೇಗೆ ಭಾವಿಸುತ್ತಿದ್ದೀರಿ ಎಂದು ಅವರಿಗೆ ತಿಳಿಸಿ, ನಿಮಗೆ ಬೇಕಾದುದನ್ನು ಕೇಳಿ, ಮತ್ತು ನಿಮ್ಮನ್ನು ಒಂದು ಹೊಸ ಜೀವನ ವಿಧಾನಕ್ಕೆ ಕರೆದೊಯ್ಯಲು ಅವರನ್ನು ಆಹ್ವಾನಿಸಿ. ಅವರು ನಿಮ್ಮ ಮಾತನ್ನು ಆಲಿಸುತ್ತಾರೆ.

读经计划介绍

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್‌ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.

More