BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ预览

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

20天中的第11天

ಅಪೊಸ್ತಲರ ಕೃತ್ಯದ ಮುಂದಿನ ಭಾಗದಲ್ಲಿ ಯೇಸುವಿನ ಚಳವಳಿಯ ಭಾಗವಾಗಲು ಯೆಹೂದ್ಯೇತರ ಕ್ರೈಸ್ತರು ಯಹೂದಿಗಳಾಗಬೇಕು (ಸುನ್ನತಿ, ಸಬ್ಬತ್ ಮತ್ತು ಕೋಷರ್ ಆಹಾರ ಕಾನೂನುಗಳನ್ನು ಅಭ್ಯಾಸ ಮಾಡುವ ಮೂಲಕ) ಎಂದು ಹೇಳಿಕೊಳ್ಳುವ ಕೆಲವು ಯಹೂದಿ ಕ್ರೈಸ್ತರಿದ್ದಾರೆ ಎಂದು ಪೌಲನು ಕಂಡುಹಿಡಿದನು. ಆದರೆ ಪೌಲನು ಮತ್ತು ಬಾರ್ನಬರು ಆಮೂಲಾಗ್ರವಾಗಿ ಒಪ್ಪುವುದಿಲ್ಲ, ಮತ್ತು ಅವರು ಚರ್ಚೆಯನ್ನು ಪರಿಹರಿಸಲು ಯೆರುಸಲೆಮ್‌ನ ನಾಯಕತ್ವ ಮಂಡಳಿಗೆ ಕೊಂಡೊಯ್ಯುತ್ತಾರೆ. ಅಲ್ಲಿರುವಾಗ, ಪೇತ್ರ, ಪಾಲ್ ಮತ್ತು ಯಾಕೋಬನು (ಯೇಸುವಿನ ಸಹೋದರ) ಎಲ್ಲಾ ರಾಷ್ಟ್ರಗಳನ್ನು ಸೇರಿಸುವುದೇ ಎಂದೂ ದೇವರ ಯೋಜನೆ ಎಂದು ತೋರಿಸಾಲು ಧರ್ಮಗ್ರಂಥಗಳನ್ನು ಮತ್ತು ಅವರ ಅನುಭವಗಳನ್ನು ಸೂಚಿಸುತ್ತಾರೆ. ಸಭೆಯು ನಂತರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಯಹೂದಿ-ಅಲ್ಲದ ಕ್ರೈಸ್ತರು ಅನ್ಯ ದೇವಾಲಯದ ತ್ಯಾಗಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು, ಆದರೆ ಅವರು ಜನಾಂಗೀಯವಾಗಿ ಯಹೂದಿ ಗುರುತನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ ಅಥವಾ ಥೋರಾದ ಆಚರಣೆಯ ಕಾನೂನುಗಳು ಮತ್ತು ಪದ್ಧತಿಗಳನ್ನು ಪಾಲಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಯೇಸು ಯಹೂದಿ ಮೆಸ್ಸಿಯಾ, ಆದರೆ ಅವರು ಎಲ್ಲಾ ರಾಷ್ಟ್ರಗಳ ಪುನರುತ್ಥಾನಗೊಂಡ ರಾಜ. ದೇವರ ರಾಜ್ಯದಲ್ಲಿ ಸದಸ್ಯತ್ವವು ಜನಾಂಗೀಯತೆ ಅಥವಾ ಕಾನೂನನ್ನು ಆಧರಿಸಿದ್ದಲ್ಲದೆ ಬದಲಿಗೆ ಯೇಸುವನ್ನು ನಂಬುವುದು ಮತ್ತು ಪಾಲಿಸುವುದರ ಮೇಲೆ ಅವಂಲಂಬಿತ.

ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :

• ಇಂದಿನ ಅಧ್ಯಾಯವನ್ನು ನೀವು ಓದುವಾಗ ಯಾವ ಆಲೋಚನೆಗಳು, ಪ್ರಶ್ನೆಗಳು ಅಥವಾ ಒಳನೋಟಗಳು ಬಂದವು?

• ಪೌಲ ಮತ್ತು ಬಾರ್ನಬನು ಯೂದಾಯದ (15: 1-2) ಶಿಕ್ಷಕರೊಂದಿಗಿನ ಸಂಘರ್ಷವನ್ನು ತಪ್ಪಿಸಿದ್ದರೆ ಏನಾಗಬಹುದೆಂದು ನೀವು ಭಾವಿಸುತ್ತೀರಿ? ಅವರು ಏಕೆ ಮಾತನಾಡುತ್ತಾರೆ ಮತ್ತು ಅಂತಹ ಬಲವಾದ ಚರ್ಚೆಯನ್ನು ಮುಂದುವರೆಸಿದರೆಂದು ನೀವು ಭಾವಿಸುತ್ತೀರಿ? ಅವರ ಆತ್ಮದ ನೇತೃತ್ವದ ಒಮ್ಮತದ ತಕ್ಷಣದ ಫಲಿತಾಂಶ ಏನು (15:31 ನೋಡಿ )? ನಿಮ್ಮ ಸಮುದಾಯದ ಯಾರಾದರೂ ಅನ್ಯಾಯವಾಗಿ ಹೊರಗಿಡಲ್ಪಟ್ಟಿದ್ದಾರೆಂದು ಭಾವಿಸುತ್ತಾರೇ?ಅವರ ಪರವಾಗಿ ಆರೋಗ್ಯಕರ ಸಂಘರ್ಷವನ್ನು ನೀವು ಹೇಗೆ ಮುಂದುವರಿಸಬಹುದು?

• ನಿಮ್ಮ ಪ್ರತಿಬಿಂಬಗಳು ಪ್ರಾರ್ಥನೆಯನ್ನು ಕೇಳಲಿ. ಯೇಸುವಿನಲ್ಲಿ ನಂಬಿಕೆಯಿಡುವ ಎಲ್ಲರನ್ನೂ ಸೇರಿಸಿದ್ದಕ್ಕಾಗಿ ನಿಮ್ಮ ಕೃತಜ್ಞತೆಯನ್ನು ತಿಳಿಸಿ. ನಿಮ್ಮ ಸಮುದಾಯದಲ್ಲಿ ಜನರನ್ನು ಹೊರಗಿಡುವ ಅಥವಾ ಹೊರೆಯಾಗಿಸುವ ಅಡೆತಡೆಗಳು ಎಲ್ಲಿವೆ ಎಂದು ನಿಮಗೆ ತೋರಿಸಲು ಅವರನ್ನು ಕೇಳಿ. ನಿಜವಾದದ್ದು ಮತ್ತು ಪ್ರೀತಿಯಂದ ಮಾತನಾಡಲು ಮತ್ತು ವಕಾಲತ್ತು ಮಾಡಲು ಧೈರ್ಯಕ್ಕಾಗಿ ಪ್ರಾರ್ಥಿಸಿ.

读经计划介绍

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್‌ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.

More