ಯೇಸುವಿನೊಂದಿಗೆ ಮುಖಾಮುಖಿ预览

ಯೇಸುವಿನೊಂದಿಗೆ ಮುಖಾಮುಖಿ

40天中的第39天

ಯೇಸು ಪಿಲಾತನ ಮುಂದೆ ನಿಂತಿರುವಾಗ, ಅವನು ಆತನ ಶಿಕ್ಷೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದನು. ಯೇಸುವಿಗೆ ಅಡ್ಡ ಪ್ರಶ್ನೆ ಮಾಡಿ ಅವನು ಅರಸನೋ ಎಂದು ಕೇಳಿದನು ಮತ್ತು ಯೇಸು ತಾನು ಸತ್ಯಕ್ಕೆ ಸಾಕ್ಷಿಯಾಗಲು ಭೂಮಿಗೆ ಬಂದಿದ್ದೇನೆ ಮತ್ತು ಸತ್ಯದ ಕಡೆಯಲ್ಲಿರುವ ಪ್ರತಿಯೊಬ್ಬರೂ ಆತನ ಮಾತನ್ನು ಕೇಳುತ್ತಾರೆ ಎಂದು ಹೇಳುವ ಮೂಲಕ ಉತ್ತರಿಸಿದನು. ಪಿಲಾತನು ಮರುಪ್ರಶ್ನೆಯಲ್ಲಿ "ಸತ್ಯ ಎಂದರೇನು?" ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದೇ ಪ್ರಶ್ನೆಯನ್ನು ಕೇಳಿದರೆ ನಾವು ಪಡೆಯುವ ಉತ್ತರಗಳ ವೈವಿಧ್ಯತೆಯನ್ನು ಊಹಿಸಿಕೊಳ್ಳಿರಿ. ನಾವು ಪರಿಪೂರ್ಣತೆಯಿಲ್ಲದ ಲೋಕದಲ್ಲಿ ವಾಸಿಸುತ್ತಿದ್ದೇವೆ. ಬೂದು ಬಣ್ಣವು ಸುರಕ್ಷಿತವೆಂದು ಭಾವಿಸುವುದರಿಂದ ಯಾವುದೂ ಕಪ್ಪು ಅಥವಾ ಬಿಳಿಯಾಗಿಲ್ಲ. ಬದಲಾಗುತ್ತಿರುವ ವಾಸ್ತವಗಳೊಂದಿಗೆ ಮುಸುಕಾದ ಸಂಸ್ಕೃತಿಯ ಕಾರಣದಿಂದಾಗಿ ಸತ್ಯವು ದುರ್ಬಲಗೊಂಡಿದೆ ಮತ್ತು ಮೊಬ್ಬಾಗಿದೆ. ಆದರೂ ಸತ್ಯವು ಒಬ್ಬ ವ್ಯಕ್ತಿಯಾಗಿದ್ದಾನೆ. ಯೇಸುವೇ ಮಾರ್ಗವೂ, ಸತ್ಯವೂ ಮತ್ತು ಜೀವವೂ ಆಗಿದ್ದಾನೆ. ಯೇಸುವನ್ನು ವೈಯಕ್ತಿಕವಾಗಿ ತಿಳಿದುಕೊಂಡ ಮೇಲೆ, ಆತನು ನಮ್ಮ ಜೀವನದ ವಿವಿಧ ಭಾಗಗಳನ್ನು ಪರಿವರ್ತಿಸಲು ಪ್ರಾರಂಭಿಸುತ್ತಾನೆ ಮತ್ತು ಅದನ್ನು ಆತನೊಂದಿಗೆ ಐಕ್ಯತೆಗೆ ತರುತ್ತಾನೆ. ಈ ಐಕ್ಯತೆಯು ನಿಕಟ ಮತ್ತು ಸಾವಯವವಾಗಿದ್ದು, ನಾವು ಯೇಸುವಿನಂತೆ ಯೋಚಿಸಲು ಪ್ರಾರಂಭಿಸುತ್ತೇವೆ, ನಾವು ಆತನಂತೆ ವರ್ತಿಸಲು ಪ್ರಾರಂಭಿಸುತ್ತೇವೆ ಮತ್ತು ನಾವು ಆತನಂತೆ ಇತರರನ್ನು ನೋಡಲು ಪ್ರಾರಂಭಿಸುತ್ತೇವೆ. ನಾವು ಎಂದಿಗೂ ಒಂದೇ ಅಲ್ಲ- ಏಕೆಂದರೆ ಸತ್ಯವು ನಮ್ಮನ್ನು ನಿಜವಾಗಿಯೂ ಬದುಕಲು ಮುಕ್ತಗೊಳಿಸಿದೆ!

ದೇವರು ನಿಮ್ಮನ್ನು ಇಟ್ಟಿರುವ ಸ್ಥಳದಲ್ಲಿಯೇ ಸಂಪೂರ್ಣತೆ, ಸಮಗ್ರತೆ ಮತ್ತು ಪ್ರಭಾವದ ಜೀವನವನ್ನು ನಡೆಸಬೇಕಾಗಿದೆ.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ದೇವರ ಮುಂದೆ ಪ್ರಾಮಾಣಿಕನಾಗಿದ್ದೇನೆಯೇ?
ಆತನ ಸತ್ಯದ ವಾಕ್ಯವು ನನ್ನ ಜೀವಿತವನ್ನು ರೂಪಿಸುತ್ತಿದೆಯೇ ಅಥವಾ ಸಂಸ್ಕೃತಿ ನನ್ನ ಜೀವಿತವನ್ನು ರೂಪಿಸುತ್ತಿದೆಯೇ?

读经计划介绍

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More