ಯೇಸುವಿನೊಂದಿಗೆ ಮುಖಾಮುಖಿ预览

ಯೇಸುವಿನೊಂದಿಗೆ ಮುಖಾಮುಖಿ

40天中的第36天

ಪರಿಪೂರ್ಣತೆಯಿಂದ ದೂರವಿರುವ ಜನರ ಗುಂಪಿನಿಂದ ಬಹಿರಂಗವಾಗಿ ತನ್ನ ತೀರ್ಪು ಪ್ರಕಟಿಸಲು ಈ ಮಹಿಳೆಯನ್ನು ಯೇಸುವಿನ ಬಳಿಗೆ ಎಳೆದುಕೊಂಡು ಬರುವುದು ವಿಚಿತ್ರವಾಗಿದೆ. ಯೇಸು ಕೆಳಗೆ ಬಾಗಿ ನೆಲದ ಮೇಲೆ ಏನನ್ನಾದರೂ ಬರೆಯುವ ಮೂಲಕ ತನ್ನ ಗಮನವನ್ನು ತೆಗೆದುಹಾಕಿದಾಗ ಮಹಿಳೆ ಅವಮಾನ ಮತ್ತು ಅಪರಾಧದಿಂದ ನಡುಗುತ್ತಿದ್ದಿರಬಹದು. ಗುಂಪಿನಲ್ಲಿರುವ ಪಾಪವಿಲ್ಲದ ಜನರು ಆಕೆಯ ಮೇಲೆ ಕಲ್ಲೆಸೆಯಲು ಪ್ರಾರಂಭಿಸಬೇಕೆಂದು ಆತನು ಅವರಿಗೆ ಹೇಳಿದನು. ಅವರು ಒಬ್ಬೊಬ್ಬರಾಗಿ ಆ ಹೆಂಗಸನ್ನು ಬಿಟ್ಟು ಅಲ್ಲಿಂದ ಹೊರಟುಹೋದರು. ಯೇಸು ಆಕೆಯನ್ನು ಬಿಡುಗಡೆಗೊಳಿಸುತ್ತಾನೆ ಆದರೆ ಆತನು ಅದನ್ನು ಯಾವುದೇ ಷರತ್ತುಗಳಿಲ್ಲದೆ ಮಾಡುವುದಿಲ್ಲ - "ಹೋಗಿ ನಿನ್ನ ಪಾಪದ ಜೀವನವನ್ನು ಬಿಟ್ಟುಬಿಡು ಅಂದನು."

ಯೇಸು ಕೃಪೆ ಮತ್ತು ಸತ್ಯಕ್ಕೆ ಸಾರಾಂಶವಾಗಿದ್ದನು. ಆತನು ಯಾರನ್ನೂ ಖಂಡಿಸಲಿಲ್ಲ ಆದರೆ ಅವರನ್ನು ಮನವರಿಕೆಯಿಂದ ದೂರವಿಡಲಿಲ್ಲ. ಪವಿತ್ರಾತ್ಮನು ಇಂದು ಅದೇ ಕೆಲಸವನ್ನು ಮಾಡುತ್ತಾನೆ. ಪವಿತ್ರಾತ್ಮವು ಆ ಪಾಪಪೂರ್ಣ ಪ್ರವೃತ್ತಿಗಳ ಬಗ್ಗೆ ನಮ್ಮನ್ನು ಎಚ್ಚರಿಸುವ ಮೂಲಕ ಮತ್ತು ನಿಜವಾದ ಪಶ್ಚಾತ್ತಾಪಕ್ಕೆ ನಮ್ಮನ್ನು ತರುವ ಮೂಲಕ ಕಪಟ ಮತ್ತು ತೀರ್ಪುಗಾರರಾಗದಂತೆ ನಮ್ಮನ್ನು ತಡೆಯುವನು.

ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ಇತರರನ್ನು ನಿರ್ಣಯಿಸಿದ್ದೇನೆಯೇ?
ಇತರರಿಗೆ ತೀರ್ಪುಮಾಡದಿರಲು ಮತ್ತು ನನ್ನ ಸ್ವಂತ ಜೀವನವನ್ನು ಹತ್ತಿರದಿಂದ ನೋಡಲು ನಾನು ಸಮರ್ಪಿಸಿಕೊಳ್ಳಬಹುದೇ?

读经计划介绍

ಯೇಸುವಿನೊಂದಿಗೆ ಮುಖಾಮುಖಿ

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.

More