ಯೇಸುವಿನೊಂದಿಗೆ ಮುಖಾಮುಖಿ预览

ಯೆರೆಮೀಯನಿಗೆ "ಅಳುವ ಪ್ರವಾದಿ" ಎಂಬ ಅಡ್ಡಹೆಸರನ್ನು ಕೊಡಲಾಗಿದೆ. ಇದು ಶ್ರೇಷ್ಠ ಶೀರ್ಷಿಕೆಯಲ್ಲ ಆದರೆ ಇದು ಕಟುವಾದದ್ದು ಏಕೆಂದರೆ ಅವನು ತನ್ನ ಕರೆಗೆ ಹೆಚ್ಚು ಬದ್ಧನಾಗಿದ್ದನು ಮತ್ತು ಅದನ್ನು ಅತ್ಯಂತ ಕಾಳಜಿ ಮತ್ತು ದಯೆಯಿಂದ ಸಾಗಿಸಿದನು. ಅವನು ತನ್ನ ಜನರಿಗಾಗಿ, ಅವರ ಪಾಪಗಳಿಗಾಗಿ ಮತ್ತು ದೇವರಿಂದ ದೂರ ಹೋಗಿದಕ್ಕಾಗಿ ದುಃಖಿಸಿದನು. ಆತನು ಅವನ ಬಾಯಿಯಲ್ಲಿ ಹಾಕುವ ಮಾತುಗಳನ್ನು ಹೇಳಲು ದೇವರಿಂದ ಅವನಿಗೆ ಸೂಚನೆ ಕೊಡಲಾಯಿತು ಮತ್ತು ಅವನು ಅದನ್ನು ಮನಮುರಿದ ಮತ್ತು ಹದಗೆಟ್ಟ ಹೃದಯದಿಂದ ಶ್ರದ್ಧೆಯಿಂದ ಮಾಡಿದನು. ಯೆರೆಮೀಯನು ಪ್ರಲಾಪಗಳು ಎಂಬ ಕವಿತೆಗಳ ಪುಸ್ತಕವನ್ನು ಬರೆದನು, ಅದು ಒಬ್ಬನೇ ನಿಜವಾದ ದೇವರಿಗೆ ತನ್ನ ದುಃಖ ಮತ್ತು ಮನಮುರಿದ ಹೃದಯಕ್ಕೆ ಗೌರವವಾಗಿದೆ.
ದೇವರನ್ನು ಪ್ರೀತಿಸುವ ಮತ್ತು ಆತನಿಗಾಗಿ ಜೀವಿಸುವವರಾಗಿ ನಾವು ದುಃಖಿಸಲು ಕಲಿಯುವುದು ಬಹಳ ಪ್ರಾಮುಖ್ಯ. ಪ್ರಲಾಪವು ದೂರು ನೀಡುವುದಲ್ಲ ಆದರೆ ನಿಮ್ಮ ಸೃಷ್ಟಿಕರ್ತನ ಮುಂದೆ ಬಹಿರಂಗವಾಗಿ ಮತ್ತು ಪ್ರಾಮಾಣಿಕವಾಗಿ ದುಃಖಿಸಲು ನಿಮಗೆ ಅನುಮತಿ ನೀಡುತ್ತದೆ. ಇದು ದೇವರ ಸಮ್ಮುಖದಲ್ಲಿ ನಿಮ್ಮನ್ನು ಬರಿದುಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದ ಆತನು ನಿಮಗಾಗಿ ಬಯಸಿದ ಎಲ್ಲದಕ್ಕೂ ನಿಮ್ಮನ್ನು ಮರುರೂಪಿಸಬಹುದು.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನ್ನ ಜೀವನದಲ್ಲಿ ನಾನು ನಿಭಾಯಿಸದ ದುಃಖವಿದೆಯೇ?
ನನ್ನ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಮೀರಿ ನನಗೆ ಹೊರೆಯಾಗುತ್ತಿರುವ ವಿಷಯಗಳಿವೆಯೇ?
ನಾನು ದೇವರೊಂದಿಗೆ ನನ್ನ ಕಾವಲುಗಾರನನ್ನು ಬಿಟ್ಟುಬಿಡಬಹುದೇ ಮತ್ತು ಆತನ ಮುಂದೆ ದುಃಖಿಸಬಹುದೇ?
读经计划介绍

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More