ಯೇಸುವಿನೊಂದಿಗೆ ಮುಖಾಮುಖಿ预览

ಯೇಸು ಮತ್ತು ಆತನ ದೂರದ ಸೋದರಸಂಬಂಧಿ ಯೋಹಾನನು ಸೇವೆಯಲ್ಲಿ ಸಮಕಾಲೀನರಾಗಿದ್ದರು ಮತ್ತು ಅವರಲ್ಲಿ ಒಬ್ಬರು ಇಬ್ಬರಿಗಿಂತ ಹೆಚ್ಚಿನ ಸೇವೆಯನ್ನು ಹೊಂದಿದ್ದರು. ಯೇಸು ಪರಲೋಕದವನೆಂದು ಮತ್ತು ಆತನು ಪರಲೋಕದ ತಂದೆಯ ಮಾತುಗಳನ್ನು ಹೇಳಿದನೆಂದು ಯೋಹಾನನು ಗುರುತಿಸಿದನು. ಯೋಹಾನನು ಇಹಲೋಕದವನಾಗಿದ್ದನು ಮತ್ತು ತನಗೆ ವಹಿಸಿಕೊಟ್ಟ ಸೇವೆಯನ್ನು ಅವನು ಪೂರ್ಣಗೊಳಿಸಿದನು, ಆ ಸೇವೆಯು ಯೇಸುವಿಗೆ ಮುಂಚೂಣಿಯಲ್ಲಿರಬೇಕಾಗಿತ್ತು ಮತ್ತು ಆತನನ್ನು ಅಂಗೀಕರಿಸಲು ಜನರ ಹೃದಯವನ್ನು ಸಿದ್ಧಪಡಿಸುವ ಕೆಲಸವಾಗಿತ್ತು. ಅವನ ಸೇವೆಯು ಪಶ್ಚಾತ್ತಾಪಪಟ್ಟ ಮತ್ತು ದೇವರ ರಾಜ್ಯವನ್ನು ಅನುಭವಿಸಲು ಬಯಸಿದ ಜನರನ್ನು ದೀಕ್ಷಾಸ್ನಾನ ಮಾಡಿಸುವುದಾಗಿತ್ತು.
ಕ್ರಿಸ್ತನ ಪ್ರತಿಯೊಬ್ಬ ಹಿಂಬಾಲಕರಿಗೆ ಬಹಳ ಮುಖ್ಯವಾದಾಗ (ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ನಾವು ಆರಿಸಿಕೊಂಡರೆ ನಾವು ಅದರಿಂದ ಹೊರಗುಳಿಯುವುದಿಲ್ಲ), ಪಶ್ಚಾತ್ತಾಪ ಮತ್ತು ನೂತಗೊಳ್ಳುವ ಫಲವನ್ನು ಹೊಂದಿರುವ ಜೀವನವನ್ನು ನಡೆಸುವುದು ಇನ್ನೂ ಮುಖ್ಯವಾದದ್ದು. ಪಶ್ಚಾತ್ತಾಪವು ನಾವು ಜೀವಂತವಾಗಿರುವವರೆಗೂ ನಿರಂತರವಾಗಿರಬೇಕು ಏಕೆಂದರೆ ನಾವು ಎಂದಿಗೂ ಪರಿಪೂರ್ಣರಾಗುವುದಿಲ್ಲ. ಯೇಸುವಿನಲ್ಲಿ ನಾವು ಕ್ಷಮಿಸುವುದನ್ನು ಕಂಡುಕೊಳ್ಳಬಹುದು ಮತ್ತು ಆತನ ಸಬಲೀಕರಣದ ಮೂಲಕ ಮುಂದುವರಿಯಲು ಪುನಃಸ್ಥಾಪಿಸಬಹುದು. ನೂತನಗೊಳ್ಳವುದು ದಿನನಿತ್ಯದ ವಿಷಯವಾಗಿದೆ, ಅಲ್ಲಿ ನಾವು ನಮ್ಮ ಜೀವನವನ್ನು ದೇವರಿಗೆ ಪುನಃ ಒಪ್ಪಿಸುತ್ತೇವೆ, ಆತನು ಶುದ್ಧೀಕರಿಸಲು, ತುಂಬಲು ಮತ್ತು ಆತನು ಸೂಕ್ತವೆಂದು ನೋಡುವಂತೆ ಬಳಸುತ್ತೇವೆ.
ನಾವು ಪಶ್ಚಾತ್ತಾಪಪಡಲು ಮತ್ತು ನೂತನಗೊಳ್ಳಲು ನಮ್ಮನ್ನು ತೊಡಗಿಸಿಕೊಂಡಾಗ ನಾವು ಕ್ರಮೇಣ ದೇವರ ರಾಜ್ಯದಲ್ಲಿ ನಮ್ಮ ಪಾತ್ರವನ್ನು ಕಂಡುಕೊಳ್ಳುತ್ತೇವೆ ಮತ್ತು ಸಾಧ್ಯವಾದಷ್ಟು ಪೂರ್ಣವಾಗಿ ಬದುಕಬಹುದು!
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ಪಶ್ಚಾತ್ತಾಪ ಪಡಬೇಕಾಗಿರುವ ಸಂಗತಿ ಯಾವುದಾದರೂ ಇದೆಯೇ?
ನೂತನಗೊಳ್ಳುವ ಪ್ರಕ್ರಿಯೆಗೆ ನನ್ನನ್ನು ಸಂಪೂರ್ಣವಾಗಿ ಒಪ್ಪಿಸುವುದನ್ನು ತಡೆಯುವುದು ಯಾವುದು?
读经计划介绍

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More