BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ预览

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

40天中的第7天

ಯೇಸುವಿನ ತಲೆಕೆಳಗಾದ ಸಾಮ್ರಾಜ್ಯದ ಪ್ರಣಾಳಿಕೆಯನ್ನು ಓದಿದ ನಂತರ, “ಮತ್ತೊಂದು - ಕೆನ್ನೆ- ತಿರುಗಿಸು ಎಂದ ರಾಜ” ಎಷ್ಟು ಶಕ್ತಿಶಾಲಿ ಎಂದು ನಾವು ಪ್ರಶ್ನಿಸಲು ಪ್ರಾರಂಭಿಸಬಹುದು. ಆದರೆ ಯೇಸುವಿನ ಅನುಗ್ರಹವು ದೌರ್ಬಲ್ಯವಲ್ಲ. ಓದಲು ಮುಂದುವರಿಸಿದಾಗ, ಸತ್ತವರನ್ನೂ ಸಹ ಎಬ್ಬಿಸುವ ಶಕ್ತಿ ಯೇಸು ರಾಜನಿಗೆ ಇದೆ ಎಂದು ನಾವು ನೋಡುತ್ತೇವೆ. 


ಈ ವಿಸ್ಮಯ ಅದ್ಭುತಗಳನ್ನು ಯೇಸು ಮಾಡುತ್ತಿರುವುದನ್ನು ನೋಡುವ ಮತ್ತು ಕೇಳುವ ಅನೇಕ ಜನರು ದೇವರ ಶಕ್ತಿಯಿಂದ ಅವರು ವರ್ತಿಸುತ್ತಾರೆಂದು ತಿಳಿದಿದ್ದಾರೆ. ಆದರೆ ಜಾನ್ ಬ್ಯಾಪ್ಟಿಸ್ಟ್ ಅವರು ಜೈಲಿನಲ್ಲಿದ್ದಾಗ ನಡೆಯುತ್ತಿರುವ ಎಲ್ಲವನ್ನು ನೋಡಲು ಮತ್ತು ಕೇಳಲು ಸಾಧ್ಯವಿಲ್ಲ. ಯೇಸು ನಿಜವಾಗಿಯೂ ಯೋಹಾನನು ಭಾವಿಸಿದವಾರಾ ಎಂದು ಅವನು ಆಶ್ಚರ್ಯ ಪಡುತ್ತಾನೆ. “ಬಡವರಿಗೆ ಸುವಾರ್ತೆ ಇದೆ” ಎಂದು ಪ್ರವಾದಿ ಯೆಶಾಯನನ್ನು ಮತ್ತೊಮ್ಮೆ ಉಲ್ಲೇಖಿಸುವ ಮೂಲಕ ಯೇಸು ಯೋಹಾನನಿಗೆ ಸಂದೇಶ ಕಳುಹಿಸುತ್ತಾರೆ. ಈ ಪದವು ಮುಂಬರುವ ಮೆಸ್ಸೀಯನನ್ನು ಸೂಚಿಸುತ್ತದೆ ಎಂದು ಯೋಹಾನನಿಗೆ ತಿಳಿದಿದೆ. ಆದರೆ ಯೆಶಾಯನ ಸುರುಳಿಯ ಮುಂದಿನ ವಚನಗಳು ಮೆಸ್ಸೀಯನು “ಕೈದಿಗಳಿಗೆ ಸ್ವಾತಂತ್ರ್ಯ”ಘೋಷಿಸುತ್ತಾನೆ ಎಂದು ಪ್ರವಾದಿಸುತ್ತದೆ ಎಂಬುದು ಅವನಿಗೆ ತಿಳಿದಿದೆ, ಹಾಗಾದರೆ ಯೋಹಾನನು ಇನ್ನೂ ಸೆರೆಯಲ್ಲಿರುವುದು ಏಕೆ? ಯೇಸು ಅವನನ್ನು ಮರೆತುಬಿಟ್ಟರಾ? ಯೇಸು ಯೋಹಾನನ ಸಂಕಟವನ್ನು ನೋಡಿ ""ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು"" ಎಂಬ ಭರವಸೆಯನ್ನು ಸೇರಿಸುತ್ತಾರೆ. 


ಆದರೆ ಅನೇಕರು ಈ ಆಶೀರ್ವಾದವನ್ನು ನಿರಾಕರಿಸಿ ಯೇಸುವಿನ ಮೇಲೆ ಸಂಶಯಪಡುತ್ತಾರೆ, ವಿಶೇಷವಾಗಿ ಧಾರ್ಮಿಕ ಮುಖಂಡರು. ತಮ್ಮ ಜೀವನವನ್ನು ಅವ್ಯವಸ್ತಮಾಡಿಕೊಂಡಿರುವ ಹೊರಗಿನವರ ಪ್ರತಿ ಯೇಸುವಿನ ಉದಾರತೆಯನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಗೊಂದಲಗಳನ್ನು ತನ್ನ ಬಳಿಗೆ ಕರೆತಂದಾಗ ಏನು ಮಾಡಬೇಕೆಂದು ಯೇಸುವಿಗೆ ತಿಳಿದಿದೆ. ಉದಾಹರಣೆಗೆ, ಔತಣಕೂಟದಲ್ಲಿನ ಮಹಿಳೆ ತನ್ನ ಕೃತಜ್ಞತೆಯ ಕಣ್ಣೀರಿನಿಂದ ಯೇಸುವಿನ ಪಾದಗಳನ್ನು ತೊಳೆಯಲು ತನ್ನನ್ನು ತಗ್ಗಿಸಿಕೊಂಡಾಗ, ಯೇಸು ಆಕೆಯ ಇಡೀ ಜೀವನವನ್ನು ಅವರ ಕ್ಷಮೆಯಿಂದ ತೊಳೆಯುತ್ತಾರೆ ಎಂದು ಲೂಕನ ದಾಖಲಿಸುವನು. ಮತ್ತು ನಾವು ಅವರ ಬಳಿಗೆ ಬಂದಾಗ ಅವರು ನಮಗಾಗಿ ಅದೇ ರೀತಿ ಮಾಡಲು ಸಿದ್ಧರಾಗಿದ್ದಾರೆ. 


ಇದು ತಲೆಕೆಳಗಾದ ರಾಜ್ಯ - ಅತಿ ದೊಡ್ಡ ಹಿಮ್ಮುಖ. ನಮ್ಮ ತಪ್ಪುಗಳಿಂದ ರಾಜನು ತಲುಪಲಾಗದೆ ಆಗುತ್ತಾನೆ ಎಂದು ನಾವು ನಿರೀಕ್ಷಿಸಬಹುದು, ಆದರೆ ಯೇಸುವು ಇತರ ರಾಜರಂತೆ ಅಲ್ಲ. ಅವನು ಕೃಪೆಯುಳ್ಳವನು ಮತ್ತು ತಲುಪಬಲ್ಲವನು - ಸಾವು ಅಥವಾ ಸೆರೆಮನೆಯ ಗೋಡೆಗಳು ಸಹ ತನ್ನ ಜನರನ್ನು ತನ್ನ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. 


读经计划介绍

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.

More