BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ预览

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

40天中的第6天

ಯೇಸು ತನ್ನ ಎಲ್ಲಾ ಶಿಷ್ಯರಲ್ಲಿ ಹನ್ನೆರಡು ಜನರನ್ನು ನಾಯಕರನ್ನಾಗಿ ನೇಮಿಸುತ್ತಾನೆ, ಮತ್ತು ಆ ಹನ್ನೆರಡು ಜನರನ್ನು ಹೇಗೆಂದ ಹಾಗೇ ನೇಮಿಸಲಿಲ್ಲ. ಹೊಸದನ್ನು ರೂಪಿಸುವ ಮೂಲಕ ಇಸ್ರಾಯೇಲಿನ ಹನ್ನೆರಡು ಬುಡಕಟ್ಟು ಜನಾಂಗವನ್ನು ಉದ್ಧರಿಸುತ್ತಿದ್ದೇನೆ ಎಂದು ತೋರಿಸಲು ಯೇಸು ಉದ್ದೇಶಪೂರ್ವಕವಾಗಿ ಹನ್ನೆರಡು ಜನರನ್ನು ಆರಿಸುತ್ತಾನೆ. ಆದರೆ ಮೊದಲ ನೋಟದಲ್ಲಿ, ಈ ಹೊಸ ಇಸ್ರೇಲ್ ನವೀಕರಿಸಲಾದಂತೆ ಕಾಣುವುದಿಲ್ಲ. ಯೇಸು ಒಂದು ಅಸ್ತವ್ಯಸ್ತವಾದ ಜನರ ಗುಂಪನ್ನು ಆಯ್ಕೆಮಾಡುತ್ತಾರೆ, ವಿದ್ಯಾವಂತರು ಮತ್ತು ಅವಿದ್ಯಾವಂತರು, ಶ್ರೀಮಂತರು ಮತ್ತು ಬಡವರು. ರೋಮನ್ ಜೀವನೋಪಾಯಕ್ಕಾಗಿ ಕೆಲಸ ಮಾಡಿದ ಮಾಜಿ ಸುಂಕದವನನ್ನು ಮತ್ತು ರೋಮನ್ ಆಕ್ರಮಣದ ವಿರುದ್ಧ ಹೋರಾಡಿದ ಮಾಜಿ ಬಂಡಾಯಗಾರ (ಕಾನಾನ್ಯ) ನನ್ನ ಸಹ ಯೇಸು ಆರಿಸುತ್ತಾರೆ! ಹೊರಗಿನವರ ಮತ್ತು ಬಡವರ ಪ್ರತಿ ದೇವರ ಪ್ರೀತಿ ಅಸಂಭವ ಜನರನ್ನು ಒಟ್ಟುಗೂಡಿಸುತ್ತದೆ. ಅವರು ಎಂದಿಗೂ ಜೊತೆಯಾಗಲು ಸಾಧ್ಯವಿಲ್ಲ ಎಂದು ತೋರುತ್ತದೆ, ಆದರೆ ಈ ವೈರಿಗಳು ಯೇಸುವನ್ನು ಅನುಸರಿಸಲು ಎಲ್ಲವನ್ನೂ ಬಿಟ್ಟು ಹೊಸ ವಿಶ್ವ ಕ್ರಮಕ್ಕೆ ಪ್ರವೇಶಿಸುತ್ತಾರೆ, ಅಲ್ಲಿ ಅವರು ಸಮನ್ವಯಗೊಳಿಸಲು ಮತ್ತು ಏಕತೆಯಿಂದ ಬದುಕಲು ಕರೆಯಲಾಗುತ್ತಾರೆ. 


ತಲೆಕೆಳಗಾದ ರಾಜ್ಯದ ಬಗ್ಗೆ ಯೇಸುವಿನ ಬೋಧನೆಗಳ ದಾಖಲೆಯಲ್ಲಿ ಈ ಹೊಸ ವಿಶ್ವ ಕ್ರಮ ಏನೆಂದು ಲೂಕನು ನಮಗೆ ತೋರಿಸುತ್ತಾನೆ. ಅದರಲ್ಲಿ ಯೇಸು, ಬಡವರು ದೇವರ ರಾಜ್ಯವನ್ನು ಹೊಂದಿರುವುದರಿಂದ ಆಶೀರ್ವದಿಸಲ್ಪಟ್ಟವರು ಮತ್ತು, ಅಳುವವರು ಒಂದು ದಿನ ನಗುತ್ತಾರೆ ಎಂದು ಹೇಳುತ್ತಾರೆ. ಹೊಸ ವಿಶ್ವ ಕ್ರಮದಲ್ಲಿ, ಶಿಷ್ಯರು ತಮ್ಮ ಶತ್ರುಗಳನ್ನು ಪ್ರೀತಿಸಲು, ಅವರು ಇಷ್ಟಪಡದ ಜನರಿಗೆ ವಿಚಿತ್ರವಾಗಿ ಉದಾರವಾಗಿರಲು, ಕರುಣೆಯನ್ನು ತೋರಿಸಲು ಮತ್ತು ಕ್ಷಮಿಸಲು ಕರೆಯಲಾಗುತ್ತಾರೆ. ಮತ್ತು ಈ ಆಮೂಲಾಗ್ರ ಜೀವನ ವಿಧಾನವು ಯೇಸು ಬರೇ ಮಾತಾಡಿದ ವಿಷಯವಲ್ಲ. ಅವರು ದಾರಿ ತೋರಿಸಿದರು ಮತ್ತು ಅಂತಿಮ ತ್ಯಾಗ-- ತಮ್ಮ ಜೀವನವನ್ನೇ ತ್ಯಜಿಸುವುದರ ಮೂಲಕ ತನ್ನ ಶತ್ರುಗಳನ್ನು ಪ್ರೀತಿಸಿದರು. 


读经计划介绍

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.

More