BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ预览

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

40天中的第31天

ಕೃತ್ಯಗದ ಮುಂದಿನ ಭಾಗದಲ್ಲಿ ಯೇಸುವಿನ ಚಳವಳಿಯ ಭಾಗವಾಗಲು ಯೆಹೂದ್ಯೇತರ ಕ್ರೈಸ್ತರು ಯಹೂದಿಗಳಾಗಬೇಕು (ಸುನ್ನತಿ, ಸಬ್ಬತ್ ಮತ್ತು ಕೋಷರ್ ಆಹಾರ ಕಾನೂನುಗಳನ್ನು ಅಭ್ಯಾಸ ಮಾಡುವ ಮೂಲಕ) ಎಂದು ಹೇಳಿಕೊಳ್ಳುವ ಕೆಲವು ಯಹೂದಿ ಕ್ರೈಸ್ತರಿದ್ದಾರೆ ಎಂದು ಪೌಲನು ಕಂಡುಹಿಡಿದನು. ಆದರೆ ಪೌಲನು ಮತ್ತು ಬರ್ನಾಬಸ್ ಆಮೂಲಾಗ್ರವಾಗಿ ಒಪ್ಪುವುದಿಲ್ಲ, ಮತ್ತು ಅವರು ಚರ್ಚೆಯನ್ನು ಪರಿಹರಿಸಲು ಜೆರುಸಲೆಮ್‌ನ ನಾಯಕತ್ವ ಮಂಡಳಿಗೆ ಕೊಂಡೊಯ್ಯುತ್ತಾರೆ. ಅಲ್ಲಿರುವಾಗ, ಪೀಟರ್, ಪಾಲ್ ಮತ್ತು ಜೇಮ್ಸ್ (ಯೇಸುವಿನ ಸಹೋದರ) ಎಲ್ಲಾ ರಾಷ್ಟ್ರಗಳನ್ನು ಸೇರಿಸುವುದೇ ಎಂದೂ ದೇವರ ಯೋಜನೆ ಎಂದು ತೋರಿಸಾಲು ಧರ್ಮಗ್ರಂಥಗಳನ್ನು ಮತ್ತು ಅವರ ಅನುಭವಗಳನ್ನು ಸೂಚಿಸುತ್ತಾರೆ. ಸಭೆಯು ನಂತರ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಯಹೂದಿ-ಅಲ್ಲದ ಕ್ರೈಸ್ತರು ಅನ್ಯ ದೇವಾಲಯದ ತ್ಯಾಗಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು, ಆದರೆ ಅವರು ಜನಾಂಗೀಯವಾಗಿ ಯಹೂದಿ ಗುರುತನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ ಅಥವಾ ಟೋರಾದ ಆಚರಣೆಯ ಕಾನೂನುಗಳು ಮತ್ತು ಪದ್ಧತಿಗಳನ್ನು ಪಾಲಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಯೇಸು ಯಹೂದಿ ಮೆಸ್ಸಿಯಾ, ಆದರೆ ಅವರು ಎಲ್ಲಾ ರಾಷ್ಟ್ರಗಳ ಪುನರುತ್ಥಾನಗೊಂಡ ರಾಜ. ದೇವರ ರಾಜ್ಯದಲ್ಲಿ ಸದಸ್ಯತ್ವವು ಜನಾಂಗೀಯತೆ ಅಥವಾ ಕಾನೂನನ್ನು ಆಧರಿಸಿದ್ದಲ್ಲದೆ ಬದಲಿಗೆ ಯೇಸುವನ್ನು ನಂಬುವುದು ಮತ್ತು ಪಾಲಿಸುವುದರ ಮೇಲೆ ಅವಂಲಂಬಿತ. 


读经计划介绍

BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.

More