BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣ预览

ಪೌಲನು ಜೆರೂಸಲೇಮಿಗೆ ಹೋಗುವುದನ್ನು ಮುಂದುವರಿಸುತ್ತಿದ್ದಂತೆ, ಬೆಳೆಯುತ್ತಿರುವ ಯೇಸುವಿನ ಹಿಂಬಾಲಕರ ಸಮುದಾಯವನ್ನು ಭೇಟಿ ಮಾಡಲು ಅವನು ದಾರಿಯಲ್ಲಿ ನಿಲ್ಲುತ್ತಾನೆ. ಅವರೆಲ್ಲರೂ ರಾಜಧಾನಿಯನ್ನು ಪ್ರವೇಶಿಸುವ ಅವರ ಉದ್ದೇಶದ ಬಗ್ಗೆ ಕಲಿಯುತ್ತಾರೆ ಮತ್ತು ಅದರ ವಿರುದ್ಧ ವಾದಿಸಲು ಮುಂದಾಗುತ್ತಾರೆ. ಅವನು ಹೋದರೆ, ಸೆರೆವಾಸ ಅಥವಾ ಕೊಲ್ಲಲ್ಪಡುತ್ತಾನೆ ಎಂದು ಮನವರಿಕೆಯಾದುದರಿಂದ ಹೋಗಬಾರದೆಂದು ಅವರು ಬೇಡಿಕೊಳ್ಳುತ್ತಾರೆ. ಆದರೆ ಪೌಲನು ತಾನು ನಂಬಿದ್ದಕ್ಕಾಗಿ ಸಾಯಲು ಸಿದ್ಧನಾಗಿದ್ದಾನೆ ಮತ್ತು ಆದ್ದರಿಂದ ಅವನು ಮುಂದೆ ಮುಂದುವರಿಯುತ್ತಾನೆ. ಅವನು ಜೆರೂಸಲೇಮಿಗೆ ಬಂದಾಗ, ಅವನು ಯಹೂದಿ ವಿರೋಧಿ ಅಲ್ಲ ಎಂದು ಇತರರು ಅರ್ಥಮಾಡಿಕೊಳ್ಳಲು ಯಹೂದಿ ಸಂಪ್ರದಾಯಗಳನ್ನು ಅಭ್ಯಾಸ ಮಾಡುತ್ತಾನೆ. ಅವನು ನಿಜಕ್ಕೂ ತನ್ನ ಪಿತೃಗಳ ದೇವರನ್ನು ಪ್ರೀತಿಸುವ ಮತ್ತು ತನ್ನ ಸಹ ಯಹೂದಿಗಾಗಿ ತನ್ನ ಪ್ರಾಣವನ್ನು ಅರ್ಪಿಸುವ ಧರ್ಮನಿಷ್ಠ ಯಹೂದಿ. ಆದರೆ ಯಹೂದಿಗಳು ಯೆಹೂದ್ಯೇತರರೊಂದಿಗೆ ಪೌಲನ ಹಗರಣದ ಒಡನಾಟವನ್ನು ಮಾತ್ರ ನೋಡುತ್ತಾರೆ. ಅವರು ಪೌಲನ ಸಂದೇಶವನ್ನು ತಿರಸ್ಕರಿಸಿ , ಅವನನ್ನು ದೇವಾಲಯದಿಂದ ಹೊರಗೆ ಹಾಕಿ ಅವನನ್ನು ಸಾಯುವಂತೆ ಹೊಡೆಯಲು ಪ್ರಾರಂಭಿಸುತ್ತಾರೆ.
ರೋಮನ್ನರು ಜೆರುಸಲೆಮ್ನಲ್ಲಿ ವಿಷಯಗಳು ಕೈಬಿಟ್ಟು ಹೋಗುತ್ತಿದೆ ಎಂಬ ಸುದ್ದಿಯನ್ನು ಪಡೆದು, ಅಲ್ಲಿಗೆ ಸಮಯಕ್ಕೆ ತಲುಪಿ ಪೌಲನ ಹೊಡೆತ ಮಾರಕವಾಗದಂತೆ ತಡೆಯುತ್ತಾರೆ. ಪೌಲನನ್ನು ಹಿಂಸಾತ್ಮಕ ಜನಸಮೂಹದಿಂದ ದೂರವಿಡಲಾಗುತ್ತದೆ ಮತ್ತು ತನ್ನ ಕಿರುಕುಳಗಾರರನ್ನು ಉದ್ದೇಶಿಸಿ ಮಾತನಾಡಲು ಕಮಾಂಡರ್ಗೆ ಮನವರಿಕೆ ಮಾಡಿಕೊಡುತ್ತಾನೆ. ಹೊಡೆತದಿಂದ ಇನ್ನೂ ಮೂಗೇಟಿಗೊಳಗಾದ ಮತ್ತು ರಕ್ತಸಿಕ್ತನಾದ ಪಾಲನು ತನ್ನ ಕಥೆಯನ್ನು ಧೈರ್ಯವಾಗಿ ಹಂಚಿಕೊಳ್ಳುತ್ತಾನೆ. ತನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಜನರೊಂದಿಗೆ ಮನವೊಲಿಸಲು ಮತ್ತು ಗುರುತಿಸಲು ಅವನು ಹೀಬ್ರೂ ಉಪಭಾಷೆಯಲ್ಲಿ ಮಾತನಾಡುತ್ತಾನೆ. ತನ್ನ ವಿಮೋಚನಾ ಯೋಜನೆಯಲ್ಲಿ ಅನ್ಯಜನರನ್ನು (ಯೆಹೂದ್ಯೇತರರನ್ನು) ಸೇರಿಸಬೇಕೆಂಬ ದೇವರ ಬಯಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸುವವರೆಗೂ ಅವರು ಪ್ರತಿಯೊಂದು ವಿವರವನ್ನೂ ಕೇಳುತ್ತಾರೆ. ಈ ಸಮಯದಲ್ಲಿ, ಜನಸಮೂಹವು ಪೌಲನ ವಿರುದ್ಧ ಸಾವಿನ ಬೆದರಿಕೆಗಳನ್ನು ಕಿರುಚಲು ಪ್ರಾರಂಭಿಸುತ್ತದೆ. ಇದು ಅಪಾಯಕರವಾಗಿದೆ ಮತ್ತು ಅನ್ಯಜನರ ಬಗ್ಗೆ ಮಾತನಾಡಿದ್ದಕ್ಕಾಗಿ ಯಹೂದಿಗಳು ಪೌಲನ ಮೇಲೆ ಏಕೆ ಕಕೋಪಗೊಳ್ಳುತ್ತಾರೆಂದು ಎಂದು ಅರ್ಥಮಾಡಿಕೊಳ್ಳಲು ರೋಮನ್ ಕಮ್ಯಾಂಡರ್ ಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಕಮ್ಯಾಂಡರ್ ಈ ಕಥೆ ಇಲ್ಲಿ ಮುಗಿಯುವಿದಿಲ್ಲ, ಇನ್ನು ಹೆಚ್ಚು ಚಿತ್ರಹಿಂಸೆ ಮಾಡಿದರೆ ನಿಜ ಹೊರಬರುತ್ತದೆಂದು ಭಾವಿಸುತ್ತಾನೆ ಆದರೆ ಪೌಲನು ತಾನು ರೋಮನ್ ಪ್ರಜೆ ಎಂದು ಬಹಿರಂಗಪಡಿಸುವ ಮೂಲಕ ಅವನ ವಿರುದ್ಧದ ಕಾನೂನುಬಾಹಿರ ಚಿಕಿತ್ಸೆಯನ್ನು ನಿಲ್ಲಿಸುತ್ತಾನೆ. ಒಬ್ಬ ರೋಮನನಿಗೆ ಹನಿ ಉಂಟುಮಾಡಿದಕ್ಕಾಗಿ ಅವನು ತೊಂದರೆಯಲ್ಲಿ ಸಿಲುಕಬಹುದೆಂದು ಕಮ್ಯಾಂಡರ್ ಅರಿತುಕೊಂಡು, ಆದ್ದರಿಂದ ಪೌಲನನ್ನು ಶೀಘ್ರವಾಗಿ ಬಂಧನದಿಂದ ಬಿಡುಗಡೆ ಮಾಡಲಾಗಿ ಅವನನ್ನು ಆರೋಪಿಸಿದ ಧಾರ್ಮಿಕ ಮುಖಂಡರ ತನ್ನ ಪ್ರಕರಣವನ್ನು ಮಾಡಲು ವಿಚಾರಣೆಗೆ ಕರೆದೊಯ್ಯಲಾಗಿತ್ತಾನೆ
读经计划介绍

ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More