Leseplan-informasjon

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳPrøve

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

Dag 16 av 20

ಪೌಲನು ಯೆರುಸಲೇಮಿಗೆ ಹೋಗುವುದನ್ನು ಮುಂದುವರಿಸುತ್ತಿದ್ದಂತೆ, ಬೆಳೆಯುತ್ತಿರುವ ಯೇಸುವಿನ ಹಿಂಬಾಲಕರ ಸಮುದಾಯವನ್ನು ಭೇಟಿ ಮಾಡಲು ಅವನು ದಾರಿಯಲ್ಲಿ ನಿಲ್ಲುತ್ತಾನೆ. ಅವರೆಲ್ಲರೂ ರಾಜಧಾನಿಯನ್ನು ಪ್ರವೇಶಿಸುವ ಅವರ ಉದ್ದೇಶದ ಬಗ್ಗೆ ಕಲಿಯುತ್ತಾರೆ ಮತ್ತು ಅದರ ವಿರುದ್ಧ ವಾದಿಸಲು ಮುಂದಾಗುತ್ತಾರೆ. ಅವನು ಹೋದರೆ, ಸೆರೆವಾಸ ಅಥವಾ ಕೊಲ್ಲಲ್ಪಡುತ್ತಾನೆ ಎಂದು ಮನವರಿಕೆಯಾದುದರಿಂದ ಹೋಗಬಾರದೆಂದು ಅವರು ಬೇಡಿಕೊಳ್ಳುತ್ತಾರೆ. ಆದರೆ ಪೌಲನು ತಾನು ನಂಬಿದ್ದಕ್ಕಾಗಿ ಸಾಯಲು ಸಿದ್ಧನಾಗಿದ್ದಾನೆ ಮತ್ತು ಅದರಿಂದ ಸಂಪ್ರದಾಯಗಳನ್ನು ಅಭ್ಯಾಸ ಮಾಡುತ್ತಾನೆ. ಅವನು ನಿಜಕ್ಕೂ ತನ್ನ ಪಿತೃಗಳ ದೇವರನ್ನು ಪ್ರೀತಿಸುವ ಮತ್ತು ತನ್ನ ಸಹ ಯಹೂದಿಗಾಗಿ ತನ್ನ ಪ್ರಾಣವನ್ನು ಅರ್ಪಿಸುವ ಧರ್ಮನಿಷ್ಠ ಯಹೂದಿ. ಆದರೆ ಯಹೂದಿಗಳು ಯೆಹೂದ್ಯೇತರರೊಂದಿಗೆ ಪೌಲನ ಹಗರಣದ ಒಡನಾಟವನ್ನು ಮಾತ್ರ ನೋಡುತ್ತಾರೆ.ಅವರು ಪೌಲನ ಸಂದೇಶವನ್ನು ತಿರಸ್ಕರಿಸಿ , ಅವನನ್ನು ದೇವಾಲಯದಿಂದ ಹೊರಗೆ ಹಾಕಿ ಅವನನ್ನು ಸಾಯುವಂತೆ ಹೊಡೆಯಲು ಪ್ರಾರಂಭಿಸುತ್ತಾರೆ. ರೋಮನ್ನರು ಜೆರುಸಲೆಮ್ನಲ್ಲಿ ವಿಷಯಗಳು ಕೈಬಿಟ್ಟು ಹೋಗುತ್ತಿದೆ ಎಂಬ ಸುದ್ದಿಯನ್ನು ಪಡೆದು, ಅಲ್ಲಿಗೆ ಸಮಯಕ್ಕೆ ತಲುಪಿ ಪೌಲನ ಹೊಡೆತ ಮಾರಕವಾಗದಂತೆ ತಡೆಯುತ್ತಾರೆ.ಪೌಲನನ್ನು ಹಿಂಸಾತ್ಮಕ ಜನಸಮೂಹದಿಂದ ದೂರವಿಡಲಾಗುತ್ತದೆ ಮತ್ತು ತನ್ನ ಕಿರುಕುಳಗಾರರನ್ನು ಉದ್ದೇಶಿಸಿ ಮಾತನಾಡಲು ಕಮಾಂಡರ್ಗೆ ಮನವರಿಕೆ ಮಾಡಿಕೊಡುತ್ತಾನೆ.ಹೊಡೆತದಿಂದರಕ್ತಸಿಕ್ತನಾದ ಪಾಲನು ತನ್ನ ಕಥೆಯನ್ನು ಧೈರ್ಯವಾಗಿ ಹಂಚಿಕೊಳ್ಳುತ್ತಾನೆ.ತನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿರುವ ಜನರೊಂದಿಗೆ ಮನವೊಲಿಸಲು ಮತ್ತು ಗುರುತಿಸಲು ಅವನು ಇಬ್ರಿಯಾ ಉಪಭಾಷೆಯಲ್ಲಿ ಮಾತನಾಡುತ್ತಾನೆ.ತನ್ನ ವಿಮೋಚನಾ ಯೋಜನೆಯಲ್ಲಿ ಅನ್ಯಜನರನ್ನು (ಯೆಹೂದ್ಯೇತರರನ್ನು) ಸೇರಿಸಬೇಕೆಂಬ ದೇವರ ಬಯಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸುವವರೆಗೂ ಅವರು ಪ್ರತಿಯೊಂದು ವಿವರವನ್ನೂ ಕೇಳುತ್ತಾರೆ.ಈ ಸಮಯದಲ್ಲಿ, ಜನಸಮೂಹವು ಪೌಲನ ವಿರುದ್ಧ ಸಾವಿನ ಬೆದರಿಕೆಗಳನ್ನು ಕಿರುಚಲು ಪ್ರಾರಂಭಿಸುತ್ತದೆ.ಇದು ಅಪಾಯಕರವಾಗಿದೆ ಮತ್ತು ಅನ್ಯಜನರ ಬಗ್ಗೆ ಮಾತನಾಡಿದ್ದಕ್ಕಾಗಿ ಯಹೂದಿಗಳು ಪೌಲನ ಮೇಲೆ ಏಕೆ ಕೋಪಗೊಳ್ಳುತ್ತಾರೆಂದು ಎಂದು ಅರ್ಥಮಾಡಿಕೊಳ್ಳಲು ರೋಮನ್ ಕಮ್ಯಾಂಡರ್ ಗೆ ಸಾಧ್ಯವಾಗಲಿಲ್ಲ.ಆದ್ದರಿಂದ ಕಮ್ಯಾಂಡರ್ ಈ ಕಥೆ ಇಲ್ಲಿ ಮುಗಿಯುವಿದಿಲ್ಲ, ಇನ್ನು ಹೆಚ್ಚು ಚಿತ್ರಹಿಂಸೆ ಮಾಡಿದರೆ ನಿಜ ಹೊರಬರುತ್ತದೆಂದು ಭಾವಿಸುತ್ತಾನೆಆದರೆ ಪೌಲನು ತಾನು ರೋಮನ್ ಪ್ರಜೆ ಎಂದು ಬಹಿರಂಗಪಡಿಸುವ ಮೂಲಕ ಅವನ ವಿರುದ್ಧದ ಕಾನೂನುಬಾಹಿರ ಚಿಕಿತ್ಸೆಯನ್ನು ನಿಲ್ಲಿಸುತ್ತಾನೆ.ಒಬ್ಬ ರೋಮನನಿಗೆ ಹಾನಿ ಉಂಟುಮಾಡಿದಕ್ಕಾಗಿ ಅವನು ತೊಂದರೆಯಲ್ಲಿ ಸಿಲುಕಬಹುದೆಂದು ಕಮ್ಯಾಂಡರ್ ಅರಿತುಕೊಂಡು, ಆದ್ದರಿಂದ ಪೌಲನನ್ನು ಶೀಘ್ರವಾಗಿ ಬಂಧನದಿಂದ ಬಿಡುಗಡೆ ಮಾಡಲಾಗಿ ಅವನನ್ನು ಆರೋಪಿಸಿದ ಧಾರ್ಮಿಕ ಮುಖಂಡರ ತನ್ನ ಪ್ರಕರಣವನ್ನು ವಿಚಾರಣೆಗೆ ಕರೆದೊಯ್ಯಲಾಗಿತ್ತಾನೆ ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ : • ಕೋಪಗೊಂಡ ಯಹೂದಿ ಗುಂಪಿನ ಮುಂದೆ ಪೌಲನ ಪಕ್ಷದ ಮಾತನ್ನು ಪರಿಶೀಲಿಸಿ (ಕೃತ್ಯಗ 22: 1-21 ನೋಡಿ). ನೀವು ಏನು ಗಮನಿಸುತ್ತೀರಿ?ತನ್ನ ಕಿರುಕುಳಗಾರರೊಂದಿಗೆ ಪೌಲನು ಹೇಗೆ ಗುರುತಿಸಿಕೊಳ್ಳುತ್ತಾನೆ?ನಿಮ್ಮ ಶತ್ರುಗಳೊಂದಿಗೆ ನೀವು ಹೇಗೆ ಗುರುತಿಸಬಹುದು? • ಯೇಸುವನ್ನು ಹಿಂಬಾಲಿಸಿದ್ದಕ್ಕಾಗಿ ಜನರನ್ನು ಹಿಂಸಿಸುವುದರಿಂದ ಯೇಸುವನ್ನು ಹಿಂಬಾಲಿಸುವಂತೆ ಜನರನ್ನು ಮನವೊಲಿಸುವವನಾಗಿ ಪೌಲನು ಬದಲಾದ.ಅಂತಹ ಆಮೂಲಾಗ್ರವಾಗಿ ಬದಲಾಗಿರುವ ವ್ಯಕ್ತಿಯನ್ನು ನೀವು ಎಂದಾದರೂ ಭೇಟಿ ಮಾಡಿದ್ದೀರಾ?ಹಾಗಿದ್ದಲ್ಲಿ, ಆ ವಿಮೋಚನಾ ಕಥೆಯನ್ನು ನೀವು ಇಂದು ಯಾರೊಂದಿಗೆ ಹಂಚಿಕೊಳ್ಳಬಹುದು? • ನಿಮ್ಮ ಓದುವಿಕೆ ಮತ್ತು ಪ್ರತಿಫಲನೆಯನ್ನು ಪ್ರಾರ್ಥನೆಯನ್ನಾಗಿ ಮಾಡಿ.ಎಲ್ಲಾ ಜನರಿಗೆ ಸುವಾರ್ತೆಯನ್ನು ಹರಡುವ ಯೇಸುವಿನ ಬದ್ಧತೆಗೆಗಾಗಿ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ.ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜನರೊಂದಿಗೆ ಗುರುತಿಸಿಕೊಳ್ಳಲು ನಿಮ್ಮನ್ನು ವಿನಮ್ರಗೊಳಿಸಿ ಮತ್ತು ನಿಮ್ಮ ಶತ್ರುಗಳ ಹೃದಯ ಮತ್ತು ಮನಸ್ಸನ್ನು ಆಮೂಲಾಗ್ರವಾಗಿ ಬದಲಾಯಿಸುವಂತೆ ದೇವರನ್ನು ಕೇಳಿ.
Dag 15Dag 17

Om denne planen

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್‌ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್...

More

YouVersion bruker informasjonskapsler for å tilpasse opplevelsen din. Ved å bruke nettstedet vårt godtar du vår bruk av informasjonskapsler, som beskrevet i vår Personvernerklæring