BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳಮಾದರಿ

ಯೇಸು ಸ್ವರ್ಗದಲ್ಲಿ ಸಿಂಹಾಸನಾರೋಹಣ ಮಾಡಿದ ನಂತರ, ಪಂಚಾಶತ್ತಮ ದಿನದಂದು ಶಿಷ್ಯರು ಒಟ್ಟಿಗೆ ಇದ್ದಾರೆ ಎಂದು ಲೂಕ ಹೇಳುತ್ತಾನೆ. ಇದು ಸಾವಿರಾರು ಯಹೂದಿ ಯಾತ್ರಿಕರು ಆಚರಿಸಲು ಯೆರುಸಲೇಮ್‌ಗೆ ಪ್ರಯಾಣಿಸಿದ ಪ್ರಾಚೀನ ಇಸ್ರಾಯೇಲ ವಾರ್ಷಿಕ ಉತ್ಸವವಾಗಿತ್ತು. ಈ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ಗಾಳಿಯ ಶಬ್ದವು ಕೋಣೆಯನ್ನು ತುಂಬಿದಾಗ ಯೇಸುವಿನ ಶಿಷ್ಯರು ಪ್ರಾರ್ಥಿಸುತ್ತಿದ್ದರು ಮತ್ತು ಎಲ್ಲರ ತಲೆಯ ಮೇಲೆ ಬೆಂಕಿಯ ಜ್ವಾಲೆ ಸುಳಿದಾಡುವುದನ್ನು ಅವರು ನೋಡಿದರು. ಈ ವಿಚಿತ್ರ ಚಿತ್ರಣ ಏನು?
ಇಲ್ಲಿ, ಲೂಕನು, ದೇವರ ಉಪಸ್ಥಿತಿಯು ಬೆಂಕಿಯಂತೆಯೂ ಕಾಣಿಸುಕೊಳ್ಳುವ ಪುನರಾವರ್ತಿತ ಹಳೆಯ ಒಡಂಬಡಿಕೆಯ ವಿಷಯವನ್ನು ಉಲ್ಲೇಖಿಸುತ್ತಾನೆ. ಉದಾಹರಣೆಗೆ, ಸಿನೈ ಪರ್ವತದಲ್ಲಿ ದೇವರು ಇಸ್ರಾಯೇಲಿನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಾಗ, ಅವರ ಉಪಸ್ಥಿತಿಯು ಪರ್ವತದ ಮೇಲೆ ಉರಿಯಿತು (ವಿಮೋಚನಕಾಂಡ 19: 17-18). ಮತ್ತೊಮ್ಮೆ, ಇಸ್ರಾಯೇಲ್ಯರ ನಡುವೆ ವಾಸಿಸಲು ಗುಡಾರವನ್ನು ತುಂಬಿದಾಗ ದೇವರ ಉಪಸ್ಥಿತಿಯು ಬೆಂಕಿಯ ಸ್ತಂಭವಾಗಿ ಕಾಣಿಸಿಕೊಂಡಿತು (ಅರಣ್ಯಕಾಂಡ 9:15). ಆದ್ದರಿಂದ ದೇವರ ಜನರನ್ನು ಭೇಟಿ ಮಾಡುವ ಬೆಂಕಿಯನ್ನು ಲೂಕನು ವಿವರಿಸಿದಾಗ, ನಾವು ಆ ಮಾದರಿಯನ್ನು ಗುರುತಿಸಬೇಕು. ಈ ಬಾರಿ ಮಾತ್ರ, ಬೆಂಕಿಯು ಪರ್ವತದ ಮೇಲೆ ಅಥವಾ ಕಟ್ಟಡದ ಮೇಲಿರುವ ಒಂದೇ ಕಂಬದಲ್ಲಿ ಕಾಣಿಸಿಕೊಳ್ಳುವ ಬದಲು ಅನೇಕ ಜನರ ಮೇಲೆ ಅನೇಕ ಜ್ವಾಲೆಗಳಾಗಿ ಹರಡುತ್ತದೆ. ಇದು ಗಮನಾರ್ಹವಾದ ಒಂದನ್ನು ಸಂವಹಿಸುತ್ತದೆ. ಶಿಷ್ಯರು, ದೇವರು ವಾಸಿಸಿ ಸುವಾರ್ತೆಯನ್ನು ಹಂಚಿಕೊಳ್ಳಬಹುದಾದ ಚಲನಶೀಲ ದೇವಾಲಯಗಳಾಗುತ್ತಿದ್ದಾರೆ
ದೇವರ ಉಪಸ್ಥಿತಿಯು ಇನ್ನು ಮುಂದೆ ಏಕ ಸ್ಥಳಕ್ಕೆ ಸೀಮಿತವಾಗಿಲ್ಲ. ಇದು ಈಗ ಯೇಸುವನ್ನು ಅವಲಂಬಿಸಿರುವ ಮಾನವರಲ್ಲಿ ನೆಲೆಸಬಹುದು. ಯೇಸುವಿನ ಅನುಯಾಯಿಗಳು ದೇವರ ಬೆಂಕಿಯನ್ನು ಸ್ವೀಕರಿಸಿದ ತಕ್ಷಣ, ಅವರು ಮೊದಲು ತಿಳಿದಿಲ್ಲದ ಭಾಷೆಗಳಲ್ಲಿ ಯೇಸುವಿನ ರಾಜ್ಯದ ಬಗ್ಗೆ ಸುವಾರ್ತೆಯನ್ನು ಮಾತನಾಡಲು ಪ್ರಾರಂಭಿಸಿದರು ಎಂದು ಲೂಕನು ಹೇಳುತ್ತಾನೆ. ಯಹೂದಿ ಯಾತ್ರಿಕಾರಿಗೆ ಅವರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಗೊಂದಲಕ್ಕೊಳಗಾಗುತ್ತಾರೆ. ಎಲ್ಲಾ ರಾಷ್ಟ್ರಗಳನ್ನು ಆಶೀರ್ವದಿಸಲು ಇಸ್ರೇಲ್ನೊಂದಿಗೆ ಪಾಲುದಾರರಾಗುವ ಯೋಜನೆಯನ್ನು ದೇವರು ಇನ್ನೂ ಕೈಬಿಡಲಿಲ್ಲ. ಮತ್ತು ಸರಿಯಾದ ಸಮಯದಲ್ಲಿ, ಪಂಚಾಶತ್ತಮದಿನದಂದು, ಇಸ್ರಾಯೇಲ ಎಲ್ಲಾ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಯೆರುಸಲೇಮಿಗೆ ಹಿಂದಿರುಗಿದ ದಿನ, ಶಿಲುಬೆಗೇರಿಸಲ್ಪಟ್ಟು ಎದ್ದಿದ್ದ , ಇಸ್ರಾಯೇಲಿನ ರಾಜನಾದ ಯೇಸುವಿನ ಶಿಭ ಸಂದೇಶವನ್ನು ಘೋಷಿಸಲು ಅವನು ತನ್ನ ಆತ್ಮವನ್ನು ಕಳುಹಿಸುತ್ತಾನೆ. ಸಾವಿರಾರು ಜನರು ಈ ಮಾತನ್ನು ತಮ್ಮ ಮಾತೃಭಾಷೆಯಲ್ಲಿ ಕೇಳಿದರು ಮತ್ತು ಆ ದಿನವೇ ಯೇಸುವನ್ನು ಅನುಸರಿಸಲು ಪ್ರಾರಂಭಿಸಿದರು.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ನೀವು ಅಪೊಸ್ತಲರ ಕೃತ್ಯಗಳ 2 ಅನ್ನು ಓದುವಾಗ, ಯಾವ ಪದಗಳು ಅಥವಾ ನುಡಿಗಟ್ಟುಗಳು ನಿಮ್ಮ ಗಮನವನ್ನು ಸೆಳೆಯುತ್ತವೆ?
• ಸ್ನಾನಿಕನಾದ ಯೋಹಾನ ಅವರ ಮಾತುಗಳನ್ನು ಮತ್ತೊಮ್ಮೆ ಪರಿಗಣಿಸಿ (ಲೂಕನು 3: 16-18 ನೋಡಿ) ಮತ್ತು ಸತ್ಯವೇದಲೇಖಕರು ಆಗಾಗ್ಗೆ ಹೊಟ್ಟನ್ನು ಪಾಪಕ್ಕೆ ಸಾದೃಶ್ಯವಾಗಿ ಬಳಸುತ್ತಾರೆ ಎಂಬುದನ್ನು ನೆನಪಿಡಿ. ಶಿಷ್ಯರು ದೇವರ ಆತ್ಮವನ್ನು ಸ್ವೀಕರಿಸಿದಂತೆ ಬೆಂಕಿಯ ಶುದ್ಧೀಕರಣದ ಉದ್ದೇಶವನ್ನು ಪ್ರತಿಬಿಂಬಿಸಿ. ನೀವು ಏನು ಗಮನಿಸುತ್ತೀರಿ?
• ವಿಮೋಚನಕಾಂಡ19: 17-18, ಅರಣ್ಯಕಾಂಡ 9:15 ಮತ್ತು ಅಪೊಸ್ತಲರ ಕೃತ್ಯಗಳ 2: 1-4 ರಲ್ಲಿ ದೇವರ ಬೆಂಕಿಯನ್ನು ಹೋಲಿಸಿ. ನೀವು ಏನು ಗಮನಿಸುತ್ತೀರಿ?
• ಅಪೊಸ್ತಲರ ಕೃತ್ಯಗಳ 2: 38-39 ರೊಂದಿಗೆ ಯೋವೇಲ 2: 28-29 ಅನ್ನು ಹೋಲಿಕೆ ಮಾಡಿ ಮತ್ತು ಈ ಭಾಗಗಳಲ್ಲಿ “ಎಲ್ಲರು ” ಪದವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಗಮನಿಸಿ. ಆಹ್ವಾನದಲ್ಲಿ ಯಾರನ್ನೂ ಹೊರಗಿಡಲಾಗಿಲ್ಲ, ಆದರೆ “ಎಲ್ಲರೂ” ಅದನ್ನು ಹೇಗೆ ಸ್ವೀಕರಿಸುತ್ತಾರೆ?
• ನಿಮ್ಮ ಓದುವಿಕೆ ಮತ್ತು ಪ್ರತಿಫಳನೆಯನ್ನು ಪ್ರಾರ್ಥನೆಯನ್ನಾಗಿ ಮಾಡಿ. ನಿಮ್ಮ ಓದುವಿಕೆಯಿಂದ ವಿಷ್ಮಯವನ್ನು ಪ್ರೇರೇಪಿಸಿದ ಯಾವುದೇ ವಿವರಗಳ ಬಗ್ಗೆ ದೇವರೊಂದಿಗೆ ಮಾತನಾಡಿ, ಮತ್ತು ಯೇಸು ಮತ್ತು ಅವರ ರಾಜ್ಯದ ಬಗ್ಗೆ ಸತ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅವರ ಪವಿತ್ರಾತ್ಮವನ್ನು ಬೇಡಿ.
ಈ ಯೋಜನೆಯ ಬಗ್ಗೆ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
ವೈಶಿಷ್ಟ್ಯದ ಯೋಜನೆಗಳು

Legacy: Maximizing Your Impact

Faith in Trials!

The Gospel Way Catechism

Restored: When Who You Are Starts to Slip Away

Win Your Child’s Heart

Put Down Your Phone, Write Out a Psalm

Connect With God Through Solitude | 7-Day Devotional

The Biscuit Trail

Chosen for Love: A Journey With Jesus
