BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳಮಾದರಿ

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

20 ನ 7 ದಿನ

ಈ ವಿಭಾಗದಲ್ಲಿ, ಲೂಕನು ರೋಮನ್ ಶತಾಧಿಪತಿಯಾದ ಕೊರ್ನೇಲ್ಯನನ್ನು ಪರಿಚಯಿಸುತ್ತಾನೆ. ಆತನು ಯಹೂದಿ ಜನರು ರೋಮನ್ ಆಕ್ರಮಣದ ಬಗ್ಗೆ ದ್ವೇಷಿಸುತ್ತಿದ್ದ ಎಲ್ಲವನ್ನೂ ಪ್ರತಿನಿಧಿಸುತ್ತಾರೆ. ಕೊರ್ನೇಲ್ಯನಿಗೆ ಒಬ್ಬ ದೇವದೂತನು ಕಾಣಿಸಿಕೊಂಡು ಯೊಪ್ಪದ ಸೀಮೋನನ ಮನೆಯಲ್ಲಿ ತಂಗಿರುವ ಪೇತ್ರ ಎಂಬ ವ್ಯಕ್ತಿಯನ್ನು ಕರೆಯುವಂತೆ ಹೇಳುತ್ತಾನೆ. ಕೊರ್ನೇಲ್ಯನು ಅದನ್ನೇ ಮಾಡಲು ದೂತರನ್ನು ಕಳುಹಿಸಿದಾಗ, ಪೇತ್ರನು ದೇವದೂತನು ಹೇಳಿದ ಸ್ಥಳದಲ್ಲಿಯೇ ಇದ್ದಾನೆ, ಯಹೂದಿ ಪ್ರಾರ್ಥನಾ ವೇಳೆಯಲ್ಲಿ ಪಾಲ್ಗೊಳ್ಳುತ್ತಾ, ಇದ್ದಕ್ಕಿದ್ದಂತೆ ಅವನಿಗೆ ವಿಚಿತ್ರ ದರ್ಶನ ಬರುತ್ತದೆ. ದರ್ಶನದಲ್ಲಿ, ಯಹೂದಿ ಜನರಿಗೆ ತಿನ್ನಲು ನಿಷೇಧಿಸಲಾಗಿರುವ ಪ್ರಾಣಿಗಳ ಸಂಗ್ರಹವನ್ನು ದೇವರು ತಂದು “ಇವುಗಳನ್ನು ತಿನ್ನು” ಎಂದು ಪೇತ್ರನಿಗೆ ಹೇಳುತ್ತಾರೆ. "ನಾನು ಎಂದಿಗೂ ಅಶುದ್ಧವಾದದ್ದನ್ನು ಸೇವಿಸಿಲ್ಲ" ಎಂದು ಪೇತ್ರನು ಉತ್ತರಿಸುತ್ತಾನೆ. ಆದರೆ ದೇವರು, “ನಾನು ಪರಿಶುದ್ಧಗೊಳಿಸಿರುವುದನ್ನು ಅಶುದ್ಧ ಎಂದು ಕರೆಯಬೇಡ”, ಎಂದು ಪ್ರತಿಕ್ರಿಯಿಸುತ್ತಾರೆ. ಈ ದರ್ಶನ ಮೂರು ಬಾರಿ ಪುನರಾವರ್ತನೆಯಾಗುತ್ತದೆ ಮತ್ತು ಪೇತ್ರನು ಗೊಂದಲಕ್ಕೊಳಗಾಗುತ್ತಾನೆ.

ಪೇತ್ರನು ಇನ್ನೂ ದರ್ಶನದ ಬಗ್ಗೆ ಯೋಚಿಸುತ್ತಿದ್ದಂತೆ, ಕೊರ್ನೇಲ್ಯನಿನ ಮನೆಗೆ ಭೇಟಿ ನೀಡಲು ಪೇತ್ರನು ಅವರೊಂದಿಗೆ ಹಿಂದಿರುಗಲು ಆಹ್ವಾನದೊಂದಿಗೆ ಸಂದೇಶವಾಹಕರು ಆಗಮಿಸುತ್ತಾರೆ. ಈ ಸಮಯದಲ್ಲಿ, ಪೇತ್ರನು ತಾನು ನೋಡಿದ ದರ್ಶನವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಯೆಹೂದ್ಯೇತರ ಮನೆಗೆ ಹೋಗುವುದರಿಂದ ಧಾರ್ಮಿಕ ಅಶುದ್ಧತೆಗೆ ಅಪಾಯವಿದೆ ಎಂದು ಪೇತ್ರನಿಗೆ ತಿಳಿದಿದೆ, ಆದ್ದರಿಂದ ಅವನು ಸಾಮಾನ್ಯವಾಗಿ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಆದರೆ ದರ್ಶನದ ಮೂಲಕ, ಯಾರನ್ನೂ ಅಶುದ್ಧರೆಂದು ಕರೆಯಬಾರದು ಎಂದು ದೇವರು ಪೇತ್ರನಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿದ್ದರು; ಯೇಸುವನ್ನು ಅವಲಂಬಿಸಿರುವ ಎಲ್ಲ ಜನರನ್ನು ಶುದ್ಧೀಕರಿಸುವ ಶಕ್ತಿಯನ್ನು ದೇವರು ಹೊಂದಿದ್ದಾರೆ. ಆದ್ದರಿಂದ ಆಕ್ಷೇಪಣೆ ಇಲ್ಲದೆ, ಪೇತ್ರನು ಕೊರ್ನೇಲ್ಯನಿನ ಮನೆಗೆ ಹೋಗಿ ಯೇಸುವಿನ ಬಗ್ಗೆ ಸುವಾರ್ತೆಯನ್ನು ಹಂಚಿಕೊಳ್ಳುತ್ತಾನೆ –– ಅವರ ಮರಣ, ಪುನರುತ್ಥಾನ ಮತ್ತು ಅವರ ಮೇಲೆ ನಂಬಿಕೆಯಿರುವ ಎಲ್ಲರಿಗೂ ಕ್ಷಮೆ. ಪೇತ್ರನು ಇನ್ನೂ ಮಾತನಾಡುತ್ತಿರುವಾಗ, ಪಂಚಾಶತ್ತಮ ದಿನದಂದು ಯೇಸುವಿನ ಯಹೂದಿ ಹಿಂಬಾಲಕಾರಿಕೆ ಮಾಡಿದಂತೆಯೇ ಪವಿತ್ರಾತ್ಮರು ಕೊರ್ನೇಲ್ಯನಿನಮತ್ತು ಅವನ ಕುಟುಂಬದ ಎಲ್ಲ ಸದಸ್ಯರನ್ನು ತುಂಬುತ್ತಾರೆ! ಯೇಸು ಹೇಳಿದಂತೆ ಎಲ್ಲಾ ಜನರನ್ನು ತಲುಪಲು ಚಳುವಳಿ ಭುಗಿಲೆದ್ದಿದೆ.

ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :

• ಇಂದಿನ ಭಾಗಗಳನ್ನು ನೀವು ಓದುವ ಮೊದಲು, ನಿಮಗೆ ತಿಳುವಳಿಕೆಯನ್ನು ನೀಡುವಂತೆ ದೇವರನ್ನು ಪ್ರಾರ್ಥಿಸಿ. ನೀವು ಓದಿದ್ದನ್ನು ಪ್ರತಿಫಲಿಸುವಾಗ ನೀವು ಏನು ಗಮನಿಸುತ್ತೀರಿ?

• ಯಾವ ಜನರು ಗುಂಪುಗಳು ಅಥವಾ ಉಪಸಂಸ್ಕೃತಿಯನ್ನು ದೇವರ ವ್ಯಾಪ್ತಿಗೆ ಮೀರಿದೆ ಎಂದು ಕೆಲವರು ಪರಿಗಣಿಸುತ್ತಾರೆ? ಅವರು ಆ ದೃಷ್ಟಿಕೋನವನ್ನು ಏಕೆ ಹೊಂದಿದ್ದಾರೆಂದು ನೀವು ಭಾವಿಸುತ್ತೀರಿ? ಇಂದಿನ ವಾಚನ ಅವರ ದೃಷ್ಟಿಕೋಣದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನೀವು ಭಾವಿಸುತ್ತೀರಿ?

• ನಿಮ್ಮ ಓದುವಿಕೆ ಮತ್ತು ಪ್ರತಿಫಲನೆಯ ಒಂದು ಪ್ರಾರ್ಥನೆಯನ್ನು ಪ್ರೇರೇಪಿಸಲಿ. ಯಹೂದಿ-ಅಲ್ಲದ ಜನರನ್ನು ತನ್ನ ಕುಟುಂಬದ ಭಾಗವಾಗಿಸಲು ಮುಂದುವರಿಸಿದ ದೇವರಿಗೆ ಧನ್ಯವಾದಗಳು. ಎಲ್ಲಾ ರೀತಿಯ ಜನರಿಗೆ ಕಲಿಸಲು ಮತ್ತು ಕ್ಷಮಿಸಲು ಅವರ ಪ್ರೀತಿಯು ತಲುಪುವ ಎಲ್ಲಾ ರೀತಿಯಲ್ಲಿ ಅವರೊಂದಿಗೆ ಸೇರಲು ನಿಮಗೆ ಸಹಾಯ ಮಾಡುವಂತೆ ಅವರನ್ನು ಬೇಡಿ.

ದೇವರ ವಾಕ್ಯ

ಈ ಯೋಜನೆಯ ಬಗ್ಗೆ

BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್‌ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada