BibleProject | ಅಪ್ಸೈಡ್ - ಡೌನ್ ಕಿಂಗ್ಡಮ್ / ಭಾಗ 2 - ಅಪೊಸ್ತಲರ ಕೃತ್ಯಗಳಮಾದರಿ

ಈ ಮುಂದಿನ ವಿಭಾಗದಲ್ಲಿ, ಸ್ತೆಫನನ ದುರಂತ ಕೊಲೆ ಯೇಸುವಿನ ಆಂದೋಲನವನ್ನು ತಡೆಯಲು ಸಾಧ್ಯವಿಲ್ಲ ಎಂದು ಲೂಕನು ತೋರಿಸುತ್ತಾನೆ. ವಾಸ್ತವವಾಗಿ, ಈ ಕಿರುಕುಳವು ಜೆರೂಸಲೇಮಿನ ಹೊರಗೆ ಅನೇಕ ಶಿಷ್ಯರನ್ನು ಯೆಹೂದ್ಯೇತರ ಸುತ್ತಮುತ್ತಲಿನ ಪ್ರದೇಶಗಳಾದ ಯೆಹೂದ ಮತ್ತು ಸಮಾರ್ಯಕ್ಕೆ ಹರಡುವ ಪರಿಣಾಮವನ್ನು ಹೊಂದಿದೆ. ಶಿಷ್ಯರು ಹೊರಹೋಗುತ್ತಿದ್ದಂತೆ, ಯೇಸು ಅವರಿಗೆ ಆಜ್ಞಾಪಿಸಿದಂತೆಯೇ ಅವರು ದೇವರ ರಾಜ್ಯದ ಸಂದೇಶವನ್ನು ತಮ್ಮೊಂದಿಗೆ ತರುತ್ತಾರೆ. ಶಿಷ್ಯರು ಯೇಸುವಿನ ಕಥೆಯನ್ನು ಘೋಷಿಸುತ್ತಾರೆ, ಮತ್ತು ಜನರು ಅದ್ಭುತವಾಗಿ ಮುಕ್ತರಾಗುತ್ತಾರೆ ಮತ್ತು ಗುಣಮುಖರಾಗುತ್ತಾರೆ. ಒಬ್ಬ ಪ್ರಸಿದ್ಧ ಮಂತ್ರವಾದಿ ದೇವರ ಶಕ್ತಿ ತನ್ನ ಶಕ್ತಿಗಿಂತ ದೊಡ್ಡದಾಗಿದೆ ಎಂದು ನೋಡುತ್ತಾನೆ ಮತ್ತು ಇಥಿಯೋಪಿಯಾದ ರಾಣಿಯ ನ್ಯಾಯಾಲಯದ ಅಧಿಕಾರಿಯು ದೀಕ್ಷಾಸ್ನಾನ ಪಡೆಯುತ್ತಾನೆ. ರಾಜ್ಯವು ಹರಡುತ್ತಿದೆ ಮತ್ತು ದೇವರ ಯೋಜನೆಯನ್ನು ಏನೂ ಉರುಳಿಸಲು ಸಾಧ್ಯವಿಲ್ಲ, ಯೇಸುವಿನ ಹಿಂಬಾಲಕರನ್ನು ಸೆರೆಹಿಡಿಯಲು ಅವರನ್ನು ತಮ್ಮ ಮನೆಗಳಿಂದ ಹೊರಗೆ ಎಳೆಯುವ ಧಾರ್ಮಿಕ ಮುಖಂಡ ಸೌಲನಿಗೂ ಸಹ ಸಾಧ್ಯವಿಲ್ಲ.
ಬಂಧಿಸಲು ಹೆಚ್ಚಿನ ಶಿಷ್ಯರನ್ನು ಹುಡುಕುತ್ತಾ ಸೌಲನು ದಮಸ್ಕ ಪ್ರಯಾಣಿಸುತ್ತಿದ್ದಂತೆ, ಹೆಚ್ಚು ಪ್ರಕಾಶಮಾನವಾದ ಬೆಳಕು ಮತ್ತು ಸ್ವರ್ಗದಿಂದ ಬರುವ ಧ್ವನಿಯಿಂದ ನಿಲ್ಲಿಸಲಾಗುತ್ತಾನೆ. ಎದ್ದ ಯೇಸು ಸ್ವಯಂ ಅವರೇ ಸೌಲನಿಗೆ ಅವರ ವಿರುದ್ಧ ಏಕೆ ಹೋರಾಡುತ್ತಿದ್ದಾನೆ ಎಂದು ಕೇಳುತ್ತಾರೆ. ಈ ಮುಖಾಮುಖಿ ಮತ್ತು ನಂತರದ ಅದ್ಭುತ ಚಿಹ್ನೆಗಳು ಯೇಸು ನಿಜವಾಗಿಯೂ ಯಾರೆಂಬುದರ ಬಗ್ಗೆ ಸೌಲನ ಮನಸ್ಸನ್ನು ಆಮೂಲಾಗ್ರವಾಗಿ ಬದಲಾಯಿಸುತ್ತವೆ. ಸೌಲನ ಯೋಜನೆಗಳು ತಲೆಕೆಳಗಾಗುತ್ತವೆ. ದಮಸ್ಕದಲ್ಲಿ ಯೇಸುವಿನ ಹಿಂಬಾಲಕರನ್ನು ಹಿಂಸಿಸುವ ಬದಲು, ಸೌಲನು ಅವರಲ್ಲಿ ಒಬ್ಬನಾಗಿ ತಕ್ಷಣ ಯೇಸುವನ್ನು ದೇವರ ಮಗನೆಂದು ಘೋಷಿಸಲು ಪ್ರಾರಂಭಿಸುತ್ತಾನೆ.
ಓದಿ, ಯೋಚಿಸಿ ಮತ್ತು ಪ್ರತಿಫಲಿಸಿ :
• ಮಂತ್ರವಾದಿ ಸೀಮೋನನ ಮತ್ತು ಪೇತ್ರನ ಸಂವಾದವನ್ನು ಪರಿಶೀಲಿಸಿ ( 8: 18-24 ನೋಡಿ). ನೀವು ಏನು ಗಮನಿಸುತ್ತೀರಿ? ಸಿಮೋನಾನು ಪವಿತ್ರಯಾತ್ಮರನ್ನು ಏಕೆ ಬಯಸಸಿದನೆಂದು ನೀವು ಭಾವಿಸುತ್ತೀರಿ? ಉಡುಗೊರೆ ಮತ್ತು ಖರೀದಿಯ ನಡುವಿನ ವ್ಯತ್ಯಾಸವೇನು? ನೀವು ದೇವರನ್ನು ಸಂಪಾದಿಸಬಹುದು ಅಥವಾ ಖರೀದಿಸಬಹುದು ಎಂಬ ನಂಬಿಕೆ ಬಂಧನಕ್ಕೆ ಹೇಗೆ ಹೋಲುತ್ತದೆ (8:23)?
• ನ್ಯಾಯಾಲಯದ ಅಧಿಕಾರಿಯೊಂದಿಗೆ ಫಿಲಿಪ್ ಅವರ ಸಂವಾದವನ್ನು ಪರಿಶೀಲಿಸಿ (8: 30-37ನೋಡಿ). ನ್ಯಾಯಾಲಯದ ಅಧಿಕಾರಿಯು ಯೆಶಾಯನ ಸುರುಳಿಯ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದನು ಮತ್ತು ಫಿಲಿಪ್ ಯೇಸುವಿನ ಬಗ್ಗೆ ಸುದ್ದಿಗಳನ್ನು ಘೋಷಿಸುವ ಮೂಲಕ ಉತ್ತರಿಸಿದನು ನೀವೇ ಸುರುಳಿಯನ್ನು ಓದಿ ಮತ್ತು ಅವಲೋಕನಗಳನ್ನು ಮಾಡಿ (ಯೆಶಾಯ 53 ನೋಡಿ). ಯೆಶಾಯ 53 ಯೇಸುವನ್ನು ಹೇಗೆ ವಿವರಿಸುತ್ತದೆ?
• ಸೌಲನ ಪ್ರಯಾಣದ ಉದ್ದೇಶಗಳ ಬಗ್ಗೆ ಲೂಕನ ವಿವರಣೆಯನ್ನು (9: 1-2 ನೋಡಿ) ಸೌಲನ ನಿಜವಾದ ಪ್ರಯಾಣದ ಅನುಭವದೊಂದಿಗೆ (9: 20-24 ನೋಡಿ) ಹೋಲಿಸಿ . ನಿಮಗೆ ಸಂಬಂಧಿಸಲಾಗುತ್ತಿದೆಯೇ? ದೇವರು ನಿಮ್ಮನ್ನು ಮತ್ತು ಜೀವನದಲ್ಲಿ ನಿಮ್ಮ ಯೋಜನೆಗಳನ್ನು ಹೇಗೆ ಪರಿವರ್ತಿಸಿದ್ದಾರೆ?
• ನಿಮ್ಮ ಓದುವಿಕೆ ಮತ್ತು ಪ್ರತಿಫಲನೆಯನ್ನು ಪ್ರಾರ್ಥನೆಯನ್ನಾಗಿ ಮಾಡಿ. ಅತ್ಯಾಶ್ಚರ್ಯವನ್ನು ಪ್ರೇರಿಪಿಸಿದ್ದೇನು ಎಂಬುದರ ಬಗ್ಗೆ ದೇವರೊಂದಿಗೆ ಮಾತನಾಡಿ. ನಿಮ್ಮ ಯೋಜನೆಗಳನ್ನು ಅವರಿಗೆ ಒಪ್ಪಿಸಿ ಮತ್ತು ಅವರು ನಿಜವಾಗಿಯೂ ಯಾರೆಂಬುದರ ಬಗ್ಗೆ ನಿಮ್ಮ ದೃಷ್ಟಿಯನ್ನು ನವೀಕರಿಸಲು ಬೇಡಿರಿ.
ಈ ಯೋಜನೆಯ ಬಗ್ಗೆ

ವ್ಯಕ್ತಿಗಳು, ಸಣ್ಣ ಗುಂಪುಗಳು ಮತ್ತು ಕುಟುಂಬಗಳನ್ನು 20 ದಿನಗಳಲ್ಲಿ ಅಪೊಸ್ತಲರ ಕೃತ್ಯಗಳನ್ನು ಓದಲು ಪ್ರೇರೇಪಿಸಲು ಬೈಬಲ್ ಪ್ರಾಜೆಕ್ಟ್ ಅಪ್‌ಸೈಡ್-ಡೌನ್ ಕಿಂಗ್ಡಮ್ ಭಾಗ 2 ವಿನ್ಯಾಸಗೊಳಿಸಿದೆ. ಈ ಯೋಜನೆಯು ಅನಿಮೇಟೆಡ್ ವೀಡಿಯೊಗಳು, ಒಳನೋಟವುಳ್ಳ ಸಾರಾಂಶಗಳು ಮತ್ತು ಪ್ರತಿಫಲಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ, ಇದು ಭಾಗವಹಿಸುವವರಿಗೆ ಯೇಸುವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಲೇಖಕರ ಅದ್ಭುತ ಸಾಹಿತ್ಯ ವಿನ್ಯಾಸ ಮತ್ತು ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳುತ್ತದೆ.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಬೈಬಲ್ ಪ್ರಾಜೆಕ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: https://bibleproject.com/Kannada
ವೈಶಿಷ್ಟ್ಯದ ಯೋಜನೆಗಳು

Worship Is More Than a Song!

To the Word

2 Chronicles | Chapter Summaries + Study Questions

Unbroken Fellowship With the Father: A Study of Intimacy in John

Instructive Pathways to Kingdom Wealth

5 Days of 5-Minute Devotions for Teen Girls

When the Joy Is Missing

Jesus Is…The Great I Am

Hope Now: 27 Days to Peace, Healing, and Justice
