ದೇವರ ಕಡೆಗೆ ನಿಮ್ಮ ಮಾರ್ಗವನ್ನು ಹುಡುಕುವುದುಮಾದರಿ

Finding Your Way Back To God

DAY 5 OF 5

ಈಗ ಇದು ಜೀವನ!

ಈ ಲೋಕಕ್ಕೆ ದೇವರು ಒಂದು ಕನಸನ್ನು ಇಟ್ಟುಕೊಂಡಿದ್ದಾರೆ, ಮತ್ತು ನೀವು ಅದರಲ್ಲಿ ಭಾಗವಹಿಸಬೇಕೆಂದು ನಿಮಗೆ ಆಹ್ವಾನ ನೀಡಲಾಗಿದೆ. ಅದೊಂದು ತಡೆಯಲಾಗದ ಕನಸು ದೇವರಿಗೆ ಶಾಶ್ವತಕ್ಕೂ ಇರುವದ್ದಾಗಿದೆ. ನಿಮ್ಮ ಜೀವಿತಕ್ಕಾಗಿ, ನಿಮ್ಮ ಸಮುದಾಯಕ್ಕೆ, ಮತ್ತು ಇಡೀ ಪ್ರಪಂಚಕ್ಕೆ ಇರುವ ಕನಸು ಅದು.

ನೀವು ನಿಮ್ಮ ಅಸ್ತಿತ್ವದ ಪ್ರತಿ ಕ್ಷಣವೂ ದೇವರು ನಿಮ್ಮನ್ನು ಪಟ್ಟು ಬಿಡದೇ ಭಾವೋದ್ರಿಕ್ತವಾಗಿ ನಿಮ್ಮನ್ನು ಪ್ರೀತಿಸುತ್ತಾರೆ ಎಂಬ ಆತ್ಮವಿಶ್ವಾಸದೊಂದಿಗೆ ಬದುಕಬೇಕೆಂಬುದು ದೇವರ ಕನಸು.

ಅದಕ್ಕಾಗಿ ದೇವರನ್ನು ಹುಡುಕುವ ದಾರಿಗೆ ಹಿಂದಿರುಗುವ ನಿಮ್ಮ ಪ್ರಯಾಣದ ಕೊನೆಯ ಎಚ್ಚರಿಕೆಯೇ ಜೀವನಕ್ಕಾಗಿ ಎಚ್ಚರಿಕೆ. ದೇವರು ತನ್ನೊಂದಿಗೆ ಆತನ ಗುಡಾರದಲ್ಲಿ ಇರುವ ಹೊಸ ಜೀವನಕ್ಕೆ ನಾವು ನಿಜವಾಗಿಯೂ ಎಚ್ಚರವಾದಾಗ, ನಮ್ಮ ಭವಿಷ್ಯಕ್ಕೆ ಸಂಪೂರ್ಣವಾಗಿ ಭಿನ್ನವಾದ ಸಾಧ್ಯತೆಗಳನ್ನು ಕಾಣುತ್ತೇವೆ. ನಾವು, "ಈಗ ಇದು ಜೀವನ!" ಎಂದು ಘೋಷಿಸಬಹುದು ಆದರೆ "ಜೀವನ" ಎಂದರೆ ಅದಕ್ಕೆ ಬೇರೆ ಅರ್ಥವಿದೆ ಎಂದು ಈಗ ನಮಗೆ ಅರಿವಾಗಿರುತ್ತದೆ. ಇದರ ಅರ್ಥವೇನೆಂದರೆ ಜೀವನವನ್ನು ಉತ್ತಮವಾಗಿ, ದೊಡ್ಡದಾಗಿ, ಮತ್ತು ಮುಂಚೆಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಜೀವಿಸಬೇಕು ಎಂದು.

ನಿಮ್ಮ ನೂತನ, ಜೀವನದುದ್ದಕ್ಕೂ ಇರುವ ಯೇಸುವಿನೊಂದಿಗಿನ ಸಂಚಾರ ನೀವು ಒಬ್ಬಂಟಿಗರಾಗದೇ ಹೋಗಬಹುದಾದ ಪ್ರಯಾಣವಾಗಿದೆ. ನಿಮ್ಮ ಪರಲೋಕ ತಂದೆಯಿಂದ ದೂರ ಬದುಕಲು ಇನ್ನೊಮ್ಮೆ ಅಗತ್ಯವಿಲ್ಲ. ಒಂದು ವೇಳೆ ನಿಮ್ಮನ್ನು ನೀವು ಅಲಕ್ಷ್ಯದ ಕಡೆಗೆ ತೇಲಿ ಹೋಗುತ್ತಿದ್ದೀರಿ, ಬದಲುಗಳನ್ನು ಹುಡುಕುತ್ತಿದ್ದೀರಿ, ನಿಮಗೆ ಅಗತ್ಯವಿರುವ ಎಲ್ಲಾ ಉತ್ತರಗಳು ನಿಮ್ಮ ಬಳಿ ಇದೆ ಎಂದು ಯೋಚಿಸುತ್ತಿದ್ದೀರಿ ಎಂದು ಕಂಡುಕೊಂಡರೆ . . . ಏನು ಮಾಡಬೇಕೆಂದು ನಿಮಗೆ ತಿಳಿದಿದೆ.

ಜೀವಿಸಬಹುದಾದ ನಿಜವಾದ ಜೀವನಕ್ಕೆ ಮರಳಿ ಬನ್ನಿರಿ! ನಿಮಗೆ ದಾರಿಯೂ ತಿಳಿದಿದೆ, ಮತ್ತು ನೀವು ಎಂದೆಂದಿಗೂ ಸೇರುವ ಸ್ಥಳವು ಮನೆಯೇ ಆಗಿದೆ.

ನೀವು ಪ್ರಯಾಣದ ರಸ್ತೆಯಲ್ಲಿ ಹಿಂತಿರುಗಿದ ಮತ್ತು ತಂದೆಯನ್ನು ಸಹಾಯ ಕೇಳಿದ ದಿನ ನಿಮ್ಮ ಜೀವನದ ರೀತಿಯ ಕುರಿತಾದ ಸಾಧ್ಯತೆಯನ್ನು ನೀವು ಯೋಚಿಸಿರುವ ಆಲೋಚನೆಗಿಂತಲೂ ವಿಭಿನ್ನವಾದ ಜೀವನವನ್ನು ಕಾಣಲು ನಿಮ್ಮ ಮುಂದಿನ ವರ್ಷಗಳಲ್ಲಿ ಸಿದ್ಧರಾಗಿರಿ. ಜೀವನಕ್ಕಾಗಿ ಎಚ್ಚರಿಕೆಯು ಅದರೊಂದಿಗೆ ಅನಿರೀಕ್ಷಿತ ಪ್ರಭಾವ ಮತ್ತು ಅವಕಾಶಗಳನ್ನು ತರುತ್ತದೆ. ಇದು ಹೇಗೆ ಸಾಧ್ಯ? ಕ್ರಿಸ್ತನು ನಿಮ್ಮೊಳಗೆ ಜೀವಂತವಿರುವ ಕಾರಣ, ಮತ್ತು ಅದು ಎಲ್ಲವನ್ನೂ ಸಹ ಬದಲಾಯಿಸಿಬಿಡುತ್ತದೆ. ಈಗ ನೀವು ನಿರುತ್ಸಾಹ ಇರುವ ಕಡೆ ಭರವಸೆಯನ್ನು ತರಬಹುದು. ಸೆರೆಮನೆವಾಸಿಗಳಿಗೆ ಬಿಡುಗಡೆಗೆ ಇರುವ ಹಾದಿಯನ್ನು ಈಗ ನೀವು ತೋರಿಸಬಹುದು. ಕತ್ತಲೆಗೆ ಈಗ ನೀವು ಬೆಳಕಾಗಬಹುದು.

ಮತ್ತುಇದೇ ಜೀವನ!

ತಂದೆಯ ಮೆಚ್ಚುಗೆಯ ಮಕ್ಕಳು ಇರುವ ಸಮುದಾಯದಲ್ಲಿ ನಿಮ್ಮ ಜಾಗವನ್ನು ಹುಡುಕಬಹುದು. ವಿವಾಹದಲ್ಲಿ, ಮನೆಗಳಲ್ಲಿ, ಶಾಲೆಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಮತ್ತು ಸಮುದಾಯಗಳಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ ಬದಲಾವಣೆ ತರಲು ಅವರೊಂದಿಗೆ ಕೂಡಿಕೊಳ್ಳಿ, ಕಲಿಯಿರಿ, ಮತ್ತು ಕೆಲಸ ಮಾಡಿರಿ.

ಇತರರಿಗೆ ದೇವರನ್ನು ಹುಡುಕುವ ಮಾರ್ಗಕ್ಕೆ ಹಿಂದಿರುಗಲು ನಾವು ಯಾವಾಗಲೂ ಸಹಾಯ ಮಾಡುತ್ತಿರಬೇಕು. ನಿಜವಾದ ಸಂಭ್ರಮಾಚರಣೆಯು ಅಲ್ಲಿಯೇ ಕಾಯುತ್ತಿದೆ.

ಈ ಐದು-ದಿನದ ಭಕ್ತಿ ಸಂದೇಶವನ್ನು ನೀವು ಹಿಂತಿರುಗಿ ನೋಡುವಾಗ, ಯಾವ "ಎಚ್ಚರಿಕೆ" ಯನ್ನು ನೀವು ಹೆಚ್ಚಾಗಿ ಪ್ರತಿಧ್ವನಿಸುತ್ತೀರಿ? ಯಾವ ಮುಂದಿನ ಹಂತಕ್ಕಾಗಿ ದೇವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ನೀವು ನಂಬುತ್ತೀರಿ?

ದೇವರ ವಾಕ್ಯ

ದಿನ 4

About this Plan

Finding Your Way Back To God

ಜೀವನದಿಂದ ಹೆಚ್ಚಿನದನ್ನು ನೀವು ಎದುರು ನೋಡುತ್ತಿರುವಿರಾ? ಹೆಚ್ಚಿನದನ್ನು ಬಯಸುವುದು ಎಂದರೆ ನಿಜವಾಗಿಯೂ ದೇವರ ಕಡೆಗೆ ಹಿಂದಿರುಗುವುದು—ದೇವರೊಡಗಿನ ನಿಮ್ಮ ಸಂಬಂಧ ಈಗ ಎಲ್ಲಿಯೇ ಇದ್ದರೂ. ನಾವೆಲ್ಲರೂ ದೇವರ ಕಡೆಗೆ ಹಿಂದಿರುಗುವ ದಾರಿಯಲ್ಲಿ ಮೈಲಿ ಗುರುತುಗಳ ಅನುಭವವನ್ನು—ಅಥವಾ ಎಚ್ಚರಿಕೆಗಳನ್ನು—ಪಡೆದಿರುತ್ತೇವೆ. ಇಲ್ಲಿರುವ ಪ್ರತಿಯೊಂದು ಮೈಲಿ ಗುರುತುಗಳ ಮೂಲಕ ಪ್ರಯಾಣ ನಡೆಸಿರಿ ಹಾಗೂ ನೀವು ಎಲ್ಲಿದ್ದೀರಿ ಮತ್ತು ಎಲ್ಲಿ ಇರಬೇಕು ಎಂದುಕೊಂಡಿದ್ದೀರಿ ಎಂಬುದರ ನಡುವೆ ಇರುವ ಅಂತರವನ್ನು ಚಿಕ್ಕದಾಗಿಸಿ. ನಾವು ದೇವರನ್ನು ಹುಡುಕಲು ಬಯಸುತ್ತೇವೆ, ಆತನು ನಾವು ಇನ್ನೂ ಹೆಚ್ಚಿನದನ್ನು ಹುಡುಕಲಿ ಎಂದು ಬಯಸುತ್ತಾನೆ.

More

Dave Ferguson, Jon Ferguson ಮತ್ತು WaterBrook Multnomah Publishing Group ಅವರಿಗೆ ಈ ಯೋಜನೆ ನೀಡಿದ್ದಕ್ಕೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಇಷ್ಟ ಪಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: http://yourwayback.org/