ದೇವರ ಕಡೆಗೆ ನಿಮ್ಮ ಮಾರ್ಗವನ್ನು ಹುಡುಕುವುದುಮಾದರಿ

ನಾನು ಮತ್ತೊಮ್ಮೆ ಪ್ರಾರಂಭಿಸುವಂತಾಗಿದ್ದರೆ
ದೇವರ ಕಡೆಗೆ ಹಿಂತಿರುಗುವ ನಮ್ಮ ಮುಂದಿನ ಪ್ರಯಾಣದ ಮಹತ್ವದ ತಿರುವುಗಳಲ್ಲಿ ಪಶ್ಚಾತಾಪಕ್ಕಾಗಿ ಒಂದು ಎಚ್ಚರಿಕೆಯ ಕರೆಯನ್ನು ಮಾಡಬೇಕು. ಒಂದು ಮುಂಜಾನೆ ನಿಮ್ಮ ಜೀವನವನ್ನು ನೀವು ನೋಡುವಾಗ, ನಿಮ್ಮೆಲ್ಲಾ ಅತ್ಯುತ್ತಮವಾದ ಪ್ರಯತ್ನಗಳನೆಲ್ಲಾ ಒಳಗೊಂಡು, ನೀವು ಮಾಡಿರುವುದೆಲ್ಲವೂ ಹಾಳು ಎಂದು ನಿಮಗೆ ಅರಿವಾಗುತ್ತದೆ. ನೀವು ನಿರಾಶೆಯಿಂದ ಮತ್ತು ಮನೋದುಃಖದಿಂದ ತುಂಬಿರುತ್ತೀರಿ. ಮತ್ತು ಈಗ ನಿಮಗೆ ವಿಷಯಗಳು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದಾಗ, ನೀವು ಇನ್ನೊಂದು ಅವಕಾಶವನ್ನು ಬಹುಶಃ ಇಷ್ಟ ಪಡುತ್ತೀರಿ. ಆದರೆ ನಿಮಗೆ ಅದು ಬರುವುದೋ ಇಲ್ಲವೋ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ.
ಬನ್ನಿ ಅದರ ಬಗ್ಗೆ ಯೋಚಿಸಿ, ನೀವು ಯಾಕೆ ಬರಬೇಕು?
ಆದರೂ ನಮ್ಮ ಜೊತೆಗಿರಿ.
ನಾವೆಲ್ಲರೂ ಒಳ್ಳೆಯತನದಿಂದ ಮತ್ತು ಪ್ರೀತಿಯಿಂದ ಬಂದಿದ್ದೇವೆ ಮತ್ತು ಹೆಚ್ಚಾಗಿ ಅದರಿಂದಲೇ ಮಾಡಲ್ಪಟ್ಟಿದ್ದೇವೆ ಎಂದು ನಮ್ಮೆಲ್ಲರ ಒಳಗೂ ಒಂದು ಗಾಢನಿಶ್ಚಯವಿದೆ. ನಾವು ತಳಕ್ಕೆ ಬಿದ್ದಾಗ ಮತ್ತು ನಾವು ಈ ಜೀವನದಲ್ಲಿ ಎಷ್ಟು ಹಾಳು ಮಾಡಿದ್ದೇವೆ ಎಂದು, ಮತ್ತು ಜೀವನವೂ ನಮ್ಮೆಲ್ಲರನ್ನು ಎಷ್ಟು ಹಾಳು ಮಾಡಿದೆ ಎಂಬ ಅರಿವಾದಾಗ, ನಮ್ಮ ಪ್ರತಿಕ್ರಿಯೆಯು ಹೀಗಿರುತ್ತದೆ, "ನಾನು ಮತ್ತೊಮ್ಮೆ ಪ್ರಾರಂಭಿಸುವಂತಾದರೆ."
ಒಂದು ಸುಂದರವಾದ ವಿಷಯವೇನೆಂದರೆ, ನೀವು ಮತ್ತೊಮ್ಮೆ ಪ್ರಾರಂಭಿಸಬಹುದು. ಒಳ್ಳೆತನದ ಮತ್ತು ಪ್ರೀತಿಯಲ್ಲಿ ನಿಮ್ಮ ಹುಟ್ಟಿನ ಬಗ್ಗೆ ನಿಮಗೆ ಇರುವ ಒಳಅರಿವು ಸಂಪೂರ್ಣವಾಗಿ ಸರಿಯಾಗಿದೆ. ದೇವರು ನಿಮಗೆ ಮತ್ತೊಮ್ಮೆ ಪ್ರಾರಂಭಿಸಲು ಅವಕಾಶ ನೀಡುತ್ತಾರೆ.
ನಮ್ಮಲ್ಲಿ ಹೆಚ್ಚಿನವರಿಗೆ, ಮತ್ತೊಮ್ಮೆ ಪ್ರಾರಂಭಿಸಲು ಸಿದ್ಧರಾದಾಗ, ಎಲ್ಲವೂ ಹಿಮ್ಮುಖವಾಗಿ ಹೋಗುವುದಕ್ಕಿಂತಲೂ ಮುಂಚಿನ ಜೀವನಕ್ಕೆ ಹಿಂತಿರುಗಬೇಕು ಎಂಬ ಸಹಜ ಅನಿಸಿಕೆ ಬರುತ್ತದೆ. ಆದರೆ ದೇವರ ಬಳಿ ಬೇರೆ ಉಪಾಯಗಳಿವೆ. ನಾವು ಊಹಿಸುವ ಆ ಉತ್ತಮ ಜೀವಿತಕ್ಕೆ ಹಾಗೆಯೇ ಹೋಗಿಬಿಡುವುದಕ್ಕೆ ಸಹಾಯ ಮಾಡುವುದಷ್ಟೇ ಆತನಿಗೆ ಅನಿಸುವುದಿಲ್ಲ. ಒಟ್ಟಾಗಿ ಒಂದು ವಿಭಿನ್ನ ರೀತಿಯ ಜೀವನದ ಅನುಭವವನ್ನು ನಾವು ಪಡೆಯಬೇಕೆಂದು ಆತನು ಇಚ್ಛಿಸುತ್ತಾನೆ. ದೇವರ ಕಡೆಗಿನ ಮಾರ್ಗವನ್ನು ಹುಡುಕಿ ಹಿಂತಿರುಗುವಾಗ ನಿಮ್ಮ ಭವಿಷ್ಯವಷ್ಟೇ ಬದಲಾಗುವುದಿಲ್ಲ ಬದಲಿಗೆ ನಿಮ್ಮ ಗತಿಸಿರುವ ಹಾಗೂ ಪ್ರಸ್ತುತ ಕಾಲವೂ ಸಹ ಬದಲಾಗುತ್ತದೆ.
ನಿಮ್ಮ ಎಲ್ಲಾ ದಿನಗಳಲ್ಲಿ ಗತಿಸಿರುವ ಕಾಲದ ನೋವಿನಿಂದ, ವರ್ತಮಾನದಲ್ಲಿ ಉದ್ದೇಶವಿಲ್ಲದೆ, ಮತ್ತು ಭವಿಷ್ಯಕ್ಕೆ ಆತ್ಮವಿಶ್ವಾಸವಿಲ್ಲದೆ ಬದುಕುವ ಬದುಕಿಗೆ ನೀವು ವಿದಾಯ ಹೇಳಲು ಸಿದ್ಧರಿದ್ದೀರಾ? ಪಶ್ಚಾತಾಪದಿಂದ ದೂರಕ್ಕೆ ಮತ್ತು ದೇವರಲ್ಲಿನ ಗುಡಾರದ ಸಮೀಪಕ್ಕೆ ಹೋಗುವ ನಿಮ್ಮ ಪ್ರಯಾಣವು ನಿಮ್ಮನ್ನು ಆಳವಾದ, ಸತ್ಯವಾದ ಜೀವನದೆಡೆಗೆ ಕರೆದೊಯ್ಯುತ್ತದೆ—ಆ ರೀತಿಯ ಜೀವನವೂ ನಿಮ್ಮನ್ನು ಇಂದಿನಿಂದ ಮತ್ತೊಮ್ಮೆ ಪ್ರಯತ್ನಿಸಲು ಮತ್ತು ದೇವರು ನಿಮ್ಮನ್ನು ಹೇಗೆ ಬದುಕಬೇಕು ಎಂದು ಆಸೆ ಪಟ್ಟಿದ್ದರೋ ಹಾಗೆಯೇ ಜೀವಿಸಲು ಪ್ರಾರಂಭಿಸುವುದಕ್ಕೆ ಆಹ್ವಾನಿಸುತ್ತದೆ. . . ಎಂದೆಂದಿಗೂ.
ಇಂದಿನಿಂದಲೇ ದೇವರು ನಿಮಗೆ ಮತ್ತೊಮ್ಮೆ ಪ್ರಯತ್ನಿಸಲು ಅವಕಾಶ ಮಾಡಿಕೊಡುತ್ತಾರೆ ಎಂದು ನಂಬುವುದು ನಿಮಗೆ ಹೇಗೆ ಕಾಣಿಸುತ್ತದೆ? ಭವಿಷ್ಯದ ಬಗ್ಗೆ ನಿಮಗೆ ಇರುವ ನಿಮ್ಮ ಆಲೋಚನೆಗಳು ಹೇಗೆ ಬದಲಾಗುತ್ತವೆ?
ದೇವರ ವಾಕ್ಯ
ಈ ಯೋಜನೆಯ ಬಗ್ಗೆ

ಜೀವನದಿಂದ ಹೆಚ್ಚಿನದನ್ನು ನೀವು ಎದುರು ನೋಡುತ್ತಿರುವಿರಾ? ಹೆಚ್ಚಿನದನ್ನು ಬಯಸುವುದು ಎಂದರೆ ನಿಜವಾಗಿಯೂ ದೇವರ ಕಡೆಗೆ ಹಿಂದಿರುಗುವುದು—ದೇವರೊಡಗಿನ ನಿಮ್ಮ ಸಂಬಂಧ ಈಗ ಎಲ್ಲಿಯೇ ಇದ್ದರೂ. ನಾವೆಲ್ಲರೂ ದೇವರ ಕಡೆಗೆ ಹಿಂದಿರುಗುವ ದಾರಿಯಲ್ಲಿ ಮೈಲಿ ಗುರುತುಗಳ ಅನುಭವವನ್ನು—ಅಥವಾ ಎಚ್ಚರಿಕೆಗಳನ್ನು—ಪಡೆದಿರುತ್ತೇವೆ. ಇಲ್ಲಿರುವ ಪ್ರತಿಯೊಂದು ಮೈಲಿ ಗುರುತುಗಳ ಮೂಲಕ ಪ್ರಯಾಣ ನಡೆಸಿರಿ ಹಾಗೂ ನೀವು ಎಲ್ಲಿದ್ದೀರಿ ಮತ್ತು ಎಲ್ಲಿ ಇರಬೇಕು ಎಂದುಕೊಂಡಿದ್ದೀರಿ ಎಂಬುದರ ನಡುವೆ ಇರುವ ಅಂತರವನ್ನು ಚಿಕ್ಕದಾಗಿಸಿ. ನಾವು ದೇವರನ್ನು ಹುಡುಕಲು ಬಯಸುತ್ತೇವೆ, ಆತನು ನಾವು ಇನ್ನೂ ಹೆಚ್ಚಿನದನ್ನು ಹುಡುಕಲಿ ಎಂದು ಬಯಸುತ್ತಾನೆ.
More