ಯೋಜನೆಯ ಮಾಹಿತಿ

ದೇವರ ಕಡೆಗೆ ನಿಮ್ಮ ಮಾರ್ಗವನ್ನು ಹುಡುಕುವುದುಮಾದರಿ

Finding Your Way Back To God

DAY 1 OF 5

ಇನ್ನೂ ಹೆಚ್ಚಿನದು ಇರಲೇಬೇಕು

ನಿಮಗೆ ಪೂರ್ಣವಾದ ತೃಪ್ತಿಯನ್ನು ನೀಡದಿರುವ ವಿಷಯಗಳನ್ನು ಜೀವನದಲ್ಲಿ ನೀವು ಬೆನ್ನತ್ತಿ ಓಡುತ್ತಿರುವಾಗ ಈ ಭಾವನೆ ನಿಮಗೆ ಎಂದಾದರೂ ಬರುತ್ತದೆಯೇ? ಆ ಭಾವನೆಗೆ ಲಕ್ಷ್ಯ ಕೊಡಿರಿ. ಅದು ದೇವರಿಂದ ಬಂದದ್ದು.


ನಾವು ಕೇವಲ ಮಾದಕ ದ್ರವ್ಯಗಳ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ, ಹೇಗೋ ಮದ್ಯಪಾನ ಮಾಡುವುದು ಮತ್ತು ಇತರೆ ಚಟಗಳನ್ನು ಹಿಂಬಾಲಿಸುವುದು ಖಂಡಿತವಾಗಿಯೂ ನಿರರ್ಥಕ ವಿಷಯಗಳನ್ನು ಹಿಂಬಾಲಿಸುವುದರ ಮಾರ್ಗಗಳು. ಆದರೆ ನಮಗೆ ಪ್ರತಿ ವಾರ ಸಭೆಗೆ ಬರುವ ಹಲವಾರು "ಒಳ್ಳೆಯ ಸಭೆ ಮಂದಿ"—ಅಥವಾ ವೇದಿಕೆಯಿಂದ ಇತರರಿಗೆ ಬೋಧಿಸುವವರು—ತಮ್ಮನ್ನು ದೇವರಿಂದ ದೂರವಾಗಿರುವವರು ಎಂದು ಭಾವಿಸಿಕೊಂಡಿರುವ ಇವರನ್ನು ನಾವು ನೋಡಿರುತ್ತೇವೆ. ಅವರೆಲ್ಲರೂ ಬಾಹ್ಯವಾಗಿ "ಯಶಸ್ವಿಯಾದವರು" ಅಥವಾ "ಜೋಡಿಸಲ್ಪಟ್ಟವರು" ಅಥವಾ "ನೀತಿವಂತರು" ಆಗಿರುತ್ತಾರೆ, ಆದರೆ ಅಂತರಂಗದಲ್ಲಿ ದೇವರು ಎಂಬ ಕೊರತೆಯಿರುತ್ತದೆ. ಧಾರ್ಮಿಕ ಆಚರಣೆಗಳು ಮತ್ತು ಕೆಲಸ, ಶಾಲೆ, ಅಥವಾ ಕುಟುಂಬ ಎಂಬವುಗಳಲ್ಲಿಯೇ ನಿರತರಾಗಿರುತ್ತಾರೆ ಆದರೆ ಅದು ಸಾಲುವುದಿಲ್ಲ. ದೇವರ ನೈಜತೆಯನ್ನು ಅನುಭವಿಸಲು ಅವರು ತವಕ ಪಡುತ್ತಿರುತ್ತಾರೆ.


ಅದೇ ತವಕವು ದೇವರ ಕಡೆಗೆ ಹಿಂದಿರುಗಲು ದಾರಿಯನ್ನು ಹುಡುಕುತ್ತಿರುವ ನಮ್ಮೆಲ್ಲರ ಆತ್ಮೀಕ ಎಚ್ಚರಿಕೆಯಾಗಿದೆ: "ಇನ್ನೂ ಹೆಚ್ಚಿನದು ಇರಲೇಬೇಕು".


ನೀವು ಆಳವಾದ ಮತ್ತು ತೃಪ್ತಿಕರ ಪ್ರೀತಿಗಾಗಿ ತವಕ ಪಡುವಾಗ, ನಿಜವಾಗಲೂ ವ್ಯತ್ಯಾಸ ತರುವ ಯಾವುದಾದರೊಂದಕ್ಕೆ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಬೇಕೆಂದು ಬಯಸಿದಾಗ, ಅಥವಾ ನೀವು ಜೀವನದ ಅತ್ಯಂತ ಕಷ್ಟವಾಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವಾಗ, ನೀವು ದೇವರನ್ನು ಹುಡುಕುತ್ತಿರುತ್ತೀರಿ. ನಿಮಗೆ ಸತ್ಯವಾಗಿಯೂ ಎರಡು ಆಯ್ಕೆಗಳಿವೆ: ನಿಮ್ಮ ಸ್ವಂತಿಕೆಯಿಂದ ಈ ಬಯಕೆಗಳನ್ನು ತೀರಿಸಿಕೊಳ್ಳುವುದಕ್ಕೆ ನೀವು ಹುಡುಕುತ್ತಲೇ ಇರಬಹುದು, ಅಥವಾ ಮೊದಲಿಗೆ ನಿಮಗೆ ಆ ಬಯಕೆಗಳನ್ನು ನೀಡಿರುವ ಆತನನ್ನು ಹುಡುಕುವುದು.


ನಿಜವಾದ ಪ್ರೀತಿಗಾಗಿ ಇರುವ ನಮ್ಮ ತವಕ ಮಾನವ ಕುಲವು ಹೇಗೆ ಸೃಷ್ಟಿಯಾಯಿತು ಎನ್ನುವ ಅಂಶಕ್ಕೆ ಮೊದಲನೆಯದಾಗಿ ನಮ್ಮನ್ನು ಕರೆದೊಯ್ಯುತ್ತದೆ. ದೇವರು ಆತನ ಪ್ರೀತಿಯನ್ನು ನಾವು ನೇರವಾಗಿ ಅನುಭವಿಸಬೇಕು ಹಾಗೂ ಇತರರ ಜೊತೆಗಿನ ನಮ್ಮ ಆರೋಗ್ಯಕರ ಸಂಬಂಧದಿಂದ ಅನುಭವಿಸಬೇಕು ಎಂದು ಬಯಸುತ್ತಾರೆ. ನಾವು ಬಯಸುವ ವಿಷಯವು, ದೇವರ ಬಳಿಯಿದೆ ಎಂಬುದಷ್ಟೇ ಅಲ್ಲ ಆದರೆ ಅದು ದೇವರೇ ಆಗಿದ್ದಾರೆ. ಆತನೇ ಪ್ರೀತಿ ಆಗಿದ್ದಾನೆ ಮತ್ತು ಆತನು ನಮ್ಮನ್ನು ತನ್ನ ಪ್ರೀತಿಯಿಂದ ಹಿಂಬಾಲಿಸುತ್ತಾನೆ.


ವೇಶ್ಯಾಗೃಹದ ಬಾಗಿಲನ್ನು ತಟ್ಟುವ ಪ್ರತಿಯೊಬ್ಬ ಮನುಷ್ಯನೂ ದೇವರನ್ನು ನಿಜವಾಗಿಯೂ ಹುಡುಕುತ್ತಿದ್ದಾನೆ ಎಂಬ ಹೇಳಿಕೆಯನ್ನು ನಾವು ಕೇಳಿದ್ದೇವೆ. ಸ್ವಯಂ-ವಿನಾಶಕಾರಿ ವರ್ತನೆ ಅಥವಾ ಸಂಬಂಧದ ಬಾಗಿಲನ್ನು ನೀವು ತಟ್ಟುತ್ತಿದ್ದರೆ, ದೇವರನ್ನು ಹುಡುಕುವ ಮಾರ್ಗದಲ್ಲಿನ ನಿಮ್ಮ ಪ್ರಯಾಣದ ಒಂದು ಮುಖ್ಯವಾದ ಘಟ್ಟಕ್ಕೆ ಬಂದು ನೀವು ತಲುಪಿದ್ದೀರಿ ಎಂದರ್ಥ. ಏಕೆ? ಏಕೆಂದರೆ ಅಗ್ಗದ ಬದಲಿಗಳನ್ನು ಮಾಡಿಕೊಂಡಾಗ ನಿಮಗೆ ಅನಿವಾರ್ಯವಾಗಿ ಆಗುವ ನಿರಾಶೆಯು ನಿಜವಾದ ಪ್ರೀತಿಯು ಎಲ್ಲಿ ಸಿಕ್ಕುವುದು ಎಂಬ ಆಲೋಚನೆಗೆ ನಿಮ್ಮನ್ನು ದೂಡುತ್ತದೆ. ದೇವರು ನಿಮ್ಮ ಪ್ರೀತಿಯನ್ನು ಮತ್ತು ಪ್ರೀತಿಸಲ್ಪಡಬೇಕೆಂಬ ಬಯಕೆಯನ್ನು ಪೂರೈಸುವುದಕ್ಕೆ ನಿಮ್ಮನ್ನು ನೀವು ತೆರೆದಿಡುತ್ತೀರಾ?


ಈ ವಾರದಲ್ಲಿ ನೀವು ಮಾಡಿರುವ ಚಟುವಟಿಕೆಗಳು ನಿಮಗೆ ತೃಪ್ತಿ ಕೊಡುವುದು ಯಾವುವೆಂದು ಹೇಳುತ್ತಿವೆ?


Scripture

ದಿನ 2

About this Plan

Finding Your Way Back To God

ಜೀವನದಿಂದ ಹೆಚ್ಚಿನದನ್ನು ನೀವು ಎದುರು ನೋಡುತ್ತಿರುವಿರಾ? ಹೆಚ್ಚಿನದನ್ನು ಬಯಸುವುದು ಎಂದರೆ ನಿಜವಾಗಿಯೂ ದೇವರ ಕಡೆಗೆ ಹಿಂದಿರುಗುವುದು—ದೇವರೊಡಗಿನ ನಿಮ್ಮ ಸಂಬಂಧ ಈಗ ಎಲ್ಲಿಯೇ ಇದ್ದರೂ. ನಾವೆಲ್ಲರೂ ದೇವರ ಕಡೆಗೆ ಹಿಂದಿರುಗುವ ದಾರಿಯಲ್ಲಿ ಮೈಲಿ ಗುರುತುಗಳ ಅನುಭವವನ್ನು—...

More

Dave Ferguson, Jon Ferguson ಮತ್ತು WaterBrook Multnomah Publishing Group ಅವರಿಗೆ ಈ ಯೋಜನೆ ನೀಡಿದ್ದಕ್ಕೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಇಷ್ಟ ಪಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: http://yourwayback.org/

YouVersion uses cookies to personalize your experience. By using our website, you accept our use of cookies as described in our Privacy Policy