ಗ್ರೇಸ್ ಇನ್ ಯುವರ್ ಸ್ಟೋರಿ预览

ಎಲ್ಲರಿಗೂ ಕೃಪೆ
ನಾವು ಕೃಪೆಯನ್ನು ಪಡೆದ ನಂತರ, ನಾವು ಇತರರನ್ನು ನೋಡುವ ರೀತಿ ಬದಲಾಗುತ್ತದೆ.
ಜನರನ್ನು ಶತ್ರುಗಳೆಂದು ನೋಡುವ ಬದಲು, ನಾವು ಅವರನ್ನು ಕೃಪೆಯ ಅಗತ್ಯವಿರುವ ಜನರಂತೆ ನೋಡಬಹುದು. ನಮ್ಮ ಸುತ್ತಮುತ್ತಲಿನವರಿಂದ ಪರಿಪೂರ್ಣತೆಯನ್ನು ಬಯಸುವ ಬದಲು, ನಾವು ಅವರ ವೈಫಲ್ಯಗಳು ಮತ್ತು ಅಪೂರ್ಣತೆಗಳೊಂದಿಗೆ ಪ್ರೀತಿಸಬಹುದು. ನಾವು ಇತರರಿಗಿಂತ ಉತ್ತಮರು ಎಂದು ಯೋಚಿಸುವ ಬದಲು, ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸವೆಂದರೆ ದೇವರ ಕೃಪೆ ಎಂದು ನಾವು ಅರಿತುಕೊಳ್ಳಬಹುದು.
ದೇವರ ಕೃಪೆಯ ಬಗ್ಗೆ ನಾವು ಮೌನವಾಗಿರಲು ಸಾಧ್ಯವಿಲ್ಲ.
ಯೇಸುವನ್ನು ಹೊರತುಪಡಿಸಿ ಎಲ್ಲದರಲ್ಲೂ ಪ್ರೀತಿ, ಭರವಸೆ, ಸಂತೋಷ ಮತ್ತು ಶಾಂತಿಯನ್ನು ಹುಡುಕುತ್ತಿರುವ ಜನರಿಂದ ನಾವು ಸುತ್ತುವರಿದಿದ್ದೇವೆ.
"ಪ್ರಿನ್ಸ್ ಆಫ್ ಪ್ರೀಚರ್ಸ್" ಎಂದು ಕರೆಯಲ್ಪಡುವ ಚಾರ್ಲ್ಸ್ ಸ್ಪರ್ಜನ್ ಒಮ್ಮೆ ಹೇಳಿದ್ದರು, "ಮಹಾನ್ ವೈದ್ಯ [ದೇವರು] ನಿಮಗೆ ರೋಗಿಗಳನ್ನು ಗುಣಪಡಿಸುವ ಔಷಧಿಯನ್ನು ಅನುಗ್ರಹಿಸಿದ್ದಾನೆ. ಅವರು ನಿಮ್ಮ ಸುತ್ತಲೂ ಸಾಯುತ್ತಿರುವುದನ್ನು ನೀವು ನೋಡುತ್ತೀರಿ, ಆದರೆ ನೀವು ಎಂದಿಗೂ ಔಷಧಿಯ ಬಗ್ಗೆ ಮಾತನಾಡುವುದಿಲ್ಲ!”
ಸತ್ಯವೇನೆಂದರೆ,ನಮ್ಮ ಸುತ್ತಲಿನ ಜಗತ್ತು ಯೇಸುವಿಲ್ಲದೆ ಸಾಯುತ್ತಿದೆ. ನಾವು ಯೇಸುವಿನ ಮೂಲಕ ದೇವರ ಇರುವಿಕೆಯಿಂದ ಸಮಾಧಾನ ಹೊಂದಿರುವುದರಿಂದ, ಮೋಕ್ಷ ಎಲ್ಲಿ ಸಿಗುತ್ತದೆ ಎಂದು ನಮಗೆ ತಿಳಿದಿದೆ. ದೇವರು ನಮಗೆ ಮೋಕ್ಷದ ಸಂದೇಶ ನೀಡಿದ್ದಾನೆ ಮತ್ತು ನಾವು ಅದನ್ನು ಇತರರಿಗೆ ಹೇಳಬಹುದು.
"ಇದೆಲ್ಲವೂ ಕ್ರಿಸ್ತನ ಮೂಲಕ ತನ್ನೊಂದಿಗೆ ನಮ್ಮನ್ನು ಸಮಾಧಾನಪಡಿಸಿದ ಮತ್ತು ಸಮನ್ವಯದ ನಂಬಿಕೆಯನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ನಮಗೆ ನೀಡಿದ ಆ ದೇವರಿಂದ ಬಂದಿದೆ". (2 ಕೊರಿಂಥಿಯಾನ್ಸ್5:18).
ಸುವಾರ್ತೆ ಯಾರಾದರೂ ಕೇಳಬಹುದಾದ ಅತ್ಯುತ್ತಮ ಸುದ್ದಿಯಾಗಿದೆ. ಇದು ಜಗತ್ತಿಗೆ ದೇವರ ಸಂದೇಶವಾಗಿದೆ ಮತ್ತು ಆತನು ಅದನ್ನು ತನ್ನ ಮಕ್ಕಳಾದ ನಮಗೆ ಒಪ್ಪಿಸಿದ್ದಾನೆ.
ನಿಮ್ಮ ಸಹೋದ್ಯೋಗಿ ಈ ಸಂದೇಶವನ್ನು ಕೇಳುವ ಅಗತ್ಯವಿದೆ.
ನಿಮ್ಮ ನೆರೆಹೊರೆಯವರು ಈ ಸಂದೇಶವನ್ನು ಕೇಳುವ ಅಗತ್ಯವಿದೆ.
ನಿಮ್ಮ ಸಹಪಾಠಿ ಈ ಸಂದೇಶವನ್ನು ಕೇಳುವ ಅಗತ್ಯವಿದೆ.
ನಿಮ್ಮ ಕುಟುಂಬ ಈ ಸಂದೇಶವನ್ನು ಕೇಳುವ ಅಗತ್ಯವಿದೆ.
ಎಲ್ಲರೂ ಈ ಸಂದೇಶವನ್ನು ಕೇಳುವ ಅಗತ್ಯವಿದೆ.
ನಿಮ್ಮ ಕೃಪೆಯ ಕಥೆಯನ್ನು ಹಂಚಿಕೊಳ್ಳುವ ಮೂಲಕ ಪ್ರಾರಂಭಿಸಿ. ಕಳೆದುಹೋದ ಸ್ಥಿತಿಯಿಂದ ನೀವು ಹೇಗೆ ಹೊರಬಂದಿರಿ? ಯೇಸುವಿನ ಮೇಲಿನ ನಿಮ್ಮ ನಂಬಿಕೆಯ ಬಗ್ಗೆ ಮಾತನಾಡುವುದು ಭಯಾನಕವಾಗಿರಬಹುದು. ಆದರೆ ಅದು ಯೋಗ್ಯವಾಗಿದೆ. ಯೇಸು ನಮ್ಮ ಪರವಾಗಿ ಅವಮಾನ, ಅಪಹಾಸ್ಯ, ಟೀಕೆ, ನಿರಾಕರಣೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಸಹಿಸಿಕೊಂಡನು. ಅವನಿಗಾಗಿ ಅದೆಲ್ಲವನ್ನೂ ನೀವು ಸಹಿಸಿಕೊಳ್ಳಲು ಸಿದ್ಧರಿದ್ದೀರಾ?
ದೇವರು ನಿಮಗೆ ಧೈರ್ಯ ನೀಡಲಿ ಎಂದು ಬೇಡಿಕೊಳ್ಳಿ. ಜನರನ್ನು ನೋಡಲು ಮತ್ತು ಅವರ ಕಥೆಗಳನ್ನು ಕೇಳಲು ನಿಮಗೆ ಸಹಾಯ ಮಾಡುವಂತೆ ಆತನನ್ನು ಕೇಳಿ. ನಿಮ್ಮ ನಂಬಿಕೆಯನ್ನು ಹಂಚಿಕೊಳ್ಳುವುದು ಎಂದರೆ ಎಲ್ಲಾ ಸರಿಯಾದ ವಿಷಯಗಳನ್ನು ಹೇಳುವ ಬದಲು ಯೇಸುವಿನಂತೆ ಆಲಿಸುವುದು ಮತ್ತು ಪ್ರೀತಿಸುವುದು.
ಹೆಚ್ಚಿನ ಜನರು ಯೇಸುವನ್ನು ತಿಳಿದಿಲ್ಲ, ಏಕೆಂದರೆ ಯಾರೂ ಅವರನ್ನು ತೋರಿಸಿಲ್ಲ ಅಥವಾ ದೇವರ ಕೃಪೆಯ ಬಗ್ಗೆ ಹೇಳಿಲ್ಲ. ಇಂದು ಎಲ್ಲವೂ ಬದಲಾಗಬಹುದಾದ ದಿನವಾಗಿದೆ.
ನಮ್ಮ ಉಚಿತ ಇವ್ಯಾಂಜೆಲಿಸಮ್ ತರಬೇತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ pulse.org/makejesusknown
ಮುಂದಿನ ಹಂತಗಳು
ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ಕಥೆ ಇದೆ.
ದೇವರ ಕೃಪೆಯಿಂದ ನಾವು ಹೇಗೆ ಪ್ರಭಾವಿತರಾಗಿದ್ದೇವೆ ಎಂಬುದರ ಕಥೆ. ಜಗತ್ತು ನಮ್ಮ ಕಥೆಗಳನ್ನು ಕೇಳುವ ಅಗತ್ಯವಿದೆ. ಅದಕ್ಕಾಗಿಯೇ ಮುಂದಿನ ಮೂರು ವರ್ಷಗಳಲ್ಲಿ, ಕೃಪೆಯ ಸಾವಿರಾರು ಕಥೆಗಳನ್ನು ಸೆರೆಹಿಡಿಯಲು ಪಲ್ಸ್ ಇವಾಂಜೆಲಿಸಂ ಜಗತ್ತಿನತ್ತ ಹೋಗುತ್ತಿದೆ.
ನಮ್ಮನ್ನು ಬದಲಾಯಿಸಿದ ಸಂದೇಶವನ್ನು ಜನರು ಕೇಳುವ ಅಗತ್ಯವಿದೆ. ದೇವರ ಕೃಪೆ ಎಲ್ಲರಿಗೂ ಇದೆ. ಯಾರೂ ಇದರಿಂದ ಹೊರತಲ್ಲ. ಯಾರೂ ಹೆಚ್ಚು ದೂರ ಹೋಗಿಲ್ಲ. ಕಳೆದುಹೋದ ಯಾರೂ ತಮ್ಮನ್ನು ಮತ್ತೆ ಕಂಡುಕೊಳ್ಳಬಹುದು. ಕೃಪೆವು ದೇವರ ಮನೆಗೆ ಹೋಗುವ ಏಕೈಕ ಮಾರ್ಗವಾಗಿದೆ.
ನೀವು ಈ ಜಾಗತಿಕ ಚಳುವಳಿಯ ಭಾಗವಾಗಬೇಕು ಎಂಬುದು ನಮ್ಮ ಆಸೆ.
http://anthem.org/youversion ನಲ್ಲಿ ವೀಕ್ಷಿಸಿ. ಮತ್ತು ನಿಮ್ಮ ಕಥೆಯನ್ನು ಹಂಚಿಕೊಳ್ಳಿ.
读经计划介绍

ನೀವು ಬಹುಶಃ "ಕೃಪೆ" ಎಂಬ ಪದವನ್ನು ಕೇಳಿದ್ದೀರಿ, ಆದರೆ ಅದರ ನಿಜವಾದ ಅರ್ಥವೇನು? ದೇವರ ಕೃಪೆ ನಮ್ಮ ಜೀವನವನ್ನು ಹೇಗೆ ರಕ್ಷಿಸಬಹುದು ಮತ್ತು ಪರಿವರ್ತಿಸಬಹುದು? ಈ ಅದ್ಭುತ ಕೃಪೆ ನಾವು ಇರುವ ಸ್ಥಳದಲ್ಲಿ ಹೇಗೆ ಸಂಧಿಸುತ್ತದೆ ಮತ್ತು ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
More