ಮಹಾಆಜ್ಞೆ预览

ಹೊರಟು ಹೋಗಲು ಆದೇಶಿಸಲಾಗಿದೆ – ಎಲ್ಲರಿಗಾಗಿ ಎಲ್ಲರೂ
“ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ.” -
ಮಾರ್ಕ 16:15
ಮಹಾಆಜ್ಞೆಯ ಆಳದಲ್ಲಿ, ನಾವು ಆಳವಾದ ಸತ್ಯವನ್ನು ಕಂಡುಕೊಳ್ಳುತ್ತೇವೆ - ಇದು ಕೇವಲ ನಮಗೆ
ಕೊಟ್ಟ ಆಜ್ಞೆ ಮಾತ್ರವಲ್ಲದೆ, ಆದರೆ ದೇವರೇ ಸ್ವತಃ ನೇಯ್ದ ನಿತ್ಯವಾದ ಸೇವಾಧ್ಯೆಯವಾಗಿದೆ.
ಆಜ್ಞೆಯು ಅದರ ಮಧ್ಯಭಾಗದಲ್ಲಿ ದೇವರ ಹೃದಯದ ಅಭಿವ್ಯಕ್ತಿಯಾಗಿದೆ.
ತಂದೆಯು ತನ್ನ ಮಗನನ್ನು ಕಳುಹಿಸುವ ಮೂಲಕ ಆಜ್ಞೆಯನ್ನು ಪ್ರಾರಂಭಿಸಿದನು ಮತ್ತು ಪ್ರತಿಯಾಗಿ
ತಂದೆ ಮತ್ತು ಮಗನು ಪವಿತ್ರಾತ್ಮನನ್ನು ಕಳುಹಿಸಿದರು. ಈಗ ನಾವು ವಿಮೋಚನೆ ಮತ್ತು ಪ್ರೀತಿಯ ಈ
ದೈವಿಕ ಕಥೆಯಲ್ಲಿ ಸೇರಲು ನಿಯೋಜಿಸಲ್ಪಟ್ಟಂತೆ, ಆತನು ನಮ್ಮನ್ನು ಕಳುಹಿಸುತ್ತಾನೆ.
ಮಹಾಆಜ್ಞೆಯನ್ನು ಆಯ್ದ ಕೆಲವು ಅಥವಾ ಕೆಲವು ಋತುಗಳಿಗೆ ಸೀಮಿತಗೊಳಿಸುವ ಯಾವುದೇ
ತಪ್ಪುಗ್ರಹಿಕೆಗಳನ್ನು ನಾವು ಹೊರಹಾಕೋಣ. ಈ ಆಜ್ಞೆಯು ತಮ್ಮನ್ನು ಕ್ರಿಸ್ತನ ಶಿಷ್ಯರು ಅಂದರೆ ದೇವರ
ಮಕ್ಕಳು ಎಂದು ಹೇಳಿಕೊಳ್ಳುವ ಎಲ್ಲರಿಗೂ ವಿಸ್ತರಿಸುತ್ತದೆ.
ನಮ್ಮ ಹಿನ್ನೆಲೆಗಳು, ಸಾಮರ್ಥ್ಯಗಳು ಅಥವಾ ಮಿತಿಗಳನ್ನು ಲೆಕ್ಕಿಸದೆ, ಭೂಮಿಯ ಮೇಲೆ ದೇವರ
ರಾಜ್ಯವನ್ನು ಮುಂದೆಸಾಗಿಸುವಲ್ಲಿ ನಮ್ಮ ಪ್ರತಿಯೊಬ್ಬರಿಗೂ ಮಹತ್ವದ ಪಾತ್ರವಿದೆ.
ಈ ಆಜ್ಞೆಯ ವ್ಯಾಪ್ತಿಯಿಂದ ಯಾವುದೇ ರಾಷ್ಟ್ರ ಅಥವಾ ಪ್ರದೇಶವನ್ನು ಬಿಡುವಂತಿಲ್ಲ. ಯೇಸುವಿನ
ಪರಿವರ್ತಕ ಪ್ರೀತಿಗೆ ನಾವು ಸಾಕ್ಷಿಯಾಗುತ್ತೇವೆ, ಪ್ರತಿಯೊಂದು ನೊಂದಿರುವ ಹೃದಯಕ್ಕೆ
ಪರಿಹಾರವನ್ನು ಹೊಂದಿದ್ದು, ಪ್ರತಿಯೊಂದು ಹಾತೊರೆಯುವ ಆತ್ಮಕ್ಕೆ ಉತ್ತರವಾಗಿದೆ.
ಕನಿಕರ ಮತ್ತು ಮನವರಿಕೆಯಿಂದ, ಯಾವುದೇ ದೇಶವನ್ನು ಬಿಡದೆ, ಯಾವುದೇ ಹೃದಯವನ್ನು
ಸ್ಪರ್ಶಿಸದಂತೆ ಬಿಡದೆ, ನಾವು ಯೇಸುವಿನಲ್ಲಿ ಕಂಡುಬರುವ ನಿರೀಕ್ಷೆಯನ್ನು ಪ್ರಕಟಿಸುತ್ತೇವೆ.
ನೆನಪಿಡಿ, ಮಹಾ ಆಜ್ಞೆಯು ಕೇವಲ ಸಲಹೆಯಲ್ಲ, ಆದರೆ ದೈವಿಕ ಆಜ್ಞೆಯಾಗಿದೆ. ಲೋಕವು ಬೆಳಕಿಗಾಗಿ
ಹಂಬಲಿಸುತ್ತಿದೆ, ಆತನ ಗುಣಪಡಿಸುವ ಸ್ಪರ್ಶ, ಮತ್ತು ನಿಂತುಹೋಗದ ಪ್ರೀತಿಗಾಗಿ, ನಾವು ಅವರಿಗೆ
ಯೇಸುವಿನ ಪರಿಚಯ ಮಾಡಬೇಕಾಗಿದೆ. ನಮ್ಮ ದರ್ಶನವನ್ನು ಗಡಿಗಳನ್ನು ಮೀರಿ ವಿಸ್ತರಿಸಬೇಕಾಗಿದೆ,
ಇದು ಪ್ರತಿಯೊಂದು ದೇಶ, ಪ್ರತಿಯೊಂದು ಜನರ ಗುಂಪು ಮತ್ತು ಸತ್ಯಕ್ಕಾಗಿ ಹಸಿದ ಪ್ರತಿಯೊಬ್ಬ
ಆತ್ಮವನ್ನು ಒಳಗೊಳ್ಳಬೇಕು.
ನಾವು ಉದ್ದೇಶದಿಂದ ಏಳೊಣ, ನಮ್ಮ ಧ್ಯೇಯದಲ್ಲಿ ದೃಢನಿಶ್ಚಯದಿಂದಿರೋಣ ಮತ್ತು ನಮಗೆ
ವಹಿಸಿಕೊಟ್ಟ ಕರೆಯನ್ನು ನೆರವೇರಿಸೋಣ.
读经计划介绍

ಸತ್ಯವೇದ ಯೋಜನೆಯಾಗಿರುವ "ಮಹಾಆಜ್ಞೆ"ಗೆ ಸ್ವಾಗತ, ಕ್ರಿಸ್ತನ ಪ್ರತಿಯೊಬ್ಬ ಶಿಷ್ಯನ ಮೇಲಿರುವ ಹೊರೆಯು ಹೊರಟುಹೋಗಿ ಆತನ ಪ್ರೀತಿಯನ್ನು ಎಲ್ಲರಿಗೂ ತಿಳಿಸಲು ದೈವಿಕ ಆದೇಶದ ಪರಿಶೋಧನೆಯಾಗಿದೆ. ಈ ಮೂರು ದಿನಗಳ ಪ್ರಯಾಣವು ದೇವರಿಂದ ವೈಯಕ್ತಿಕ ಮತ್ತು ಸಾಮೂಹಿಕ ಕರೆಯಾಗಿ ಮಹಾಆಜ್ಞೆಯನ್ನು ಅಂಗೀಕರಿಸುವ ಆಳವಾದ ಪ್ರಾಮುಖ್ಯತೆಯನ್ನು ಪರಿಶೀಲಿಸುತ್ತದೆ.
More