ವೆಚ್ಚ预览

ವೆಚ್ಚ

3天中的第3天

ಅಂತಿಮ ವೆಚ್ಚ

ದೇವರು ನಮಗಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ಮಾಡಿದ ನಂಬಲಾಗದ ಬಲಿದಾನವನ್ನು ನಾವು

ಅವಲೋಕನ ಮಾಡಿಕೊಳ್ಳೋಣ.

ಒಳಗೊಂಡಿರುವ ವೆಚ್ಚವು ಅಗಾಧವಾಗಿದೆ, ಮತ್ತು ಇದು ನಮ್ಮ ಪೂರ್ಣ ಹೃದಯದ ಸಮರ್ಪಣೆಗೆ ಕರೆ ಕೊಡುತ್ತದೆ.

ನಾವೆಲ್ಲರೂ ಒಳಗೆ ಇದ್ದೇವೆ ಅಥವಾ ಒಳಗೆ ಇಲ್ಲವೇ ಇಲ್ಲ:

ನಮ್ಮ ನಂಬಿಕೆಯ ಪ್ರಯಾಣದಲ್ಲಿ, ನಮಗೆ ಒಂದು ಆಯ್ಕೆಯನ್ನು ಕೊಡಲಾಗಿದೆ. ಇದು ಎಲ್ಲಾ ಅಥವಾ ಏನೂ

ಇಲ್ಲದ ಸಮರ್ಪಣೆಯಾಗಿದೆ. ನಾವು ಸಂಪೂರ್ಣವಾಗಿ ಹೂಡಿಕೆ ಮಾಡಬೇಕೆಂದು ಕರೆಕೊಡಲಾಗಿದೆ, ನಮ್ಮ

ಸಂಪೂರ್ಣ ಆತ್ಮವನ್ನು ದೇವರಿಗೆ ಸಮರ್ಪಿಸುತ್ತೇವೆ. ಅರೆಮನಸ್ಸಿನ ಭಕ್ತಿಯು ಅಗತ್ಯವಿರುವ ನಿಜವಾದ

ಸಮರ್ಪಣೆಯಿಂದ ದೂರವಿರುತ್ತದೆ.

ದೇವರೊಂದಿಗೆ ಆಳವಾದ ಮತ್ತು ನಿಕಟ ಸಂಬಂಧವನ್ನು ಹೊಂದಲು, ನಾವು ಎಲ್ಲವನ್ನು ಸಮರ್ಪಿಸುವಂತೆ

ಒತ್ತಾಯಿಸಲ್ಪಡುತ್ತೇವೆ.

ಅಂದರೆ ದೇವರಿಂದ ಬರದ ಎಲ್ಲವನ್ನೂ ಬಿಟ್ಟುಬಿಡುವುದು ಎಂದರ್ಥ. ಈ ಸಮರ್ಪಣೆಯ ಕ್ರಿಯೆಯು ನಮ್ಮ

ಜೀವನದಲ್ಲಿ ಆತನ ಪ್ರಸನ್ನತೆಯ ಪೂರ್ಣತೆಯನ್ನು ಅನುಭವಿಸುವ ಕೀಲಿಯಾಗಿದೆ.

ಮತ್ತಾಯ 13:44 ಒಳಗೊಂಡಿರುವ ವೆಚ್ಚವನ್ನು ವಿವರಿಸುವ ಪ್ರಬಲವಾದ ದೃಷ್ಟಾಂತವನ್ನು ಹಂಚಿಕೊಳ್ಳುತ್ತದೆ.

ಪರಲೋಕ ರಾಜ್ಯವನ್ನು ಹೊಲದಲ್ಲಿ ಅಡಗಿರುವ ನಿಧಿಗೆ ಹೋಲಿಸಲಾಗಿದೆ. ಒಬ್ಬ ಮನುಷ್ಯನು ಈ ನಿಧಿಯನ್ನು

ಕಂಡುಹಿಡಿದು ಸಂತೋಷಪಟ್ಟನು, ಆ ಸ್ಥಳವನ್ನು ಖರೀದಿಸಲು ಅವನು ಹೊಂದಿರುವ ಎಲ್ಲವನ್ನೂ ಮಾರುತ್ತಾನೆ.

ನಿಧಿಯನ್ನು ಪಡೆಯಲು ಮನುಷ್ಯ ಸ್ವಇಚ್ಛೆಯಿಂದ ಎಲ್ಲವನ್ನೂ ತ್ಯಾಗ ಮಾಡುತ್ತಾನೆ.

ಈ ನೀತಿಕಥೆಯು ನಮ್ಮ ನಂಬಿಕೆಯ ನಿಮಿತ್ತ ನಮ್ಮೆಲ್ಲರಿಗೂ ಕೊಡುವ ಮಹತ್ವವನ್ನು ಒತ್ತಿಹೇಳುತ್ತದೆ.

ನೀತಿಕಥೆಯಲ್ಲಿರುವ ಮನುಷ್ಯನು ತನಗಿದ್ದ ಎಲ್ಲವನ್ನೂ ಮಾರಿದಂತೆಯೇ; ನಮ್ಮ ಎಲ್ಲವನ್ನೂ ದೇವರಿಗೆ ಕೊಡಲು

ನಾವು ಕರೆಯಲ್ಪಟ್ಟಿದ್ದೇವೆ.

ಇದು ಪಾವತಿಸಲು ಹೆಚ್ಚಿನ ವೆಚ್ಚದಂತೆ ತೋರುತ್ತದೆ, ಆದರೆ ಪ್ರತಿಯಾಗಿ ನಾವು ಪಡೆಯುವ ಸಂತೋಷ ಮತ್ತು

ತೃಪ್ತಿಯು ಅಳೆಯಲಾಗದು.

ನಾವು ವೆಚ್ಚವೆಂದು ಪರಿಗಣಿಸುವ ಪ್ರತಿಯೊಂದೂ, ನಷ್ಟವೆಂದು ನಾವು ಗ್ರಹಿಸುವ ಎಲ್ಲವೂ - ಸಂಪೂರ್ಣವಾಗಿ

ಎಲ್ಲವೂ - ನಮ್ಮ ಜೀವನದಲ್ಲಿ ಯೇಸುವನ್ನು ಹೊಂದಿರುವ ನಿತ್ಯ ಲಾಭಕ್ಕೆ ಹೋಲಿಸಿದರೆ ಏನೂ ಅಲ್ಲ ಎಂದು

ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

ಇಂದು, ದೇವರು ನಮಗಾಗಿ ಕೊಟ್ಟ ಅಂತಿಮ ಕ್ರಯವನ್ನು ನಾವು ಅವಲೋಕನ ಮಾಡೋಣ ಮತ್ತು ನಮಗಿರುವ

ಎಲ್ಲವನ್ನೂ ಕೊಡಲು ಅದು ನಮಗೆ ಸ್ಫೂರ್ತಿಯನ್ನು ಕೊಡಲಿ. ನಮ್ಮ ಜೀವನದಲ್ಲಿ ಆತನ ಪರಿಪೂರ್ಣತೆಯನ್ನು

ಹೊಂದಲು ನಾವು ನಮ್ಮ ಎಲ್ಲವನ್ನು ಸಮರ್ಪಿಸಲಿ.

ವೆಚ್ಚವು ಹೆಚ್ಚು ಎಂದು ತೋರುತ್ತದೆ, ಆದರೆ ಯೇಸುವನ್ನು ಹೊಂದುವ ಅಳೆಯಲಾಗದ ಲಾಭವು ನಾವು

ತ್ಯಾಗವೆಂದು ಪರಿಗಣಿಸಬಹುದಾದ ಎಲ್ಲವನ್ನೂ ಮೀರಿಸುತ್ತದೆ.

ನಾವು ಎಂದಾದರು ಹೊಂದಬಹುದಾದ ದೊಡ್ಡ ನಿಧಿ ಯೇಸುವೇ ಆಗಿದ್ದಾನೆ.

读经计划介绍

ವೆಚ್ಚ

ಭಾರತದಲ್ಲಿ ಸಂಧಿಸದವರನ್ನು ಸಂಧಿಸಲು ಕೇಂದ್ರೀಕರಿಸಿರುವ ಈ ಸತ್ಯವೇದದ ಯೋಜನೆಗೆ ಸ್ವಾಗತ. ಭಾರತದಲ್ಲಿರುವ ಪ್ರಮುಖ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ವೇದಿಕೆಯನ್ನು ಸಿದ್ದಪಡಿಸುತ್ತೇವೆ, ನಂತರ ನಾವು ವೆಚ್ಚದೊಂದಿಗೆ ಬರುವ ಹಂತಗಳನ್ನು ಅನ್ವೇಷಿಸುತ್ತೇವೆ ಮತ್ತು ಅಂತಿಮವಾಗಿ ನಾವು ಅಂತಿಮ ವೆಚ್ಚ – ಅಂದರೆ ದೇವರು ನಮಗಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ಮಾಡಿದ ಬಲಿದಾನ ಬಗ್ಗೆ ಮಾತನಾಡುತ್ತೇವೆ.

More