ಕರೆ预览

ನಾನು ಎಲ್ಲಿಂದ ಪ್ರಾರಂಭಿಸಬೇಕು?
ನೀವು ಯಾವುದನ್ನು ಮಾಡಲು ಇಷ್ಟಪಡುವಿರೋ ಅದರಿಂದ ಪ್ರಾರಂಭಿಸೋಣ.
ನೀವು ಯಾವ ತಲಾಂತುಗಳಿಂದ ಆಶೀರ್ವದಿಸಲ್ಪಟ್ಟಿದ್ದೀರಿ?
ನೀವು ಉತ್ತಮ ಅಡುಗೆ ಮಾಡುವವರಾಗಿದ್ದೀರಾ? ನೀವು ಬರೆಯಬಹುದೇ ಅಥವಾ ಓದಬಹುದೇ? ನೀವು ಉತ್ತಮ ಛಾಯಚಿತ್ರಗಳನ್ನು ತೆಗೆಯುತ್ತೀರಾ? ನೀವು ಜನರೊಂದಿಗೆ ಚೆನ್ನಾಗಿ ಸಂಪರ್ಕ ಹೊಂದಿದ್ದೀರಾ? ನೀವು ಒಳ್ಳೆಯ ಕೇಳುಗರೇ? ನೀವು ಮಕ್ಕಳೊಂದಿಗೆ ಒಳ್ಳೆಯವರಾ? ನೀವು ಉತ್ತಮ ವೀಡಿಯೊಗಳನ್ನು ತೆಗೆದುಕೊಳ್ಳುತ್ತೀರಾ? ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹೇಗೆಂದು ನಿಮಗೆ ಗೊತ್ತಾ?
ನೀವು ಯಾವುದನ್ನು ಮಾಡಲು ಇಷ್ಟಪಡುವಿರೋ ಅದರಿಂದ ಪ್ರಾರಂಭಿಸಿ.
ನೀವು ಮಾಡಲು ಇಷ್ಟಪಡುವದನ್ನು ಹೆಚ್ಚಾಗಿ ಮಾಡಿ.
ನಿಮ್ಮ ಸುತ್ತಲಿರುವ ಜನರಿಗಾಗಿ ಮಾಡಿ.
ಅದನ್ನು ಪ್ರೀತಿಯಿಂದ ಮಾಡಿ.
ಮತ್ತು ನೀವು ದೇವರಿಗೆ ಮಾಡುವಂತೆಯೇ ಅದನ್ನು ಪ್ರವೀಣತೆಯಿಂದ ಮಾಡಿ.
ಏನನ್ನೂ ಮಾಡದೆ ಕರೆಗೆ ಉತ್ತರವನ್ನು ಸಾಧಿಸಲಾಗುವುದಿಲ್ಲ. ನೀವು ಇರುವ ಸ್ಥಳದಿಂದಲೇ ಇದು ಪ್ರಾರಂಭವಾಗುತ್ತದೆ.
ನಿಮ್ಮ ವರಗಳು ಮತ್ತು ತಲಾಂತುಗಳಿಂದ ನೀವು ಜನರ ಸೇವೆ ಮಾಡಿದಾಗ, ಜನರು ಪ್ರೀತಿಸಲ್ಪಟ್ಟಿದ್ದೇವೆಂದು ಭಾವಿಸುತ್ತಾರೆ; ಪ್ರೀತಿ ಎಂದಿಗೂ ಬಿದ್ದುಹೋಗುವುದಿಲ್ಲ ಎಂಬುದನ್ನು ನೆನಪಿಡಿ!
ಇದು ಚಿಕ್ಕ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ಮಾಡುವುದರಿಂದ ಪ್ರಾರಂಭವಾಗುತ್ತದೆ. ಚಿಕ್ಕ ಚಿಕ್ಕ ಕಾರ್ಯಗಳಿಗೂ ಅಲ್ಲಿ ದೇವರ ಪ್ರೀತಿಯನ್ನು ಕಾಣಬಹುದು.
ಆದರೆ ಏನೂ ಮಾಡದೆ ಕುಳಿತುಕೊಳ್ಳಬೇಡಿ; ನೀವು ಹೊಂದಿರುವುದನ್ನು ಪ್ರಾರಂಭಿಸಿ. ಮತ್ತು ನೀವು ದೇವರೊಂದಿಗೆ ಹೆಚ್ಚು ಸಮಯವನ್ನು ಕಳೆಯುವಾಗ, ಆತನು ನಿಮಗೆ ಸ್ಪಷ್ಟವಾಗಿ ಮಾರ್ಗದರ್ಶನವನ್ನು ಕೊಡುತ್ತಾನೆ. ಆತನು ನಿಮ್ಮನ್ನು ನಡೆಸುತ್ತಾನೆ ಮತ್ತು ರಾತ್ರಿ ಹಗಲು ನಿಮಗೆ ಮಾರ್ಗದರ್ಶನ ಕೊಡುತ್ತಾನೆ.
ಈಗ ನಿಮ್ಮ ಕೈಯಲ್ಲಿ ಏನಿದೆ?
ಆತನಿಗೆ ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ಕೊಡಿ, ಅಥವಾ ಆ ಖಾಲಿ ಕೈಗಳನ್ನು ಆತನಿಗೆ ಕೊಡಿ.
ಆದರೆ ಎಲ್ಲಾದರೂ ಪ್ರಾರಂಭಿಸಿ ...
ಯಾಕೆಂದರೆ ಇದೆಲ್ಲವೂ ಶೂನ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಅದು ನಿಮ್ಮಿಂದ ಪ್ರಾರಂಭವಾಗುತ್ತದೆ!
ಓದಲು ವಾಕ್ಯ:
读经计划介绍

ಕರೆಯು ಶೂನ್ಯ ಕಾನ್ ನಲ್ಲಿ ಹುಟ್ಟಿಕೊಂಡ ಸತ್ಯವೇದ ಯೋಜನೆಯಾಗಿದೆ. ಇದು 3-ದಿನಗಳ ಪ್ರಯಾಣವಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಜಗತ್ತಿನಲ್ಲಿ ಹೊರಟುಹೋಗಿ ಆತನ ಪ್ರೀತಿಯನ್ನು ಸಾರಲು ದೇವರ ಕರೆಗೆ ಉತ್ತರಿಸುವುದರ ಮೇಲೆ ಕೇಂದ್ರೀಕೃತವಾಗಿದೆ; ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮುಖ್ಯತೆಯನ್ನು ಗುರುತಿಸುವುದು ಮತ್ತು ನಮ್ಮ ವರಗಳು ಮತ್ತು ತಲಾಂತುಗಳನ್ನು ಇತರರಿಗೆ ಪ್ರವೀಣತೆಯಿಂದ ಸೇವೆ ಮಾಡಲು ಉಪಯೋಗಿಸುತ್ತೇವೆ, ಇದನ್ನು ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಪ್ರಾರಂಭಿಸುವುದಾಗಿದೆ. ಮುಖ್ಯ ಪದಗಳು - ಕರೆ, ಶೂನ್ಯ ಕಾನ್ ನಲ್ಲಿ, ಶೂನ್ಯ
More