ರಕ್ಷಿಸುವುದು 预览

ದೇವರು ರಕ್ಷಣೆಗೆ ಬರುತ್ತಾನೆ
ಆದಾಮ ಮತ್ತು ಹವ್ವ ಏದೇನ್ ತೋಟದಲ್ಲಿ ಒಳ್ಳೆಯವುಗಳನ್ನು ಹೊಂದಿದ್ದರು. ತಮ್ಮನ್ನು ಉಂಟುಮಾಡಿದಾತನೊಂದಿಗೆ ಒಳ್ಳೆಯ ಸಂಬಂಧ, ಜೀವಂತ ಮತ್ತು ಉಸಿರಾಡುವ ಪ್ರತಿಯೊಂದು ಜೀವಿಗಳ ಮೇಲೆ ಅಧಿಕಾರ, ಅವರ ಸುತ್ತಲೂ ಸ್ಪರ್ಶಿಸದ ಸೌಂದರ್ಯ ಮತ್ತು ವಸ್ತ್ರಗಳಿಗೆ ಯಾವುದೇ ಹೆಚ್ಚುವರಿ ವೆಚ್ಚವಿರಲಿಲ್ಲ. ಅಪರಾಧ, ಅವಮಾನ, ನಕಾರಾತ್ಮಕತೆ ಅಥವಾ ಭಯದಿಂದ ಅವರಿಗೆ ಅಡ್ಡಿಯಾಗಲಿಲ್ಲ. ಹೀಗೆ ಬದುಕುವುದನ್ನು ಕಲ್ಪಿಸಿಕೊಳ್ಳಿ. ಇದು ಪರಿಪೂರ್ಣ ಆನಂದದ ಚಿತ್ರವಾಗಿದೆ. ಬಿತ್ತಿದ ಅನುಮಾನ, ನಂಬಿದ ಸುಳ್ಳು ಮತ್ತು ತಿರಿಗಿ ಸರಿಪಡಿಸಲು ಸಾಧ್ಯವಾಗದ ಅವಿಧೇಯತೆಯ ಕ್ರಿಯೆಯಿಂದ ಎಲ್ಲವೂ ಕ್ಷಣಮಾತ್ರದಲ್ಲಿ ಬದಲಾಯಿತು. ಎಲ್ಲವೂ ಕಳೆದುಹೋದಂತೆ ತೋರುತ್ತಿದೆ- ಮನುಷ್ಯನು ಮತ್ತು ದೇವರ ನಡುವಿನ ತಡೆರಹಿತ, ನಿಕಟ ಸಂಬಂಧವು ಮುರಿದುಹೋಯಿತುಗಿ ಮತ್ತು ಪರಿಪೂರ್ಣ ಜಗತ್ತು ಈಗ ಬಿರುಕು ಮತ್ತು ದೋಷಪೂರಿತವಾಯಿತು. ಎಂತಹ ದುರಂತ - ಆದರೂ ಎಲ್ಲವೂ ಕಳೆದುಹೋಗಿಲ್ಲ. ದೇವರು, ಆತನು ಪರಿಪೂರ್ಣ ತಂದೆತಾಯಿಯಂತೆ, ತಕ್ಷಣವೇ ಕಾರ್ಯರೂಪಕ್ಕೆ ಬರುವ ಯೋಜನೆಯನ್ನು ಹೊಂದಿದ್ದನು. ಆತನು ಪುರುಷ ಮತ್ತು ಸ್ತ್ರೀಗೆ ಪ್ರಾಣಿಗಳ ಚರ್ಮದಿಂದ ಧರಿಸಿದನು, ಹೀಗೆ ಅವರ ಅವಮಾನವನ್ನು ನಿವಾರಿಸಲಾಯಿತು, ನಂತರ ಅವರನ್ನು ಏದೇನ್ ತೋಟದಿಂದ ಅದರ ಹೊರಗಿರುವ ಲೋಕಕ್ಕೆ ಕಳುಹಿಸಿದನು.
ಹೇಳದ ಇನ್ನೂ ಸ್ಪಷ್ಟವಾದ ಸತ್ಯವೆಂದರೆ, ದೇವರು ತನ್ನ ಜನರನ್ನು ಅವರ ಸ್ವಂತ ಪಾಪದ ಪರಿಣಾಮಗಳಿಂದ ರಕ್ಷಿಸಲು ಯೋಜಿಸುವ ಅನೇಕ ರಕ್ಷಣೆ ಕಾರ್ಯಗಳಲ್ಲಿ ಇದು ಮೊದಲನೆಯದು. ಆದಾಮನು ಮತ್ತು ಹವ್ವಳಿಗೆ ವಸ್ತ್ರವನ್ನು ಧರಿಸಲು ದೇವರು ಪ್ರಾಣಿಗಳನ್ನು ಯಜ್ಞ ಮಾಡಿ ರಕ್ತವನ್ನು ಚೆಲ್ಲಬೇಕಾಗಿತ್ತು. ಈ ರೀತಿಯ ರಕ್ತದ ಬಲಿದಾನವು ಮೊದಲನೆಯದಾಗಿತ್ತು, ನಂತರ ಮೋಶೆಯಿಂದ ಔಪಚಾರಿಕವಾಗಿ ಯಾರೇ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಮತ್ತು ಮರುಪಾವತಿಯ ರೀತಿಯಾಗಿ ಸ್ಥಾಪಿಸಲಾಯಿತು. ಅವರನ್ನು ಏದೇನ್ ತೋಟದಿಂದ ಹೊರಗೆ ಕಳುಹಿಸುವಲ್ಲಿ ದೇವರು ಅವರಿಗೆ ಹೆಚ್ಚಿನ ದಯೆಯನ್ನು ತೋರಿದನು, ಯಾಕೆಂದರೆ ಅವರು ಅಲ್ಲೇ ಉಳಿದುಕೊಂಡಿದ್ದರೆ, ಅವರು ಅಜಾಗರೂಕತೆಯಿಂದ ಜೀವವೃಕ್ಷದಿಂದ ಹಣ್ಣನ್ನು ತಿನ್ನುತ್ತಿದ್ದರು, ಮತ್ತು ದೇವರು ಅಮರತ್ವವನ್ನು ಪಡೆಯುವದನ್ನು ನಿಷೇಧಿಸಿದನು. ಇದನ್ನು ಚಿತ್ರಿಸಿಕೊಳ್ಳಿ- ನಮಗೆ ಕ್ರಮೇಣವಾಗಿ ವಯಸ್ಸಾಗುತ್ತದೆ ಆದರೆ ಸಾಯುವುದಿಲ್ಲ! ನಾವು ಭೂಮಿಯ ಮೇಲೆ ನರಕಕ್ಕೆ ತಳ್ಳಲ್ಪಟ್ಟಿದ್ದೇವೆ. ದೇವರು ತನ್ನ ಶ್ರೇಷ್ಠ ದಯೆಯಿಂದ ನಮಗೆ ಮರಣದ ಉಡುಗೊರೆಯನ್ನು ಕೊಟ್ಟನು, ಅದು ಭೂಮಿಯ ದುಃಖದಿಂದ ಸಿಹಿಯಾದ ಬಿಡುಗಡೆ ಮತ್ತು ಪರಲೋಕದ ನಿರೀಕ್ಷೆಯಾಗಿದೆ, ಇದು ನೋವಿಲ್ಲದ, ಸಂತೋಷದಿಂದ ತುಂಬಿದ ಅಸ್ತಿತ್ವದಿಂದ ಗುರುತಿಸಲ್ಪಟ್ಟಿದೆ.
ನಾವು ಇಂದು ಏದೇನ್ ರೀತಿಯ ಪರಿಪೂರ್ಣ ಪರಿಸ್ಥಿತಿಗಳಲ್ಲಿ ಜೀವಿಸದಿರಬಹುದು. ವಾಸ್ತವವಾಗಿ, ನಾವು ಯುದ್ಧ, ಕ್ಷಾಮ ಮತ್ತು ದುರಂತಗಳಿಂದ ತುಂಬಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಆದಾಮನು ಮತ್ತು ಹವ್ವಳನ್ನು ರಕ್ಷಿಸಿದ ದೇವರು ಅವರ ಎಲ್ಲಾ ಪುತ್ರರು ಮತ್ತು ಹೆಣ್ಣುಮಕ್ಕಳನ್ನು ತನ್ನ ಮಿತಿಯಿಲ್ಲದ ಮತ್ತು ಕೊನೆಗೊಳ್ಳದ ಪ್ರೀತಿ ಮತ್ತು ದಯೆಯಿಂದ ರಕ್ಷಿಸಲು ಮುಂದುವರೆಸುತ್ತಾನೆ.
ಆಲೋಚನೆ:
ದೇವರು ಆದಾಮನು ಮತ್ತು ಹವ್ವಳನ್ನು ಅವರ ಮಂಕಾದ ಪರಿಸ್ಥಿತಿಯಿಂದ ರಕ್ಷಿಸಲು ಸಾಧ್ಯವಾದರೆ, ಆತನು ನಿಮಗೂ ಅದೇ ರೀತಿ ಮಾಡಬಲ್ಲನು.
读经计划介绍

ಕ್ರಿಸ್ತನನ್ನು ನಮ್ಮ ರಕ್ಷಣೆಗಾಗಿ ಕಳುಹಿಸುವಲ್ಲಿ ದೇವರು ನಮಗೆ ಮಾಡಿದ ಎಲ್ಲವನ್ನೂ ಹಿಂತಿರುಗಿ ನೋಡಲು ಮತ್ತು ಅವಲೋಕನ ಮಾಡಲು ಕ್ರಿಸ್ಮಸ್ ಸೂಕ್ತ ಸಮಯವಾಗಿದೆ. ನೀವು ಈಗ ಇದನ್ನು ಓದುತ್ತಿರುವಾಗ, ನಿಮ್ಮ ಸ್ವಂತ ರಕ್ಷಣೆಯನ್ನು ನೀವು ನೆನಪಿಸಿಕೊಂಡು, ಮುಂದೆ ಇರುವ ಹಾದಿಯಲ್ಲಿ ನೀವು ಹಾದು ನಡೆಯಬೇಕಾದ ಎಲ್ಲವುಗಳಿಂದ ಆತನು ನಿಮ್ಮನ್ನು ತಿರಿಗಿ ರಕ್ಷಿಸುತ್ತಾನೆ ಎಂಬ ದೃಢವಿಶ್ವಾಸದಿಂದ ಹೊಸ ವರ್ಷಕ್ಕೆ ಕಾಲಿಡಬೇಕೆಂದು ನಾನು ಪ್ರಾರ್ಥಿಸುತ್ತೇನೆ.
More