ಯೇಸುವಿನೊಂದಿಗೆ ಮುಖಾಮುಖಿ预览

ನಾವು ಭೂಮಿಯ ಮೇಲೆ ವಾಸಿಸುವಾಗ ನಾವು ಭೂಮಿಯ ಪ್ರಜೆಗಳು, ನಿರ್ದಿಷ್ಟವಾಗಿ ನಾವು ಹುಟ್ಟಿದ ದೇಶ. ನಾವು ಯೇಸುವನ್ನು ನಮ್ಮ ಜೀವನದಲ್ಲಿ ಸ್ವೀಕರಿಸಿದಾಗ, ನಾವು ದೇವರ ಕುಟುಂಬಕ್ಕೆ ಸೇರಿಸಿಕೊಳ್ಳಲ್ಪಡುತ್ತೇವೆ ಮತ್ತು ಪರಲೋಕದ ನಾಗರಿಕರಾಗಿದ್ದೇವೆ. ನಮ್ಮ ಇಹಲೋಕದ ಪಾತ್ರಗಳು ಮತ್ತು ಕರ್ತವ್ಯಗಳಿಂದ ನಾವು ಹೊರತುಪಡಿಸಲ್ಪಟ್ಟಿದ್ದೇವೆ ಎಂದು ಇದರ ಅರ್ಥವಲ್ಲ. ನಾವು ಈಗ ಉಭಯ ಪೌರತ್ವವನ್ನು ಹೊಂದಿದ್ದೇವೆ. ಇದರರ್ಥ ನಾವು ಭೂಮಿಯಲ್ಲಿ ನಡೆಯುವಾಗ, ನಮ್ಮ ಉದ್ಯೋಗಗಳಲ್ಲಿ ಕೆಲಸ ಮಾಡುವಾಗ, ನಮ್ಮ ಕುಟುಂಬಗಳನ್ನು ನಡೆಸುವಾಗ ಮತ್ತು ಇತರರೊಂದಿಗೆ ಸಂಭಾಷಿಸುವಾಗ, ನಾವು ನಮ್ಮಿಂದ ನಿರೀಕ್ಷಿತ ಕಾರ್ಯಗಳನ್ನು ಪೂರೈಸಬೇಕಾಗಿದೆ. ನಾವು ನಮ್ಮ ವೃತ್ತಿಯಾಗಿರಲಿ ಅಥವಾ ನಮ್ಮ ದೈವಿಕ ಕರೆಯಾಗಿರಲಿ ಎಲ್ಲವನ್ನೂ ದೇವರಿಗೆ ಅತ್ಯಂತ ಭಕ್ತಿಯಿಂದ ಮಾಡುತ್ತೇವೆ, ಆತನನ್ನು ಮೆಚ್ಚಿಸಲು ಮತ್ತು ನೋಡುವ ಜಗತ್ತಿಗೆ ಅವರ ಪ್ರೀತಿಯನ್ನು ಪ್ರದರ್ಶಿಸಲು ಬಯಸುತ್ತೇವೆ. ನಾವು ಉಭಯ ಪೌರತ್ವದ ಜನರಂತೆ ಬದುಕಿದಾಗ ಪವಿತ್ರ ಮತ್ತು ಜಾತ್ಯತೀತ ನಡುವಿನ ವಿಭಜನೆಯು ಕಣ್ಮರೆಯಾಗುತ್ತದೆ.
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನಾನು ವಾಸಿಸುವ ದೇಶಕ್ಕೆ ನಂಬಿಗಸ್ತ ನಾಗರಿಕನಾಗಿದ್ದೇನೆಯೇ?
ನಾನು ಭೂಮಿಯ ಮೇಲಿನ ಪರಲೋಕದ ಪ್ರಜೆಯಾಗಿ ಜವಾಬ್ದಾರಿಯುತವಾಗಿ ಬದುಕುತ್ತಿದ್ದೇನೆಯೇ?
读经计划介绍

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More