ಯೇಸುವಿನೊಂದಿಗೆ ಮುಖಾಮುಖಿ预览

ಇಂದಿನ ಓದುವಿಕೆಯಲ್ಲಿ ಆದಾಮನು ಮತ್ತು ಹವ್ವ ಅವರ ಕುಟುಂಬದ ದುಃಖ ಬಿಚ್ಚಿಡುವುದನ್ನು ನಾವು ನೋಡುತ್ತೇವೆ, ಅಲ್ಲಿ ಕಾಯಿನನು ತನ್ನ ಸಹೋದರ ಹೇಬೆಲನನ್ನು ಕೋಪ, ಅಸೂಯೆ ಮತ್ತು ಬಹುಶಃ ಅಭದ್ರತೆಯ ನಿಮಿತ್ತ ಕೊಲ್ಲುತ್ತಾನೆ. ಕಾಯಿನನು ತನಗೆ ಇಷ್ಟವಾದದ್ದನ್ನು ಮಾಡಲು ಆರಿಸಿಕೊಂಡಾಗ ಮತ್ತು ದೇವರನ್ನು ಅಸಂತೋಷಗೊಳಿಸಿದಾಗ ದೇವರನ್ನು ಮೆಚ್ಚಿಸಲು ಮತ್ತು ಅದಕ್ಕೆ ತಕ್ಕಂತೆ ಏನು ಮಾಡಬೇಕೆಂದು ಹೇಬೆಲ ಹೇಗಾದರೂ ತಿಳಿದಿದ್ದನು ಎಂದು ಓದುವುದು ಆಸಕ್ತಿಕರವಾಗಿದೆ. ಅವನು ಯಾವಾಗಲೂ ಪಶ್ಚಾತ್ತಾಪಪಟ್ಟು ತಿದ್ದುಕೊಳ್ಳಬಹುದಾಗಿದ್ದರೂ ಅವನು ದುಷ್ಟ ಮಾರ್ಗವನ್ನು ಆರಿಸಿಕೊಂಡನು, ಅವನು ಸತ್ತು ಬಿದಿದ್ದ ಒಡಹುಟ್ಟಿದವನೊಂದಿಗೆ ಹೊಲದಲ್ಲಿ ಏಕಾಂಗಿಯಾಗುತ್ತಾನೆ. ಅವನ ಮತ್ತು ದೇವರ ನಡುವೆ ನಡೆಯುವ ಸಂಭಾಷಣೆಯು ಒಮ್ಮೆ ದುಃಖ ಮತ್ತು ಗೊಂದಲವನ್ನು ಉಂಟುಮಾಡುತ್ತದೆ. ಇದು ದುಃಖಕರವಾಗಿದೆ ಏಕೆಂದರೆ ನಡೆದ ಸಂಗತಿಯು ದೇವರಿಗೆ ತಿಳಿದಿದೆ ಮತ್ತು ಹೇಬೆಲನ ಅನಗತ್ಯ ಮರಣದ ಬಗ್ಗೆ ದುಃಖಿತನಾಗಿದ್ದಾನೆ, ಏಕೆಂದರೆ ಕಾಯಿನನು ತಾನು ಮಾಡಿದ ಕೊಲೆಯ ಬಗ್ಗೆ ವಿಚಲಿತನಾಗಿಲ್ಲ ಎಂದು ತೋರುತ್ತದೆ. ಹೇಬೆಲನ ರಕ್ತವನ್ನು ಹೀರಿಕೊಂಡ ನೆಲದಿಂದ ಕಾಯಿನನು ಈಗ ಶಾಪಗ್ರಸ್ತನಾಗಿದ್ದಾನೆ ಮತ್ತು ಆದ್ದರಿಂದ ಅವನು ತನ್ನ ಜೀವನದಾದ್ಯಂತ ಅಲೆಮಾರಿಯಾಗಿರುವನು ಎಂದು ದೇವರು ಅವನಿಗೆ ಹೇಳಿದಾಗ ಸಂಭಾಷಣೆಯು ಗಾಢವಾದ ತಿರುವನ್ನು ತೆಗೆದುಕೊಳ್ಳುತ್ತದೆ. ಕಾಯಿನನನ್ನು ಗುರುತಿಸುವಲ್ಲಿ ದೇವರು ತನ್ನ ಅತಿರಂಜಿತ ಕೃಪೆಯನ್ನು ತೋರಿಸುತ್ತಾನೆ, ಆದ್ದರಿಂದ ಅವನು ಭೂಮಿಯ ಮೇಲಿನ ಅವನ ಉಳಿದ ಜೀವನಲ್ಲಿ ಯಾರಿಂದಲೂ ಕೊಲ್ಲಲ್ಪಡುವುದಿಲ್ಲ. ಯೆಹೋವನ ಕೃಪೆಯು ಅತ್ಯಂತ ಕೆಟ್ಟ ಪಾಪಿಗಳಿಗೂ ಲಭ್ಯವಿದೆ. ಇದು ಯೇಸುವಿನಲ್ಲಿ ನಂಬಿಕೆಯ ಮೂಲಕ ಈ ಕೃಪೆಯನ್ನು ಸ್ವೀಕರಿಸಿ ರಕ್ಷಣೆ ಹೊಂದಿಕೊಳ್ಳಲು ಪಾಪಿಯ ಮೇಲೆ ಆಧಾರಗೊಳ್ಳುತ್ತದೆ! (ಎಫೆಸ 2:8)
ನಿಮ್ಮನ್ನೇ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು:
ನಿಮ್ಮ ಜೀವನದ ಮೇಲೆ ದೇವರ ಕೃಪೆಯ ಬಗ್ಗೆ ನಿಮಗೆ ಅರಿವಿದೆಯೇ?
ನೀವು ಇತರರಿಂದ ಕೃಪೆಯನ್ನು ಎಲ್ಲಿ ತಡೆಹಿಡಿದಿದ್ದೀರಿ?
ನಿಮ್ಮ ಜೀವನದಲ್ಲಿ ಯಾವುದೇ ಪಾಪದ ವರ್ತನೆಗಳಿದ್ದರೆ ತೋರಿಸಲು ದೇವರನ್ನು ಕೇಳುವಿರಾ?
读经计划介绍

ಶ್ರಮೆ ದಿನಗಳು ನಮ್ಮೊಂದಿಗೆ ಮತ್ತು ನಮ್ಮಲ್ಲಿ ತನ್ನ ಮನೆಯನ್ನು ಮಾಡಿದ ನಮ್ಮ ನಿತ್ಯ ದೇವರ ಬಗ್ಗೆ ಪರಿಚಿತ ಸತ್ಯಗಳೊಂದಿಗೆ ನಮಗೆ ತಿರಿಗಿ ನೆನಪಿಸುವ ಉತ್ತಮ ಸಮಯವಾಗಿದೆ. ಈ ಸತ್ಯವೇದ ಯೋಜನೆಯ ಮೂಲಕ, ನೀವು ಸಂಪೂರ್ಣ ಹೊಸ ಮಟ್ಟದಲ್ಲಿ ಯೇಸುವನ್ನು ಅನುಭವಿಸಲು ನಿಮ್ಮನ್ನು ಕರೆದೊಯ್ಯುವ ದಿಕ್ಸೂಚಿಯಾಗಿ ದೇವರ ವಾಕ್ಯದೊಂದಿಗೆ 40 ದಿನಗಳವರೆಗೆ ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುತ್ತೀರಿ ಎಂಬುದು ನಮ್ಮ ಆಸೆಯಾಗಿದೆ.
More