BibleProject | ಅಪೊಸ್ತಲನಾದ ಪೌಲನಲ್ಲಿ ಅವಸರದ ಕೋರ್ಸು预览

读经计划介绍

BibleProject | ಅಪೊಸ್ತಲನಾದ ಪೌಲನಲ್ಲಿ ಅವಸರದ ಕೋರ್ಸು

ಈ ಹತ್ತು ದಿನಗಳ ಯೋಜನೆಯಲ್ಲಿ, ಅಪೊಸ್ತಲನಾದ ಪೌಲನು ಬರೆದಿರುವ ನಾಲ್ಕು ಚಿಕ್ಕ ಪತ್ರಿಕೆಗಳನ್ನು ನಿಮಗೆ ಪರಿಚಯಿಸಲಾಗುವುದು. ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ, ಅನ್ಯಜನರು ತೋರಾವನ್ನು ಅನುಸರಿಸಬೇಕೇ ಅಥವಾ ಬೇಡವೇ ಎಂಬ ವಿಚಾರವನ್ನು ಪೌಲನು ತಿಳಿಸುತ್ತಾನೆ. ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ, ಸುವಾರ್ತೆಯು ದೇವರ ಮತ್ತು ಪರಸ್ಪರರ ನಮ್ಮ ನಡುವೆ ಹೇಗೆ ಸಂಧಾನವನ್ನು ಉಂಟುಮಾಡುತ್ತದೆ ಎಂಬುದನ್ನು ಅವನು ತೋರಿಸಿಕೊಡುತ್ತಾನೆ. ಫಿಲಿಪ್ಪಿಯವರಿಗೆ ಬರೆದ ಪತ್ರಿಕೆಯಲ್ಲಿ, ಯೇಸು ತೋರಿಸಿದ ತ್ಯಾಗಪೂರ್ವಕವಾದ ಪ್ರೀತಿಯ ಮಾದರಿಯ ಮೂಲಕ ಅವನು ವಿಶ್ವಾಸಿಗಳನ್ನು ಪ್ರೋತ್ಸಾಹಿಸುತ್ತಾನೆ, ಮತ್ತು ಥೆಸಲೊನೀಕದವರಿಗೆ ಬರೆದ ಪತ್ರಿಕೆಯಲ್ಲಿ, ಹಿಂಸೆಗೊಳಗಾದ ಕ್ರೈಸ್ತರನ್ನು ರಾಜನಾಗಿರುವ ಯೇಸುವಿನಲ್ಲಿರುವ ನಿರೀಕ್ಷೆಯ ಮೂಲಕ ಪೌಲನು ಪ್ರೋತ್ಸಾಹಿಸುತ್ತಾನೆ.

More